By Village Missionary Movement
Thursday, 04-Jul-2024ಧೈನಂದಿನ ಧ್ಯಾನ(Kannada) – 04.07.2024
ಏನು ಬೇಕಾದರೂ ಮಾಡುವಂತಹ ದೇವರು
"…ಯಾವ ಕಾರ್ಯವೂ ನಿನಗೆ ಅಸಾಧ್ಯವಲ್ಲ" - ಯೆರೆಮಿಾಯ 32:17
ನ್ಯೂಜಿಲೆಂಡ್‌ನ ಆಕ್ಲೆಂಡ್ ನಗರದಲ್ಲಿ ಐವರ್ ಡೇವಿಸ್ ಅವರ ಜೀವನದಲ್ಲಿ ನಡೆದ ಆಸಕ್ತಿದಾಯಕ ಘಟನೆಯನ್ನು ನೋಡೋಣ. ಬಾಡಿಗೆ ಮನೆಯಲ್ಲಿ ವಾಸವಿದ್ದ ಐವರ್ ಡೇವಿಸ್ ಅವರನ್ನು ಮನೆ ಮಾಲೀಕರು ಮನೆ ಖಾಲಿ ಮಾಡುವಂತೆ ಹೇಳಿಬಿಟ್ಟರು. ಆದರೆ ಮುಂದಿನ ಬಾಡಿಗೆ ಮನೆ ಇನ್ನೂ ಸಿಗಲಿಲ್ಲ. ಆದರೆ ಸಾಮಾನುಗಳನ್ನು ಸಾಗಿಸಲು ಗಾಡಿ ಬಂದುಬಿಟ್ಟಿತು. ಸಾಮಾನು ಎಲ್ಲಿಗೆ ಕೊಂಡೊಯ್ಯುವುದು ಎಂದು ಕೇಳಿದಾಗ ಸಾಮಾನುಗಳನ್ನು ಮೊದಲು ತುಂಬಿಸಿ ಆಮೇಲೆ ನೋಡಿಕೊಳ್ಳೋಣ ಎಂದು ಪ್ರಾರ್ಥನೆಯೊಂದಿಗೆ ಗಾಡಿಯಲ್ಲಿ ಸಾಮಾನು ತುಂಬುತ್ತಿದ್ದರು. ಏನಾಶ್ಚರ್ಯ ಎಂದರೆ ತಕ್ಷಣ ಒಬ್ಬ ವ್ಯಕ್ತಿ ಬಂದು ಒಂದು ಮನೆ ಇದೆ ಎಂದು ಹೇಳಿದರು. ತನ್ನ ಪ್ರಾರ್ಥನೆಗೆ ಉತ್ತರ ಸಿಕ್ಕಿತು ಎಂಬ ಸಂತೋಷದಲ್ಲಿ ಉತ್ಸುಕನಾಗಿ ತನ್ನ ಹೊಸ ಮನೆಗೆ ಹೋದರು.
ಸತ್ಯವೇದದಲ್ಲಿಯೂ ಚಾರೆಪ್ತಾ ವಿಧವೆಯ ಮನೆಯಲ್ಲಿ ಎಲ್ಲಾ ಕಾರ್ಯಗಳು ಮುಗಿದುಹೋದಂತಹ ಪರಿಸ್ಥಿತಿ. ಕೊನೆಯಲ್ಲಿ ಸ್ವಲ್ಪ ಎಣ್ಣೆ ಮತ್ತು ಸ್ವಲ್ಪ ಹಿಟ್ಟು ಮಾತ್ರ ಇತ್ತು. ಆದರೆ, ಅವಳು ದೇವಮಾನವನ ಮಾತುಗಳನ್ನು ನಂಬಿದಳು ಮತ್ತು ಮೊದಲು ಆತನಿಗೆ ಒಂದು ರೊಟ್ಟಿಯನ್ನು ಮಾಡಿ ತಂದು ಕೊಟ್ಟಳು. ಬರಗಾಲದ ಉದ್ದಕ್ಕೂ ಎಣ್ಣೆ ಮತ್ತು ಹಿಟ್ಟು ಕಡಿಮೆಯಾಗಲಿಲ್ಲ. ಆಶ್ಚರ್ಯಕರವಾಗಿ ಅವರನ್ನು ಪೋಷಿಸಿದರು.
ನನಗೆ ಬಹು ಪ್ರಿಯವಾದವರೇ! ನಮ್ಮ ಜೀವನದಲ್ಲಿಯೂ ಎಲ್ಲವೂ ಮುಗಿದುಹೋಯಿತು. ನನ್ನಿಂದ ಇನ್ನೇನೂ ಮಾಡಲು ಸಾಧ್ಯವಿಲ್ಲ. ಎಲ್ಲಾ ಮಾರ್ಗಗಳು ಮುಚ್ಚಲ್ಪಟ್ಟಿದೆ ಎಂಬ ಪರಿಸ್ಥಿತಿಯಲ್ಲಿದ್ದೀರಾ? ನಮ್ಮ ಜೀವನದ ಕೊನೆಯ ಕ್ಷಣದಲ್ಲಿಯೂ ದೇವರು ಅದ್ಭುತಗಳನ್ನು ಮಾಡಬಲ್ಲನು. ಆದ್ದರಿಂದ ನಾವು ದೇವರನ್ನು ನೋಡೋಣ. ಆತನಲ್ಲಿ ನಂಬಿಕೆ ಇಡೋಣ. ದೇವರು ನಮ್ಮ ಎಲ್ಲಾ ಕಾರ್ಯಗಳನ್ನು ಸರಿಯಾಗಿ ನಡೆಸುತ್ತಾರೆ.
ನಿಮ್ಮ ಜೀವನದಲ್ಲಿನ ಕೊರತೆಗಳು, ಪರಿಹರಿಸಲಾಗದ ಸಮಸ್ಯೆಗಳು, ಮುಗಿಯದ ಸಾಲಗಳು, ಮಕ್ಕಳ ಶಿಕ್ಷಣ, ಭವಿಷ್ಯವು ನಿಮ್ಮನ್ನು ಭರವಸೆ ಕಳೆದುಕೊಳ್ಳುವಂತೆ ಮಾಡಬಹುದು. ಆದರೆ ನೀವು ದೇವರ ಮೇಲಿಡುವ ಸರಳ ನಂಬಿಕೆಯು ಅಸಾಧ್ಯವಾದ ಕಾರ್ಯಗಳನ್ನು ಮಾಡಿ ಮುಗಿಸುತ್ತದೆ. ಆದ್ದರಿಂದ ದೃಢವಾದ ನಂಬಿಕೆಯಿಂದ ದೇವರನ್ನು ಹಿಡಿದುಕೊಳ್ಳಿ. ದೇವರು ಮಹತ್ಕಾರ್ಯಗಳನ್ನು ಮಾಡುತ್ತಾರೆ. ಸಾಂದರ್ಭಿಕ ಆಯಾಸ ಮತ್ತು ಕಷ್ಟಕರ ಸಂದರ್ಭಗಳಿಂದ ನಿರುತ್ಸಾಹಗೊಳ್ಳಬೇಡಿ. ದೇವರು ಒಂದೇ ರಾತ್ರಿಯಲ್ಲಿ ಎಲ್ಲವನ್ನೂ ಬದಲಾಯಿಸುತ್ತಾರೆ. ಚಿಂತಿಸಬೇಡಿ.
- Mrs. ಅನಿತಾ ಅಲಗರಸ್ವಾಮಿ
ಪ್ರಾರ್ಥನಾ ಅಂಶ:
ಆಗಸ್ಟ್ 15 ರಂದು ನಡೆಯಲಿರುವ ಯುವ ಶಿಬಿರದ ಪ್ರೇಯರ್ ಕಾರ್ಡ್ ಪಡೆಯುವವರು ಯಾವುದಾದರೂ ಒಂದು ರೀತಿಯಲ್ಲಿ ತಮ್ಮಸಹಾಯವನ್ನು ನೀಡಿ ಪಾಲುದಾರರಾಗುವಂತೆ ಪ್ರಾರ್ಥಿಸಿರಿ.
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- info@vmm.org.in
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482