By Village Missionary Movement
Thursday, 20-Jun-2024ಧೈನಂದಿನ ಧ್ಯಾನ(Kannada) – 20.06.2024
ದೇವರ ಕೃಪೆ
"ನಾವು ಉಳಿದಿರುವದು ಯೆಹೋವನ ಕರುಣೆಯೇ; ಆತನ ಕೃಪಾವರಗಳು ನಿಂತುಹೋಗವು" - ಪ್ರಲಾಪಗಳು 3:22
ನಾವು ಪ್ರತಿದಿನ ದೇವರ ಕೃಪೆಯನ್ನು ಸವಿಯುತ್ತಿದ್ದೇವೆ. ಆತನ ಕೈ ನಮ್ಮನ್ನು ರಕ್ಷಿಸುತ್ತಿದೆ ಮತ್ತು ಆವರಿಸುತ್ತಿದೆ. ಆತನ ರೆಕ್ಕೆಗಳೇ ನಮಗೆ ಆಶ್ರಯ. "ಯೆಹೋವನು ಪಟ್ಟಣವನ್ನು ಕಾಯದಿದ್ದರೆ ಕಾವಲುಗಾರರು ಅದನ್ನು ಕಾಯುವದು ವ್ಯರ್ಥ." (ಕೀರ್ತನೆ 127:1) ಎಂಬ ಮಾತು ಎಷ್ಟು ಸತ್ಯವಾದದ್ದು!
ಕಳೆದ ವರ್ಷ ಡಿಸೆಂಬರ್‌ನಲ್ಲಿ ಭಾರಿ ಪ್ರವಾಹ ಉಂಟಾಗಿ ಅಪಾರ ಹಾನಿಯುಂಟುಮಾಡಿತು. ನಮ್ಮ ಊರು ತಿರುನೆಲ್ವೇಲಿ ಕೂಡ ಸಾಕಷ್ಟು ವಿನಾಶವನ್ನು ಕಂಡಿತು. ಅನೇಕರು ತಮ್ಮ ಆಸ್ತಿಯನ್ನು ಕಳೆದುಕೊಂಡರು. ಬಾಧಿಸಲ್ಪಟ್ಟವರಲ್ಲಿ ನನ್ನ ಮಗಳ ಕುಟುಂಬವೂ ಒಂದು. ಭಾನುವಾರ ಚರ್ಚ್ ನಲ್ಲಿ ಕ್ರಿಸ್ಮಸ್ ಆರಾಧನೆ ಮುಗಿಸಿ ಖುಷಿಯಿಂದ ಮಗಳ ಮನೆಗೆ ಹೋದೆ. ಮಳೆ ಧಾರಾಕಾರವಾಗಿ ಸುರಿಯುತ್ತಿತ್ತು. ಆಕೆಯ ಮನೆ ಇರುವ ಪ್ರದೇಶ ತಗ್ಗು ಪ್ರದೇಶವಾಗಿದ್ದರಿಂದ ಮಳೆ ನೀರು ನದಿಯಂತೆ ಹರಿಯುತ್ತಿತ್ತು. ಮನೆಗೆ ನೀರು ನುಗ್ಗಿದಾಗ ಆಕೆ ನಡೆಸುತ್ತಿದ್ದ ಹಾಸ್ಟೆಲ್‌ನ ಚಿಕ್ಕಮಕ್ಕಳು, ದೊಡ್ಡವರು ಹೀಗೆ 25 ಮಂದಿ ಮಹಡಿಗೆ ಹೋದೆವು. ಸೊಂಟದವರೆಗಿದ್ದ ನೀರು ಕುತ್ತಿಗೆಯ ಮಟ್ಟಕ್ಕೆ ಏರಿತು. ನಾವು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿ ಅವರ ಸಹಾಯದಿಂದ ಹೊರಗೆ ಹೋಗಿ ಮೂರು ಗಂಟೆಗಳ ಹೋರಾಟದ ನಂತರ ನಾವು ಸುರಕ್ಷಿತವಾಗಿ ನನ್ನ ಮನೆಗೆ ತಲುಪಿದೆವು. ಉಟ್ಟ ಬಟ್ಟೆಯೊಂದಿಗೆ ಬಂದವರಿಗೆ ಒಂದು ವೈದ್ಯಕೀಯ ಸ್ನೇಹಿತರ ಮೂಲಕ ಊಟ, ಬಟ್ಟೆ ಕೊಟ್ಟು ಆದರಿಸಲ್ಪಟ್ಟೆವು.
"ಪ್ರವಾಹಗಳು ಉರುಳಿ ಅಪ್ಪಳಿಸಿದರೂ ಹೃದಯದ ದೃಢತೆ ಕುಗ್ಗುವುದಿಲ್ಲವೇ".... ಎಂಬ ಹಾಡಿನ ಸಾಲುಗಳ ಹಾಗೆ ಇಕ್ಕಟ್ಟಿನ ಸಮಯದಲ್ಲಿ ಯೇಸುವೇ ಆಶ್ರಯವು ದುರ್ಗವು ಸಹಾಯಕನು ಆಗಿದ್ದಾರೆ. ಜಲರಾಶಿಯನ್ನು ದಾಟುವಾಗ ನಾನು ನಿನ್ನೊಂದಿಗಿರುತ್ತೇನೆ ಎಂದು ಹೇಳಿದವರು ಈಗಲೂ ನಮ್ಮೊಂದಿಗಿದ್ದಾರೆ.
ನನಗೆ ಪ್ರಿಯವಾದವರೇ! ಸತ್ಯವೇದದಲ್ಲಿ ಭಕ್ತನಾದ ಯೋಬನ ನಷ್ಟಗಳನ್ನು ನಾವು ನೋಡುವಾಗ, ನಮ್ಮ ನಷ್ಟಗಳು ಕಡಿಮೆಯೇ ಎಂದು ಭಾವಿಸಿ ನಮ್ಮ ಜೀವವನ್ನು ಉಳಿಸಿದ ಯೇಸುವಿಗೆ ನಮ್ಮ ಹೃದಯದ ಆಳದಿಂದ ಕೃತಜ್ಞತೆ ಸಲ್ಲಿಸುತ್ತೇವೆ. ಹೌದು, ನಾವು ನಿರ್ಮೂಲವಾಗದಿರುವುದು ದೇವರ ಕೃಪೆಯೇ" ಆತನ ಕರುಣೆಗೆ ಕೊನೆಯೇ ಇಲ್ಲ. ನಮ್ಮ ಆಪತ್ಕಾಲದಲ್ಲಿ ಆತನಿಗೆ ಮೊರೆಯಿಟ್ಟು, ಆತನಿಂದ ಬಿಡಿಸಲ್ಪಟ್ಟು ರಕ್ಷಿಸಲ್ಪಟ್ಟಂತೆ ನೀವೂ ಸಹ ಆಪತ್ಕಾಲದಲ್ಲಿ ಕರ್ತನನ್ನು ನೋಡಿ ಕರೆದರೆ ಬಿಡಿಸಲ್ಪಡುತ್ತೀರಿ. ದೇವರನ್ನೇ ಆಶ್ರಯವಾಗಿ ಹಿಡಿದುಕೊಳ್ಳಿರಿ! ಆಮೆನ್!
- Mrs. ಭುವನಾ ಧನಪಾಲನ್
ಪ್ರಾರ್ಥನಾ ಅಂಶ:
ಉತ್ತರದ ರಾಜ್ಯಗಳಲ್ಲಿ ಆಲಯಗಳಿಲ್ಲದ ಸ್ಥಳಗಳಲ್ಲಿ ಆಲಯಗಳ ನಿರ್ಮಾಣಕ್ಕಾಗಿ ಪ್ರಾರ್ಥಿಸಿರಿ.
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- info@vmm.org.in
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482