Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 21.04.2021
Share:

By Village Missionary Movement

Wednesday, 21-Apr-2021

ಧೈನಂದಿನ ಧ್ಯಾನ(Kannada) – 21.04.2021

ದೇವರನ್ನು ನಂಬಿರಿ

"ಯೆಹೋವನ ಭಕ್ತರೇ, ಯೆಹೋವನಲ್ಲಿ ಭರವಸವಿಡಿರಿ. ಅವರ ಸಹಾಯಕನೂ ಗುರಾಣಿಯೂ ಆತನೇ." - ಕೀರ್ತನೆಗಳು 115:5

ಜಗತ್ಪ್ರಸಿದ್ಧಗೊಂಡ ಸಂದೇಶಕರು ಡಿ.ಎಲ್.ಮೂಡಿ ಒಂದು ಬಾರಿ ಸಂಡೇ ಸ್ಕೂಲ್ ಪಾಠಗಳನ್ನು ಹೇಳುತ್ತಿದ್ದರು. ಆಗ ಧಿಡೀರೆಂದು ತನ್ನ ಕೈಯಲ್ಲಿದ್ದ ಚಿನ್ನದ ಗಡಿಯಾರವನ್ನು ಬಿಚ್ಚಿ ಇದು ಯಾರಿಗೆ ಬೇಕು ಎಂದು ಹೇಳಿದರು. ವಿದ್ಯಾರ್ಥಿಗಳೆಲ್ಲರಿಗೂ ಒಂದು ಸಂದೇಹ ಯಾರಾದರೂ ಚಿನ್ನದ ಗಡಿಯಾರವನ್ನು ಉಚಿತವಾಗಿ ಕೊಡುತ್ತಾರ ಎಂದು ಯಾವ ವಿದ್ಯಾರ್ಥಿಯೂ ಕೂಡ ಅದನ್ನು ತೆಗೆದುಕೊಳ್ಳಲು ಮುಂದೆ ಬರಲಿಲ್ಲ. ತಮಾಷೆಗಾಗಿ ಕೇಳುತ್ತಿದ್ದಾರೇನೊ ಎಂದು ಯೋಚಿಸಿದರು. ಕೊನೆಯದಾಗಿ ಒಬ್ಬ 6 ವರ್ಷದ ಹುಡುಗ ಬಂದು ಅದನ್ನು ಆತನ ಬಳಿಯಿಂದ ತೆಗೆದುಕೊಂಡನು. ಕೂಡಲೇ ಮೂಡಿ ಈ ಗಡಿಯಾರವು ನನಗೆ ಎಷ್ಟು ಪ್ರಯೋಜನಕರವಾಗಿತ್ತೋ ನಿನಗೂ ಕೂಡ ಅಷ್ಟೇ ಪ್ರಯೋಜನಕರವಾಗಿ ಇರುತ್ತದೆ ಎಂದು ಅವನನ್ನು ಪ್ರೋತ್ಸಾಹ ಪಡಿಸಿ ಅವನಿಗೆ ಕೊಟ್ಟರು. ಇವೆಲ್ಲವನ್ನೂ ಕೂಡ ನೋಡುತ್ತಿದ್ದ ವಿದ್ಯಾರ್ಥಿಗಳು ಆಶ್ಚರ್ಯಪಟ್ಟರು. ಕೂಡಲೇ ಅವರು ಆ ಸಂದೇಶಕರ ಬಳಿ ಹೋಗಿ ನೀವು ನಿಜವಾಗಿಯೂ ಆತನಿಗೆ ಕೊಟ್ಟುಬಿಟ್ಟಿರಾ ಎಂದು ಕೇಳಿದರು. ಹೌದು ನಾನು ನಿಜವಾಗಿಯೂ ಆ ಹುಡುಗನಿಗೆ ಕೊಟ್ಟೆನು ಏಕೆಂದರೆ ಆ ಹುಡುಗ ನಾನು ಹೇಳಿದ್ದನ್ನು ನಂಬಿದನು. ಈಗ ಆ ಗಡಿಯಾರ ಆತನದೇ ಎಂದರು. ಆತನು ಆ ಗಡಿಯಾರವನ್ನು ಬೇರೆ ವಿದ್ಯಾರ್ಥಿಗಳಿಗೆ ತೋರಿಸಿ ಸಂತೋಷಪಟ್ಟನು.

ಹೀಗೆ ಬೈಬಲ್ ನಲ್ಲಿ ಕರ್ತನು ಹೇಳಿದ ಮಾತುಗಳನ್ನೆಲ್ಲಾ ಚಿಕ್ಕ ಮಕ್ಕಳ ಹಾಗೆ ನಂಬಬೇಕು. ಲೋಕವನ್ನು ದೇವರು ನೀರಿನಿಂದ ಹಾಳು ಮಾಡುತ್ತೇನೆಂದು ಎಚ್ಚರಿಸಿದರೂ ಅದನ್ನು ಯಾರೂ ನಂಬದೇ ಹೋದಾಗಲು ನೋಹನು ಅದನ್ನು ನಂಬಿದನು. ಆದ್ದರಿಂದ ನೋಹನು ಆತನ ಕುಟುಂಬವು ರಕ್ಷಿಸಲ್ಪಟ್ಟಿತು. ದೇವರು ಅಬ್ರಹಾಮನೊಂದಿಗೆ ನಿನ್ನ ಸಂತಾನವು ವಿಸ್ತಾರವಾಗಿ ಹೆಚ್ಚಿಸಲ್ಪಡುತ್ತದೆ ಎಂದು ಹೇಳಿದಾಗ ಆತನು ಅನೇಕ ಜನಾಂಗಗಳಿಗೆ ತಂದೆಯಾಗಲು ನಂಬಲಾರದ ಪರಿಸ್ಥಿತಿಗಳು ಇದ್ದರೂ ಕೂಡ ಅದನ್ನು ನಿರೀಕ್ಷಣೆ ಎಂಬ ನಂಬಿಕೆಯಿಂದ ನಂಬಿದನು. ಅದು ಆತನಿಗೆ ನೀತಿಯಾಗಿ ಎಣಿಸಲ್ಪಟ್ಟಿತು. ದೇವರು ಕೊಟ್ಟ  ವಾಗ್ದಾನಗಳನ್ನು ನಮ್ಮ ಮೂಲ ಪಿತೃಗಳಾದ ಅಬ್ರಹಾಮ, ಇಸಾಕ್, ಯಾಕೋಬ ಇವರು ನಂಬಿದರು ಆದ್ದರಿಂದ ಆಶೀರ್ವಾದಗಳನ್ನು ಸ್ವಂತ ಮಾಡಿಕೊಂಡರು.

ಕ್ರಿಸ್ತನಲ್ಲಿ ಪ್ರಿಯರೇ! ಪ್ರತಿದಿನವೂ ಕರ್ತನು ನಿಮ್ಮೊಂದಿಗೆ ಮಾತನಾಡುತ್ತಿದ್ದಾರೆ, ವಾಗ್ದಾನಗಳನ್ನು ಕೊಡುತ್ತಿದ್ದಾರೆ. ನಾನು ನಿನ್ನನ್ನು ಆಶೀರ್ವದಿಸುತ್ತೇನೆ, ನಿನ್ನ ಮೂಲಕ ನಾನು ಮಹಿಮೆ ಪಡಿಸಲ್ಪಡುತ್ತೇನೆ, ಅಂತ್ಯಕಾಲ ಉಜ್ಜೀವನದಲ್ಲಿ ನಿನ್ನನ್ನು ನಾನು ಉಪಯೋಗಿಸುತ್ತೇನೆ ನಿನ್ನನ್ನು ಪಾಪದ ಬಂಧನಗಳಿಂದ, ರೋಗಗಳಿಂದ, ಸೈತಾನನ ಶಕ್ತಿಗಳಿಂದ ಪೀಡಿಸಲ್ಪಡುತ್ತಿರುವವರನ್ನು ನಿಮ್ಮ ಮೂಲಕ ಬಿಡಿಸುವುದಕ್ಕೆ ನಿಮ್ಮನ್ನು ಉಪಯೋಗಿಸುತ್ತೇನೆ ಎಂದು  ಮಾತಾಡುತ್ತಲೇ ಇದ್ದಾರೆ. ನೀವು ಆತನ ಮಾತನ್ನು ಇರುವುದನ್ನು ಇರುವಹಾಗೆ ನಂಬುವುದಾದರೆ ದೇವರು ನಿಮ್ಮ ಮೂಲಕ ದೊಡ್ಡ ಕಾರ್ಯಗಳನ್ನು ಮಾಡುತ್ತಾರೆ. ನಿಮ್ಮ ಮೂಲಕ ಆತನು ಮಾಡುವ ಕಾರ್ಯಗಳು ದೊಡ್ಡದಾಗಿರುತ್ತವೆ ಎಂದು ದೇವರು ಹೇಳುತ್ತಿದ್ದಾರೆ. ಅಬ್ರಹಾಮನ ಹಾಗೆ ನಂಬಿರಿ. ಖಂಡಿತವಾಗಿ ದೇವರು ಹೇಳಿದ ಮಾತುಗಳು ನಿಮ್ಮ ಜೀವನದಲ್ಲಿ ಕಾರ್ಯ ಮಾಡುವುದನ್ನು ನೀವೂ ನೋಡುತ್ತೀರ.
-    Mrs. ಸೂಸನ್ನ ಮ್ಯಾಥ್ಯೂ

ಪ್ರಾರ್ಥನಾ ಅಂಶ:-
ಮೋಕ್ಷ ಪ್ರಯಾಣ, ದೈನಂದಿನ ಧ್ಯಾನ ಸಂದೇಶವನ್ನು ಬರೆಯುತ್ತಿರುವ ದೇವರ ಮಕ್ಕಳನ್ನು ದೇವರು ಬಲವಾಗಿ ಉಪಯೋಗಿಸುವಂತೆ ಪ್ರಾರ್ಥಿಸೋಣ.

ಈ ದಿನದ ಧ್ಯಾನ ವಾಕ್ಯಕ್ಕಾಗಿ ಇಲ್ಲಿ ಕೆಳಗಿನ ನಂಬರ್ ಗಳನ್ನು ಸಂಪರ್ಕಿಸಿ.
ವಾಟ್ಸಾಪ್.  
ತಮಿಳಿಗಾಗಿ +919444011864  
ಇಂಗ್ಲಿಷ್ ಗಾಗಿ +919444011769
ಹಿಂದಿಗಾಗಿ +91 93858 10496
ತೆಲುಗುಗಾಗಿ +919442493250

www.vmm.org.in
ಈಮೈಲ್:- reachvmm@gmail.com
Android App: https://play.google.com/store/apps/details?id=com.infobells.vmmorgin
        
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +919345540482



hacklink satın al holiganbet giriş matbet holiganbet holiganbet giriş casibom giriş casibom casibom giriş casibom matbet matbet giriş imajbet imajbet giriş perabet perabet giriş coinbar coinbar giriş klasbahis klasbahis giriş supertotobet giriş supertotobet jojobet giriş jojobet casibom casibom giriş jojobet giriş jojobet interbahis interbahis giriş mariobet mariobet giriş betpas betpas giriş artemisbet artemisbet giriş marsbahis giriş marsbahis restbet restbet giriş egebet egebet giriş Hiltonbet Hiltonbet giriş jojobet alobet alobet giriş betcio betcio giriş grandpashabet grandpashabet giriş superbetin superbetin giriş perabet perabet giriş pashagaming tarafbet editörbet perabet perabet giriş grandbetting hitbet xslot betkom giriş betkanyon giriş perabet perabet giriş Hiltonbet Hiltonbet giriş grandpashabet grandpashabet giriş grandpashabet güncel giriş grandpashabet grandpashabet giriş grandpashabet giriş güncel jojobet jojobet giriş holiganbet holiganbet giriş casibom casibom giriş jojobet jojobet giriş alobet alobet giriş marsbahis marsbahis giriş milanobet jojobet grandpashabet jojobet casinoroyal jojobet holiganbet ibizabet holiganbet amkbet sonbahis betgit cratosroyalbet cratosroyalbet tlcasino