By Village Missionary Movement
Friday, 05-Jul-2024ಧೈನಂದಿನ ಧ್ಯಾನ(Kannada) – 05.07.2024
ಸಾಮಾನ್ಯ, ಅಸಾಮಾನ್ಯ
"ನಿನ್ನ ಬಲದಿಂದ ದಂಡಿನ ಮೇಲೆ ಬೀಳುವೆನು; ನನ್ನ ದೇವರ ಸಹಾಯದಿಂದ ಪ್ರಾಕಾರವನ್ನು ಹಾರುವೆನು” - ಕೀರ್ತನೆ 18:29
ಇಂದು ಜನರಿಂದಾಗಿಯೇ ಜನರು ಸಾಯುತ್ತಿದ್ದಾರೆ. ನಾನು ರಸ್ತೆಯಲ್ಲಿ ಸರಿಯಾಗಿ ಹೋಗುತ್ತಿದ್ದೇನೆ ಮತ್ತು ಇತರ ಜನರು ಸರಿಯಾಗಿ ಹೋಗುತ್ತಿಲ್ಲ ಎಂದು ಅವರು ತಪ್ಪಾಗಿ ಹೋಗುವುದರಿಂದ ಮತ್ತು ನಿಯಮಗಳನ್ನು ಅನುಸರಿಸದ ಕಾರಣ, ಅಪಘಾತಗಳು ಸಂಭವಿಸುತ್ತಿವೆ. ಒಬ್ಬ ವ್ಯಕ್ತಿಯ ತಪ್ಪಿನಿಂದಾಗಿ ಅನೇಕ ಕೆಟ್ಟ ಘಟನೆಗಳು ನಡೆಯುವುದನ್ನು ನಾವು ದಿನನಿತ್ಯದ ಸುದ್ದಿಗಳಲ್ಲಿ ನೋಡುತ್ತೇವೆ.
ನಮ್ಮಿಂದಾಗಿ ಇತರರು ನಾಶವಾಗಬಾರದು, ರೂಪುಗೊಳ್ಳಬೇಕು" ಈ ಜಗತ್ತಿನಲ್ಲಿ ಅನೇಕ ಸಾಧಕರು ರೂಪುಗೊಳ್ಳಲು ಕಾರಣವಾಗಿದ್ದವರು, ಸಾಮಾನ್ಯ ಜನರು! ಆದರೆ "ಕ್ರೈಸ್ತರು" ಎಂಬ ಒಂದೇ ಹೆಸರುಳ್ಳವರು. ಇದಕ್ಕೆ ಹಲವಾರು ಉದಾಹರಣೆಗಳಿವೆ.
ಬೆಂಜಮಿನ್ ಫ್ರಾಂಕ್ಲಿನ್ ಮೇಣದಬತ್ತಿಗಳನ್ನು ತಯಾರಿಸಿ ಮಾರಾಟ ಮಾಡುವ ಬಡ ಕ್ರೈಸ್ತನ ಮಗ. ಅವರು ತಮ್ಮ ಮಗನನ್ನು ಜಗತ್ತು ಮೆಚ್ಚುವ ಅಪ್ರತಿಮ ವಿಜ್ಞಾನಿಯಾಗಿಸಿದರು. ಥಾಮಸ್ ಅಲ್ವಾ ಎಡಿಸನ್ ದೋಣಿ ನಡೆಸುವವನ ಮಗ. ತನಗೆ ಓದುವ ಜ್ಞಾನವಿಲ್ಲ ಎಂದು ಗುರುಗಳು ಮೂರ್ಖನೆಂದು ಕೈಬಿಟ್ಟರೂ ತಾಯಿಯೇ ಅವರನ್ನು ಹಲವು ಅಪರೂಪದ ಆವಿಷ್ಕಾರಗಳಿಗೆ ಒಡೆಯನನ್ನಾಗಿ ಮಾಡಿದರು.
ಅಬ್ರಹಾಂ ಲಿಂಕನ್ ಒಬ್ಬ ಬಡ ಮರಕಡಿಯುವವನ ಮಗ. ಅವರು ಯುನೈಟೆಡ್ ಸ್ಟೇಟ್ಸ್ನ ಅಧ್ಯಕ್ಷರಾದರು. ಪುಸ್ತಕ ಮಾರಾಟಗಾರನ ಮಗನಾದ ಸಾಮುವೇಲ್ ಜಾನ್ಸನ್ ಇಂಗ್ಲಿಷ್ ನಿಘಂಟಿನ ಸಂಪಾದಕರಾಗಿ ಡಾಕ್ಟರೇಟ್ ಗಳಿಸಿ ಇಂದಿಗೂ ಜಗತ್ತು ಅವರನ್ನು ಮೆಚ್ಚಿಕೊಳ್ಳುತ್ತಿದೆ. ಷೇಕ್ಸ್‌ಪಿಯರ್‌ನ ತಂದೆ ಒಬ್ಬ ಕುದುರೆ ಸವಾರ. ಅವರ ತಂದೆ ಅವರನ್ನು ಬರಹಗಾರರಾಗಲು ಪ್ರೋತ್ಸಾಹಿಸಿದರು. ಲೂಯಿಸ್ ಬ್ರೈಲ್ ಎಂಬ ಕುರುಡನು ಕುರುಡರು ಓದಬಹುದಾದ ವರ್ಣಮಾಲೆಯನ್ನು ಕಂಡುಹಿಡಿದನು. ಅವರ 3 ನೇ ವಯಸ್ಸಿನಲ್ಲಿ ಅಪಘಾತದಲ್ಲಿ ಒಂದು ಕಣ್ಣು ಕುರುಡಾಯಿತು. ಇವರು ಎರಡೂ ಕಣ್ಣುಗಳು ಕುರುಡಾಗಿರುವವರಿಗೆ ಕಣ್ಣಾದರು.
ನಮ್ಮ ಕೊರತೆಗಳ ನಡುವೆಯೂ ನಾವು ಇತರರಿಗೆ ಆಶೀರ್ವಾದವಾಗಿ ಮಾರ್ಪಡಬಹುದು. ಕುಟುಂಬದ ಹಿನ್ನೆಲೆ ಇದ್ದರೆ ಮಾತ್ರವೇ ನೀವು ಅಸಾಮಾನ್ಯ ಕೆಲಸಗಳನ್ನು ಮಾಡಬಹುದು ಎಂಬುದೆಲ್ಲಾ ಏನಿಲ್ಲಾ. ದೇವರನ್ನು ನಂಬಿರುವ ಸಾಮಾನ್ಯ ಜನರ ಮೂಲಕವಾಗಿ ದೇವರು ಅಸಾಮಾನ್ಯವಾದ ಕೆಲಸಗಳನ್ನು ಮಾಡಿದ್ದಾರೆ. ಕತ್ತಲೆಯ ಹಾದಿಯಲ್ಲಿ ಸಾಗಿ ನರಕದಲ್ಲಿ ನಶಿಸುವಂತಿದ್ದ ನಾವು, ಯೇಸು ಎಂಬ ಬೆಳಕಿನ ದಾರಿಯಲ್ಲಿ ನಡೆಯಲು ದೇವರ ಕೃಪೆ ಸಿಕ್ಕಿತಲ್ಲಾ! ಎಲ್ಲರನ್ನೂ ಈ ದಾರಿಗೆ ತರಲು ಶ್ರಮಿಸೋಣ. ಆಮೆನ್.
- D. ಸೆಲ್ವರಾಜ್
ಪ್ರಾರ್ಥನಾ ಅಂಶ:
ಆಗಸ್ಟ್ 15 ರಂದು ಯುವ ಶಿಬಿರದಲ್ಲಿ ಒಂದು ಲಕ್ಷ ಯುವಕರು ಭಾಗವಹಿಸುವಂತೆ ಪ್ರಾರ್ಥಿಸಿರಿ.
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- info@vmm.org.in
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482