Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 12.06.2024
Share:

By Village Missionary Movement

Wednesday, 12-Jun-2024

ಧೈನಂದಿನ ಧ್ಯಾನ(Kannada) – 12.06.2024

 

ಹಣದಲ್ಲಿ ಸತ್ಯತೆ 

 

"…ಸತ್ಯವಂತರು ಆತನಿಗೆ ಲೇಸು." - ಜ್ಞಾನೋಕ್ತಿ 12:22

 

ಅಬ್ರಹಾಂ ಲಿಂಕನ್ ಮತ್ತು ಅವರ ಸ್ನೇಹಿತ ಪೆರ್ರಿ ಎಂಬವರು ಒಟ್ಟಿಗೆ ಅಂಗಡಿಯೊಂದನ್ನು ನಡೆಸುತ್ತಿದ್ದರು. ಈ ವೇಳೆ ಅಬ್ರಹಾಂ ಲಿಂಕನ್ ರವರೇ ಅಂಗಡಿಯ ಸಂಪೂರ್ಣ ಉಸ್ತುವಾರಿ ವಹಿಸಿಕೊಂಡು ನಡೆಸುತ್ತಿದ್ದರು. ಇಂತಹ ಪರಿಸ್ಥಿತಿಯಲ್ಲಿ ಅವರ ಸ್ನೇಹಿತ ಅಂಗಡಿಗಾಗಿ ಹಲವೆಡೆ ಸಾಲ ಮಾಡಿಕೊಂಡು ಸಂಪೂರ್ಣವಾಗಿ ಕುಡುಕನಾಗಿ ಮಾರ್ಪಟ್ಟು ಸತ್ತುಹೋದರು. ಆದರೆ ಲಿಂಕನ್ ರವರು ಅಂಗಡಿಯನ್ನು ಮುಚ್ಚಿ ತನ್ನ ಸ್ನೇಹಿತ ತೆಗೆದುಕೊಂಡಿದ್ದ ಅಷ್ಟೂ ಸಾಲದ ಹಣವನ್ನು ತಾವೇ ಕೆಲಸ ಮಾಡಿ ಕಟ್ಟಿ ತೀರಿಸಿದರು. ಆದರೆ ಲಿಂಕನ್ ಮಾಡಿದ್ದು ಅವರ ಸತ್ಯತೆಯ ಗುಣವನ್ನು ನೆಟ್ಟಂತಿದೆ. ಪರಿಣಾಮವಾಗಿ, ಜನರು ಅವರನ್ನು ಪ್ರಾಮಾಣಿಕವಾದ ಲಿಂಕನ್ ಎಂದು ನಂಬಿಕೆಯಿಂದ ನೋಡಲಾರಂಭಿಸಿದರು. ನಂತರ ಅವರು ಯುನೈಟೆಡ್ ಸ್ಟೇಟ್ಸ್ನ ಅಧ್ಯಕ್ಷರಾಗಿ ಉನ್ನತೀಕರಿಸಲ್ಪಟ್ಟರು.

  

ಇಸ್ರಾಯೇಲ್ ಜನರನ್ನು ಮುನ್ನಡೆಸಲು ದೇವರಿಂದ ಆರಿಸಿಕೊಳ್ಳಲ್ಪಟ್ಟವರು ಮೋಶೆ. ಮೋಶೆ ಆರು ಲಕ್ಷಕ್ಕೂ ಹೆಚ್ಚು ಜನರನ್ನು ಅರಣ್ಯದಲ್ಲಿ ಮುನ್ನಡೆಸಿದರು. ಆಗ ಕರ್ತನು ಇವರಿಗೆ ಹಲವು ವಿಧವಾದ ಆಶೀರ್ವಾದಗಳನ್ನು ಕೊಟ್ಟರು. ಮೋಶೆ ಎಲ್ಲದರಲ್ಲೂ ನಂಬಿಗಸ್ತನಾಗಿದ್ದರು. ಅದಕ್ಕಾಗಿಯೇ ನಾವು ಸತ್ಯವೇದದಲ್ಲಿ ಮೋಶೆಯ ಬಗ್ಗೆ ಬರೆದಿರುವ ಸಾಕ್ಷ್ಯವನ್ನು ಓದಲು ಸಾಧ್ಯವಾಗುತ್ತಿದೆ. ಮೋಶೆಯು ತನ್ನ ಮನೆಯಲ್ಲಿ ಸೇವಕನಾಗಿ ಎಲ್ಲೆಡೆ ನಂಬಿಗಸ್ತನಾಗಿದ್ದರು. ಇನ್ನೂ ಸತ್ಯವೇದದಲ್ಲಿ ಅನೇಕರು ತಮ್ಮ ದೇವರು ಕೊಟ್ಟ ಕೆಲಸದಲ್ಲಿ ನಂಬಿಗಸ್ತರಾಗಿದ್ದರು.

 

ಇದನ್ನು ಓದುತ್ತಿರುವ ಪ್ರಿಯರೇ, ನಮಗೆ ನೀಡಿದ ಕೆಲಸದಲ್ಲಿ, ಹಣದ ವಿಷಯಗಳಲ್ಲಿ, ಸಣ್ಣ ಸಣ್ಣ ವಿಷಯಗಳಲ್ಲಿ ನಂಬಿಗಸ್ತರಾಗಿರಲು ಕಲಿಯೋಣ. ಆಗಲೇ ಯಜಮಾನನಾದ ದೇವರು ಬರುವಾಗ ಅದಕ್ಕೆ ತಕ್ಕ ಹಾಗೆ ಉತ್ತರ ಕೊಡುತ್ತಾರೆ. ಆದ್ದರಿಂದ ನಾವು ನಮಗೆ ನೀಡಿದ ಕೆಲಸದಲ್ಲಿ, ನಮ್ಮ ಪ್ರತಿಭೆಗಳನ್ನು ತೋರಿಸುವುದರಲ್ಲಿ, ದೇವರಿಗೆ ನೀಡಬೇಕಾದ ಸಮಯದಲ್ಲಿ, ನಾವು ಅವರಿಗೆ ಮಾಡಬೇಕಾದ ಸೇವೆಗಳಲ್ಲಿ ನಂಬಿಗಸ್ತರಾಗಿರೋಣ. ಮೋಶೆಯು ದೇವರಿಂದ ಸಾಕ್ಷಿ ಪಡೆದುಕೊಂಡಂತೆ, ನಾವು ಸಹ "ನಂಬಿಗಸ್ತರಾಗಿ" ಜೀವಿಸಿ ದೇವರಿಂದ ಪರಿಪೂರ್ಣವಾದ ಆಶೀರ್ವಾದಗಳನ್ನು ಪಡೆದುಕೊಳ್ಳೋಣ.

- Mrs. ಬೇಬಿ ಕಾಮರಾಜ್

 

ಪ್ರಾರ್ಥನಾ ಅಂಶ:

ನಮ್ಮ ಮಿಷನರಿ ಮಕ್ಕಳ ಶೈಕ್ಷಣಿಕ ಅಗತ್ಯಗಳು ಪೂರೈಸಲ್ಪಡುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al