Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 13.06.2024
Share:

By Village Missionary Movement

Thursday, 13-Jun-2024

ಧೈನಂದಿನ ಧ್ಯಾನ(Kannada) – 13.06.2024

 

ತಡವಾದರೂ . . .

 

"...ತಡವಾದರೂ ಅದಕ್ಕೆ ಕಾದಿರುಅದು ಬಂದೇ ಬರುವದು, ತಾಮಸವಾಗದು" - ಹಬಕ್ಕೂಕ 2:3

  

ರಕ್ಷಣೆ ಹೊಂದಿರುವ ಮಹಿಳೆಯೊಬ್ಬರು ರಕ್ಷಣೆ ಹೊಂದದ ತನ್ನ ಗಂಡನಿಗಾಗಿ ಸತತವಾಗಿ ಪ್ರಾರ್ಥಿಸುತ್ತಿದ್ದರು. ಆದರೆ ಆ ಪ್ರಾರ್ಥನೆಗೆ ಉತ್ತರ ಸಿಗಲಿಲ್ಲ. ಗಂಡನು ರಕ್ಷಣೆ ಹೊಂದುವಂತಹ ಯಾವ ಲಕ್ಷಣಗಳೂ ಕಾಣಲಿಲ್ಲ. ಒಂದು ದಿನ ಕಾರು ಅಪಘಾತದಲ್ಲಿ ಆ ಮಹಿಳೆ ತನ್ನ ಗಂಡನನ್ನು ಕಳೆದುಕೊಂಡಳು. ಗಂಡನನ್ನು ಕಳೆದುಕೊಂಡ ದುಃಖ ಒಂದೆಡೆಯಾದರೆ, ತನ್ನ ಪ್ರಾರ್ಥನೆ ಕೇಳಲಿಲ್ಲವೇ ಎಂಬ ಆತಂಕ ಇನ್ನೊಂದೆಡೆ. ಸತ್ಯವೇದವನ್ನು ಮರೆತರು, ಪ್ರಾರ್ಥನೆಯನ್ನು ತ್ಯಜಿಸಿದರು ಮತ್ತು ದೇವರಿಂದ ದೂರ ಹೋದರು. ಕಾಲಗಳು ಉರುಳಿದವು. ಐದು ವರ್ಷಗಳ ನಂತರ, ದಾರಿಯಲ್ಲಿ ಒಂದು ಸ್ನೇಹಿತನನ್ನು ಆಕಸ್ಮಿಕವಾಗಿ ಭೇಟಿಯಾದರು. ಆಗ ಆ ಸ್ನೇಹಿತ ಅವಳಿಗೆ ಹೀಗೆ ಹೇಳಿದರು. ನಿಮ್ಮ ಗಂಡ ಅಪಘಾತದಲ್ಲಿ ಸತ್ತ ದಿನ, ನಾನು ಅವರ ಕಾರಿನಲ್ಲಿ ಲಿಫ್ಟ್ ಕೇಳಿ ಅವರೊಂದಿಗೆ ಸ್ವಲ್ಪ ಸಮಯ ಕಳೆದೆ. ನನ್ನ ಸಾಕ್ಷಿ ಮತ್ತು ದೇವರ ಪ್ರೀತಿಯ ಬಗ್ಗೆ ಸ್ಪಷ್ಟವಾಗಿ ಮಾತನಾಡಿದೆ. ಅವರು ಅದನ್ನು ಎಚ್ಚರಿಕೆಯಿಂದ ಆಲಿಸಿದರು. ದಾರಿಯಲ್ಲಿ ಅವರು ತನ್ನ ಕಾರನ್ನು ನಿಲ್ಲಿಸಿ ತನ್ನ ಪಾಪವನ್ನು ಒಪ್ಪಿಕೊಂಡರು ಮತ್ತು ಕಣ್ಣೀರಿನೊಂದಿಗೆ ಪ್ರಾರ್ಥಿಸಿದರು. ನಾನು ಕಾರಿನಿಂದ ಇಳಿಯುತ್ತಿದ್ದಂತೆ ಅವರ ಮುಖದಲ್ಲಿ ರಕ್ಷಣೆಯ ಸಂತೋಷವನ್ನು ನಾನು ನೋಡಿದೆ. ಆದರೆ ಅದೇ ದಿನ ಅವರು ಕಾರು ಅಪಘಾತದಲ್ಲಿ ದೇವರ ಸಮ್ಮುಖಕ್ಕೆ ಹೋಗಿಬಿಟ್ಟರು ಎಂಬ ವಿಷಯ ತಿಳಿಯಿತು. ಇದನ್ನು ನಿಮಗೆ ಹೇಳಲು ಇಂದು ಅವಕಾಶ ಸಿಕ್ಕಿತು ಎಂದು ಹೇಳಿದರು. ಆ ಮಹಿಳೆಯ ಸಂತೋಷಕ್ಕೆ ಮಿತಿಯೇ ಇರಲಿಲ್ಲ. ಅವಳು ಪುನಃ ದೇವರ ಪ್ರೀತಿಯೊಳಗೆ ಕಣ್ಣೀರಿನಿಂದ ಹಿಂದಿರುಗಿದಳು.  

  

ಸತ್ಯವೇದದಲ್ಲಿ, ಅಬ್ರಹಾಮನು 75 ನೇ ವಯಸ್ಸಿನಲ್ಲಿ ವಾಗ್ದಾನ ಮಾಡಿದ ಸಂತತಿಯನ್ನು ಪಡೆಯುತ್ತೀಯ ಎಂದು ದೇವರಿಂದ ಆಶೀರ್ವದಿಸಲ್ಪಟ್ಟರು. ವೃದ್ಧಾಪ್ಯದಿಂದ ಸಾರಳ ಗರ್ಭಾವಸ್ಥೆಯು ಸತ್ತು ಹೋದದ್ದು ಅಬ್ರಹಾಮನಿಗೆ ತಿಳಿದಿದ್ದರೂ ಕಾದಿದ್ದರು. ತನ್ನ 100 ನೇ ವಯಸ್ಸಿನಲ್ಲಿ ಇಸಾಕನನ್ನು ಹೆರಲು ದೇವರು ಕೃಪೆ ತೋರಿದರು. ಅಂತೆಯೇ ಎಲೀಯನ ಸೇವಕನಾದ ಎಲೀಷನಿಗೆ ಎರಡರಷ್ಟು ವರ ದೊರೆತರೂ 13 ಅದ್ಭುತಗಳು ಎಲೀಷನ ಮೂಲಕವಾಗಿಯೇ ನಡೆಯಿತು. ಒಂದು ವರ ಹಾಗೆಯೇ ಉಳಿದಿತ್ತು. ಎಲೀಷನು ಸತ್ತಹೋದರು. ಎಲೀಷನ ಸಮಾಧಿಯಲ್ಲಿ, ಒಬ್ಬ ಸತ್ತ ಯೌವನಸ್ಥನನ್ನು ಎಸೆದ ಕೂಡಲೇ ಅವನು ಜೀವಂತವಾಗಿ ಎದ್ದು ನಿಂತನು. (2 ಅರಸುಗಳು 13:21). ತಡವಾದರೂ ದೇವರ ಆಶೀರ್ವಾದಗಳು ನೆರವೇರುತ್ತವೆ 

  

ನನಗೆ ಪ್ರಿಯವಾದವರೇ, ನಾನು ಅನೇಕ ದಿನಗಳಿಂದ ಪ್ರಾರ್ಥಿಸುತ್ತಿದ್ದೇನೆ. ದೇವರ ವಾಗ್ದಾನಗಳು ನೆರವೇರುತ್ತಿಲ್ಲ ಎಂದು ನೀವು ಚಿಂತೆ ಮಾಡುತ್ತಿದ್ದೀರಾ? ನಿಮಗಾಗಿ ದೇವರ ಯೋಜನೆ ಬದಲಾಗುವುದಿಲ್ಲ. ಸರಿಯಾದ ಸಮಯದಲ್ಲಿ ನಿಮ್ಮ ಕಣ್ಣುಗಳು ಮತ್ತು ಕಿವಿಗಳು ಕೇಳುತ್ತವೆ ಮತ್ತು ನಿಮ್ಮ ಹೃದಯವು ಅತಿಶಯದಿಂದ ಹರ್ಷಿಸುತ್ತದೆ. ಎದೆಗುಂದಬೇಡಿ. ಅದ್ಭುತಗಳನ್ನು ಕಾಣುತ್ತೀರಿ. ಹಲ್ಲೇಲೂಯಾ!

- Sis. ಮಂಜುಳಾ

 

ಪ್ರಾರ್ಥನಾ ಅಂಶ:

ಉತ್ತರ ರಾಜ್ಯಗಳಲ್ಲಿ ಸೇವೆ ಮಾಡುತ್ತಿರುವ ಸೇವಕರ ಸುರಕ್ಷತೆಗಾಗಿ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al meritking meritking giriş meritking güncel giriş perabet perabet perabet giriş deneme bonusu deneme bonusu veren siteler matbet matbet giriş matbet güncel giriş betsat betsat giriş betsat güncel giriş perabet perabet giriş perabet güncel giriş kingroyal kingroyal giriş kingroyal güncel giriş vaycasino vaycasino giriş vaycasino güncel giriş jojobet superbetin matbet jojobet deneme bonusu deneme bonusu veren siteler holiganbet holiganbet giriş Superbetin superbetin giriş superbetin güncel giriş süperbetin aresbet aresbet giriş perabet perabet giriş milanbahis milanbahis giriş milanbahis milanbahis giriş holiganbet holiganbet giriş holiganbet holiganbet giriş jojobet jojobet giriş alobet alobet giriş casibom casibom giriş