Village Missionary Movement

கிராம மிஷனரி இயக்கம்


ಧೈನಂದಿನ ಧ್ಯಾನ(Kannada) – 02.05.2022

ಧೈನಂದಿನ ಧ್ಯಾನ(Kannada) – 02.05.2022

 

ಕಣ್ಮಣಿಯೇ ಕೇಳು

 

"ಹೀಗಿರಲಾಗಿ ನೀವು ದೇವರಿಂದ ಆರಿಸಿಕೊಂಡವರೂ ಪ್ರತಿಷ್ಠಿತರೂ ಪ್ರಿಯರೂ ಆಗಿರುವದರಿಂದ ಕನಿಕರ ದಯೆ ದೀನಭಾವ ಸಾತ್ವಿಕತ್ವ ದೀರ್ಘಶಾಂತಿ ಎಂಬ ಸದ್ಗುಣಗಳನ್ನು ಧರಿಸಿಕೊಳ್ಳಿರಿ." - ಕೊಲೊಸ್ಸೆ 3:12

 

'Beauty’ ತನ್ನ ಹೆಸರಿಗೆ ತಕ್ಕಂತೆ ಸುಂದರವಾದ ಯುವತಿ ತನ್ನ ಅಂದಕ್ಕೆ ಮತ್ತಷ್ಟು ಅಂದವನ್ನು ಸೇರಿಸುವುದರಲ್ಲಿ ಖುಷಿ ಪಡುತ್ತಾಳೆ. ಕಾಲೇಜಿನ ಕಲಾ ಉತ್ಸವದಲ್ಲಿ ಪಾಲ್ಗೊಳ್ಳಲು ಮುಂಜಾನೆಯಿಂದಲೇ ತಯಾರಿ ನಡೆಸಿದ್ದಳು. ನೋಡುಗರ ಕಣ್ಣುಗಳನ್ನು ಸೆಳೆಯಲು ಮತ್ತು ತನ್ನನ್ನು ಗ್ಲಾಮರಸ್ ಆಗಿ ತೋರಿಸಲು, ಅವಳು ತನ್ನ ಮುಖವನ್ನು ಕೆಲವೇ ಗಂಟೆಗಳಲ್ಲಿ ನಾಶವಾಗುವ ಮೇಕಪ್ ವಸ್ತುಗಳಿಂದ ಅಲಂಕರಿಸುತ್ತಿದ್ದಳು. ತನ್ನ ಕಾಂತೀಯ ಕಣ್ಣುಗಳಿಗೆ ಕಾಜಲ್ ಹಾಕಿಕೊಂಡಳು ಮತ್ತು ತನ್ನ ಕೆಂಪು ತುಟಿಗಳನ್ನು ಇನ್ನೂ ಹೆಚ್ಚು ಬಣ್ಣವನ್ನು ಹಚ್ಚಿ ಪಾಲಿಶ್ ಮಾಡುತ್ತಿದ್ದವಳ ಕಿವಿಯಲ್ಲಿ ಒಂದು ಧ್ವನಿ ಮೊಳಗಿತು! ಹುಟ್ಟಿದ ಕೆಲವೇ ತಿಂಗಳಲ್ಲಿ ತಂದೆ-ತಾಯಿಯನ್ನು ಕಳೆದುಕೊಂಡು ಅನಾಥವಾಗಿ ದಿಕ್ಕಿಲ್ಲದವಳಾಗಿ ಇದ್ದವಳನ್ನು ಎತ್ತಿಕೊಂಡು ಸಾಕಿ ಸಲುಹಿದ ತಾಯಿಯ ಧ್ವನಿ ಅದು. ಅನಾರೋಗ್ಯಕ್ಕೆ ಒಳಗಾಗಿ ಸಹಾಯಕ್ಕಾಗಿ ಕರೆದ ಆ ಧ್ವನಿಯನ್ನು ನಿರ್ಲಕ್ಷಿಸಿ, ಸ್ವಲ್ಪವೂ ಮನಮರುಗದೆ ಭ್ರಮೆಯಲ್ಲಿ ಹಾರಿ, ಸೌಂದರ್ಯ ಸ್ಪರ್ಧೆಯಲ್ಲಿ ಭಾಗವಹಿಸಿ ಬಹುಮಾನ ಗೆಲ್ಲಲು ಕಲಾ ಉತ್ಸವಕ್ಕೆ ಹೋದಳು. ಉಡುಗೊರೆಯೊಂದಿಗೆ ಮನೆಗೆ ಬಂದವಳನ್ನು ಸ್ವಾಗತಿಸಿದ ಅಳುವಿನ ಸದ್ದು! ಮನೆಯೊಳಕ್ಕೆ ವೇಗವಾಗಿ ಹೋದವಳ ಕಣ್ಣಲ್ಲಿ ಕಂಡ ದೃಶ್ಯ, ಹೆತ್ತ ತಾಯಿಗಿಂತಲೂ ಹೆಚ್ಚಾಗಿ ತನ್ನನ್ನು ಎತ್ತಿ ಮುದ್ದಾಡಿ ಹಾಕಿ ಸಲುಹಿದ ತಾಯಿಯ ಶವ. ತನ್ನ ಏಕೈಕ ಆಸರೆಯಾದ ತಾಯಿಯನ್ನು ಕಳೆದುಕೊಂಡಿದ್ದ ಮನಸ್ಸು ನಲುಗಿ ಹೋಗಿತ್ತು. ಸಹಾಯಕ್ಕೆ ಕರೆದಾಗ ಓಡಿ ಹೋಗಿ ಸಹಾಯ ಮಾಡದ್ದನ್ನು ನೆನೆಸಿ ವ್ಯಥೆ ಪಟ್ಟಳು. ಏನು ಪ್ರಯೋಜನ? ಸಮಯ ಕಳೆದು ಹೋಯ್ತೇ ಸತ್ತವರು ಮತ್ತೆ ಬದುಕಿ ಬರುತ್ತಾರಾ?

 

ಪ್ರೀತಿಯ ಮಕ್ಕಳೇ! ಸೌಂದರ್ಯ ಎಂದು ಯಾವುದನ್ನು ಪರಿಗಣಿಸುತ್ತಿದ್ದೇವೆ? ಒಳ್ಳೆ Color - ಆಗಿ ಇರೋದು, Fashion - ಆಗಿ Trend - ಗೆ ತಕ್ಕ ಹಾಗೆ ಧರಿಸುವುದು, Make-up ಹಾಕಿಕೊಂಡು Attractive-ಆಗಿ ಕಾಣುವುದು ಸೌಂದರ್ಯವಾ? ಹೊರಗೆ ಮಾತ್ರ ತನ್ನನ್ನು ಅಂದವಾಗಿ ತೋರಿಸಿ ದೇವರು ನೋಡುವ “ಅಂತರಂಗ ಸೌಂದರ್ಯ” ಕಾಣದೆ ಕೊಳಕು ಹೃದಯ ಕಾಣಲ್ಪಡುವುದರಿಂದ ಏನು ಪ್ರಯೋಜನ?

 

ಇಂದು ಬಡವರ ಅಳಲಿಗೆ ಕಿವಿ ಮುಚ್ಚಿಕೊಂಡು, ನಮ್ಮಿಂದ ಸಹಾಯಕ್ಕಾಗಿ ಕಾಯುತ್ತಿರುವವರಿಗೆ ಮುಖ ತಿರುಗಿಸಿ, ಹಿರಿಯರನ್ನು ಹೀನವಾಗಿ ಭಾವಿಸಿ, ಹಿರಿಯರನ್ನು ನಿರ್ಲಕ್ಷಿಸಿ, ಹಿರಿಯರ ಸಲಹೆಯನ್ನು ಸ್ವೀಕರಿಸದೆ ನಿರಾಕರಿಸುತ್ತಿರುವುದು ಸಹಜವಾಗಿ ಕಾಣಲ್ಪಡುತ್ತಿದೆ. ಪ್ರಪಂಚದ ಮಕ್ಕಳಿಗೂ ಕ್ರಿಸ್ತನ ಮಕ್ಕಳಿಗೂ ವ್ಯತ್ಯಾಸವಿದೆ. ಕ್ರಿಸ್ತನಿಗೆ ಸಂಬಂಧಿಸಿದವರು ಕ್ರಿಸ್ತನ ಸ್ವಾರೂಪ್ಯವನ್ನು ವ್ಯಕ್ತಪಡಿಸುವವರಾಗಿ ಕಾಣಲ್ಪಡಬೇಕು. ಶಾಂತಿ, ತಾಳ್ಮೆ, ಪ್ರೀತಿ ಮತ್ತು ಕಾಳಜಿಯುಳ್ಳವರಾಗಿ, ಯಾವಾಗಲೂ ಕಾಣಲ್ಪಡಬೇಕು, ಯಾವಾಗಲೂ ತನಗಾಗಿ ಅಲ್ಲ, ಕ್ರಿಸ್ತನನ್ನು ತಿಳಿಯದೆ ನಾಶವಾಗುತ್ತಿರುವ ಸ್ನೇಹಿತರಿಗಾಗಿ ಭಾರವುಳ್ಳವರಾಗಿ ಕಾಣಲ್ಪಡಬೇಕು. ಇಂತಹ ಆಂತರಿಕ ಸೌಂದರ್ಯವನ್ನು ಬಹಿರಂಗಪಡಿಸುವುದರಿಂದ ದೇವರು ನಮ್ಮ ಮೂಲಕ ಮಹಿಮೆಹೊಂದುತ್ತಾರೆ. ಲೋಕವು ಜೀವಿಸುವ ಹಾಗೆ ಜೀವಿಸುವುದಲ್ಲ ಕ್ರೈಸ್ತ ಜೀವನ, ಲೋಕಕ್ಕಾಗಿ ನಾವು ಬದುಕದೆ ಕ್ರಿಸ್ತನಿಗಾಗಿ ಬದುಕುವುದೇ, ನಮ್ಮ ಗುರಿಯಾಗಿರಬೇಕು.

- Mrs. ವಸಂತಿ ರಾಜಮೋಹನ್

 

ಪ್ರಾರ್ಥನಾ ಅಂಶ:

ಈ ತಿಂಗಳು ಪೂರ್ತಿಯಾಗಿ ನಡೆಯುವಂತಹ ಸೇವೆಗಳಲ್ಲಿ ದೇವರ ಹಸ್ತವು ಜೊತೆಯಿದ್ದು ನಡೆಸುವಂತೆ; ದೇವರು ತನ್ನ ಶಕ್ತಿಯನ್ನು ಹೊರಡಿಸುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- reachvmm@gmail.com

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +919345540482


Comment As:

Comment (0)