Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 10.07.2024
Share:

By Village Missionary Movement

Wednesday, 10-Jul-2024

ಧೈನಂದಿನ ಧ್ಯಾನ(Kannada) – 10.07.2024

 

ಅಲ್ಪೆಟ್ರಾಸ್ 

 

"...ಆತನನ್ನು ಪ್ರೀತಿಸುವವರ ಹಿತಕ್ಕಾಗಿ ಎಲ್ಲಾ ಕಾರ್ಯಗಳು ಅನುಕೂಲವಾಗುತ್ತವೆ ಎಂದು ನಮಗೆ ಗೊತ್ತದೆ" - ರೋಮಾ 8:28

 

ಅನೇಕ ಬಾರಿ ಕೆಲವರು ಈ ರೀತಿ ಪ್ರಲಾಪಿಸುತ್ತಾರೆ. ಅಷ್ಟೇ ಯಾಕೆ ನಾವು ಸಹ ಪ್ರಲಾಪಿತ್ತೇವೆ? ಸ್ವಲ್ಪ ಉದ್ದವಾಗಿ, ಕಲರ್ ಆಗಿ, ತೆಳ್ಳಗೆ, ಸ್ವಲ್ಪ ದುಂಡುಮುಖ ಇದ್ದಿದ್ದರೆ ಇನ್ನೂ ಸ್ವಲ್ಪ ಹೆಚ್ಚು ವಿದ್ಯಾವಂತನಾಗಿದ್ದರೆ, ನಾನು ಬೇರೆ ಮನೆಯಲ್ಲಿ ಹುಟ್ಟಿದ್ದರೆ ಚೆನ್ನಾಗಿರುತ್ತಿತ್ತಲ್ಲಾ ಎಂದು! ಆದರೆ ಅವರು ನಿಮ್ಮನ್ನು ಸುಂದರವಾಗಿಯೇ ಸೃಷ್ಟಿಸಿದ್ದಾರೆಂದು ನಿಮಗೆ ಗೊತ್ತಾ? Don't worry. 

 

ಇತ್ತೀಚೆಗೆ ನಾನು (ALBATROSS) ಎಂಬ ಹಕ್ಕಿಯ ಬಗ್ಗೆ ಓದಿದೆ. ಅದೊಂದು ಪ್ರೇಮ ಪಕ್ಷಿಯಂತೆ. ಒಬ್ಬ ಸಂಗಾತಿಯೊಂದಿಗೆ ಮಾತ್ರ ಬದುಕುತ್ತದಂತೆ. ಇದು ಉದ್ದವಾದ ಗರಿಗಳನ್ನು ಹೊಂದಿರುವ ಪಕ್ಷಿಯಾಗಿದೆ. ತುಂಬಾ ದೊಡ್ಡ ಹಕ್ಕಿ ಕೂಡ. ಇದು ಇತರ ಪಕ್ಷಿಗಳಂತೆ ಹಾರಲು ಸಾಧ್ಯವಿಲ್ಲ. ಆದರೆ ಎತ್ತರದ ಸ್ಥಳಗಳಿಗೆ ಏರಿದ ನಂತರ ಅದು ವಿಮಾನದಂತೆ ಹಾರಲು ಪ್ರಾರಂಭಿಸುತ್ತದೆ. ಸುಮಾರು ಐದು ವರ್ಷಗಳವರೆಗೆ ತಡೆರಹಿತವಾಗಿ ಹಾರಬಲ್ಲವು. ಸಮುದ್ರದ ಮೇಲೆ ಬರುವ ಮೀನುಗಳೇ ಇದರ ಆಹಾರ. ಅವುಗಳ ಜೀವನ ಇತರ ಪಕ್ಷಿಗಳಂತೆ ಸಾಮಾನ್ಯವಲ್ಲ. ದೇವರು ಅವುಗಳಿಗೆ ನೀಡಿದ ಜೀವನ ಶೈಲಿಯನ್ನು ಸ್ವೀಕರಿಸಿ ಅದ್ಭುತವಾಗಿ ಜೀವಿಸುತ್ತವೆ. ಹೌದು, ನಿಮ್ಮ ಜೀವನದಲ್ಲಿಯೂ ಸಹ ದೇವರು ನಿಮಗೆ ಅನುಮತಿಸಿರುವುದನ್ನು ಹಾಗೆಯೇ ಸ್ವೀಕರಿಸಿರಿ. ಸತ್ಯವೇದದಲ್ಲಿ ರೂತ್ ಪುಸ್ತಕದಲ್ಲಿ ನಾವು ನವೋಮಿ ಎಂಬ ತಾಯಿಯನ್ನು ಕಾಣುತ್ತೇವೆ. ಆಕೆಯ ಪತಿ ಎಲೀಮೆಲೆಕನು ದೇಶದಲ್ಲಿನ ಬರಗಾಲದಿಂದ ತಪ್ಪಿಸಿಕೊಳ್ಳಲು 

 

ತನ್ನ ಕುಟುಂಬವನ್ನು ಮೋವಾಬ್ ದೇಶಕ್ಕೆ ಕರೆದೊಯ್ದನು. ದಿನಗಳು ಕಳೆದವು. ಗಂಡ ಸತ್ತು ಹೋದನು, ಮತ್ತು ಅವಳ ಇಬ್ಬರು ಮಕ್ಕಳಾದ ಮಹ್ಲೋನ್, ಕಿಲ್ಯೋನ್ ಸತ್ತುಹೋದರು. ಎಲ್ಲವನ್ನೂ ಕಳೆದುಕೊಂಡು ಪರದೇಶದಲ್ಲಿ ಒಂಟಿಯಾಗಿದ್ದಳು. ಅವಳು ತನ್ನ ದೇಶ, ಅವಳ ಜನರು, ಅವಳ ದೇವರನ್ನು ಪೂಜಿಸಲು ಬೆತ್ಲೇಹೇಮಿಗೆ ಹಿಂದಿರುಗಿದಳು. ಹೌದು, ಜೀವನದಲ್ಲಿ ಎಲ್ಲವನ್ನೂ ಕಳೆದುಕೊಂಡರೂ ಆಕೆ ತನ್ನ ದೇವರನ್ನು ಮರೆಯಲಿಲ್ಲ. ಅವಳು ತನ್ನ ವಿಧವೆ ಸೊಸೆ ರೂತ್‌ಳನ್ನೂ ಸಹ ತನ್ನೊಂದಿಗೆ ಇಟ್ಟುಕೊಂಡಳು. ನಮ್ಮ ದೇವರಿಂದ ಅವರ ಕುಟುಂಬವನ್ನು ಆದರಿಸಲು ಮತ್ತು ಕಾಪಾಡಲು ಅವರ ಸಂತತಿಯಲ್ಲಿ ದೇವಕುಮಾರನು ಜನಿಸಲು ದೇವರ ಬಳಿ ಒಂದು ಯೋಜನೆ ಇತ್ತು. 

 

ಹೌದು ನನಗೆ ಪ್ರಿಯವಾದವರೇ! ನಿಮ್ಮ ಜೀವನದಲ್ಲಿ ದೇವರು ಅನುಮತಿಸುವ ಎಲ್ಲವನ್ನೂ ತಾಳ್ಮೆಯಿಂದ ಸ್ವೀಕರಿಸಿ. ದೇವರನ್ನು ಪ್ರೀತಿಸುವವರಿಗೆ ಎಲ್ಲವೂ ಒಳ್ಳೆಯದಕ್ಕಾಗಿಯೇ ಎಂಬುದನ್ನು ಮರೆತುಹೋಗಬೇಡಿ. ಪರಿಸ್ಥಿತಿ ಏನೇ ಇರಲಿ, ದೇವರ ಕಡೆಗೆ ತಿರುಗಿ. ಆತನನ್ನೇ ಒರಗಿಕೊಂಡಿರಿ. ಆತನೇ ನಮ್ಮ ಆಶ್ರಯವಾಗಿದ್ದಾರೆ. ನಿಮ್ಮನ್ನು ಆಶೀರ್ವದಿಸುತ್ತಾರೆ. ಬದುಕುವಂತೆ ಮಾಡುತ್ತಾರೆ. ಹಲ್ಲೇಲೂಯಾ!

- R. ಮಂಜುಳಾ

 

ಪ್ರಾರ್ಥನಾ ಅಂಶ:

ನಮ್ಮ ಸೇವಾ ಕ್ಷೇತ್ರಗಳಲ್ಲಿ ನಡೆಯುವ ಟ್ಯೂಷನ್ ಕೇಂದ್ರಗಳಿಗೆ ಹಾಜರಾಗುವ ಮಕ್ಕಳ ಜ್ಞಾನಕ್ಕಾಗಿ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al