By Village Missionary Movement
Thursday, 27-Jun-2024ಧೈನಂದಿನ ಧ್ಯಾನ(Kannada) – 27.06.2024
ಕೈಲಾದಷ್ಟು ಮಾಡಿಬಿಡೋಣ
"ಈಕೆಯು ತನ್ನ ಕೈಲಾಗುವಷ್ಟು ಮಾಡಿದ್ದಾಳೆ" - ಮಾರ್ಕನು 14:8
ಯೋಹಾನ್ ಫಿಲಿಪ್ ಪ್ಯಾಪ್ರಿಸಿಯಸ್ (1711-1791) ಎಂಬವರು ಒಬ್ಬ ಜರ್ಮನ್ ಕ್ರೈಸ್ತ ಬೋಧಕ ಮತ್ತು ತಮಿಳು ವಿದ್ವಾಂಸರೂ ಆಗಿದ್ದರು. ಲೂಥೆರನ್ ಚರ್ಚ್‌ಗೆ ಸೇರಿದವರು. 1740 ರಲ್ಲಿ ತಮಿಳುನಾಡಿಗೆ ಬಂದು ತಮ್ಮ ಧಾರ್ಮಿಕ ಕಾರ್ಯವನ್ನು ಮಾಡಿದರು. ಇಂಗ್ಲಿಷ್-ತಮಿಳು ನಿಘಂಟು ಮತ್ತು ತಮಿಳಿನಲ್ಲಿ ಸತ್ಯವೇದವನ್ನು ಬರೆದರು. ಚೆನ್ನೈನಲ್ಲಿದ್ದ ಅವರ ಸಭೆಯಲ್ಲಿ ವಿವಿಧ ರಾಷ್ಟ್ರಗಳವರು ಇದ್ದುದರಿಂದ ಅವರಿಗೆ ಬೋಧಿಸಲು ಜರ್ಮನ್, ಡಚ್, ಪೋರ್ಚುಗೀಸ್, ಇಂಗ್ಲಿಷ್ ಮತ್ತು ತಮಿಳು ಭಾಷೆಗಳನ್ನು ಕಲಿತು ಈ ಐದು ಭಾಷೆಗಳಲ್ಲಿ ಬೋಧಿಸುತ್ತಿದ್ದರು. ಸತ್ಯವೇದವನ್ನು ತಮಿಳು ಭಾಷೆಗೆ ಅನುವಾದಿಸುವಲ್ಲಿ ಇವರ ಪಾತ್ರ ಬಹಳ ಪ್ರಾಮುಖ್ಯ ವಾಗಿತ್ತು. ಇವರ ಅನುವಾದದ ಕುರಿತು ಹೂಪರ್ (Hooper) ಎಂಬವರು ಉಲ್ಲೇಖಿಸುವಾಗ, "ಸತ್ಯವೇದದ ಅನುವಾದದ ಇತಿಹಾಸದಲ್ಲೇ ಪ್ಯಾಪ್ರಿಸಿಯಸ್ ಮಾಡಿ ಮುಗಿಸಿದ ಕೆಲಸ ಒಂದು ದೊಡ್ಡ ಕೃತಿ ಎಂದು ಶ್ಲಾಘಿಸಬೇಕು" ಎಂದರು. ಇವರು ಕ್ರಿಸ್ತನ ನಾಮದ ಮಹಿಮೆಗಾಗಿ ತನ್ನ ಕೈಲಾದಷ್ಟು ಕೆಲಸಗಳನ್ನು ಮಾಡಿದರು.
ಕರ್ತನಾದ ಯೇಸು ಕ್ರಿಸ್ತನು ಭೂಮಿಯ ಮೇಲೆ ಜೀವಿಸಿದ ದಿನಗಳಲ್ಲಿ ಹಲವು ವಿಧವಾದ ಅದ್ಭುತಗಳನ್ನು ಮತ್ತು ಸೂಚಕಕಾರ್ಯಗಳನ್ನು ಮಾಡಿದರು. ಈ ದಿನಗಳಲ್ಲಿ ಒಬ್ಬ ಮಹಿಳೆ ಮಾಡಿದ ಕಾರ್ಯ ಅವರನ್ನು ಬಹಳವಾಗಿ ಕದಲಿಸಿತು. ಅದೇನೆಂದರೆ, ಬೇಥಾನ್ಯದಲ್ಲಿ ಕುಷ್ಠರೋಗಿಯಾದ ಸೀಮೋನನ ಮನೆಯಲ್ಲಿ ಇದ್ದು ಊಟಕ್ಕೆ ಕೂತಿದ್ದಾಗ ಒಬ್ಬ ಸ್ತ್ರೀಯು ಬಹು ಬೆಲೆಯುಳ್ಳ ಅಚ್ಚ ಜಟಾಮಾಂಸಿ ತೈಲದ ಭರಣಿಯನ್ನು ತೆಗೆದುಕೊಂಡು ಬಂದು ಆ ಭರಣಿಯನ್ನು ಒಡೆದು ತೈಲವನ್ನು ಆತನ ತಲೆಯ ಮೇಲೆ ಹೊಯಿದಳು. ಕೆಲವರು ಈ ತೈಲವನ್ನು ನಷ್ಟಮಾಡಿದ್ದೇಕೆ ಇದನ್ನು ಹೆಚ್ಚು ಬೆಲೆಗೆ ಮಾರಿ ಬಡವರಿಗೆ ಕೊಡಬಹುದಾಗಿತ್ತಲ್ಲಾ ಎಂದು ಹೇಳಿ ಆಕೆಗೆ ಛೀ ಹಾಕಿದರು. ಆದರೆ ಈಕೆಯು ತನ್ನ ಕೈಲಾಗುವಷ್ಟು ಮಾಡಿದ್ದಾಳೆ ಎಂದು ಯೇಸುವಿನಿಂದ ಪ್ರಶಂಸಿಸಲ್ಪಟ್ಟಳು.
ನನಗೆ ಪ್ರಿಯವಾದರೆ, ಸೇವೆಗೆ ನನಗೆ ಕರೆಯುವಿಕೆಯೇ ಇಲ್ಲ ಎಂದು ಹೇಳುವವರಾ ನೀವು ಚಿಂತಿಯೇ ಬೇಡ. ಇಬ್ಬರು ಮೂವರು ನನ್ನ ಹೆಸರಿನಲ್ಲಿ ಕೂಡಿ ಒಮ್ಮನಸ್ಸಿನಿಂದ ಪ್ರಾರ್ಥಿಸಿದರೆ ಅವರ ಪ್ರಾರ್ಥನೆಗೆ ಸದುತ್ತರವನ್ನು ದಯಪಾಲಿಸುತ್ತೇನೆ ಎಂದು ವಾಗ್ದಾನ ಮಾಡಿದ ಯೇಸು ಇಂದಿಗೂ ಜೀವಂತವಾಗಿದ್ದಾರೆ. ಆದುದರಿಂದ ನಾವು ನೇರವಾಗಿ ಕೆಲಸದ ಸ್ಥಳಗಳಿಗೆ ಹೋಗಿ ಸುವಾರ್ತೆ ಸಾರಲು ಸಾಧ್ಯವಾಗದ ಪರಿಸ್ಥಿತಿಯಲ್ಲಿದ್ದರೆ, ಅಂತಹ ಸೇವೆಗಳಿಗಾಗಿ ನಾವು ಭಾರದೊಂದಿಗೆ ಪ್ರಾರ್ಥಿಸೋಣ. ನಮ್ಮ ಕೈಲಾದಷ್ಟು ನೀಡೋಣ. ಈ ಮೂಲಕ ದೇವರ ರಾಜ್ಯವು ಬಲವಾಗಿ ಕಟ್ಟಲ್ಪಡುತ್ತದೆ. ನಾವೂ ನಮ್ಮ ಕೈಲಾದಷ್ಟು ಮಾಡಿ ಪರಮ ದೇವರ ರಾಜ್ಯದಲ್ಲಿ ಪಾಲು ಹೊಂದೋಣ.
"ಕೈಲಾದಷ್ಟು ಮಾಡೋಣ! ದೇವರ ಮಗನಾದ ಯೇಸುವಿಗಾಗಿ!"
- V.P. ಪಚ್ಚೈಮುತ್ತು
ಪ್ರಾರ್ಥನಾ ಅಂಶ:
ಆಮೆನ್ ವಿಲೇಜ್ ಟಿವಿಯಲ್ಲಿ ಪ್ರಸಾರವಾಗುವ ಕಾರ್ಯಕ್ರಮಗಳ ಮೂಲಕ ಅನೇಕ ಹೃದಯಗಳು ಮುಟ್ಟಲ್ಪಡುವಂತೆ ಪ್ರಾರ್ಥಿಸಿರಿ .
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- info@vmm.org.in
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482