Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 13.07.2024
Share:

By Village Missionary Movement

Saturday, 13-Jul-2024

ಧೈನಂದಿನ ಧ್ಯಾನ(Kannada) – 13.07.2024

 

ಕರ್ತನ ಕಣ್ಣುಗಳು

 

"ನನ್ನ ಕಣ್ಣಿನಿಂದ ನಿನ್ನನ್ನು ನಡಿಸುವೆನು" - ಕೀರ್ತನೆ 32:8

 

ಒಬ್ಬ ಯುವಕ ತನ್ನ ಕುಟುಂಬವನ್ನು ಕಾಪಾಡಬೇಕೆಂಬ ಉನ್ನತ ಉದ್ದೇಶದಿಂದ ಕೆಲಸ ಮಾಡಲು ವಿದೇಶಕ್ಕೆ ಹೋದನು. ಅಲ್ಲಿ ಸ್ನೇಹಿತರು ಹಾಗೂ ಕುಟುಂಬದವರು ದೂರವಿದ್ದ ಕಾರಣ ಕುಡಿತದ ಚಟಕ್ಕೆ ಒಳಗಾದನು. ಮನೆಗೆ ಹಣ ಕಳುಹಿಸುವುದನ್ನು ಮರೆತುಬಿಟ್ಟನು. ಕೈಯಲ್ಲಿದ್ದ ಹಣವನ್ನೆಲ್ಲ ಕುಡಿದು ಬಡತನಕ್ಕೆ ತಳ್ಳಲ್ಪಟ್ಟನು. ಬಹು ದೊಡ್ಡ ಕುಡುಕ ನೀನು ಎಂದು ಹೇಳಿ ಸ್ನೇಹಿತರು ಹೊರಟು ಹೋದರು. ಅವರ ಆರೋಗ್ಯ ಹದಗೆಟ್ಟಿತು. ಸಹಾಯ ಮಾಡಲು ಸ್ನೇಹಿತರು ಸಂಬಂಧಿಕರು ಇಲ್ಲ. ತನಗೆ ಸಹಾಯ ಮಾಡಲು ಯಾರೂ ಇಲ್ಲವಲ್ಲಾ ಎಂದು ಭಾವಿಸಿದನು. ಆದರೆ ದೇವರ ಕಣ್ಣುಗಳು ಅವನನ್ನು ನೋಡಿದವು. ಆತ್ಮಹತ್ಯೆ ಮಾಡಿಕೊಳ್ಳಲು ಬಯಸಿದವನನ್ನು ಯೇಸು ಭೇಟಿಯಾಗಿ ಪುನರ್ಜನ್ಮವನ್ನು ಕೊಟ್ಟರು.  

  

ಈ ಲೋಕದಲ್ಲಿ ವಾಸಿಸುವ ಜನರ ನೋಟ, ನೋಡುವ ವಿಧಾನ ಹೀಗೆ ಹಲವಾರು ರೀತಿ ಇದೆ. ಆದರೆ ಕರ್ತನು ನಮ್ಮನ್ನು ನೋಡುವುದು ಬದುಕಿಸಲು! ನಮ್ಮ ಕರ್ತನ ಕಣ್ಣುಗಳು ಆಲೋಚನೆ ನೀಡುವ ಆಶ್ಚರ್ಯವಾದ ಕಣ್ಣುಗಳಾಗಿದೆ. ಅವು ಮನಮರುಗುವಂಥದ್ದು. ಎಲ್ಲೆಲ್ಲೂ ಸಂಚರಿಸುವ ಕಣ್ಣುಗಳು. ಅವರ ಕಣ್ಣುಗಳಿಗೆ ಮರೆಮಾಗಿ ಎಲ್ಲಿಗೂ ಹೋಗಲು ಸಾಧ್ಯವಿಲ್ಲ. ನಾವು ಕತ್ತಲೆಯಲ್ಲಿದ್ದರೂ ಆತನು ನಮ್ಮ ಮೇಲೆ ಕಣ್ಣಿಟ್ಟು ಸರಿಯಾದ ದಾರಿಯಲ್ಲಿ ಸಾಗಲು ಸಹಾಯ ಮಾಡುತ್ತಾರೆ. ಕಣ್ಣುಗಳು ಬೆಂಕಿಯ ಜ್ವಾಲೆಯಂತೆ ಪ್ರಕಾಶಮಾನವಾಗಿವೆ. ಮತ್ತು ನಮ್ಮ ದೇವರು ನಿಷ್ಪಕ್ಷಪಾತಿ. ನಾವು ಹೇಗಿದ್ದರೂ ಯಾವ ಪರಿಸ್ಥಿತಿಯಲ್ಲಿ ಇದ್ದರೂ ನಿಮ್ಮ ಪರಿಸ್ಥಿತಿಯನ್ನು ಬದಲಾಯಿಸಲು ಶಕ್ತನು. ಆತನೊಬ್ಬನೇ ನಾವು ತಪ್ಪು ದಾರಿಯಲ್ಲಿ ನಡೆಯದೆ ಸರಿಯಾದ ದಾರಿಯಲ್ಲಿ ನಡೆಯಲು ಬೋಧಿಸಿ ನಡೆಸುವವರು. ಕಣ್ಣಿಟ್ಟು ಆಲೋಚನೆ ಹೇಳುವವರು. ನಾನು -- ನಿನಗೆ ಬುದ್ದಿ ಹೇಳುವೆನು; ನೀನು ಹೋಗತಕ್ಕ ಮಾರ್ಗವನ್ನು ನಿನಗೆ ಬೋಧಿಸುವೆನು; ನನ್ನ ಕಣ್ಣಿನಿಂದ ನಿನ್ನನ್ನು ನಡಿಸುವೆನು ಎಂದು ಹೇಳುವ ದೇವರು! 

 

ಪ್ರಿಯರೇ! ಯಾರೂ ನೋಡುತ್ತಿಲ್ಲ ಅಥವಾ ವಿಚಾರಿಸುತ್ತಿಲ್ಲ ಎಂದು ಚಿಂತಿಸದೆ ಕರ್ತನ ಕಣ್ಣುಗಳು ನಮ್ಮ ಮೇಲಿವೆಯಲ್ಲಾ ಎಂದು ನೆನೆಸಿ ಸಂತೋಷಪಡೋಣ! ಕರ್ತನ ಕಣ್ಣುಗಳು ತಮ್ಮ ಕಾಯಿಲೆಗಳು, ದೌರ್ಬಲ್ಯಗಳು, ತೊಂದರೆಗಳು ಮತ್ತು ಇಕ್ಕಟ್ಟುಗಳಿಂದ ಅವನಿಗೆ ಸ್ವಾತಂತ್ರ್ಯವನ್ನು ಹೊತ್ತು ತರುತ್ತದೆ. ನಮಗೆ ದೈವಿಕ ಸಲಹೆ ಮತ್ತು ಮಾರ್ಗದರ್ಶನ ನೀಡಲು ಆತನ ಕಣ್ಣುಗಳು ಯಾವಾಗಲೂ ನಮ್ಮ ಮೇಲೆ ಇರುತ್ತವೆ. ನಮಗೆ ಆಲೋಚನೆ ನೀಡುವ ದೇವರ ಕಡೆಗೆ ನಾವು ನಮ್ಮ ಕಣ್ಣುಗಳನ್ನು ನೇರವಾಗಿ ಎತ್ತೋಣವೇ? ಗರ್ಭದಲ್ಲಿ ನಮ್ಮನ್ನು ಕಂಡ ದೇವರ ಕಣ್ಣುಗಳು ನಮ್ಮನ್ನು ಸಮಾಧಿಯವರೆಗೆ ಕಾಪಾಡುತ್ತವೆ.

- Sis. ಜಾಯ್ ಗ್ರೇಸ್

 

ಪ್ರಾರ್ಥನಾ ಅಂಶ:

ಆಂಧ್ರ ರಾಜ್ಯದಲ್ಲಿ ನಡೆಯುತ್ತಿರುವ ಆಲಯದ ಕಟ್ಟಡ ಕಾರ್ಯಗಳಿಗಾಗಿ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al