Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 15.06.2024
Share:

By Village Missionary Movement

Saturday, 15-Jun-2024

ಧೈನಂದಿನ ಧ್ಯಾನ(Kannada) – 15.06.2024

 

PRAISE ಮಾಡಿ

 

"ನನ್ನ ಸ್ತೋತ್ರವನ್ನು ಪ್ರಚಾರಪಡಿಸಲಿ ಎಂದು…" - ಯೆಶಾಯ 43:21

 

ಐವತ್ತು ವರ್ಷಗಳ ಕಾಲ ಹಾಸಿಗೆಯಲ್ಲಿ ನರಳುತ್ತಿದ್ದ ಹನ್ನಾ ಗಿಗ್ಗಿನ್ಸ್ ವಿಚಿತ್ರವಾದ ಮೂಳೆ ರೋಗದಿಂದ ಬಳಲುತ್ತಿದ್ದರು. ಅವಳು ಯಾವಾಗಲೂ ದೇವರನ್ನು ಸ್ತುತಿಸುವವಳಾಗಿ  

ತನ್ನ ಹಾಸಿಗೆಯನ್ನು "ಕೃತಜ್ಞತೆಯ ಮೂಲೆ" ಎಂದು ಕರೆದಳು. ಅವಳು 200 ಕ್ಕೂ ಹೆಚ್ಚು ಜನರ ಹೆಸರುಗಳ ಪ್ರಾರ್ಥನಾ ಅಂಶಗಳನ್ನು ಇಟ್ಟುಕೊಂಡು ಪ್ರಾರ್ಥಿಸುವವಳಾಗಿದ್ದಳು. ಕ್ರಿಸ್ತನಲ್ಲಿ ಆಳವಾಗಿ ಯಾವಾಗಲೂ ದೇವರನ್ನು ಸ್ತುತಿಸುತ್ತಾ ಜೀವಿಸುತ್ತಿದ್ದಳು. 77 ನೇ ವಯಸ್ಸಿನಲ್ಲಿ ಅವರು ಮೇಘ ಮತ್ತು ಸೂರ್ಯ ಎಂಬ ಪುಸ್ತಕವನ್ನು ಬರೆದರು. ನಾವು ದೇವರನ್ನು ಸ್ತುತಿಸುವಾಗ ನಮ್ಮ ಬಲಹೀನತೆಗಳು ಮಾತ್ರವಲ್ಲ, ನಮ್ಮ ಪರಿಸ್ಥಿತಿಯೂ ಬದಲಾಗುತ್ತದೆ. 

 

ಹೊಸ ಒಡಂಬಡಿಕೆಯಲ್ಲಿ ಅಪೊಸ್ತಲನಾದ ಪೌಲನು ನಮಗೆ ಗೊತ್ತು. ಸುವಾರ್ತೆಯನ್ನು ಸಾರಿದ ಪರಿಣಾಮವಾಗಿ ಪೌಲ ಮತ್ತು ಸೀಲರನ್ನು ಸೆರೆಯಲ್ಲಿ ಬಂಧಿಸಲಾಯಿತು. ಜೈಲಿನಲ್ಲಿಟ್ಟು ಅವರನ್ನು ಸುರಕ್ಷಿತವಾಗಿ ಕಾಪಾಡಲು ಜೈಲರ್‌ಗೆ ಆದೇಶ ನೀಡಲಾಯಿತು. ಅವನು ಪೌಲ ಮತ್ತು ಸೀಲರನ್ನು ಸೆರೆಮನೆಯಲ್ಲಿ ಬಂಧಿಸಿ ಅವರ ಪಾದಗಳನ್ನು ಕಂಬಕ್ಕೆ ಕಟ್ಟಿದನು. ಮಧ್ಯರಾತ್ರಿಯಲ್ಲಿ ಪೌಲನೂ ಸೀಲನೂ ಪ್ರಾರ್ಥನೆ ಮಾಡುವವರಾಗಿ ದೇವರಿಗೆ ಸ್ತುತಿಪದಗಳನ್ನು ಹಾಡುತ್ತಿದ್ದರು; ಅಕಸ್ಮಾತ್ತಾಗಿ ಮಹಾಭೂಕಂಪವುಂಟಾಯಿತು; ಸೆರೆಮನೆಯ ಅಸ್ತಿವಾರಗಳು ಕದಲಿದವು. ಅದೇ ಕ್ಷಣದಲ್ಲಿ ಕದಗಳೆಲ್ಲಾ ತೆರೆದವು, ಎಲ್ಲರ ಬೇಡಿಗಳು ಕಳಚಿಬಿದ್ದವು. ಆ ದಿನವೇ ಅವರನ್ನು ಕಾವಲು ಕಾಯುತ್ತಿದ್ದ ಸೆರೆಯ ಯಜಮಾನನು ರಕ್ಷಣೆಹೊಂದಿದನು. 

 

ಪ್ರಿಯರೇ! ಪೌಲ ಮತ್ತು ಸೀಲರು ಜೈಲಿನಲ್ಲಿ ದೇವರ ಶಕ್ತಿಯನ್ನು ಹೊಗಳಿದರು ಮತ್ತು ಅನುಭವಿಸಿದರು. ಪರಲೋಕದಲ್ಲಿ ನಾವು ಮಾಡಬೇಕಾದದ್ದು ಒಂದೇ ಒಂದು ಕೆಲಸವಿದೆ. ಅದು ದೇವರನ್ನು ಸ್ತುತಿಸುವುದಾಗಿದೆ. ಆದುದರಿಂದ ಈ ಲೋಕದಲ್ಲಿ ನಾವು ಪ್ರತಿದಿನ ದೇವರ ಪರಾಕ್ರಮ ಮತ್ತು ಅದ್ಭುತವಾದ ನಾಮಗಳನ್ನು ಸ್ತುತಿಸುತ್ತಿರಬೇಕು. ಕ್ರೈಸ್ತರಾದ ನಾವು ಸಾಮಾನ್ಯವಾಗಿ ದೇವರನ್ನು ಸ್ತುತಿಸುವುದನ್ನು ಮರೆತುಬಿಡುತ್ತೇವೆ. ಏಕೆಂದರೆ ನಮ್ಮೊಳಗಿನ ಸಮಸ್ಯೆಗಳು ಮತ್ತು ಹೋರಾಟಗಳು ದೇವರನ್ನು ಸ್ತುತಿಸಲು ಬಿಡುವುದಿಲ್ಲ. ಸಮಸ್ಯೆಗಳು ಮತ್ತು ಹೋರಾಟಗಳಿಂದ ತುಂಬಿರುವ ಪರಿಸ್ಥಿತಿಯಲ್ಲೂ ದೇವರನ್ನು ಸ್ತುತಿಸುವುದನ್ನು ಕಲಿಯೋಣ. ದೇವರು ಇಲ್ಲಿಯವರೆಗೆ ಮಾಡಿದ ಎಲ್ಲದಕ್ಕೂ ಮತ್ತು ಇನ್ನು ಮುಂದೆ ನಮ್ಮ ಜೀವನದಲ್ಲಿ ಮಾಡಲಿರುವ ಎಲ್ಲದಕ್ಕೂ ನಾವು ದೇವರನ್ನು ಸ್ತುತಿಸೋಣ. ನಮ್ಮ ಜೀವನದಲ್ಲಿ ಈ ಕ್ಷಣದವರೆಗೂ ನಮ್ಮನ್ನು ಜೀವಂತವಾಗಿರಿಸಿದ ಮಹಾ ಕೃಪೆಗಾಗಿ ಅವರನ್ನು ಸ್ತುತಿಸೋಣ! ಇದಕ್ಕಾಗಿಯೇ ನಾವು ಆತನಿಂದ ಸೃಷ್ಟಿಸಲ್ಪಟ್ಟಿದ್ದೇವೆ.

- Mrs. ರೂಬಿ ಅರುಣ್

 

ಪ್ರಾರ್ಥನಾ ಅಂಶ:

ಎಲ್ಲಾ 313 ತಾಲೂಕುಗಳಲ್ಲಿ ಮಕ್ಕಳ ಶಿಬಿರಗಳನ್ನು ನಡೆಸುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al meritking meritking giriş meritking güncel giriş perabet perabet perabet giriş deneme bonusu deneme bonusu veren siteler Vdcasino vaycasino vaycasino giriş vaycasino güncel giriş matbet matbet giriş matbet güncel giriş matbet matbet giriş matbet güncel giriş betsmove betsmove giriş betsmove güncel giriş betsat betsat giriş betsat güncel giriş perabet perabet giriş perabet güncel giriş dumanbet giriş dumanbet dumanbet güncel giriş kingroyal kingroyal giriş kingroyal güncel giriş marsbahis marsbahis giriş marsbahis güncel giriş kingroyal kingroyal giriş kingroyal güncel giriş meritking meritking giriş meritking güncel giriş meritbet meritbet giriş meritbet güncel giriş nakitbahis nakitbahis giriş nakitbahis güncel giriş vaycasino vaycasino giriş vaycasino güncel giriş Holiganbet holiganbet giriş holiganbet güncel giriş bahissenin bahissenin giriş bahissenin güncel giriş bayconticasino bayconticasino giriş bayconticasino güncel giriş imajbet imajbet giriş imajbet güncel giriş prizmabet prizmabet giriş pashagaming pashagaming giriş pashagaming güncel giriş interbahis interbahis giriş interbahis güncel giriş jojobet superbetin matbet jojobet marsbahis marsbahis güncel marsbahis güncel giriş deneme bonusu deneme bonusu veren siteler bahsegel vaycasino vaycasino giriş perabet perabet giriş holiganbet holiganbet giriş holiganbet holiganbet giriş holiganbet holiganbet giriş jojobet jojobet giriş Superbetin superbetin giriş superbetin güncel giriş süperbetin