Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 11.06.2024
Share:

By Village Missionary Movement

Tuesday, 11-Jun-2024

ಧೈನಂದಿನ ಧ್ಯಾನ(Kannada) – 11.06.2024

 

ಎದ್ದು ಪ್ರಕಾಶಿಸು

 

"ಏಳು, ಪ್ರಕಾಶಿಸು, ನಿನಗೆ ಬೆಳಕು ಬಂತು, ಯೆಹೋವನ ತೇಜಸ್ಸು ನಿನ್ನ ಮೇಲೆ ಉದಯಿಸಿದೆ" - ಯೆಶಾಯ 60:1

 

ಅಮೇರಿಕಾ ಸಂಯುಕ್ತ ಸಂಸ್ಥಾನದ ಅಧ್ಯಕ್ಷರಾಗಿದ್ದ ಅಬ್ರಹಾಂ ಲಿಂಕನ್, ಜಾರ್ಜ್ ವಾಷಿಂಗ್ಟನ್ ಮತ್ತು ಜಾನ್ ಕೆನಡಿ ಅವರು ತಮ್ಮ ಆಧ್ಯಾತ್ಮಿಕ ಜೀವನದಲ್ಲಿ ದೇವರೊಂದಿಗೆ ಹೊಂದಿದ್ದ ಐಕ್ಯತೆಯಿಂದ ಮೇಲೆತ್ತಲ್ಪಟ್ಟು, ಎದ್ದು ಪ್ರಕಾಶಿಸಿದ್ದರಿಂದ ಇಂದಿಗೂ ಮರೆಯಾಗದ ವೈಭವವಾಗಿ ಅವರ ಇತಿಹಾಸವು ಇದೆ. 

  

ಮಿಷನರಿಗಳಾಗಿ ಸಾವಿರಾರು ಜನರು ಪ್ರಪಂಚದಾದ್ಯಂತ ಎದ್ದು ಪ್ರಕಾಶಿಸಿದ್ದು ಹೇರಳ! ಅನೇಕರು ಕಣ್ಮರೆಯಾಗಿದ್ದರೂ ಅವರ ಒಳ್ಳೆಯ ಕಾರ್ಯಗಳು ಮರೆಯಾಗದ ಕೀರ್ತಿಯಿಂದ ಪ್ರಕಾಶಮಾನವಾಗಿವೆ. 

  

ಸತ್ಯವೇದದಲ್ಲಿ ಹಳೆಯ ಒಡಂಬಡಿಕೆಯಲ್ಲಿ ದೇವರಿಗಾಗಿ ಎದ್ದು ಪ್ರಕಾಶಿಸಿದವರನ್ನು ಇಬ್ರಿಯ 11 ನೇ ಅಧ್ಯಾಯದಲ್ಲಿ ವಿಶ್ವಾಸಿಗಳ ಪಟ್ಟಿಯಲ್ಲಿ ಪವಿತ್ರಾತ್ಮನು ಬರೆದಿಟ್ಟಿದ್ದಾರೆ. ಅವರನ್ನು ಅನುಸರಿಸಿ, ಇಂದಿನವರೆಗೂ ಇರುವ ವಿಶ್ವಾಸಿಗಳು ಸಹ ಯೇಸುಕ್ರಿಸ್ತನನ್ನು ತಮ್ಮ ಹೃದಯದಲ್ಲಿ ಬೆಳಕಾಗಿ ಇರಿಸಿಕೊಂಡು ಪ್ರಕಾಶಿಸುತ್ತಿದ್ದಾರೆ. ಎದ್ದು ಪ್ರಕಾಶಿಸಿದವರು, ತಮ್ಮ ಆತ್ಮವನ್ನು ಕಾಪಾಡಿಕೊಂಡವರು ಮತ್ತು ಇತರರ ಆತ್ಮಗಳನ್ನು ಸಹ ಕಾಪಾಡಿದವರು.

  

"ಕೆವಿನ್ ಕಾರ್ಟರ್" ಎಂಬ ವಿಶ್ವಪ್ರಸಿದ್ಧ ಛಾಯಾಗ್ರಾಹಕರು ಒಂದು ಅತ್ಯುತ್ತಮ ಛಾಯಾಚಿತ್ರಕ್ಕಾಗಿ ನೊಬೆಲ್ ಪ್ರಶಸ್ತಿಗೆ ಸಮಾನವಾದ ಬಹುಮಾನವನ್ನು ಗೆದ್ದರು. ಆ ಚಿತ್ರವನ್ನು ನೋಡಿದವರು ಅದರ ಹಿಂದೆ ಏನಾಯಿತು ಎಂದು ಪ್ರಪಂಚದಾದ್ಯಂತದ ಪ್ರಶ್ನೆಗಳನ್ನು ಕೇಳಲು ಪ್ರಾರಂಭಿಸಿದರು ಪ್ರಶ್ನೆಗೆ ಉತ್ತರಿಸಲು ಸಾಧ್ಯವಾಗದೆ, ಕೆವಿನ್ ಕಾರ್ಟರ್ ಬಹುಮಾನವನ್ನು ಪಡೆದ ಎರಡು ತಿಂಗಳ ನಂತರ ಆತ್ಮಹತ್ಯೆ ಮಾಡಿಕೊಂಡರು. ಅವರು ಉತ್ತರವಾಗಿ ಬರೆದಿಟ್ಟದ್ದು, "ನನ್ನನ್ನು ಅಪಾರವಾಗಿ ಕ್ಷಮಿಸಿ ಏಕೆಂದರೆ ನಾನು ತೆಗೆದ ಫೋಟೋ ಸುಡಾನ್‌ ದೇಶದಲ್ಲಿ ಒಂದು ಪುಟ್ಟ ಹುಡುಗಿ ಅಸ್ಥಿಪಂಜರದಂತೆ ಇದ್ದಳು. ಆ ಚಿಕ್ಕ ಹುಡುಗಿಗೆ ಸ್ವಲ್ಪ ದೂರದಲ್ಲಿ, ಹೆಣ ತಿಂದು ಒಂದು ರಣಹದ್ದು ಕುಳಿತಿತ್ತು. ಹಸಿವು ಬಾಯಾರಿಕೆಯಿಂದ ಆಹಾರವಿಲ್ಲದೆ ಸಾಯುವವರ ಗುಂಪಿನಲ್ಲಿ ಈ ಪುಟ್ಟ ಹುಡುಗಿಯೂ ಒಬ್ಬಳು. ನಾನು ಅವಳನ್ನು ಉಳಿಸಲು ಯಾವುದೊಂದು ಪ್ರಯತ್ನವನ್ನೂ ಮಾಡದೇ ಫೋಟೋಗ್ರಫಿಯನ್ನು ಮುಖ್ಯಗೊಳಿಸಿದೆ" ಎಂದು ಬರೆದಿಟ್ಟು ತನ್ನ ಜೀವನವನ್ನು ಕೊನೆಗೊಳಿಸಿದರು. ಹೌದು, ನಮ್ಮ ಯೋಚನೆ ದೇವರಿಗೆ ತಕ್ಕವುಗಳನ್ನು ಯೋಚಿಸದೆ ಮಾನುಷವಾಗಿ ಕಾಣಲ್ಪಡುವಾಗ ಸೈತಾನನು ನಮ್ಮ ದೀಪವನ್ನು ಆರಿಸಿ ಬಿಡುತ್ತಾನೆ. ಆದರೆ ದೇವರು ನಾವು ಎದ್ದು ಪ್ರಕಾಶಿಸಬೇಕೆಂದು ಬಯಸುತ್ತಾರೆ.

 

ಇಂದು ನಾವು ಯಾರನ್ನು ನುಂಗಲಿ ಎಂದು ಕಾಯುತ್ತಿರುವ ಸೈತಾನನ ಕುರಿತು ಸುಂದರವಾಗಿ ಬೋಧಿಸುತ್ತೇವೆ. ಅವನಿಂದ ಜನರನ್ನು ರಕ್ಷಿಸಲು ಯಾವುದೇ ಪ್ರಯತ್ನ ಮಾಡುತ್ತಿಲ್ಲ. “ನಿನ್ನ ನಂಬಿಕೆ ಕಡಿಮೆಯಾಗದಂತೆ ನಿನಗಾಗಿ ಪ್ರಾರ್ಥಿಸಿದೆ” ಎಂದು ಪೇತ್ರನಿಗಾಗಿ ಪ್ರಾರ್ಥಿಸಿದ ಯೇಸುವಿನಂತೆ ಬಾಳೋಣ. ಜಗತ್ತನ್ನು ಬೆಳಗಿಸೋಣ.

- S. ಸಮುವೇಲ್ ಮೋರಿಸ್

 

ಪ್ರಾರ್ಥನಾ ಅಂಶ :

ಕಣ್ಮಣಿ ಮಗು ಯೇಸುವಿಗಾಗಿ ಎಂಬ ಯೋಜನೆಯಲ್ಲಿ ತೊಡಗಿರುವ ಯೌವನಸ್ಥರು ಪವಿತ್ರವಾಗಿ ಜೀವಿಸುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al