Village Missionary Movement

கிராம மிஷனரி இயக்கம்


ಧೈನಂದಿನ ಧ್ಯಾನ(Kannada) – 29.04.2022

ಧೈನಂದಿನ ಧ್ಯಾನ(Kannada) – 29.04.2022

 

ನಾಲಿಗೆಯ ವಶ

 

"ಜೀವನಮರಣಗಳು ನಾಲಿಗೆಯ ವಶ,..." - ಜ್ಞಾನೋಕ್ತಿ 18:21

 

ನಾನು ಮಿಷನರಿ ಕಾರ್ಯಸ್ಥಳದಿಂದ ನನ್ನ ಕುಟುಂಬವನ್ನು ಭೇಟಿ ಮಾಡಲು ನನ್ನ ಸ್ವಂತ ಗ್ರಾಮಕ್ಕೆ ಬಂದಿದ್ದೆ. ಇದನ್ನು ತಿಳಿದ ನನ್ನ ಸ್ನೇಹಿತನೊಬ್ಬ ಹೊರ ಊರಿನಿಂದ ನನ್ನನ್ನು ನೋಡಲು ಬಂದಿದ್ದ. ದಿನವಿಡೀ ನನ್ನ ಜೊತೆ ಇದ್ದು ಸಂಜೆ ಅವರ ಮನೆಗೆ ಹೋಗಲು ಹೊರಟನು. ನಾನೇ ಅವನನ್ನು ಬೈಕ್ ನಲ್ಲಿ ಕರೆದುಕೊಂಡು ಹೋಗಿ ಬಸ್ಸು ಹತ್ತಿಸಿಬಿಟ್ಟು ಬರಲು ಹೋದೆ. ನನ್ನದು ಹಳೆಯ ಬೈಕ್ ಆಗಿರುವುದರಿಂದ ಹಾರ್ನ್ ಹೊಡೆಯುವುದಿಲ್ಲ. ಲೈಟ್ ಕೂಡ ಮಂದವಾಗಿ ಉರಿಯುತ್ತಿತ್ತು. ಏಕೆಂದರೆ ಬೈಕ್‌ನಲ್ಲಿ ಬ್ಯಾಟರಿ ಡೆಡ್ ಆಗಿಬಿಟ್ಟಿತು. ಇದನ್ನು ನೋಡಿದ ನನ್ನ ಸ್ನೇಹಿತ ನೀನು ಹೇಗೆ ಮನೆಗೆ ಹಿಂದಿರುಗುತ್ತೀಯ ಎಂದನು. ಬೈಕ್ ನ ಪರಿಸ್ಥಿತಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ಅವನು ಹೀಗೆ ಕೇಳಿದನು. ನಾನು ಹೇಳಿದೆ, ನೀನು ಈಗ ನನ್ನೊಂದಿಗೆ ಇದ್ದೀಯ ಆದರೆ ನಾನು ಹೋಗುವಾಗ ಯೇಸಪ್ಪಾ ಬೈಕ್ ಓಡಿಸುತ್ತಾರೆ ಎಂದು ಹೇಳಿದೆ. ನಾನು ಅವನನ್ನು ಇಳಿಸಿದೆ. ಅವನು ಹತ್ತಬೇಕಿದ್ದ ಬಸ್ಸು ಕೂಡ ಬಂತು. ಅವನು ಹತ್ತಿ ಹೊರಟು ಹೋದನು. ನಾನು ಕೂಡ ಬೈಕ್ ಸ್ಟಾರ್ಟ್ ಮಾಡಿ ಮನೆಗೆ ಹೊರಟೆ. ಸ್ವಲ್ಪ ದೂರದ ನಂತರವೇ ಗೊತ್ತಾಯಿತು ಲೈಟ್ ತುಂಬಾ ಚೆನ್ನಾಗಿ ಉರಿಯುತ್ತಿದೆ ಎಂದು. ನಮ್ಮ ಚಿಕ್ಕ ಮಾತಿನ ಬಗ್ಗೆಯೂ ದೇವರಿಗೆ ಎಷ್ಟು ಕಾಳಜಿ ಇದೆ ಎಂದು ನನಗೆ ಆಗ ಅರ್ಥವಾಯಿತು! ಆದ್ದರಿಂದ ನಮ್ಮ ಜೀವನದಲ್ಲಿ ದೊಡ್ಡ ಕಾರ್ಯವೋ, ಚಿಕ್ಕ ಕಾರ್ಯವೋ ನಮ್ಮ ಮಾತುಗಳಿಂದ ಆತನನ್ನು ಘನಪಡಿಸಬೇಕು. ನಾವು ಆತನನ್ನು ಗೌರವಿಸಿದಾಗ ಆತನೂ ನಮ್ಮ ಮಾತನ್ನು ಗೌರವಿಸುತ್ತಾರೆ.

             

ಅದಲ್ಲದೆ ಹೊಗಳಿಕೆ ಮತ್ತು ಶಾಪ ಒಂದೇ ಬಾಯಿಂದ ಬರಲಾರದು ಎಂದು ಸತ್ಯವೇದವು ಹೇಳುತ್ತದೆ. ನಾಲಿಗೆಯ ಬಗ್ಗೆ ನಾವು ಈ ರೀತಿಯ ಅನೇಕ ವಿಷಯಗಳನ್ನು ಓದಬಹುದು. ಆದರೆ ಎಷ್ಟೋ ಸಲ ನಮಗೆ ಇದರ ಅರಿವಿಲ್ಲದೇ ನಮ್ಮ ನಾಲಿಗೆಯಿಂದ ಮನಸ್ಸಿಗೆ ಬಂದದ್ದನ್ನೆಲ್ಲ ಮಾತನಾಡಿ ಇತರರನ್ನು ನೋಯಿಸಿ ಅನುಚಿತ ಮಾತುಗಳನ್ನಾಡುತ್ತೇವೆ. ನಾವು ಆಡುವ ಪ್ರತಿಯೊಂದು ಮಾತಿಗೂ ಅರ್ಥವಿದೆ ಮತ್ತು ಶಕ್ತಿ ಇದೆ. ಅದರ ಬಗ್ಗೆ ನಾವು ದೇವರಿಗೆ ಲೆಕ್ಕ ಒಪ್ಪಿಸಬೇಕು.

 

ಆದುದರಿಂದ ಪ್ರಿಯರೇ, ನಮ್ಮ ಬಾಯಿ ಮಾತಿನಲ್ಲಿ ಎಚ್ಚರವಿರಲಿ. ನಮ್ಮ ಮಾತು ದೇವರನ್ನು ಮಹಿಮೆಪಡಿಸುವಂತೆ, ಹೊಗಳುವಂತೆ, ಹೆಚ್ಚಿಸುವಂತೆ ಇರಲಿ. ದೇವರು ನಮಗೆ ಮಾಡಿದ ಒಳ್ಳೆಯದಕ್ಕಾಗಿ ನಾವು ದೇವರನ್ನು ಸ್ತುತಿಸಿ ಮಹಿಮೆ ಪಡಿಸೋಣ. ದೇವರ ರಾಜ್ಯವನ್ನು ಸ್ವತಂತ್ರಿಸಿಕೊಳ್ಳೋಣ. ಹಲ್ಲೇಲೂಯ!

- P.ಜಾನ್ ಥಾಮಸ್

 

ಪ್ರಾರ್ಥನಾ ಅಂಶ:

ಪ್ರಾರ್ಥನಾ ಗುಡಾರವನ್ನು ಆದಷ್ಟು ಬೇಗ ಕಟ್ಟಿ ಮುಗಿಸುವಂತೆ, ಇದರ ಅವಶ್ಯಕತೆಗಳು ಪೂರೈಸಲ್ಪಡುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- reachvmm@gmail.com

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +919345540482


Comment As:

Comment (0)