Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 14.07.2024 (Kids Special)
Share:

By Village Missionary Movement

Sunday, 14-Jul-2024

ಧೈನಂದಿನ ಧ್ಯಾನ(Kannada) – 14.07.2024 (Kids Special)

 

ಪಕ್ಷಿಗಳು ಮತ್ತು ಮರಕಡಿಯುವವನು

 

"…ನಿಮ್ಮಲ್ಲಿ ಯಾವನೂ ತನ್ನ ಸಹೋದರನಿಗೆ ಕೇಡನ್ನು ಬಗೆಯದಿರಲಿ" - ಜೆಕರ್ಯ 7:10

 

ಮಣಿ ತನ್ನ ಕುಟುಂಬದೊಂದಿಗೆ ಚಿಕ್ಕ ಹಳ್ಳಿಯಲ್ಲಿ ವಾಸಿಸುತ್ತಿದ್ದ. ದಿನವೂ ಸೌದೆ ಕಡಿದು ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದ. ಅವನು ದಿನವೂ ಹೋಗುತ್ತಿದ್ದ ಆ ಕಾಡಿನಲ್ಲಿ ಒಂದು ದೊಡ್ಡ ಮಾವಿನ ಮರವಿತ್ತು. ಅದರಲ್ಲಿ ಪಕ್ಷಿಗಳು, ಅಳಿಲುಗಳು ಮತ್ತು ಜೇನುನೊಣಗಳು ವಾಸಿಸುತ್ತಿದ್ದವು. ಮಣಿ ಕೂಡ ಮರ ಕಡಿದು ವಿಶ್ರಾಂತಿಗಾಗಿ ಆ ಮಾವಿನ ಮರದ ನೆರಳನ್ನು ಹುಡುಕಿ ಹೋಗುತ್ತಿದ್ದ. ಅಂತಿಮವಾಗಿ ಎಲ್ಲಾ ಜೀವಿಗಳು ಅವನ ಸ್ನೇಹಿತರಾಗಿ ಪ್ರತಿದಿನ ಅವನಿಗೆ ತಿನ್ನಲು ಹಣ್ಣುಗಳನ್ನು ನೀಡಿದವು.

 

ಒಂದು ದಿನ ಹಳ್ಳಿಯ ರೈತ ಮಣಿಯನ್ನು ಕರೆದು ನನಗೆ ಒಳ್ಳೆಯ ಮರದ ದಿಮ್ಮಿಗಳು ಬೇಕು ಎಂದು ಹೇಳಿದನು. ಎರಡು ಎತ್ತಿನ ಗಾಡಿಗಳ ಗಾತ್ರದ ದೊಡ್ಡ ಮರವನ್ನು ಕಡಿ, ಅದಕ್ಕೆ ಸಾಕಷ್ಟು ಹಣ ಕೊಡುತ್ತೇನೆ ಎಂದರು. ಮಣಿ ಕೂಡ ಸರಿ ಎಂದು ಹೇಳಿಬಿಟ್ಟು, ಕಾಡಿಗೆ ಹೋಗಿ ಮರವನ್ನು ಹುಡುಕತೊಡಗಿದನು. ಹುಡುಕಾಡಿ ಅಲೆದಾಡಿದರೂ ರೈತ ಕೇಳಿದಷ್ಟು ಮರ ಸಿಗದ ಕಾರಣ ಸುಸ್ತಾಗಿ ಮಾವಿನ ಮರದ ಬಳಿಗೆ ತೆರಳಿ ವಿಶ್ರಾಂತಿ ಪಡೆದನು. ಮರದ ಕೆಳಗೆ ಕುಳಿತಾಗ ಅವನಿಗೆ ಒಂದು ಉಪಾಯ ಹೊಳೆಯಿತು. ಮಾತನಾಡದೆ ಈ ಮಾವಿನ ಮರವನ್ನು ಕಡಿದು ರೈತನಿಗೆ ಕೊಟ್ಟು ಕೈತುಂಬಾ ಹಣ ಗಳಿಸಬಹುದಲ್ಲಾ ಎಂದುಕೊಂಡು ಮರದ ಬುಡಕ್ಕೆ ಕೊಡಲಿ ಹಾಕಿ ಕತ್ತರಿಸಲು ಪ್ರಾರಂಭಿಸಿದನು. ತಕ್ಷಣ ಮಾವಿನ ಮರ ಹೇಳಿತು, "ಅಯ್ಯೋ! ಮನುಷ್ಯನೇ ನನ್ನನ್ನು ಏಕೆ ಕತ್ತರಿಸುತ್ತಿದ್ದೀಯಾ? ನನ್ನ ನೆರಳಿನಲ್ಲಿ ಎಷ್ಟು ಜನರು ವಿಶ್ರಾಂತಿ ಪಡೆಯುತ್ತಿದ್ದಾರೆ. ಅಷ್ಟೇ ಯಾಕೆ ನಿನಗೂ ಕೂಡ ಪ್ರತಿದಿನ ನೆರಳು ನೀಡುತ್ತಿದ್ದೇನೆ? ಇನ್ನೂ ಎಷ್ಟೊಂದು ಇತರ ಜೀವಿಗಳು ಗೂಡು ಕಟ್ಟಿ ಗೂಡುಗಳಲ್ಲಿ ವಾಸಿಸುತ್ತಿವೆ. ದಯವಿಟ್ಟು ಕತ್ತರಿಸಬೇಡ" ಎಂದಿತು. ಮಣಿ ಏನನ್ನೂ ಕಿವಿಗೆ ಹಾಕಿಕೊಳ್ಳಲಿಲ್ಲ. ಕೂಡಲೇ ಪಕ್ಷಿಗಳು ಮತ್ತು ಅಳಿಲುಗಳು ಬಂದು, "ಅಯ್ಯೋ, ಮನುಷ್ಯನೇ ದಯವಿಟ್ಟು ಕತ್ತರಿಸಬೇಡ, ನಿನಗೆ ಇನ್ನೂ ಎಷ್ಟು ಬೇಕಾದರೂ ಹಣ್ಣುಗಳನ್ನು ಕಿತ್ತುಕೊಡುತ್ತೇವೆ. ನಿನಗೆ ಬೇಕಾದಷ್ಟು ಜೇನುತುಪ್ಪವನ್ನು ಕೊಡುತ್ತೇವೆ. ಮರವನ್ನು ಕತ್ತರಿಸಬೇಡ." ಎಂದು ಅಳತೊಡಗಿದವು. ಆದರೆ ಸ್ವಲ್ಪವೂ ಕರುಣೆ ಇಲ್ಲದ ಮಣಿಯೋ ಯಾವುದಕ್ಕೂ ಗಮನ ಕೊಡದೆ ಮರ ಕಡಿಯುತ್ತಿದ್ದ. ಆಗ ಒಂದು ಕೊಂಬೆ ಮುರಿದು ಕೆಳಗೆ ಬಿದ್ದಿತು. ಕೊಂಬೆಯ ಮೇಲಿದ್ದ ಗೂಡಿನೊಳಗೆ ಮೂರು ಮರಿಗಳು ಬಿದ್ದು ಸಾವನ್ನಪ್ಪಿದವು. ಒಂದು ಮರಿಯು ತನ್ನ ಪ್ರಾಣಕ್ಕಾಗಿ ಹೋರಾಡಿತು. ತಕ್ಷಣ ತಾಯಿ ಹಕ್ಕಿ ಮರಿಗಳ ಸುತ್ತಲೂ ಹಾರುತ್ತಾ, "ಓ ಮನುಷ್ಯನೇ, ನಾವು ನಿನಗೆ ಎಷ್ಟು ಸಹಾಯ ಮಾಡಿದ್ದೇವೆ. ನೀನು ನನ್ನ ಮಕ್ಕಳನ್ನು ಅನ್ಯಾಯವಾಗಿ ಕೊಂದಿದ್ದೀಯಲ್ಲಾ" ಎಂದು ಕಿರುಚಿತು. ಇದನ್ನು ನೋಡಿದ ಮಣಿಯ ಹೃದಯ ಒಡೆದು “ಛೇ, ನನಗೆ ಸಹಾಯ ಮಾಡಿದ ಮತ್ತು ಪ್ರೀತಿಸಿದ ಜೀವಿಗಳನ್ನು ಅಲ್ಪವಾದ ಹಣಕ್ಕಾಗಿ ನಾಶಮಾಡಲು ಮುಂದಾದೆನಲ್ಲಾ ಎಂದು ಯೋಚಿಸಿ ಅವುಗಳ ಬಳಿ ಕ್ಷಮೆಯಾಚಿಸಿ ಇನ್ನು ಮುಂದೆ ನನಗೆ ಎಷ್ಟು ಹಣ ಬಂದರೂ ಇಂತಹ ತಪ್ಪು ಮಾಡೋದಿಲ್ಲ ಎಂದು ನಿರ್ಧರಿಸಿದನು. ಏನು ಪುಟಾಣಿಗಳೇ! ನಿಮ್ಮನ್ನು ಪ್ರೀತಿಸಿದ ಮತ್ತು ನಿಮಗೆ ಸಹಾಯ ಮಾಡಿದವರಿಗೆ ಹಾನಿ ಮಾಡುವ ಬಗ್ಗೆ ನೀವು ಎಂದಿಗೂ ಯೋಚಿಸಬಾರದು. OK ನಾ!

- Mrs. ಸಾರಾಳ್ ಸುಭಾಷ್

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al