Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 18.06.2024
Share:

By Village Missionary Movement

Tuesday, 18-Jun-2024

ಧೈನಂದಿನ ಧ್ಯಾನ(Kannada) – 18.06.2024

 

ದೇವರ ಪ್ರೀತಿ

 

"ಕ್ರಿಸ್ತನ ಪ್ರೀತಿಯಿಂದ ನಮ್ಮನ್ನು ಅಗಲಿಸುವವರು ಯಾರು?..." - ರೋಮಾ 8:35

  

ದೇವರಿಗಾಗಿ ಏನನ್ನು ಕಳೆದುಕೊಂಡರೂ ದೇವರ ಪ್ರೀತಿಯನ್ನು ಕಳೆದುಕೊಳ್ಳುವುದಿಲ್ಲ ಎಂದು ಹೇಳಿದವರೇ ಡೇವಿಡ್ ಲಿವಿಂಗ್‌ಸ್ಟನ್. ಅವರ ಹೃದಯದ ಬಯಕೆಯೆಲ್ಲಾ ಆಫ್ರಿಕನ್ ಜನರು ಯೇಸುವಿನ ಪ್ರೀತಿಯನ್ನು ತಿಳಿದುಕೊಳ್ಳಬೇಕು ಎಂಬ ಹೊರೆಯಾಗಿತ್ತು. ಅವರು ಆಫ್ರಿಕಾದಲ್ಲಿ ಸೇವೆಯನ್ನು ಪ್ರಾರಂಭಿಸಿದರು. ಅಲ್ಲಿ ಅವರು ಅನೇಕ ಕಷ್ಟ-ನಷ್ಟಗಳನ್ನು ಎದುರಿಸಿದರು. ತಕ್ಷಣ ಅವರನ್ನು ಕಳುಹಿಸಿದ ಮಿಷನರಿ ಸೊಸೈಟಿಯವರು, "ಲಿವಿಂಗ್‌ಸ್ಟನ್ ಇಲ್ಲಿಗೆ ಬಂದುಬಿಡಿ. ಅಲ್ಲಿದ್ದು ನೀವು ಸೇವೆ ಮಾಡಿದ್ದು ಸಾಕು" ಎಂದರು. ಆದರೆ ಅವರು ಸೇವೆಯನ್ನು ಬಿಟ್ಟುಕೊಡಲಿಲ್ಲ. ಅವರು ಸೇವೆಗೆ ಹೋಗುತ್ತಿದ್ದಾಗ ಸಿಂಹವೊಂದು ಅವರ ಕೈಯನ್ನು ಕಚ್ಚಿಬಿಟ್ಟಿತು. ಆದರೂ ಸತತವಾಗಿ ಸೇವೆಯನ್ನು ಮುಂದುವರೆಸಿದರು. ಲಿವಿಂಗ್ಸ್ಟನ್ ಹಲವಾರು ರೀತಿಯ ಜ್ವರದಿಂದ ಪೀಡಿತರಾಗಿದ್ದರು. ಸರಿಯಾದ ಪೌಷ್ಟಿಕ ಆಹಾರವಿಲ್ಲದೆ ದೇಹವು ತುಂಬಾ ದುರ್ಬಲವಾಗುತ್ತಿತ್ತು. ಕೂಡಲೇ ಮಿಷನರಿ ಸಂಘದವರು, ನೀವು ನಿಮ್ಮ ಹೆಂಡತಿ ಮಕ್ಕಳನ್ನು ಕಳೆದುಕೊಂಡಿದ್ದೀರಿ, ನಿಮ್ಮ ದೈಹಿಕ ಶಕ್ತಿಯನ್ನು ಕಳೆದುಕೊಂಡಿದ್ದೀರಿ, ಇನ್ನು ಮುಂದೆಯೂ ನೀವು ಅಲ್ಲಿರಬೇಡಿ ಬಂದುಬಿಡಿ ಎಂದರು. ಆದರೆ ಲಿವಿಂಗ್‌ಸ್ಟನ್ ತನ್ನ ಪ್ರಾಣ ಹೋಗುವವರೆಗೂ ಆಫ್ರಿಕನ್ ಜನರಿಗೆ ದೇವರ ಪ್ರೀತಿಯನ್ನು ಪ್ರಕಟಿಸುತ್ತೇನೆ ಎಂದು ಧೃಢವಾಗಿ ಹೇಳಿ ಅವರ ಮಾತಿಗೆ ನಿರಾಕರಿಸಿದರು. ಯಾವುದೂ ಅವರನ್ನು ದೇವರ ಪ್ರೀತಿಯಿಂದ ಬೇರ್ಪಡಿಸಲು ಸಾಧ್ಯವಾಗಲಿಲ್ಲ.

  

ಸತ್ಯವೇದದಲ್ಲಿ ಅಪೊ.ಪೌಲನ ಬಗ್ಗೆ ನಮಗೆ ಗೊತ್ತು. ಯೇಸುವಿನ ಮೇಲಿನ ಪ್ರೀತಿಗಾಗಿ ಅಧಿಕವಾಗಿ ಬಾಧೆಗೊಳಗಾದವರು, ಅನೇಕಬಾರಿ ಮರಣಾವಸ್ಥೆಯಲ್ಲಿ ಸಿಲುಕಿಕೊಂಡವರು. ಮತ್ತು ಯೆಹೂದ್ಯರಿಂದ ಏಟು ತಿಂದವರು, ಕಲ್ಲುಗಳಿಂದ ಹೊಡೆಸಿಕೊಂಡವರು, ಹಡಗು ಪ್ರಮಾದದಲ್ಲಿದ್ದವರು. ದುಃಖದಲ್ಲಿಯೂ, ನಿದ್ರಾಹೀನತೆಯಲ್ಲಿಯೂ, ಹಸಿವೆಯಲ್ಲಿಯೂ, ಬಾಯಾರಿಕೆಯಲ್ಲಿಯೂ ಇದ್ದವರು. ಹೀಗೆ ಕ್ರೈಸ್ತ ಜನರಿಗೆ ವಿರುದ್ಧವಾಗಿ ಕೆಲಸ ಮಾಡುತ್ತಿದ್ದ ಪೌಲನನ್ನು ಭೇಟಿಯಾದ ಯೇಸುವಿನ ಪ್ರೀತಿಯು ಆತನನ್ನು ಯೇಸುವಿನ ಅನುಯಾಯಿಯನ್ನಾಗಿಸಿ ಉತ್ತಮ ಸೇವಕನನ್ನಾಗಿ ಮಾಡಿತು.

 

ಪ್ರಿಯರೇ, ಈ ಲೋಕದಲ್ಲಿ ಪಾಪದಲ್ಲಿ ಬಿದ್ದು ಸೈತಾನನಿಗೆ ಗುಲಾಮರಾಗಿದ್ದ ನಮ್ಮನ್ನು ಯೇಸು ತನ್ನ ರಕ್ತವನ್ನು ಚೆಲ್ಲಿ, ನಮ್ಮನ್ನು ತನ್ನ ಸ್ವಂತ ಮಕ್ಕಳಾಗಿ ಅಂಗೀಕರಿಸಿದರು. ಅನೇಕ ಬಾರಿ ನಾವು ಆ ಪ್ರೀತಿಯಿಂದ ಹಿಂದೆ ಸರಿಯುತ್ತೇವೆ. ಯೇಸುವಿನ ಪ್ರೀತಿ ಎಂದಿಗೂ ಬದಲಾಗುವುದಿಲ್ಲ. ಅವರು ಈಗಲೂ ನಮ್ಮನ್ನು ನಾವಿರುವ ಸ್ಥಿತಿಯಲ್ಲೇ ಪ್ರೀತಿಸುತ್ತಿದ್ದಾರೆ. ಆದುದರಿಂದ ಎಂತಹಾ ಪರಿಸ್ಥಿತಿ ಎದುರಾದರೂ ನಮ್ಮನ್ನು ದೇವರ ಪ್ರೀತಿಯಿಂದ ಅಗಲಿಸುವುದಿಲ್ಲ ಎಂದು ನಿಶ್ಚಯಿಸಿಕೊಂಡು ಅವರಿಗಾಗಿ ಕಾರ್ಯನಿರ್ವಹಿಸೋಣ. ಅವರ ಪ್ರೀತಿಯನ್ನು ಇತರರಿಗೆ ಒತ್ತಿ ಹೇಳೋಣ. ಆಮೆನ್!

- Bro. ಕ್ರಿಸ್ಟೋಫರ್

 

ಪ್ರಾರ್ಥನಾ ಅಂಶ:

ಒಂದು ಲಕ್ಷ ಚಿಕ್ಕಮಕ್ಕಳನ್ನು, ಚಿಕ್ಕ ಮಕ್ಕಳ ಶಿಬಿರಗಳ ಮೂಲಕ ಭೇಟಿಯಾಗುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al holiganbet giriş matbet holiganbet holiganbet giriş casibom giriş casibom casibom giriş casibom matbet matbet giriş imajbet imajbet giriş perabet perabet giriş coinbar coinbar giriş klasbahis klasbahis giriş supertotobet giriş supertotobet jojobet giriş jojobet casibom casibom giriş jojobet giriş jojobet interbahis interbahis giriş mariobet mariobet giriş betpas betpas giriş artemisbet artemisbet giriş marsbahis giriş marsbahis restbet restbet giriş egebet egebet giriş Hiltonbet Hiltonbet giriş jojobet alobet alobet giriş betcio betcio giriş grandpashabet grandpashabet giriş superbetin superbetin giriş perabet perabet giriş pashagaming tarafbet editörbet perabet perabet giriş grandbetting hitbet xslot betkom giriş betkanyon giriş perabet perabet giriş Hiltonbet Hiltonbet giriş grandpashabet grandpashabet giriş grandpashabet güncel giriş grandpashabet grandpashabet giriş grandpashabet giriş güncel jojobet jojobet giriş holiganbet holiganbet giriş casibom casibom giriş jojobet jojobet giriş alobet alobet giriş marsbahis marsbahis giriş milanobet jojobet grandpashabet jojobet casinoroyal jojobet holiganbet ibizabet holiganbet amkbet sonbahis betgit cratosroyalbet cratosroyalbet tlcasino