Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 08.07.2024
Share:

By Village Missionary Movement

Monday, 08-Jul-2024

ಧೈನಂದಿನ ಧ್ಯಾನ(Kannada) – 08.07.2024

 

ನಾವು ಆಧ್ಯಾತ್ಮಿಕ ಮದಲಗಿತ್ತಿ 

 

"…ನನ್ನ ಮದಲಗಿತ್ತಿಯು, ಅಗುಳಿ ಹಾಕಿದ ಉದ್ಯಾನ, ಬೇಲಿಯೊಳಗಿನ ಬುಗ್ಗೆ, ಮುಚ್ಚಿ ಮುದ್ರಿಸಿದ ಬಾವಿ ಆಗಿದ್ದಾಳೆ" - ಪರಮ 4:12

 

ನಾವು ಆಧ್ಯಾತ್ಮಿಕ ಮದಲಗಿತ್ತಿಯರಾಗಿ, ದೇವರ ಉದ್ಯಾನವಾಗಿ, ಬುಗ್ಗೆಯಾಗಿ, ಬಾವಿಯಾಗಿ ಇರಲು ಅವರು ಬಯಸುತ್ತಿದ್ದಾರೆ.

 

ಬಾವಿ ಮತ್ತು ಕಾರಂಜಿ ಉದ್ಯಾನವನ್ನು ಫಲವತ್ತಾಗಿಸುತ್ತದೆ. ಬಾವಿ ಮತ್ತು ನೀರಿಲ್ಲದ ಉದ್ಯಾನವು ಬಂಜರು ಮತ್ತು ಸುಂದರವಲ್ಲದಂತಾಗುತ್ತದೆ. ತೋಟದ ಫಲದಿಂದ ಮದಲಿಂಗನನ್ನು ಸಂತೋಷಪಡಿಸಬೇಕು. ಮದಲಿಂಗನಾದ ದೇವರು ತಾನು ಬಯಸುವ ಫಲ, ವಿಧೇಯತೆಯ ಫಲ, ಪ್ರೀತಿಯ ಫಲ, ಸೇವೆಯ ಫಲ ಇವುಗಳೇ.

 

ರಾಣಿ ವಿಕ್ಟೋರಿಯಾ ತನ್ನ ಡೈರಿ ನಮೂದುಗಳಲ್ಲಿ ತನ್ನ ಕುಟುಂಬದ ಘಟನೆಗಳನ್ನು ಬರೆದಿಡುತ್ತಿದ್ದರು. ಅದರ ಒಂದು ಬದಿಯ ಟಿಪ್ಪಣಿ ಇಲ್ಲಿದೆ. ಸಮಾರಂಭವೊಂದರಲ್ಲಿ ಭಾಗವಹಿಸಿ ಅರಮನೆಯಲ್ಲಿದ್ದ ಕೊಠಡಿಗೆ ಹಿಂತಿರುಗಿದಾಗ ಒಳಗಿನಿಂದ ಬೀಗ ಹಾಕಲಾಗಿತ್ತು. ರಾಣಿ ವಿಕ್ಟೋರಿಯಾ ಬಾಗಿಲಲ್ಲಿ ನಿಂತಾಗ ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ಬಾಗಿಲು ತಟ್ಟಿದಾಗ ಒಳಗಿನಿಂದ ಗಂಡ ಯಾರು ಎಂದು ಕೇಳಿದರು, ನಿಮ್ಮ ಪ್ರೀತಿಯ ಹೆಂಡತಿ ಬಂದಿದ್ದೇನೆ ಅಂದಾಗ ಗಂಡ ಓಡಿ ಹೋಗಿ ಬಾಗಿಲು ತೆರೆದರಂತೆ.

 

ಪ್ರೀತಿಯನ್ನು ಹುಡುಕುತ್ತಿರುವ ದೇವರು, ನೀನು ನನ್ನನ್ನು ಪ್ರೀತಿಸುತ್ತಿದ್ದೀಯಾ? ಎಂದು ಹಂಬಲದಿಂದ ಕೇಳುತ್ತಿದ್ದಾರೆ. ಆತನೂ ಸಹ ನಮ್ಮನ್ನು ಪ್ರೀತಿಸುತ್ತಿದ್ದಾರೆ. ಪಾಲ್ ಯಾಂಗಿಚ್ಚೋ ಅವರು ಸದಾ ಸೇವೆ ಸೇವೆ ಎಂದು ಓಡುತ್ತಿದ್ದಾಗ, ಅವರ ಹೆಂಡತಿ ತುಂಬಾ ದುಃಖಿತಳಾಗಿ , ಶರೀರವು ತುಂಬಾ ತೆಳ್ಳಗಾಗಲು ಪ್ರಾರಂಭಿಸಿತು. ಪತ್ನಿಯ ಸ್ಥಿತಿ ತಿಳಿದು ದೇವರ ಬಳಿ ಪ್ರಾರ್ಥಿಸತೊಡಗಿದರು. ಕರ್ತನು ಅವರಿಗೆ, "ಮೊದಲು ದೇವರನ್ನು ಪ್ರೀತಿಸು, ಎರಡನೆಯದಾಗಿ ನಿನ್ನನ್ನು ಪ್ರೀತಿಸು, ನಂತರ ನಿನ್ನ ಹೆಂಡತಿಯನ್ನು ಒಂದೇ ದೇಹವಾಗಿ ಪ್ರೀತಿಸು, ನಂತರ ಸಭೆ ಮತ್ತು ಸೇವೆಗಳನ್ನು ಪ್ರೀತಿಸು, ಎಂದು ಹೇಳಿದರಂತೆ. ಇದು ಅಶುದ್ಧ ಆತ್ಮದ ಸಲಹೆಯಾಗಿರಬಹುದೋ ಎಂದು ಯೋಚಿಸುತ್ತಿರುವಾಗ, "ಸ್ವಂತ ಮನೆಯವರನ್ನು ಆಳುವದಕ್ಕೆ ತಿಳಿಯದವನು ದೇವರ ಸಭೆಯನ್ನು ಹೇಗೆ ಪರಾಂಬರಿಸುವನು" 1 ತಿಮೊ. 3:5 ಎಂದು ಪವಿತ್ರಾತ್ಮನು ಸ್ಪಷ್ಟವಾಗಿ ಮಾತನಾಡಿದರಂತೆ.  

 

ಹೌದು, ಒಂದು ಹೆಂಡತಿಯು ಹೇಗೆ ತನ್ನ ಗಂಡನಿಂದ ಪ್ರೀತಿಯನ್ನು ನಿರೀಕ್ಷಿಸುತ್ತಾಳೋ, ಹಾಗೆಯೇ ಮದಲಿಂಗನಾದ ಯೇಸು ಕ್ರಿಸ್ತನು ಆಧ್ಯಾತ್ಮಿಕ ಮದಲಗಿತ್ತಿಯಾದ ನಮ್ಮಿಂದ ಪ್ರೀತಿಯನ್ನು ನಿರೀಕ್ಷಿಸುತ್ತಿದ್ದಾರೆ. ಯೇಸುವನ್ನು ಪ್ರೀತಿಸಿ ಬದುಕೋಣ. ಹಲ್ಲೇಲೂಯಾ!

- Mrs. ಫಾತಿಮಾ ಸೆಲ್ವರಾಜ್

 

ಪ್ರಾರ್ಥನಾ ಅಂಶ:

ದೆಬೋರಾಳ್ ಮಿಷನರಿಗಳು ಮಾಡುವ ಎಲ್ಲಾ ಸೇವೆಗಳೊಂದಿಗೆ ದೇವರ ಹಸ್ತವು ಜೊತೆ ಇರುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al holiganbet giriş holiganbet padişahbet bets10 extrabet royalbet süperbetin padişahbet betcio romabet giriş romabet queenbet bahiscasino betcio bahiscasino atlasbet matbet matbet giriş bahiscasino celtabet queenbet casibom jojobet