Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 29.06.2024
Share:

By Village Missionary Movement

Saturday, 29-Jun-2024

ಧೈನಂದಿನ ಧ್ಯಾನ(Kannada) – 29.06.2024

 

ಕೆಸರಿನಲ್ಲಿ ಒಂದು ಪರಿಮಳ 

 

"…ಆತನ ವಿಷಯವಾದ ಜ್ಞಾನ ವೆಂಬ ಸುವಾಸನೆಯನ್ನು ನಮ್ಮ ಮೂಲಕ ಎಲ್ಲಾ ಸ್ಥಳಗಳಲ್ಲಿ ವ್ಯಾಪನಗೊಳಿಸುತ್ತಾ ಬರುವ ದೇವರಿಗೆ ಸ್ತೋತ್ರ" - 2 ಕೊರಿಂಥ 2:14

 

ದೇವಮನುಷ್ಯರೊಬ್ಬರು ಹಿಮಾಲಯದ ಹತ್ತಿರದ ಹಳ್ಳಿಗೆ ಹೋದರು. ಅಲ್ಲಿಗೆ ಹೋದಾಗ ಹಳ್ಳಿ ಕೆಸರುಮಯವಾಗಿತ್ತು. ಕೆಟ್ಟ ವಾಸನೆ ಬರುತ್ತಿತ್ತು. ಅದು ಕಸದ ರಾಶಿಯಂತೆ ಕಾಣುತ್ತಿತ್ತು. ದುರ್ವಾಸನೆ ತಾಳಲಾರದೆ ದೇವಮನುಷ್ಯನು ಆ ಊರನ್ನು ಬಿಟ್ಟು ಹೊರಟು ಹೋದರು. ಕೆಲವು ವಾರಗಳ ನಂತರ ಅವರು ಆ ಹಳ್ಳಿಗೆ ಹಿಂತಿರುಗಿದರು. ಯಾವುದೇ ದುರ್ವಾಸನೆ ಇರಲಿಲ್ಲ, ಬದಲಿಗೆ ಅದು ಉತ್ತಮ ವಾಸನೆಯನ್ನು ನೀಡಿತು. ಆ ದೇವಮನುಷ್ಯನಿಗೆ ಆಶ್ಚರ್ಯವಾಯಿತು. ನೋಡ ನೋಡುತ್ತಿದ್ದಂತೆ ಕಸದ ಬುಡದಲ್ಲಿ ಒಂದಿಷ್ಟು ಹೂವಿನ ಗಿಡಗಳು ಬೆಳೆದಿದ್ದವು. ದುರ್ವಾಸನೆ ಇಲ್ಲದಿದ್ದರೂ ಆ ಊರಿನ ಕೊಳಕು ಹಾಗೇ ಇತ್ತು. ಈ "ಪರಿಮಳದ ಹೂವುಗಳು" ಆ ದುರ್ವಾಸನೆಯನ್ನು ಮರೆಮಾಚಿದವು. ಈ ಸುವಾಸನೆಯ ಹೂವನ್ನು ನೋಡಿದ ದೇವ ಮನುಷ್ಯನು ಹೇಳಿದ್ದು ಏನೆಂದರೆ, "ಈ ಕಸದ ರಾಶಿಯಲ್ಲಿ ನಾನು ದೇವರ ಮಹಿಮೆಯನ್ನು ನೋಡುತ್ತೇನೆ" ಎಂದರು.

 

ಇದರಂತೆಯೇ ಹೊಲಸು ಮತ್ತು ಪಾಪ ತುಂಬಿದ ಮೋವಾಬ್ ದೇಶದಿಂದ ಹೊರಟು ಬಂದ ಸ್ತ್ರೀಯೇ "ರೂತಳು". ರೂತಳು ಎಂದರೆ "ಸ್ನೇಹಿತೆ" ಎಂದು ಅರ್ಥ. "ರೂತಳು ಮುಳ್ಳಿನಲ್ಲಿ ಗುಲಾಬಿ, ಕೆಸರಿನಲ್ಲಿ ಕಮಲ"! ಯಾಕೆ ಗೊತ್ತಾ? ರೂತಳು ತನ್ನ ಗಂಡ ಸತ್ತು ಕೈಬಿಡಲ್ಪಟ್ಟ ಸ್ಥಿತಿಯಲ್ಲಿದ್ದಾಳೆ. ರೂತಳು ಮತ್ತು ಅವಳ ಅತ್ತೆ ಎಲ್ಲೆಡೆ ಕತ್ತಲೆ ಆವರಿಸಿರುವ ಪರಿಸ್ಥಿತಿಯಲ್ಲಿ ವಾಸಿಸುತ್ತಿದ್ದರು. ಈ ಪರಿಸ್ಥಿತಿಯಲ್ಲಿ ರೂತಳು ಇಸ್ರಾಯೇಲ್ ದೇವರನ್ನು ದೃಢವಾಗಿ ಅನುಸರಿಸಿ ತನ್ನ ಅತ್ತೆ ನವೋಮಿಯೊಂದಿಗೆ ಬೆತ್ಲೇಹೇಮಿಗೆ ಬರುತ್ತಾಳೆ. ಅವಳು ಇಸ್ರಾಯೇಲಿನ ದೇವರನ್ನು ದೃಢವಾಗಿ ಹಿಂಬಾಲಿಸಿದಳು. ಅವಳು ದೇವರ ಮೇಲಿಟ್ಟಿದ್ದ ದೃಢವಾದ ನಂಬಿಕೆಯನ್ನು ಯಾವುದೇ ಸಂದರ್ಭಗಳು, ನವೋಮಿ ಅಥವಾ ಸೈತಾನನು ತಡೆಯಲು ಸಾಧ್ಯವಾಗಲಿಲ್ಲ. ಆದರೆ ಅವಳ ದೃಢನಿರ್ಧಾರವನ್ನು ಕಂಡು ಪರಲೋಕವೇ ಶಿಳ್ಳೆ ಹೊಡೆಯಿತು. ದೇವದೂತರು ಹಾಡಿ ಕೊಂಡಾಡಿದರು, ಕೆರೂಬಿಯರೂ ಮತ್ತು ಸೆರಾಫಿಯರೂ ತಂಬೂರಿ ವೀಣೆಗಳನ್ನು ನುಡಿಸಿದರು. ಪರಿಶುದ್ಧರು ಹೊಗಳಿದರು. ಹೌದು, ರೂತಳ ದೃಢತೆಯನ್ನು ಪರಲೋಕವು ಅಂಗೀಕರಿಸಿತು! ಅದಕ್ಕಾಗಿಯೇ ರೂತಳು ಬೇತ್ಲೆಹೇಮಿಗೆ ಬಂದಳು ಮತ್ತು ಪುನಃಸ್ಥಾಪಿಸಲ್ಪಟ್ಟಳು. ಅವಳ ಜೀವನವು ಬೋವಜನೊಂದಿಗೆ ಪರಿಮಳಯುಕ್ತವಾಗಿತ್ತು. ಈ ಬೋವಜನು ಶ್ರೀಮಂತ, ಸದ್ಗುಣಶೀಲ ಮತ್ತು ಪವಿತ್ರನಾಗಿದ್ದನು. ಇಂತಹ ಬೋವಜನು ಮತ್ತು ರೂತಳಿಗೆ ಮದುವೆ ನಡೆಯಿತು. ಈ ರೂತಳು-ಬೋವಜ್ ನ ವಂಶಾವಳಿಯಲ್ಲಿಯೇ ಶಾರೋನಿನ ಗುಲಾಬಿ ಆಗಿರುವ ಯೇಸುಕ್ರಿಸ್ತನು ಕಾಣಿಸಿಕೊಂಡರು. ಇವರು ಲೋಕಕ್ಕೆ ಸುವಾಸನೆಯಾಗಿದ್ದಾರೆ. ಶಾರೋನಿನ ಈ ಗುಲಾಬಿಯ ಸುಗಂಧವು ಮೋವಾಬಿನ ಸ್ತ್ರೀಯಾದ ರೂತಳ ಅಸಹ್ಯವನ್ನು ಮುಚ್ಚಿತು. ಕೆಸರು ಮತ್ತು ಕೊಳಕಿನ ಜೀವನವನ್ನು ಶಾರೋನಿನ ಗುಲಾಬಿಯಾದ ಯೇಸು ತನ್ನ ಮಹಿಮೆಯಿಂದ ಮುಚ್ಚಿದರು. ಅವಳ ಜೀವನವನ್ನು ಸುಗಂಧಗೊಳಿಸಿದರು.

 

ಇದನ್ನು ಓದುತ್ತಿರುವ ಪ್ರಿಯರೇ, ನೀವೂ ಸಹ ಪಾಪದ ಜೀವನದಲ್ಲಿ ಅಶುದ್ಧತೆಯಲ್ಲಿ ಇದ್ದೀರಾ? ರೂತಳು ಮಾಡಿದಂತೆಯೇ ನೀವು ಸಹ ಯೇಸುವನ್ನು ನಿಷ್ಠೆಯಿಂದ ಅನುಸರಿಸಿದಾಗ ನಿಮ್ಮ ಜೀವನವು ಅರಳುತ್ತದೆ ಮತ್ತು ಉತ್ತಮ ವಾಸನೆಯನ್ನು ನೀಡುತ್ತದೆ!

- Sis. ಸಲೋಮಿ

 

ಪ್ರಾರ್ಥನಾ ಅಂಶ:

ನಮ್ಮ ಸಹ ಸೇವಕರ ಅಗತ್ಯಗಳು ಪೂರೈಸಲ್ಪಡುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al