Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 17.07.2024
Share:

By Village Missionary Movement

Wednesday, 17-Jul-2024

ಧೈನಂದಿನ ಧ್ಯಾನ(Kannada) – 17.07.2024

 

ಕ್ರಿಸ್ತನಾ? ಬರಬ್ಬನಾ?

 

"ಲೋಕವನ್ನಾಗಲಿ ಲೋಕದಲ್ಲಿರುವವುಗಳನ್ನಾಗಲಿ ಪ್ರೀತಿಸಬೇಡಿರಿ. ಯಾವನಾದರೂ ಲೋಕವನ್ನು ಪ್ರೀತಿಸಿದರೆ ತಂದೆಯ ಮೇಲಣ ಪ್ರೀತಿಯು ಅವನಲ್ಲಿಲ್ಲ” – 1 ಯೋಹಾನ 2:15

 

ನನಗೆ ತಿಳಿದಿರುವ ಒಬ್ಬ ಸಹೋದರಿಯ ಪತಿ ಮಿಲಿಟರಿಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ಒಮ್ಮೆ ರಜೆಗೆ ಬಂದಾಗ ಇತರ ಅಧಿಕಾರಿಗಳ ಹೆಂಡತಿಯರೊಂದಿಗೆ ಸೇರಿ ಪಾರ್ಟಿಗೆ ಬರುವಂತೆಯೂ ಕುಡಿಯುವಂತೆಯೂ ತನ್ನ ಹೆಂಡತಿಗೆ ಆದೇಶಿಸಿದರು. ಆ ಸಹೋದರಿ ಕ್ರಿಸ್ತನನ್ನು ತಿಳಿದಿರುವ ಕಾರಣ ಕ್ರಿಸ್ತನಾ? ಗಂಡನಾ? ಎಂಬ ಹೋರಾಟ! ಕೊನೆಗೆ ಒಂದು ತೀರ್ಮಾನಕ್ಕೆ ಬಂದರು. ಗಂಡನಿಗೆ ವಿಧೇಯರಾಗಬೇಕೆಂದು ದೇವರು ಹೇಳಿದ್ದಾರೆ. ಆದರೆ ತನಗೆ ಇಷ್ಟವಾಗದ ವಿಷಯದಲ್ಲಿ ಪತಿಗೆ ವಿಧೇಯರಾಗುವುದಕ್ಕಿಂತ ದೇವರಿಗೆ ವಿಧೇಯರಾಗುವುದು ಉತ್ತಮ ಎಂದು ನಿರ್ಧರಿಸಿದಳು ಮತ್ತು ಅಂತಹ ಜನರೊಂದಿಗೆ ಕುಡಿಯಲು ನಿರಾಕರಿಸಿದಳು. ಮತ್ತು ಪ್ರತಿದಿನ ಅವಳು ಕಣ್ಣೀರು ಸುರಿಸಿ ತನ್ನ ಪತಿಗಾಗಿ ಪ್ರಾರ್ಥಿಸುತ್ತಿದ್ದಳು. ದೇವರು ಗಂಡನ ಹೃದಯವನ್ನು ಬದಲಾಯಿಸಿದರು.

 

ಅದೇ ರೀತಿ ಸತ್ಯವೇದದಲ್ಲಿಯೂ ಸಹ, ನಾಲ್ಕು ಸುವಾರ್ತೆಗಳಲ್ಲಿ, "ಕ್ರಿಸ್ತನಾ? ಬರಬ್ಬನಾ?" ಎಂದು ಯೆಹೂದ್ಯರ ಮುಂದೆ ನಿರ್ಧರಿಸುವ ಕಾರ್ಯವನ್ನು ಪಿಲಾತನು ಇಟ್ಟರು. ಆದರೆ ಯೆಹೂದ್ಯರು ಕ್ರಿಸ್ತನ ಬದಲಿಗೆ ಬರಬ್ಬನನ್ನು ಆರಿಸಿಕೊಂಡರು. ನಾನು ಅವನಲ್ಲಿ ಯಾವುದೇ ಅಪರಾಧವನ್ನು ಕಾಣಲಿಲ್ಲ ಎಂದು ಪಿಲಾತನು ಹೇಳಿದರೂ, ಜನರು ಬರಬ್ಬನನ್ನೇ ಆರಿಸಿಕೊಂಡರು. ಅವನು ಕೊಲೆಗಾರ ಮತ್ತು ಬಂಡಾಯಗಾರನಾಗಿದ್ದನು. ಆದರೂ ಅವನನ್ನೇ ಆರಿಸಿಕೊಂಡರು. ಹಾಗೆಯೇ, ಇಸ್ರಾಯೇಲ್ಯರು ಅಮೋರಿಯರ ದೇವರುಗಳನ್ನು ಸೇವಿಸುತ್ತಿದ್ದಾಗ, ಎಷ್ಟರವರೆಗೆ ಎರಡು ಮನಸ್ಸುಳ್ಳವರಾಗಿರುವಿರಿ? ಎಲ್ಲಿಯವರೆಗೆ ಕುಗ್ಗಿ ಕುಗ್ಗಿ ನಡೆಯುತ್ತೀರಿ. ಕರ್ತನಾ?ಬಾಳನಾ? ಯಾರನ್ನು ಹಿಂಬಾಲಿಸುತ್ತೀರ? ಎಂದರು. (1ಅರ. 18:21) ಅದೇ ರೀತಿಯಲ್ಲಿ ಇಂದು ಅನೇಕ ಕ್ರೈಸ್ತರು ವಾರಕ್ಕೊಮ್ಮೆ ಕ್ರೈಸ್ತರ ಹೆಸರಿನಲ್ಲಿ ಚರ್ಚಿಗೆ ಹೋಗುತ್ತಾರೆ. ಮತ್ತು ಅನೇಕರು ತಮ್ಮ ಸ್ನೇಹಿತರನ್ನು ಸೇರಿದಾಗ, ಅವರು ಅವರ ಪ್ರಾಪಂಚಿಕ ವ್ಯವಹಾರಗಳಲ್ಲಿ ಹಾಜರಾಗುತ್ತಾರೆ. ನನ್ನ ಪ್ರೀತಿಯ ಗೆಳೆಯನನ್ನು ಬಿಟ್ಟು ಹೋಗಲಾರೆ ಎಂದು ಹೇಳಿ ಜಗತ್ತು ಮತ್ತು ಪ್ರಪಂಚದ ವ್ಯವಹಾರಗಳಿಗೆ ಒಗ್ಗಿಕೊಂಡು ಹೋಗುತ್ತಾರೆ.

 

ದೇವರ ಮಕ್ಕಳೇ! ಹಾಗೆಯೇ ಕ್ರಿಸ್ತನಾ? ಸ್ನೇಹಿತನಾ? ಎಂಬ ವಿಷಯ ಬಂದಾಗ ಸ್ಪಷ್ಟವಾದ ನಿರ್ಧಾರ ತೆಗೆದುಕೊಳ್ಳಿ ಏಕೆಂದರೆ ನಾವು 1 ಯೋಹಾನ 2:16 ರಲ್ಲಿ ಲೋಕದಲ್ಲಿರುವ ಶರೀರದಾಶೆ ಕಣ್ಣಿನಾಶೆ ಬದುಕುಬಾಳಿನ ಡಂಬ ಈ ಮೊದಲಾದವುಗಳೆಲ್ಲವು ತಂದೆಯಿಂದ ಹುಟ್ಟದೆ ಲೋಕದಿಂದ ಹುಟ್ಟಿದವುಗಳಾಗಿವೆ ಎಂದು ಓದುತ್ತೇವೆ. ಲೋಕವನ್ನು ಮತ್ತು ಲೋಕದಿಂದ ಹುಟ್ಟಿದವುಗಳನ್ನು ತ್ಯಜಿಸಬೇಕು. ನೀವು ಈ ರೀತಿ ಬದುಕುತ್ತಿರುವಾಗ, ಜನರು ನಿಮ್ಮನ್ನು ದ್ವೇಷಿಸಿದರೆ, ದೂರವಿಟ್ಟರೆ ಅಥವಾ ಬಹಿಷ್ಕರಿಸಿದರೆ ಎದೆಗುಂದಬೇಡಿ. ಹಾಗಾದರೆ ನಮ್ಮಂತೆ ನರಳುತ್ತಿರುವ ಕ್ರಿಸ್ತನ ಬಗ್ಗೆ ಯೋಚಿಸಿ. ಉಪಕಾರ ಪಡೆದ ಜನರಿಂದಲೇ ನಿರ್ಲಕ್ಷ್ಯಕ್ಕೆ ಒಳಗಾಗಿದ್ದರು. ಯಾರು ನಿಮ್ಮನ್ನು ದ್ವೇಷಿಸಿದರೂ ಮತ್ತು ದೂರವಿಟ್ಟರೂ ನೀವು ಕ್ರಿಸ್ತನ ಪರವಾಗಿ ನಿಂತಾಗ, ಕ್ರಿಸ್ತನು ನಿಮ್ಮ ಪಕ್ಷದಲ್ಲಿ ನಿಂತು ಅವರೇ ನೀತಿಯುಳ್ಳ ನ್ಯಾಯಾಧೀಶನಾಗಿ ನ್ಯಾಯ ನಿರ್ಣಯಿಸುತ್ತಾರೆ. ಆಮೆನ್.

- Mrs. ಗ್ರೇಸ್ ಜೀವಮಣಿ

 

ಪ್ರಾರ್ಥನಾ ಅಂಶ:

ಪ್ರಿಯಳೇ ಎಂಬ ಕಾರ್ಯಕ್ರಮದ ಮೂಲಕ ಅನೇಕ ಗೃಹಿಣಿಯರು ಕ್ರಿಸ್ತನಲ್ಲಿ ಕುಟುಂಬಗಳನ್ನು ಕಟ್ಟುವವರಾಗಲಿ ಎಂದು ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al holiganbet giriş matbet holiganbet holiganbet giriş casibom giriş casibom casibom giriş casibom matbet matbet giriş imajbet imajbet giriş perabet perabet giriş coinbar coinbar giriş klasbahis klasbahis giriş supertotobet giriş supertotobet jojobet giriş jojobet casibom casibom giriş jojobet giriş jojobet interbahis interbahis giriş mariobet mariobet giriş betpas betpas giriş artemisbet artemisbet giriş marsbahis giriş marsbahis restbet restbet giriş egebet egebet giriş Hiltonbet Hiltonbet giriş jojobet alobet alobet giriş betcio betcio giriş grandpashabet grandpashabet giriş superbetin superbetin giriş perabet perabet giriş pashagaming tarafbet editörbet perabet perabet giriş grandbetting hitbet xslot betkom giriş betkanyon giriş perabet perabet giriş Hiltonbet Hiltonbet giriş grandpashabet grandpashabet giriş grandpashabet güncel giriş grandpashabet grandpashabet giriş grandpashabet giriş güncel jojobet jojobet giriş holiganbet holiganbet giriş casibom casibom giriş jojobet jojobet giriş alobet alobet giriş marsbahis marsbahis giriş milanobet jojobet jojobet jojobet jojobet jojobet holiganbet ibizabet holiganbet amkbet sonbahis betgit cratosroyalbet cratosroyalbet gameofbet