By Village Missionary Movement
Friday, 12-Jul-2024ಧೈನಂದಿನ ಧ್ಯಾನ(Kannada) – 12.07.2024
ಹೆಮ್ಮೆಯುಳ್ಳವನು
"...ದೇವರು ಅಹಂಕಾರಿಗಳನ್ನು ಎದುರಿಸುತ್ತಾನೆ,…" - ಯಾಕೋಬ 4:6
ಟೈಟಾನಿಕ್ ಎಂಬ ಹೆಸರಿನ ಹಡಗನ್ನು ಬಹಳ ಬ್ರಹ್ಮಾಂಡವಾಗಿಯೂ ಬೃಹತ್ ವೆಚ್ಚದಲ್ಲಿಯೂ ಎಲ್ಲಾ ಸುರಕ್ಷತೆಯೊಂದಿಗೆ ವೈಟ್ ಸ್ಟಾರ್ ಲೈನ್ ನಿರ್ವಹಣೆಯೊಂದಿಗೆ ರೂಪಿಸಲಾಯಿತು. ಎಷ್ಟು ದೊಡ್ಡ ಹಿಮಬಂಡೆಗಳನ್ನಾದರೂ ಮುರಿಯುವ ಸಾಮರ್ಥ್ಯ ಮತ್ತು ಎಲ್ಲಾ ಹವಾಮಾನ ಪರಿಸ್ಥಿತಿಗಳನ್ನು ನಿಭಾಯಿಸುವ ಸಾಮರ್ಥ್ಯಕ್ಕಾಗಿ ಇದು ಪ್ರಶಂಸಿಸಲ್ಪಟ್ಟಿದೆ. 2224 ಶ್ರೀಮಂತ ಪ್ರಯಾಣಿಕರ ಮುಂದೆ ಹಡಗಿನ ಸಂಸ್ಥಾಪಕನು ಹೀಗೆ ಹೇಳಿದರು, "ದೇವರೇ ನೆನೆಸಿದರೂ ಈ ಹಡಗನ್ನು ಏನೂ ಮಾಡಲು ಸಾಧ್ಯವಿಲ್ಲ" ಎಂದು! ಆದರೆ ತನ್ನ ಮೊದಲ ಪ್ರಯಾನದಲ್ಲೇ, ಏಪ್ರಿಲ್ 15, 1912 ನೇ ವರ್ಷದಲ್ಲಿ ಉತ್ತರ ಅಟ್ಲಾಂಟಿಕ್ ನ ಸಮುದ್ರಭಾಗದಲ್ಲಿ ಮುಳುಗಿತು. ಆ ಅಪಘಾತದಲ್ಲಿ 1500 ಜನರು ಸತ್ತರು. ಕಾರಣ ಹಡಗಿನ ಮುಂಭಾಗದಲ್ಲಿ ಮಾತ್ರ ಐಸ್ ಬ್ರೇಕರ್ ಅನ್ನು ಅಳವಡಿಸಲಾಗಿತ್ತು. ಆದರೆ ಒಂದು ಮಂಜುಗಡ್ಡೆಯು ಹಡಗಿನ ಬದಿಗೆ ಅಪ್ಪಳಿಸಿ ಹಡಗು ಎರಡು ತುಂಡಾಯಿತು. ಇದನ್ನು ವಿನ್ಯಾಸಗೊಳಿಸಿದ ಕಂಪನಿಯ ಹೆಮ್ಮೆ ಕೊನೆಗೆ ಹೇಗೆ ಮುಕ್ತಾಯವಾಯಿತು?
ಸತ್ಯವೇದದಲ್ಲಿ ಆದಿಕಾಂಡ ಪುಸ್ತಕದಲ್ಲಿ ನಾವು ಗೋಪುರವನ್ನು ನಿರ್ಮಿಸಿ ನಮಗೆ ಹೆಸರು ಮಾಡೋಣ ಬನ್ನಿ ಎಂದು ಹೇಳಿದರು. ಇವರು ನಿರ್ಮಿಸಿದ ಗೋಪುರದ ಕುರಿತ ಹೆಮ್ಮೆಯನ್ನು ಮುರಿಯಲು, ದೇವರು ಅವರ ಕಾರ್ಯಗಳನ್ನು ಅದಲು ಬದಲು ಮಾಡಿದರು. ಇವರು ತಮ್ಮ ಹೆಸರನ್ನು ಬಹಿರಂಗಪಡಿಸಲು ಮತ್ತು ಅದನ್ನು ಸ್ಥಾಪಿಸಲು ಬಯಸಿದ್ದರು. ಆದರೆ ದೇವರ ದೃಷ್ಟಿಯಲ್ಲಿ ಹಾಗಾಗಲಿಲ್ಲ.
ಪ್ರಿಯರೇ! ದೇವರು ಅಹಂಕಾರಿಗಳನ್ನು ವಿರೋಧಿಸುತ್ತಾನೆ. ದೇವರಿಗೆ ವಿರುದ್ಧವಾಗಿರುವ ಏಕೈಕ ವಿಷಯ ಇದೇ. ಹೆಮ್ಮೆಗೆ ವಿರುದ್ಧ ಪದ ತಾಳ್ಮೆ. ನಾವು ಸಹ ಪ್ರತಿದಿನ ಯೇಸುವಿನಂತೆ ತಾಳ್ಮೆಯನ್ನು ಧರಿಸಿಕೊಳ್ಳೋಣ. ನಮ್ಮಲ್ಲಿರುವ ಎಲ್ಲವೂ ದೇವರ ದಯೆಯಿಂದ ನಮಗೆ ಲಭ್ಯವಾಗಿದೆ. ಯಾವುದರ ಬಗ್ಗೆಯೂ ಹೆಮ್ಮೆ ಪಡುವ ಹಕ್ಕು ನಮಗಿಲ್ಲ. ಸತ್ಯವೇದವು ನಮ್ಮಲ್ಲಿ ಪ್ರತಿಯೊಬ್ಬರನ್ನು ಹೀಗೆ ಎಚ್ಚರಿಸುತ್ತಿದೆ, "ಈ ಭಾಗ್ಯವು ನಮ್ಮ ಸಾಮರ್ಥ್ಯ ಸಾಹಸಗಳಿಂದಲೇ ನಮಗುಂಟಾಯಿತು ಅಂದುಕೊಂಡೀರಿ." (ಧರ್ಮೋಪದೇಶಕಾಂಡ 8:17) ಹೌದು, ನಮ್ಮ ಜೀವವು ಆತನಿಗೆ ಸೇರಿದ್ದು. ಹಾಗಾದರೆ ನಾವು ಮಾಡಿದ್ದಕ್ಕೆ ಹೆಮ್ಮೆ ಪಡಬಹುದೇ? ಆದ್ದರಿಂದ ನಾವು ಪಡೆಯುವ ಎಲ್ಲಾ ಆಶೀರ್ವಾದಗಳಿಗೆ ಧನ್ಯವಾದ ಸಲ್ಲಿಸೋಣ ಮತ್ತು ಹೆಮ್ಮೆಯನ್ನು ತೊಡೆದುಹಾಕೋಣ.
- Mrs. ರೂಬಿ ಅರುಣ್
ಪ್ರಾರ್ಥನಾ ಅಂಶ:
ಗುಜರಾತ್ ರಾಜ್ಯದ ಸೇವೆಯ ಗಡಿ ವಿಸ್ತರಣೆಗಾಗಿ ಪ್ರಾರ್ಥಿಸಿರಿ.
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- info@vmm.org.in
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482