Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 24.06.2024
Share:

By Village Missionary Movement

Monday, 24-Jun-2024

ಧೈನಂದಿನ ಧ್ಯಾನ(Kannada) – 24.06.2024

 

ಎಲ್ಲವೂ ಕರ್ತನದು 

 

"…ಲೋಕವೂ ಅದರಲ್ಲಿರುವದೆಲ್ಲವೂ ನನ್ನದಲ್ಲವೇ" - ಕೀರ್ತನೆ 50:12

 

ನಾನು ಹಗಲು ರಾತ್ರಿ ಯೆಹೋವನ ಧರ್ಮಶಾಸ್ತ್ರದಲ್ಲಿ ಆನಂದ ಪಡುವವನಾಗಿ, ತಪ್ಪದೇ ಸತ್ಯವೇದವನ್ನು ಓದಿ ರಾತ್ರಿ ಮಲಗಲು ಹೋಗುತ್ತೇನೆ. ಒಂದು ದಿನ ಒಂದು ಕನಸು: ಅದರಲ್ಲಿ ಚಿನ್ನ, ಬೆಳ್ಳಿ, ಹವಳ, ಮುತ್ತುಗಳು, ವಜ್ರಗಳು, ಗಾಜಿನ ಕಲ್ಲುಗಳು ಮತ್ತು ಇತರ ಅನೇಕ ಅಮೂಲ್ಯ ವಸ್ತುಗಳನ್ನು ರಾಶಿಯಾಗಿ ಹಾಕಲಾಗಿತ್ತು. ಇನ್ನೊಂದು ಕಡೆ ತೀರಾ ಸಾಮಾನ್ಯ ವ್ಯಕ್ತಿಯೊಬ್ಬ ನಿಂತಿದ್ದರು. ಅವರ ಮತ್ತು ವಸ್ತುಗಳ ನಡುವೆ ಜನರ ಗುಂಪು ಇತ್ತು. ನಾನು ಗುಂಪಿನಲ್ಲಿ ಒಬ್ಬನಾಗಿದ್ದೆ! ಅವರು ಜನಸಮೂಹವನ್ನು ನೋಡಿ, "ಭೂವಿುಯೂ ಅದರಲ್ಲಿರುವ ಸಮಸ್ತವೂ ನನ್ನದೇ!" ಆಕಡೆ ಬೆಲೆಯುಳ್ಳ ವಸ್ತುಗಳು ಈಕಡೆ ನಾನು ಇವೆರಡರಲ್ಲಿ ಯಾವುದನ್ನು ಬಯಸುತ್ತೀರೋ ಅದನ್ನು ಆರಿಸಿಕೊಂಡು ಸ್ವಂತಮಾಡಿಕೊಳ್ಳಿರಿ ಎಂದರು. ಜನರ ಗುಂಪು ವಸ್ತುಗಳ ಕಡೆಗೆ ಓಡಿತು. ಕೆಲವೇ ಸೆಕೆಂಡುಗಳಲ್ಲಿ ಕೂಗಾಟ, ಹೊಡೆದಾಟ, ವಾಗ್ವಾದ, ಗೊಂದಲ, ಗದ್ದಲ ಉಂಟಾಯಿತು. ನಾನು ನಿಂತಲ್ಲೇ ನಿಂತಿದ್ದೆ! ಅವರು ನನ್ನನ್ನು ನೋಡಿ ಏಕೆ? ನಿಂತಿದ್ದೀಯ ನೀನು ಸಹ ಹೋಗಿ ನಿನಗೆ ಇಷ್ಟವಾದದ್ದನ್ನು ತೆಗೆದುಕೋ ಎಂದು ಹೇಳಿದರು. "ಭೂವಿುಯೂ ಅದರಲ್ಲಿರುವ ಸಮಸ್ತವೂ ನನ್ನದೇ" ಎಂದು ಹೇಳಿದ ಆತನನ್ನೇ ಹೊಂದಲು ನನ್ನ ಹೃದಯವು ಹಾತೊರೆಯುತ್ತಿತ್ತು. ನಾನು ಕನಸಿನಿಂದ ಎಚ್ಚರವಾದೆ.

 

ಯೇಸು ವಾಸಿಸುತ್ತಿದ್ದ ದಿನಗಳಲ್ಲಿ, ಒಂದಾನೊಂದು ಹಳ್ಳಿಗೆ ಹೋದರು ಅಲ್ಲಿ ಮಾರ್ಥಳೆಂಬ ಒಬ್ಬ ಸ್ತ್ರೀಯು ಆತನನ್ನು ತನ್ನ ಮನೆಯಲ್ಲಿ ಇಳಿಸಿಕೊಂಡಳು. ಆಕೆಗೆ ಮರಿಯಳೆಂಬ ಒಬ್ಬ ತಂಗಿ ಇದ್ದಳು. ಈಕೆಯು ಸ್ವಾವಿುಯ ಪಾದಗಳ ಬಳಿಯಲ್ಲಿ ಕೂತುಕೊಂಡು ಆತನ ವಾಕ್ಯವನ್ನು ಕೇಳುತ್ತಿದ್ದಳು. ಆದರೆ ಮಾರ್ಥಳು ಬಹಳ ಸೇವೆಯ ವಿಷಯವಾಗಿ ಬೇಸತ್ತಳು. "ಅವಶ್ಯವಾದದ್ದು ಒಂದೇ; ಮರಿಯಳು ಆ ಒಳ್ಳೇಭಾಗವನ್ನೇ ಆರಿಸಿ ಕೊಂಡಿದ್ದಾಳೆ" ಎಂದು ದೇವರಿಂದ ಮರಿಯಳು ಹೊಗಳಲ್ಪಟ್ಟಳು.

    

ಪ್ರಿಯರೇ, ಭೂವಿುಯೂ ಅದರಲ್ಲಿರುವ ಸಮಸ್ತವೂ ಯೆಹೋವನದು. ಅವರಲ್ಲಿ ಸಕಲವೂ ಸೃಷ್ಟಿಸಲ್ಪಟ್ಟಿದೆ. ಎಲ್ಲವೂ ಆತನಲ್ಲಿ ನೆಲೆಗೊಂಡಿದೆ. ವಸ್ತುಗಳ ಮೇಲೆ ಆಸೆಯುಳ್ಳವರು ನಿಜವಾದ ಯೇಸುವನ್ನು ಅರಿತುಕೊಳ್ಳುವುದಿಲ್ಲ. ಲೌಕಿಕವಾದ ಆಸೆಯು ಯೇಸುವಿನಿಂದ ಸಿಗುವ ಆಶೀರ್ವಾದವನ್ನು ಕಳೆದುಕೊಳ್ಳುವಂತೆ ಮಾಡುತ್ತದೆ. ಯೇಸುವಿನ ಜ್ಞಾನವು ನಮ್ಮಲ್ಲಿರುವ ಅತ್ಯಂತ ಅಮೂಲ್ಯವಾದ ನಿಧಿಯಾಗಿದೆ. ಆದ್ದರಿಂದ ಆತನ ಪಾದಗಳ ಬಳಿ ಕುಳಿತು ಯೇಸುವಿನಲ್ಲಿರುವ ಮೇಲಿನವುಗಳನ್ನು ಹುಡುಕಿರಿ. ನಾಶವಾಗದ ಕಲ್ಮಷವಿಲ್ಲದ ನಿತ್ಯ ಜೀವವನ್ನು ಪರಲೋಕದಲ್ಲಿ ನಮಗಾಗಿ ಕಾಯ್ದಿರಿಸಲಾಗಿದೆ ಎಂದು ಅರಿತುಕೊಂಡವರಾಗಿ ಕಾರ್ಯನಿರ್ವಹಿಸೋಣ.

- K.S.ಮಾಣಿಕ್ಕವಾಸಗಂ

 

ಪ್ರಾರ್ಥನಾ ಅಂಶ:

ನಮ್ಮೊಂದಿಗೆ ಜೊತೆಗೂಡಿರುವ ಸಹಭಾಗಿತ್ವದ ಮಿಷನರಿಗಳನ್ನು ದೇವರು ಆಶೀರ್ವದಿಸುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al holiganbet giriş matbet holiganbet holiganbet giriş casibom giriş casibom casibom giriş casibom matbet matbet giriş imajbet imajbet giriş perabet perabet giriş coinbar coinbar giriş klasbahis klasbahis giriş supertotobet giriş supertotobet jojobet giriş jojobet casibom casibom giriş jojobet giriş jojobet interbahis interbahis giriş mariobet mariobet giriş betpas betpas giriş artemisbet artemisbet giriş marsbahis giriş marsbahis restbet restbet giriş egebet egebet giriş Hiltonbet Hiltonbet giriş jojobet alobet alobet giriş betcio betcio giriş grandpashabet grandpashabet giriş superbetin superbetin giriş perabet perabet giriş pashagaming tarafbet editörbet perabet perabet giriş grandbetting hitbet xslot betkom giriş betkanyon giriş perabet perabet giriş Hiltonbet Hiltonbet giriş grandpashabet grandpashabet giriş grandpashabet güncel giriş grandpashabet grandpashabet giriş grandpashabet giriş güncel jojobet jojobet giriş holiganbet holiganbet giriş casibom casibom giriş jojobet jojobet giriş alobet alobet giriş marsbahis marsbahis giriş milanobet jojobet grandpashabet jojobet casinoroyal jojobet holiganbet ibizabet holiganbet amkbet sonbahis betgit cratosroyalbet cratosroyalbet tlcasino