Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 17.06.2024
Share:

By Village Missionary Movement

Monday, 17-Jun-2024

ಧೈನಂದಿನ ಧ್ಯಾನ(Kannada) – 17.06.2024

 

ಕರೆಯಿರಿ 

 

"ಕಷ್ಟಕಾಲದಲ್ಲಿ ನನಗೆ ಮೊರೆಯಿಡಿರಿ; ಬಿಡಿಸುವೆನು; ಆಗ ನನ್ನನ್ನು ಕೊಂಡಾಡುವಿರಿ" - ಕೀರ್ತನೆ 50:15

  

ಇಥಿಯೋಪಿಯಾ ದೇಶದಲ್ಲಿ, ಯುವತಿಯೊಬ್ಬಳು ಕೆಲವು ಮೋಸವಾದ ಪುರುಷರ ಕೈಯಲ್ಲಿ ಸಿಕ್ಕಿಹಾಕಿಕೊಂಡಳು. ಆ ಮನುಷ್ಯರು ಆಕೆಯನ್ನು ನಿರ್ಜನ ಅರಣ್ಯಕ್ಕೆ ಕೊಂಡೊಯ್ದು, ಅವಳನ್ನು ಕೆಡಿಸಲು ಮತ್ತು ಕೊಲ್ಲಲು ನಿರ್ಧರಿಸಿದರು. ಅದರಂತೆ ಅವರು ಆ ಹುಡುಗಿಯನ್ನು ಕತ್ತಲ ಕಾಡಿಗೆ ಕರೆದೊಯ್ದರು. ಆ ದುಷ್ಟರ ಕೈಯಲ್ಲಿ ಸಿಕ್ಕಿಹಾಕಿಕೊಂಡಾಗ ಕಿರುಚಾಡಿದಳು ಮೊರೆಯಿಟ್ಟಳು. ಆದರೆ ಯಾರೂ ರಕ್ಷಣೆಗೆ ಬರಲಿಲ್ಲ. ನಿನ್ನನ್ನು ಕಾಪಾಡಲು ಇಲ್ಲಿ ಯಾರೂ ಬರುವುದಿಲ್ಲ ಎಂದು ಆ ದುಷ್ಟರು ಅಪಹಾಸ್ಯದಿಂದ ನಕ್ಕರು. ತನ್ನನ್ನು ಬಿಡಿಸಲು ಯಾರೂ ಇಲ್ಲದ್ದರಿಂದ ಬೇಸತ್ತ ಆ ಹುಡುಗಿಯು ಪರಲೋಕದ ಕಡೆಗೆ ದೃಷ್ಟಿಸಿ ಕೈಗಳನ್ನು ಮೇಲಕ್ಕೆತ್ತಿ, "ಯೇಸಪ್ಪಾ, ಎಲ್ಲಿದ್ದೀರಾ? ನನ್ನನ್ನು ಕಾಪಾಡಿ" ಎಂದು ದೊಡ್ಡ ಧ್ವನಿಯಲ್ಲಿ ಪ್ರಾರ್ಥಿಸಿದಳು. ದೇವರು ಅವಳ ಕೂಗನ್ನು ಕೇಳಿದರು. ಅವರು ಆ ಕಾಡಿನಲ್ಲಿರುವ ಸಿಂಹಗಳಿಗೆ ಆಜ್ಞಾಪಿಸಿದರು. ಸಿಂಹಗಳು ಆ ದುಷ್ಟರನ್ನು ಕೊಂದು ಹಾಕಿದವು. ಅವು ಹುಡುಗಿಗೆ ಏನೂ ಮಾಡಲಿಲ್ಲ. ಎಂತಹ ಅದ್ಭುತ ದೇವರು ನೋಡಿ.

 

ಸತ್ಯವೇದದಲ್ಲಿ ದಾನಿಯೇಲನು ದೇವರನ್ನು ಹುಡುಕುವಲ್ಲಿ ನಂಬಿಗಸ್ತರಾಗಿದ್ದರು. ಅವರನ್ನು ಹಗೆಮಾಡಿದವರು ದಾನಿಯೇಲನು ತನ್ನ ದೇವರ ಮುಂದೆ ಪ್ರಾರ್ಥಿಸಿ ವಿಜ್ಞಾಪಿಸುವುದನ್ನು ನೋಡಿದರು. ಮೂವತ್ತು ದಿನಗಳ ಕಾಲ ಅರಸನಾದ ನಿಮ್ಮನ್ನು ಹೊರತು ಯಾವ ಮನುಷ್ಯನಿಗಾದರೂ ಅಥವಾ ದೇವರಿಗಾದರೂ ಮನವಿ ಸಲ್ಲಿಸಿದರೆ ಅವನನ್ನು ಸಿಂಹಗಳ ಗವಿಯಲ್ಲಿ ಎಸೆಯಬೇಕು ಎಂಬ ಕಾನೂನು ಇತ್ತು. ಕಾನೂನಿಗಿಂತ ಹೆಚ್ಚಾಗಿ ದಾನಿಯೇಲನು ದೇವರನ್ನು ಹುಡುಕಿದ್ದರಿಂದ, ಸಿಂಹಗಳ ಗವಿಯಲ್ಲಿ ಹಾಕಲ್ಪಟ್ಟರು. ಆದರೆ ದಾನಿಯೇಲನು ದೇವರನ್ನು ನೋಡಿ ಮೊರೆಯಿಟ್ಟು ಸಿಂಹದ ಹಿಡಿತದಿಂದ ತಪ್ಪಿಸಿಕೊಂಡರು.

 

ಪ್ರೀತಿಯ ದೇವರ ಮಕ್ಕಳೇ! ನಮ್ಮ ದೇವರು ಕೂಗುವ ಕಾಗೆಮರಿಗಳಿಗೂ ಉತ್ತರ ಕೊಡುವ ದೇವರು. ಅಂತಹ ನಿಮ್ಮ ಮೊರೆಯನ್ನು ಗಮನಿಸದೆ ಇರುತ್ತಾರೋ, ಖಂಡಿತವಾಗಿಯೂ ಸಹಾಯ ಮಾಡುತ್ತಾರೆ. ನಿಮ್ಮ ಅಪಾಯದ ಸಮಯದಲ್ಲಿ ನಿಮಗೆ ಸಹಾಯ ಮಾಡಲು ಅವರು ಯಾರಿಗೆ ಬೇಕಾದರೂ ಆಜ್ಞಾಪಿಸುತ್ತಾರೆ. ನಾವು ಆತನನ್ನು ನೋಡಿ ಮೊರೆಯಿಡುವಾಗ ನಮ್ಮ ಸಮಸ್ಯೆ ಯಾವುದಾಗಿದ್ದರೂ ಅದರಿಂದ ನಮ್ಮನ್ನು ಬಿಡಿಸುತ್ತಾರೆ. ನಿಮ್ಮ ಅಪಾಯದ ಸಮಯದಲ್ಲಿ, ಮನುಷ್ಯರನ್ನು ನಂಬುವ ಬದಲು ಯೇಸುವನ್ನು ಕರೆಯಿರಿ. ಅವರು ತಕ್ಷಣ ಓಡಿಬಂದು ನಿಮ್ಮನ್ನು ಬಿಡಿಸುತ್ತಾರೆ. ನೀವು ಆತನ ಹೆಸರನ್ನು ಮಹಿಮೆಪಡಿಸಿರಿ. ಆಮೆನ್!

- Sis. ಪ್ರೇಮಲತಾ

 

ಪ್ರಾರ್ಥನಾ ಅಂಶ:

ಹಸಿದವರಿಗೆ ಆಹಾರ ನೀಡುವ ಯೋಜನೆಯ ಮೂಲಕ ಪ್ರಯೋಜನ ಪಡೆಯುವ ಜನರು ಕ್ರಿಸ್ತನ ಪ್ರೀತಿಯನ್ನು ತಿಳಿದುಕೊಳ್ಳುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al