Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 28.06.2024
Share:

By Village Missionary Movement

Friday, 28-Jun-2024

ಧೈನಂದಿನ ಧ್ಯಾನ(Kannada) – 28.06.2024

 

ಬಲವಾದ ಕೈ

 

"…ದೇವರ ತ್ರಾಣವುಳ್ಳ ಹಸ್ತದ ಕೆಳಗೆ ನಿಮ್ಮನ್ನು ತಗ್ಗಿಸಿಕೊಳ್ಳಿರಿ; ಆತನು ತಕ್ಕ ಕಾಲದಲ್ಲಿ ನಿಮ್ಮನ್ನು ಮೇಲಕ್ಕೆ ತರುವನು" - 1 ಪೇತ್ರ 5:6

 

ಒಮ್ಮೆ ಆಲ್ಪ್ಸ್ ಬೆಟ್ಟವನ್ನು ಸುತ್ತಿ ತೋರಿಸಲು ಒಬ್ಬ ಶ್ರೀಮಂತನನ್ನು ಪ್ರವಾಸಿ ಮಾರ್ಗದರ್ಶಿ ಕರೆದುಕೊಂಡು ಹೋದನು. ಶ್ರೀಮಂತನಿಗೆ ಆಲ್ಪ್ಸ್ ಬೆಟ್ಟವನ್ನು ಏರಲು ತುಂಬಾ ಭಯವಾಯಿತು. ಆದರೆ ಆ ಗೈಡ್ ಆಗ ತನ್ನ ದೃಢವಾದ ಕೈಗಳನ್ನು ಚಾಚಿ ಕೆಳಗೆ ಜಾರಿ ಬೀಳದಂತೆ ಭದ್ರವಾಗಿ ಕರೆದುಕೊಂಡು ಹೋದನು. ಇನ್ನೂ ಸ್ವಲ್ಪ ಎತ್ತರದ ಜಾಗಕ್ಕೆ ಹತ್ತಿದಾಗ ಶ್ರೀಮಂತನು ತನ್ನನ್ನೂ ಮರೆತು ಕೆಳಗೆ ನೋಡಿದರು. ಅಲ್ಲಿ ಕೆಳಗೆ ಪಾತಾಳವಿರುವ ಹಾಗೆ ಕಂಡಿತು. ಕೆಳಗೆ ಬಿದ್ದರೆ ಒಂದು ಮೂಳೆಯೂ ಸಿಗುವುದಿಲ್ಲ ಎಂದುಕೊಂಡರು. ಯಾವಾಗ ಅವರು ಕೆಳಗೆ ಬೊಗ್ಗಿ ನೋಡಿದರೋ ಆಗಲೇ ಸಾವಿನ ಭಯ ಅವರನ್ನು ಆವರಿಸಿತು. ಅವರು ಆ ಮಾರ್ಗದರ್ಶಿಯನ್ನು ನೋಡಿ ನಾನು ಇದಕ್ಕಿಂತ ಮುಂದೆ ಬರಲು ಸಾಧ್ಯವಿಲ್ಲ. ನಾನು ಕೆಳಗೆ ಬಿದ್ದುಹೋಗುತ್ತೇನೆ ಎಂದು ಹೇಳಿದರು. ಅದಕ್ಕೆ ಆ ಗೈಡ್ ಅವರನ್ನು ನೋಡಿ ಅಯ್ಯಾ ನಾನು ಸುಮಾರು ಮೂವತ್ತು ವರ್ಷಗಳಿಂದ ಆಲ್ಪ್ಸ್ ನಲ್ಲಿ ಪ್ರವಾಸಿಗರಿಗೆ ಮಾರ್ಗದರ್ಶಿಯಾಗಿದ್ದೇನೆ. ಸಾವಿರಾರು ಜನರಿಗೆ ಈ ಬೆಟ್ಟವನ್ನು ಸುತ್ತಿ ತೋರಿಸಿದ್ದೇನೆ. ಆದರೆ ಒಬ್ಬರೂ ಕೂಡ ನನ್ನ ಕೈಯಿಂದ ಜಾರಿ ಕೆಳಗೆ ಬಿದ್ದದ್ದೇ ಇಲ್ಲ. ನನ್ನ ಕೈಗಳನ್ನು ನೋಡಿ ಎಂದು ತೋರಿಸಿದರು. ಆ ಸಿರಿವಂತನಿಗೆ ಆ ಮಾರ್ಗದರ್ಶಕನ ಬಲವಾದ ಕೈಯನ್ನು ನೋಡಿದಾಗ ಅವನ ಭಯವೆಲ್ಲಾ ಮಾಯವಾಯಿತು.  

 

ಅಬ್ರಹಾಮನು ಹತ್ತು ವರ್ಷಗಳ ಕಾಲ ಕಾನಾನ್ ದೇಶದಲ್ಲಿ ವಾಸಿಸಿದ ನಂತರ, ಸಾರಳು ಐಗುಪ್ತ ದೇಶದ ತನ್ನ ಗುಲಾಮ ಹುಡುಗಿಯಾದ ಹಾಗರಳನ್ನು ತೆಗೆದುಕೊಂಡು ಅಬ್ರಹಾಮನಿಗೆ ತನ್ನ ಎರಡನೆಯ ಹೆಂಡತಿಯಾಗಿ ಕೊಟ್ಟಳು. ಹಾಗರಳು ಗರ್ಭಿಣಿಯಾದಳು. ಈ ದಿನಗಳಲ್ಲಿ ಸಾರಳು ಅವಳ ಬಳಿ ಕಠೋರವಾಗಿ ವರ್ತಿಸಿದ್ದರಿಂದ ಹಾಗರಳು ಅವಳನ್ನು ಬಿಟ್ಟು ಓಡಿಹೋದಳು. ಅದಕ್ಕೆ ಯೆಹೋವನ ದೂತನು - ನೀನು ಯಜಮಾನಿಯ ಬಳಿಗೆ ಹಿಂದಿರುಗಿ ಹೋಗಿ ಅವಳಿಗೆ ತಗ್ಗಿ ನಡೆದುಕೋ ಅಂದನು. ಈ ಮಾತಿನ ನಂತರವೇ ಹಾರಗಳು ವಾಗ್ದಾನಗಳನ್ನು ಪಡೆದುಕೊಂಡಳು.

 

ಇದನ್ನು ಓದುತ್ತಿರುವ ಪ್ರಿಯರೇ, ದೇವರ ಶಕ್ತಿಯುತವಾದ ಹಸ್ತದಲ್ಲಿ ತಗ್ಗಿಸಿಕೊಂಡಿರುವುದನ್ನು ನಾವು ಕಲಿಯೋಣ. ಅದುವೇ ನಮಗೆ ಆಶೀರ್ವಾದವನ್ನು ತಂದುಕೊಡುವಂಥದು. ದೇವರ ಬಲವಾದ ಹಸ್ತವು ನಮ್ಮನ್ನು ಕೊನೆಯವರೆಗೂ ಜಾರಿಬೀಳದಂತೆ ಮುನ್ನಡೆಸಬಲ್ಲದು. ಆತನ ಬಲಿಷ್ಠ ಕೈಯಿಂದ ಯಾರೂ ನಿಮ್ಮನ್ನು ಬೇರ್ಪಡಿಸಲಾರರು. ಅವರೇ ನಮ್ಮೆಲ್ಲರನ್ನೂ ತನ್ನ ಅಂಗೈಯಲ್ಲಿ ಚಿತ್ರಿಸಿ ಇಟ್ಟುಕೊಂಡಿದ್ದಾರೆ. ನಾವು ಎಂದಿಗೂ ಅವರಿಂದ ಮರೆಯಲ್ಪಡುವುದೇ ಇಲ್ಲ.

- Mrs. ಶಕ್ತಿ ಶಂಕರ್ ರಾಜ್ 

 

ಪ್ರಾರ್ಥನಾ ಅಂಶ:

ನಮ್ಮ ಕ್ಯಾಂಪಸ್‌ನಲ್ಲಿ ನಡೆಯುವ ಆಸ್ಪತ್ರೆ ಸೇವೆಗಳು ಆಶೀರ್ವದಿಸಲ್ಪಡುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al