Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 22.06.2024
Share:

By Village Missionary Movement

Saturday, 22-Jun-2024

ಧೈನಂದಿನ ಧ್ಯಾನ(Kannada) – 22.06.2024

 

ಆಶ್ಚರ್ಯವಾದ ಪ್ರೀತಿ

 

"ಆದರೆ ನಾವು ಪಾಪಿಗಳಾಗಿದ್ದಾಗಲೂ ಕ್ರಿಸ್ತನು ನಮಗೋಸ್ಕರ ಪ್ರಾಣ ಕೊಟ್ಟದ್ದರಲ್ಲಿ ದೇವರು ನಮ್ಮ ಮೇಲೆ ತನಗಿರುವ ಪ್ರೀತಿಯನ್ನು ಸಿದ್ಧಾಂತಪಡಿಸಿದ್ದಾನೆ" - ರೋಮಾ 5:8

  

ಒಮ್ಮೆ ಸಾಧು ಸುಂದರ್ ಸಿಂಗ್ ಹಿಮಾಲಯದ ತಪ್ಪಲಿನಲ್ಲಿ ಪ್ರಯಾಣಿಸುತ್ತಿದ್ದರು. ಆಗ ಹೊತ್ತಿ ಉರಿಯುತ್ತಿದ್ದ ಕಾಡಿನ ಬೆಂಕಿಯನ್ನು ನಂದಿಸಲು ಪ್ರಯತ್ನಿಸುತ್ತಿದ್ದ ಜನರ ಗುಂಪನ್ನು ನೋಡಿದರು. ಅವರಲ್ಲಿ ಅನೇಕರು ಉರಿಯುತ್ತಿದ್ದ ಒಂದು ಮರವನ್ನು ವಿಶೇಷವಾಗಿ ದಿಟ್ಟಿಸುತ್ತಿರುವುದನ್ನು ನೋಡಿದರು. ಹತ್ತಿರ ಹೋಗಿ ವಿಚಾರಿಸಿದಾಗ ಆ ಮರದಲ್ಲಿದ್ದ ಹಕ್ಕಿ ಗೂಡನ್ನು ತೋರಿಸಿದರು. ಕೆಲವು ಮರಿಗಳು ಪಂಜರದೊಳಗೆ ಕಿರುಚುತ್ತಿದ್ದವು. ತಾಯಿ ಹಕ್ಕಿ ಚಿಲಿಪಿಲಿಗುಟ್ಟುತ್ತಾ ಗೂಡಿನ ಸುತ್ತ ಹಾರುತ್ತಿತ್ತು. ಬೆಂಕಿಯ ವೇಗ ಹೆಚ್ಚಾಗುತ್ತಿದ್ದಂತೆ ತಾಯಿ ಹಕ್ಕಿ ತನ್ನ ರೆಕ್ಕೆಗಳನ್ನು ಹರಡಿ ತನ್ನ ಮರಿಗಳನ್ನು ತಬ್ಬಿಕೊಂಡಿತು. ಆ ಮರ ಬಿದ್ದಾಗ ಸುಟ್ಟು ಕರಕಲಾಗಿದ್ದ ತಾಯಿ ಹಕ್ಕಿಯನ್ನು ಹೊರ ತೆಗೆದು ನೋಡಿದಾಗ, ಒಳಗಿದ್ದ ಐದು ಮರಿಗಳು ಸುರಕ್ಷಿತವಾಗಿದ್ದವು. ಐದು ಅರಿವಿರುವ ಹಕ್ಕಿಯೊಳಗೆ ಇಷ್ಟು ತ್ಯಾಗದ ಪ್ರೀತಿಯನ್ನು ಕೊಟ್ಟಿರುವ ದೇವರ ಪರಿಪೂರ್ಣ ಪ್ರೀತಿಯನ್ನು ನಾವು ಆಗಾಗ್ಗೆ ಅನುಮಾನಿಸುವುದು ಏಕೆ?

  

ಸತ್ಯವೇದದಲ್ಲಿ, ಸೊಲೊಮೋನನ ದಿನಗಳಲ್ಲಿ, ಇಬ್ಬರು ಮಹಿಳೆಯರು ಮಗುವಿನ ಬಗ್ಗೆ ಜಗಳವಾಡಿದರು. ಮಗುವನ್ನು ಕತ್ತರಿಸಿ ಅರ್ಧಕ್ಕೆ ಕೊಡುವುದು ಸೊಲೊಮೋನನ ತೀರ್ಪು. ಬದುಕಿರುವ ಮಗುವಿನ ತಾಯಿಯ ಕರುಳಿನ ಸಂಕಟ ಅಯ್ಯೋ! ದೇವರೇ ಮಗುವನ್ನು ಜೀವಂತವಾಗಿ ಅವಳಿಗೇ ಕೊಟ್ಟುಬಿಡಿ ಎಂದು ಬೇಡಿಕೊಂಡಳು. ಇನ್ನೊಬ್ಬಳು ಕತ್ತರಿಸಲು ಹೇಳಿದಳು. ಅತ್ತು ಗೋಳಾಡಿದ ನಿಜವಾದ ತಾಯಿಯ ಬಳಿಯೇ ಮಗುವನ್ನು ನೀಡಲಾಯಿತು. ಅಂತೆಯೇ, ನರಕದ ಶಿಕ್ಷೆಯಿಂದ ನಮ್ಮನ್ನು ರಕ್ಷಿಸಲು ಯೇಸು ತನ್ನನ್ನು ತಾನೇ ಕೊಟ್ಟರು. 

 

ಯೇಸು ಶಿಲುಬೆಯ ಪಾಡುಗಳಿಗೆ ಯೆಹೂದ್ಯರಿಂದ ಎಳೆದುಕೊಂಡು ಹೋಗುವ ಮೊದಲು ತೋರಿಸಿ ಕೊಡಲಿರುವ ಇಸ್ಕರಿಯೋತ ಯೂದ, ತಿರಸ್ಕರಿಸಲಿರುವ ಪೇತ್ರ ಮತ್ತು ತಪ್ಪಿಸಿಕೊಂಡು ಓಡಲಿರುವ ಶಿಷ್ಯರು ಹೀಗೆ ಇವರೆಲ್ಲರ ಪಾದಗಳನ್ನು ತೊಳೆಯುವ ಮೂಲಕ ಯೇಸು ಒಂದು ಮೂಲಮಾದರಿಯನ್ನು ಸ್ಥಾಪಿಸಿದರು. ಅವರು ತನಗೆ ಏನು ಮಾಡುತ್ತಾರೆಂದು ತಿಳಿದಿದ್ದರೂ, ಅವರು ತನ್ನನ್ನು ತಾನೇ ತಗ್ಗಿಸಿಕೊಂಡು, ತನ್ನ ಪ್ರಾಣವನ್ನು ಕೊಡುವ ಮಟ್ಟಿಗೆ ಆ ಪ್ರೀತಿಯು ಅವರಲ್ಲಿ ಬೆಂಕಿಯಾಗಿ ಹೊತ್ತಿ ಉರಿಯುತ್ತಲೇ ಇತ್ತು. ಅವರು ನಮ್ಮ ಮೇಲೆ ತೋರಿಸಿದ ಪ್ರೀತಿಯನ್ನು ನಾವು ಸಹ ಮತ್ತೊಬ್ಬರಿಗೆ ತೋರಿಸಲು ಸಾಧ್ಯವಾಗದಂತಿರುವ ನಮ್ಮಲ್ಲಿನ ಸಮಸ್ಯೆಗಳನ್ನು ತೊಡೆದುಹಾಕಲು ದೇವರು ಸಹಾಯ ಮಾಡಲಿ! "ಪವಿತ್ರಾತ್ಮನೇ ನಮ್ಮಲ್ಲಿ ಪ್ರತಿಯೊಬ್ಬರನ್ನು ತನ್ನ ಪ್ರೀತಿಯಿಂದ ತುಂಬಿಸಲಿ."

- Mrs. ಜಾಸ್ಮಿನ್ ಪಾಲ್

 

ಪ್ರಾರ್ಥನಾ ಅಂಶ:

ಫಿಲಿಪ್ ದಿ ಗಾಸ್ಪೆಲ್ ಸೇವೆಯ ಮೂಲಕ ಭೇಟಿ ನೀಡಿದ ಹಳ್ಳಿಗಳಲ್ಲಿನ ಜನರ ಹೆಸರುಗಳು ಜೀವ ಪುಸ್ತಕದಲ್ಲಿ ಬರೆಯಲ್ಪಡುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al holiganbet giriş holiganbet casibom bets10 extrabet royalbet süperbetin casibom giriş casibom jojobet giriş casibom milanobet piabellacasino betpas bahiscasino atlasbet betpas casinoroyal bahiscasino ngsbahis betplay holiganbet jojobet casibom holiganbet jojobet casibom vaycasino romabet