By Village Missionary Movement
Tuesday, 16-Jul-2024ಧೈನಂದಿನ ಧ್ಯಾನ(Kannada) – 16.07.2024
ಹರಕೆಯ ಮಗ
"ನಡೆಯಬೇಕಾದ ಮಾರ್ಗಕ್ಕೆ ತಕ್ಕಂತೆ ಹುಡುಗನನ್ನು ಶಿಕ್ಷಿಸು; ಮುಪ್ಪಿನಲ್ಲಿಯೂ ಓರೆಯಾಗನು" - ಜ್ಞಾನೋಕ್ತಿ. 22:6
ಕೋಟ-ಉರುಸಿಲ್ಲ ದಂಪತಿಗಳು ತಾವು ಪ್ರೀತಿಯಿಂದ ಬೆಳೆಸಿಕೊಂಡ ಏಕೈಕ ಮಗುವನ್ನು ಕಳೆದುಕೊಂಡರು. ಡಿಸೆಂಬರ್‌ನಲ್ಲಿ ಜರ್ಮನಿಯಲ್ಲಿ ತುಂಬಾ ಚಳಿ ಇತ್ತು. ಚಳಿಯ ನಡುವೆ ಮಧುರವಾದ ಹಾಡಿನ ಸದ್ದು ಅವರ ಕಿವಿಯಲ್ಲಿ ಮೊಳಗುತ್ತಿತ್ತು. “ಬಡ ಮಗುವಾಗಿದ್ದರೂ ಕರ್ತನು ಅನ್ನ ಬಟ್ಟೆ ಕೊಟ್ಟು ಕಾಪಾಡುತ್ತಾರೆ. ನನ್ನನ್ನು ಪ್ರೀತಿಸುತ್ತಾರೆ. ಇಲ್ಲಿರುವ ದಿನವೆಲ್ಲಾ ನನ್ನನ್ನು ಆಶೀರ್ವದಿಸುತ್ತಾರೆ, ಪ್ರಾಣ ಹೋಗುವ ಸಮಯದಲ್ಲಿ ಸೇರಿಸಿಕೊಳ್ಳುತ್ತಾರೆ ಮೋಕ್ಷದಲ್ಲಿ" ಎಂಬ ಹಾಡನ್ನು ನಡುಗುವ ಚಳಿಯಲ್ಲಿ ಒಬ್ಬ ಬಡ ಹುಡುಗ ಹಾಡುತ್ತಿದ್ದನು. ಹಾಡನ್ನು ಕೇಳಿದ ಆದಂಪತಿಗಳು ಬಾಗಿಲು ತೆರೆದರು.
ಅವನನ್ನು ಮನೆಯೊಳಗೆ ಕರೆದು ನಿನ್ನ ತಂದೆ ತಾಯಿ ಎಲ್ಲಿ ಎಂದು ವಿಚಾರಿಸಿ ನೀನು ಎಲ್ಲಿಂದ ಬರುತ್ತಿದ್ದೀಯ? ಎಂದು ಕೇಳಿದಾಗ ನಾನೊಬ್ಬ ಬಡವ. ನನ್ನೊಂದಿಗೆ ಜನಿಸಿದ ಏಳು ಜನರಲ್ಲಿ ನಾನು ಮೊದಲ ಮಗು. ನನ್ನ ಜನ್ಮದಿನದಂದೇ ನನ್ನ ಹೆತ್ತವರು ನನ್ನನ್ನು ದೇವರಿಗೆಂದು ಸಮರ್ಪಿಸಿದರು. ನಾನು ಓದಲು ಬಯಸಿದ್ದೆ, ಆದರೆ ನನ್ನ ಹೆತ್ತವರಿಗೆ ಸಾಧ್ಯವಾಗಲಿಲ್ಲ. ಹಾಗಾಗಿ ಭಿಕ್ಷೆ ಬೇಡುತ್ತಾ ಈ ಜೀವವುಳ್ಳ ಹಾಡು ಹಾಡುತ್ತಾ ಶಾಲೆಯಲ್ಲಿ ಓದುತ್ತಿರುವುದಾಗಿ ತಿಳಿಸಿದನು. ಆ ದಂಪತಿಗಳು ಹುಡುಗನನ್ನು ದತ್ತು ತೆಗೆದುಕೊಂಡು ಶಿಕ್ಷಣ ನೀಡಿದರು. ಹಲವು ವರ್ಷಗಳು ಕಳೆದವು. ಹುಡುಗ ಓದಿ ದೊಡ್ಡವನಾದನು ಮತ್ತು ಎಲ್ಲಾ ಉನ್ನತ ಪದವಿಗಳನ್ನು ಪಡೆದನು. ಉನ್ನತ ಹುದ್ದೆಗಳು ಅವರಿಗೆ ಬಂದವು. ಆದರೆ ಅವೆಲ್ಲವನ್ನೂ ದೂರ ಎಸೆದು ತಂದೆ-ತಾಯಿಯ ಹರಕೆಗಳನ್ನು ಪೂರೈಸಿದನು. ಅವರೇ ಸುಧಾರಣೆಯ ತಾರೆ ಎಂದು ಹೆಸರುಪಡೆದ ಮಾರ್ಟಿನ್ ಲೂಥರ್. ಬಾಲ್ಯದಲ್ಲಿ ತನ್ನ ತಾಯಿ ಕಲಿಸಿದ ನಂಬಿಕೆಯ ಹಾಡಿನಿಂದ ಅವರ ತಲೆಮಾರಿಗೇ ಆಶ್ರಯ ದೊರಕಿತು. ಹೀಗೆ ಮಾರ್ಟಿನ್ ಲೂಥರ್ ಗೆ ಬಾಲ್ಯದಲ್ಲಿ ಅವರ ತಾಯಿ ಕಲಿಸಿಕೊಟ್ಟ ಕಾರ್ಯಗಳು ಅವರನ್ನು ರೂಪಿಸಿತು. ಸಮುವೇಲನು ಬಾಲ್ಯದಲ್ಲಿ ದೇವಾಲಯದಲ್ಲಿ ಬಿಡಲ್ಪಟ್ಟನು ಮತ್ತು ಅಲ್ಲಿ ಕಲಿಸಲ್ಪಟ್ಟದ್ದನ್ನು ಆಲಿಸಿದನು ಮತ್ತು ಅದರ ಪ್ರಕಾರ ಬದುಕಿದ ಕಾರಣ ಅವನು ಮಹಾನ್ ಪ್ರವಾದಿಯಾದನು.
ನನಗೆ ಪ್ರಿಯವಾದವರೇ! ಬಾಲ್ಯದಲ್ಲಿ ನಾವು ಕಲಿಸುವ ವಿಷಯಗಳೇ ನಮ್ಮ ಮಕ್ಕಳನ್ನು ದೈವಭಕ್ತರನ್ನಾಗಿಸುತ್ತವೆ. ಸತ್ಯವೇದದಲ್ಲಿ ನಿಮ್ಮ ರೊಟ್ಟಿಯನ್ನು ನಿನ್ನ ಆಹಾರವನ್ನು ನೀರಿನ ಮೇಲೆ ಹಾಕು; ಬಹಳ ದಿನಗಳ ನಂತರ ಅದರ ಫಲವನ್ನು ನೋಡುತ್ತೀಯ ಎಂದು ಓದುತ್ತೇವೆ. ಆದುದರಿಂದ ನಾವು ಮಕ್ಕಳನ್ನು ದೇವರ ಸಹಾಯದಿಂದ ದೇವರ ವಾಕ್ಯಗಳ ಮಾರ್ಗದಲ್ಲಿ ನಡೆಸೋಣ. ನಮ್ಮ ಮಕ್ಕಳು ಸಹ ಆಕಾಶದಲ್ಲಿ ನಕ್ಷತ್ರಗಳಂತೆ ಹೊಳೆಯುತ್ತಾರೆ ಮತ್ತು ಅನೇಕರಿಗೆ ಉಪಯುಕ್ತವಾಗುತ್ತಾರೆ.
- Mrs. ಜ್ಞಾನಸೆಲ್ವಂ ಸೆಲ್ವರಾಜ್
ಪ್ರಾರ್ಥನಾ ಅಂಶ:
ಕಣ್ಮಣಿಯೆ ಕೇಳ್ ಕಾರ್ಯಕ್ರಮದ ಮೂಲಕ ಭೇಟಿಯಾಗುವ ಯೌವನಸ್ಥರು ಪರಿಶುದ್ಧತೆಯಲ್ಲಿ ಬೆಳೆಯುವಂತೆ ಪ್ರಾರ್ಥಿಸಿರಿ.
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- info@vmm.org.in
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482