Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 19.04.2021
Share:

By Village Missionary Movement

Monday, 19-Apr-2021

ಧೈನಂದಿನ ಧ್ಯಾನ(Kannada) – 19.04.2021

ಮ್ಯಾಜಿಕ್ ಶೋ

"ನೀನು ನಿನಗೋಸ್ಕರ ಮಹತ್ತಾದವು ಗಳನ್ನು ಹುಡುಕುತ್ತೀಯೋ? ಹುಡುಕಬೇಡ;..." - ಯೆರೆಮಿಯ 45:5

ಒಂದು ಬಾರಿ ಒಂದು ಗ್ರಾಮದಲ್ಲಿ ಚಿಕ್ಕಮಕ್ಕಳ ಮಧ್ಯದಲ್ಲಿ ಸೇವೆ ಮಾಡುತ್ತಿದ್ದೆವು. "ನಂಬಿಗಸ್ತ ನಾಗಿರು" ಎಂಬ ಅಂಶದ ಕೆಳಗೆ ಹಾಡುಗಳು, ಬಾಯಿಪಾಠ ವಾಕ್ಯಗಳು ಮತ್ತು ಆಟಗಳು ಎಲ್ಲವನ್ನೂ ನಡೆಸಿದೆವು. ಚಿಕ್ಕ ಮಕ್ಕಳು ಬಹಳ ಸುಂದರವಾಗಿ ಗಮನಿಸಿದರು. ನಂತರ ಒಂದು ಚಿಕ್ಕ ಮ್ಯಾಜಿಕ್ ಒಂದನ್ನು ಮಾಡಿತೋರಿಸಿದೆವು. ಮ್ಯಾಜಿಕ್ಕನ್ನು ನೋಡಿದ ಎಲ್ಲಾ ಚಿಕ್ಕ ಮಕ್ಕಳು ಕೈಗಳನ್ನು ತಟ್ಟಿದರು, ಚಿಕ್ಕಮಕ್ಕಳ ಮಧ್ಯೆ ಸೇವೆ ಮುಗಿಯಿತು. ಮಕ್ಕಳು ಹೊರಡುವ ಸಮಯದಲ್ಲಿ ಒಬ್ಬ ಹುಡುಗನು ಮಾತ್ರ ಒಂಟಿಯಾಗಿ ಬಂದು "ಅಣ್ಣಾ ಈ ಮ್ಯಾಜಿಕ್ ಶೋ ಅನ್ನು ಹೇಗೆ ಮಾಡುತ್ತೀರ?" ಎಂದು ಕೇಳಿದನು. ಅದೆಲ್ಲಾ ನಿನಗೆ ಅರ್ಥವಾಗುವುದಿಲ್ಲ ಎಂದು ಸುಧಾರಿಸಿದಾಗ, ಅವನು ಹೇಳಿದನು ಸುಳ್ಳು ಮಾತಾಡಬಾರದು, ನಂಬಿಗಸ್ತ ರಾಗಿ ಜೀವಿಸಬೇಕು, ಮತ್ತೊಬ್ಬರನ್ನು ಯಾಮಾರಿಸಬಾರದು, ಎಂದು ಈಗ ತಾನೆ ಹೇಳಿದಿರಿ. ನೀವೇ ಹೀಗೆ ಯಾಮಾರಿಸುತ್ತೀರ ಎಂದನು. ಅವನು ಹೇಳಿದ ಮಾತು ಪಟ್ ಎಂದು ಕಪಾಳಕ್ಕೆ ಹೊಡೆದ ಹಾಗಾಯಿತು. ಅಂದು ಒಂದು ತೀರ್ಮಾನ ಮಾಡಿದೆವು. ನಮ್ಮನ್ನು ಒಂದು ದೊಡ್ಡ ಮನುಷ್ಯನಾಗಿ ತೋರಿಸಬೇಕು, ಎಲ್ಲಾ ಮಕ್ಕಳನ್ನು ಆಕರ್ಷಿಸಬೇಕು ಎಂಬ ಆಲೋಚನೆಯೊಂದಿಗೆ ಮಾಡುವ ಮ್ಯಾಜಿಕ್ ಶೋ ನಮಗೆ ಬೇಡ. ಅಗತ್ಯವಾದ ಸ್ಥಳಗಳಲ್ಲಿ ಅಗತ್ಯವಾದ ಪರಿಸ್ಥಿತಿಗಳಲ್ಲಿ ಮ್ಯಾಜಿಕ್ ಮಾಡಿದರೆ ಸಾಕು. ಸೇವಕರಾದ ನಾವು ಮ್ಯಾಜಿಕ್ ಮಾಡುವವರಾಗಿ ಮಾರ್ಪಡುವುದು ಬೇಡ. ನಮ್ಮ ಸಾಕ್ಷಿಯೇ ಮುಖ್ಯ ಎಂದು ತೀರ್ಮಾನಿಸಿದೆವು.

ಅಪೊಸ್ತಲ 8:9 ನೇ ವಾಕ್ಯದಲ್ಲಿ ಸೀಮೋನ್  ಎಂಬ ಒಬ್ಬ ವ್ಯಕ್ತಿ ಮಂತ್ರ ತಂತ್ರಗಳನ್ನು ಮಾಡುತ್ತಿದ್ದು ಜನರನ್ನು ಯಾಮಾರಿಸುತ್ತಿದ್ದನು, ಎಂದು ಓದುತ್ತೇವೆ. ಈ ಮಂತ್ರ ತಂತ್ರ ಮಾಡುವ ಸೀಮೋನ್; ಫಿಲಿಪ್ಪನು ಮಾಡಿದ ಅದ್ಭುತಗಳನ್ನು ತಾನು ಮಾಡಬೇಕೆಂದು ಬಯಸಿದನು. ಪೇತ್ರನಿಂದ ಪರಿಶುದ್ಧಾತ್ಮನು ಸುರಿಸಲ್ಪಡುತ್ತಿದ್ದದ್ದನ್ನು ನೋಡಿ ಅವನು ತನ್ನ ಹಣವನ್ನು ತೆಗೆದುಕೊಂಡು ಹೋಗಿ ಅವರನ್ನು ಕೊಂಡುಕೊಳ್ಳಬೇಕೆಂದು ಪ್ರಯತ್ನ ಮಾಡಿದನು ಎಂದು ನಾವು ಓದುತ್ತೇವೆ. ನಂತರ ಪೇತ್ರನು ಅವನನ್ನು ಕಠಿಣವಾದ ಮಾತುಗಳಿಂದ ಎಚ್ಚರಿಸಿದ್ದನ್ನು ನೋಡುತ್ತೇವೆ.

ಹೌದು, ಪ್ರಿಯರೇ! ತನ್ನನ್ನು ಒಂದು ದೊಡ್ಡ ವ್ಯಕ್ತಿಯಾಗಿ ತೋರಿಸಿಕೊಳ್ಳಬೇಕು ಎಂಬುದು ಬಿದ್ದುಹೋದ ಮನುಷ್ಯ ರಾಗಿರುವ ನಮ್ಮೊಳಗೆ ಇರುವ ಸೈತಾನನ ಆಲೋಚನೆ. ಆದ್ದರಿಂದ ಯಾವ ಯಾವುದರಲ್ಲಿ ಮತ್ತೊಬ್ಬರು ನೋಡಬೇಕು ಎಂದು ನಮ್ಮನ್ನು ಹೊಗಳಬೇಕೆಂದು ನೆನೆಸಿ ಕಾರ್ಯಗಳನ್ನು ಮಾಡುತ್ತಿದ್ದೇವೆ. ಇದು ಕರ್ತನ ದೃಷ್ಟಿಗೆ ಸರಿಯಾಗಿರುತ್ತದಾ? ಎಂಬುದನ್ನು ನಾವು ಚಿಂತಿಸಿ ಯೋಚಿಸಬೇಕು. ನಮ್ಮ ಜೀವನದಲ್ಲಿ ದೇವರು ಮಾತ್ರವೇ ದೊಡ್ಡವರಾಗಿ, ಉನ್ನತರಾಗಿ, ಘನತೆಗೆ ಯೋಗ್ಯರಾಗಿರಲಿ ಪರಿಶುದ್ಧವೇ ನಮ್ಮ ಜೀವನದ ಉದ್ದೇಶವಾಗಿ ಮಾರ್ಪಡಲಿ. ಹಲ್ಲೆಲೂಯ!
-    Y. ಅನೀಸ್ ರಾಜ

ಪ್ರಾರ್ಥನಾ ಅಂಶ:-
ಒಂದೊಂದು ದಿನವೂ ದೈನಂದಿನ ಧ್ಯಾನ ಸಂದೇಶವನ್ನು WhatsApp, Twitter, E-mail, Facebook ಮೂಲಕವಾಗಿ ಓದುತ್ತಾ, ಕೇಳುತ್ತಾ ಉಪಯೋಗ ಪಡೆಯುತ್ತಿರುವ ಜನರು ಆಶೀರ್ವದಿಸಲ್ಪಡುವಂತೆ ಪ್ರಾರ್ಥಿಸೋಣ.

ಈ ದಿನದ ಧ್ಯಾನ ವಾಕ್ಯಕ್ಕಾಗಿ ಇಲ್ಲಿ ಕೆಳಗಿನ ನಂಬರ್ ಗಳನ್ನು ಸಂಪರ್ಕಿಸಿ.
ವಾಟ್ಸಾಪ್.  
ತಮಿಳಿಗಾಗಿ +919444011864  
ಇಂಗ್ಲಿಷ್ ಗಾಗಿ +919444011769
ಹಿಂದಿಗಾಗಿ +91 93858 10496
ತೆಲುಗುಗಾಗಿ +919442493250

www.vmm.org.in
ಈಮೈಲ್:- reachvmm@gmail.com
Android App: https://play.google.com/store/apps/details?id=com.infobells.vmmorgin
        
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +919345540482



hacklink satın al