Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 15.07.2024
Share:

By Village Missionary Movement

Monday, 15-Jul-2024

ಧೈನಂದಿನ ಧ್ಯಾನ(Kannada) – 15.07.2024

 

ಕಣ್ಣೀರು          

 

"ಯೇಸು ಕಣ್ಣೀರು ಬಿಟ್ಟನು." - ಯೋಹಾನ 11:35

 

ಒಮ್ಮೆ ಸುವಾರ್ತಿಕರಾದ ಬಿಲ್ಲಿ ಗ್ರಹಾಂ ಅವರಿಗೆ ಬೋಧಿಸಲು ಲಂಡನ್‌ನಲ್ಲಿ ಸುವಾರ್ತೆ ಸಭೆಯನ್ನು ಆಯೋಜಿಸಿದ್ದರು. ಆದರೆ ಸಭೆ ನಡೆಸಲು ಅವರು ಇಲ್ಲಿಗೆ ಬರಬಾರದು ಎಂದು ಭೀಕರ ಪ್ರತಿಭಟನೆ ನಡೆಯಿತು. "ಬಿಲ್ಲಿ ಗ್ರಹಾಂ ಗಾಸ್ಪೆಲ್ ಸರ್ಕಸ್ ನಡೆಸಲು ಬರುತ್ತಿದ್ದಾರೆ" ಎಂದು ಮಾಧ್ಯಮಗಳು ಮತ್ತು ಪತ್ರಿಕಾ ಮಾಧ್ಯಮಗಳು ಅವರನ್ನು ಗೇಲಿ ಮಾಡಿ ವಿಧವಿಧವಾಗಿ ಬರೆದಿದ್ದರು. ಚರ್ಚ್‌ಗಳು ಸಹ ಅವರನ್ನು ವಿರೋಧಿಸಿದವು. ಹೀಗಿರುವಾಗ ಅವರು ಮತ್ತು ಅವರ ಹೆಂಡತಿ ಹಡಗಿನಲ್ಲಿ ಬಂದು ಲಂಡನ್ ಬಂದರಿನಲ್ಲಿ ಬಂದಿಳಿದ ಕೂಡಲೇ, ಪತ್ರಕರ್ತರು ಸುತ್ತುವರೆದರು, ನಮ್ಮ ಲಂಡನ್ ಬದಲಾಯಿಸಲು ಬಂದಿದ್ದೀಯಲ್ಲಾ, ನಿಮ್ಮ ಅಮೇರಿಕಾ ಬದಲಾಯಿಸಿಬಿಟ್ರಾ? ಎಂದೆಲ್ಲಾ ಒಬ್ಬೊಬ್ಬರೂ ವಿವಿಧ ಪ್ರಶ್ನೆಗಳನ್ನು ಕೇಳುವ ಮೂಲಕ ಅಪಹಾಸ್ಯ ಮಾಡಿದರು. ಬಂದರಿನಿಂದ ಅವರು ಹೋಗಬೇಕಾದ ನಗರಕ್ಕೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದಾಗ, ಯೇಸುವೇ ಕಾರ್ಯಗಳು ಹೀಗಿರುವಾಗ ಹೇಗೆ ನಾನು ಇಲ್ಲಿಗೆ ಹೋಗಿ ಸೇವೆ ಮಾಡಲಿದ್ದೇನೆ ಎಂದು ದೇವರ ಮುಖವನ್ನು ದೃಷ್ಟಿಸಿ ನೋಡಿದರು. ಕೂಡಲೇ ದೇವರು ಸತ್ಯವೇದದ ವಾಕ್ಯಗಳ ಮೂಲಕ ಅವರೊಂದಿಗೆ ಮಾತನಾಡಿದರು. ಕೂಡಲೇ ಅವರು ದೇವರೇ ಯಾವುದೇ ರೀತಿಯ ಹೋರಾಟ ಬಂದರೂ ಸಹಿಸುವ ಕೃಪೆ ನೀಡಿ ಎಂದು ಕಣ್ಣೀರು ಹಾಕುತ್ತಾ ಪ್ರಾರ್ಥಿಸಿದರು. ಅವರು ರೈಲಿನಿಂದ ಇಳಿದಾಗ ಅಲ್ಲಿ ನೆರೆದಿದ್ದ ಸಾವಿರಾರು ಜನರು ಅವರನ್ನು ಆರ್ಭಟದಿಂದ ಆಹ್ವಾನಿಸಿದರು. ನಾನು ನಿನಗಾಗಿ ಎಷ್ಟು ಜನರನ್ನು ಇಟ್ಟಿದ್ದೇನೆ ನೋಡಿದೆಯಾ? ಎಂದು ದೇವರು ಅವರ ಹೃದಯದಲ್ಲಿ ಮಾತನಾಡಿದರು.

 

ಇಂದಿನ ಸತ್ಯವೇದ ಭಾಗದಲ್ಲಿಯೂ ಸಹ, ತನ್ನ ಸಹೋದರನು ಸತ್ತು ಸಮಾಧಿಮಾಡಲ್ಪಟ್ಟ ‌ಸ್ಥಿತಿಯಲ್ಲಿದ್ದಾಗ ಲಾಜರನ ಸಹೋದರಿಯರು ಅಳುವುದನ್ನು ಯೇಸು ನೋಡಿದರು. ನೀವು ಇಲ್ಲಿ ಇದ್ದಿದ್ದರೆ ನನ್ನ ಸಹೋದರ ಸಾಯುತ್ತಿರಲಿಲ್ಲ ಎಂದು ಹೇಳಿದ ಮಾರ್ಥಳ ಶಬ್ದವನ್ನು ಕೇಳಿಸಿಕೊಂಡರು. ಮರಿಯಳ ಕಣ್ಣೀರು ಅವರನ್ನು ಕದಲಿಸಿತು. ಅವರಿಗೂ ಕಣ್ಣೀರು ತರಿಸಿತು. ನೀವು ನಿಮ್ಮ ಸಹೋದರನಿಗಾಗಿ ತಾನೇ ಅಳುತ್ತಿದ್ದೀರಾ? ಲಾಜರನೇ ಹೊರಗೆ ಬಾ ಎಂದು ಹೇಳಿ, ಸತ್ತು ನಾಲ್ಕು ದಿನಗಳಾಗಿದ್ದ ಲಾಜರನನ್ನು ಜೀವಂತವಾಗಿ ಎಬ್ಬಿಸಿ ಸಹೋದರಿಯರಿಗೆ ಒಪ್ಪಿಸಿದರು. 

 

ಪ್ರಿಯರೇ! ದೇವರ ಸಮ್ಮುಖದಲ್ಲಿ ನಾವು ಯಾವುದಕ್ಕಾಗಿ ಕಣ್ಣೀರು ಹಾಕುತ್ತೇವೋ ಅದು ಆತನನ್ನು ಕದಲಿಸುವಂಥದ್ದು. ಆ ಕಣ್ಣೀರು ಬಹಳ ಅಮೂಲ್ಯವಾದದ್ದು. ಈ ಲೋಕದಲ್ಲಿ ಹಲವರನ್ನು ಹಿಂಸಿಸಿ ಕಣ್ಣೀರು ಸುರಿಸುವ ಹಾಗೆ ಮಾಡಿ ಅದನ್ನು ನಿರ್ಲಕ್ಷಿಸುವ ಅಮಾನವೀಯರನ್ನು ಕಾಣುತ್ತೇವೆ. ಆದರೆ ನಮ್ಮ ದೇವರ ವಿಷಯದಲ್ಲಿ ಹಾಗಲ್ಲ. ನೀವು ಏನನ್ನು ಮತ್ತು ಯಾರನ್ನು ಕಳೆದುಕೊಂಡಿದ್ದೀರ? ನಿಮ್ಮ ಕಣ್ಣೀರನ್ನು ನೋಡುವವರು ಯಾರೂ ಇಲ್ಲ ಎಂದು ಅಂಗಲಾಚುತ್ತಿದ್ದೀರಾ? ನಿಮ್ಮ ಕಣ್ಣೀರು ಅವರನ್ನು ಕದಲಿಸುತ್ತದೆ. ಅಳಬೇಡಿ, ಪ್ರತ್ಯುತ್ತರ ಕೊಟ್ಟು ಉತ್ತರಿಸುತ್ತಾರೆ. ಆಮೆನ್.

- Mrs. ಶಕ್ತಿ ಶಂಕರ್ ರಾಜ್ 

 

ಪ್ರಾರ್ಥನಾ ಅಂಶ:

ಛತ್ತೀಸ್‌ಗಢ ರಾಜ್ಯದಲ್ಲಿ ಸೇವೆ ಮಾಡುವ ಸೇವಕರ ಸ್ವಸ್ಥತೆ ಮತ್ತು ಸುರಕ್ಷತೆಗಾಗಿ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al matbet matbet giriş hepsibet hepsibet giriş betnano betnano giriş betparibu betparibu giriş casibom virüsbet pashagaming kalebet perabet pashagaming virusbet marsbahis imajbet perabet perabet giriş perabet perabet giriş