By Village Missionary Movement
Friday, 14-Jun-2024ಧೈನಂದಿನ ಧ್ಯಾನ(Kannada) – 14.06.2024
ನನ್ನ ಬಗ್ಗೆ ಮಾತನಾಡಬೇಡಿ
"…ಕ್ರಿಸ್ತನು ನನ್ನಲ್ಲಿ ಜೀವಿಸುತ್ತಾನೆ;…" - ಗಲಾತ್ಯ 2:20
ವೃದ್ಧಾಪ್ಯವು ವಿಲಿಯಂ ಕೇರಿಯವರನ್ನು ಆವರಿಸಲು ಪ್ರಾರಂಭಿಸಿತು. ಹಲವು ವರ್ಷಗಳ ಕಠಿಣ ಪರಿಶ್ರಮದಿಂದಾಗಿ ದೇಹವು ಸ್ವಲ್ಪ ನಡುಗಲಾರಂಭಿಸಿತು. ಈ ಸಂದರ್ಭದಲ್ಲಿ ಅಲೆಕ್ಸಾಂಡರ್ ಡಫ್ ಎಂಬ ಯುವ ಮಿಷನರಿ ಭಾರತಕ್ಕೆ ಬಂದರು. ಅವರು ಆಗಾಗ್ಗೆ ವಿಲಿಯಂ ಕೇರಿಯನ್ನು ಭೇಟಿ ಮಾಡಿ ಕೇರಿಯ ಪ್ರಚಂಡ ತ್ಯಾಗವನ್ನು ಹೊಗಳುತ್ತಲೇ ಇದ್ದರು. ಒಮ್ಮೆ ಕೇರಿ, ಡಫ್ ಎಂಬವರನ್ನು ನೋಡಿ "ನನ್ನ ಪ್ರೀತಿಯ ಸ್ನೇಹಿತನೇ, ನೀವು ಆಗಾಗ್ಗೆ ನನ್ನ ಬಗ್ಗೆಯೇ ಹೊಗಳಿ ಮೆಚ್ಚಿಕೊಳ್ಳುತ್ತಿದ್ದೀರಿ. ನಾನು ಸತ್ತ ನಂತರ ನನ್ನ ಬಗ್ಗೆ ಏನನ್ನೂ ಮಾತನಾಡಬೇಡ. ಆದರೆ ಕೇರಿಯ ರಕ್ಷಕನ ಬಗ್ಗೆ ಮಾತ್ರವೇ ಮಾತನಾಡು" ಎಂದು ಬಹಳ ಸಹನೆಯಿಂದ ಸ್ಪಷ್ಟವಾಗಿ ಹೇಳಿದರು.
ಸತ್ಯವೇದದಲ್ಲಿಯೂ ಅಪೊ. ಪೌಲನ ಮೂಲಕ ದೇವರು ಅದ್ಭುತವಾದ ಕಾರ್ಯಗಳನ್ನು ಮಾಡಿದರು ಅವುಗಳಲ್ಲಿ ಕೆಲವು:
1) ಲಿಸ್ಟ್ರಾದಲ್ಲಿ ಪೌಲನು ಒಬ್ಬ ಕುಂಟನನ್ನು ಗುಣಪಡಿಸಿದರು.
2) ಪೌಲನ ಬೋಧನೆಯಿಂದ ಲೂದ್ಯಳ ಹೃದಯವನ್ನು ಕರ್ತನು ತೆರೆದರು.
3) ಕಣಿ ಹೇಳುವ ದುರಾತ್ಮವಿದ್ದ ಆ ಮಹಿಳೆಯಿಂದ ಅದನ್ನು ಓಡಿಸಿದರು.
4) ಎಫೆಸ ಪಟ್ಟಣದಲ್ಲಿ ಶಿಷ್ಯರ ಮೇಲೆ ಕೈಗಳನ್ನು ಇಟ್ಟಾಗ ಪವಿತ್ರಾತ್ಮವನ್ನು ಪಡೆದರು.
5) ಪೌಲನ ಅಂಗಿಯನ್ನು ಮತ್ತು ಕರವಸ್ತ್ರಗಳನ್ನು ರೋಗಿಗಳ ಮೇಲೆ ಹಾಕಿದಾಗ, ರೋಗಗಳು ವಾಸಿಯಾದವು ಮತ್ತು ದುಷ್ಟಶಕ್ತಿಗಳು ಓಡಿಹೋದವು.
6) ಪೌಲನ ಉಪದೇಶವನ್ನು ಕೇಳಿದ ಮಾಂತ್ರಿಕರು ಐವತ್ತು ಸಾವಿರ ಬೆಳ್ಳಿಯ ನಾಣ್ಯಗಳ ಬೆಲೆಬಾಳುವ ಅವರ ಪುಸ್ತಕಗಳನ್ನು ಸುಟ್ಟು ಹಾಕಿದರು.
7) ಅವರು ಸತ್ತ ಯೂತಿಖನೆಂಬ ಯೌವನಸ್ಥನನ್ನು ಜೀವಂತವಾಗಿ ಎಬ್ಬಿಸಿದರು.
8) ಮೆಲೀತೆದ್ವೀಪದಲ್ಲಿ ಒಂದು ಹಾವು ಪೌಲನನ್ನು ಕಚ್ಚಿದರೂ ಯಾವ ಹಾನಿಯಾಗಲಿಲ್ಲ.
9) ಪೌಲನೂ ಸೀಲನೂ ಸೆರೆಯಲ್ಲಿ ಪ್ರಾರ್ಥನೆ ಮಾಡುತ್ತಾ ಸ್ತುತಿ ಪದಗಳನ್ನು ಹಾಡುತ್ತಿದ್ದಾಗ, ಸೆರೆಮನೆಯ ಬಾಗಿಲುಗಳು ತೆರೆಯಲ್ಪಟ್ಟವು ಮತ್ತು ಎಲ್ಲರ ಬೇಡಿಗಳು ಕಳಚಿಬಿದ್ದವು.
ಕ್ರಿಸ್ತನಲ್ಲಿ ಪ್ರಿಯರೇ, ಪೌಲನ ಮೂಲಕ ಇಷ್ಟೊಂದು ವಿಷಯಗಳು ನಡೆದಿದ್ದರೂ, ನಾನಲ್ಲ ಕ್ರಿಸ್ತನೇ ಎಂದು ದೃಢವಾಗಿದ್ದರು. ನಾನು ಪಾಪಿಗಳಲ್ಲೇ ಮಹಾಪಾಪಿ ಎಂದು ಹೇಳಿದರು. ನಮ್ಮ ಜೀವನದಲ್ಲಿ ನಾವು ಹೇಗಿದ್ದೇವೆ? ನಾವು ನಮ್ಮ ಬಗ್ಗೆ ಬಡಾಯಿ ಕೊಚ್ಚಿಕೊಳ್ಳುತ್ತಿದ್ದೇವೆಯೇ? ಅಥವಾ ನಾವು ರಕ್ಷಕನಾದ ಯೇಸುವಿನ ಬಗ್ಗೆ ಮಾತನಾಡುತ್ತಿದ್ದೇವೆಯೇ? ಅದರ ಬಗ್ಗೆ ಸ್ವಲ್ಪ ಯೋಚಿಸೋಣ.
- Sis. ಫಾತಿಮಾ
ಪ್ರಾರ್ಥನಾ ಅಂಶ:
ಉತ್ತರದ ರಾಜ್ಯಗಳಲ್ಲಿ 500 ಮಿಷನರಿಗಳು ಎದ್ದೇಳುವಂತೆ ಪ್ರಾರ್ಥಿಸಿರಿ.
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- info@vmm.org.in
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482