By Village Missionary Movement
Monday, 10-Jun-2024ಧೈನಂದಿನ ಧ್ಯಾನ(Kannada) – 10.06.2024
ಭಾರ
"…ನಮಗೆ ಅಭ್ಯಂತರ ಮಾಡುವ ಎಲ್ಲಾ ಭಾರವನ್ನೂ ಹತ್ತಿಕೊಳ್ಳುವ ಪಾಪವನ್ನೂ ನಾವು ಸಹ ತೆಗೆದಿಟ್ಟು" - ಇಬ್ರಿಯ 12:1
ಒಂದು ಹಳ್ಳಿಯಲ್ಲಿ ವಯಸ್ಸಾದ ಸ್ತ್ರೀಯೊಬ್ಬಳು ತಲೆಯ ಮೇಲೆ ಹುಲ್ಲನ್ನು ಹೊತ್ತುಕೊಂಡು ಬರುತ್ತಿದ್ದರು. ಆಗ ಆ ದಾರಿಯಲ್ಲಿ ಒಂದು ಎತ್ತಿನ ಬಂಡಿ ಬಂತು. ಕೂಡಲೇ ಅವರು ಅದರ ಮೇಲೆ ಹತ್ತಿ ಹೊರಟರು. ಆದರೆ ಅವರು ತನ್ನ ತಲೆಯ ಮೇಲಿದ್ದ ಹುಲ್ಲನ್ನು ಕೆಳಕ್ಕೆ ಇಳಿಸಲೇ ಇಲ್ಲ. ಇದನ್ನು ನೋಡುತ್ತಿದ್ದ ಎತ್ತಿನಗಾಡಿ ಚಾಲಕ ನಗುತ್ತಾ ಅಮ್ಮ ಹುಲ್ಲನ್ನು ಕೆಳಗೆ ಇಡಿ ಎಂದು ಹೇಳಿದರೂ ಕೇಳಲಿಲ್ಲ. ತಲೆಯ ಮೇಲೆ ಭಾರವನ್ನು ಹೊತ್ತುಕೊಂಡೇ ಪ್ರಯಾಣ ಮುಂದುವರೆಸಿದರು.
ಮಕ್ಕಳಿಲ್ಲದ ಹನ್ನಳು, ತನ್ನ ಸವತಿಯಾದ ಪೆನಿನ್ನಳ ಪೀಡಿಸುವ ಮಾತುಗಳಿಂದ ಊಟಮಾಡದೇ ಕಣ್ಣೀರು ಹಾಕುತ್ತಿದ್ದಳು. ಹೀಗೆ ಅವಳ ದಿನಗಳು ಕಣ್ಣೀರಿನೊಂದಿಗೆ ಭಾರದೊಂದಿಗೆ ಕಳೆದವು. ಆಲಯಕ್ಕೆ ಹೋಗುವ ಅವಕಾಶ ಸಿಕ್ಕಿತು. ಅವಳು ತನ್ನ ಹೃದಯವನ್ನು ದೇವರ ಸನ್ನಿಧಿಯಲ್ಲಿ ಸುರಿದಳು. ಎಲ್ಲಾ ಭಾರವನ್ನೂ ಇಳಿಸಿದಳು. ನಂತರ ಅವಳು ಎಂದಿಗೂ ದುಃಖಿತಳಾಗಿರಲಿಲ್ಲ. ಹೌದು, ಹನ್ನಳು ತನ್ನ ಭಾರವನ್ನು ದೇವರ ಸಮ್ಮುಖದಲ್ಲಿ ಇಳಿಸಿ ಬಿಟ್ಟಳು. ದೇವರನ್ನು ಅವಲಂಬಿಸಿ ತಾಳ್ಮೆಯಿಂದ ಕಾಯುತ್ತಿದ್ದಳು. ದೇವರು ಪ್ರವಾದಿಯಾದ ಸಮುವೇಲನಿಗೆ ಜನ್ಮ ನೀಡಲು ಕೃಪೆ ತೋರಿದರು. ನಂತರ ಗಂಡು ಮತ್ತು ಹೆಣ್ಣು ಮಕ್ಕಳನ್ನು ಪಡೆದು ದೇವರನ್ನು ಸ್ತುತಿಸಿದಳು.
ಇದನ್ನು ಓದುತ್ತಿರುವ ನಾವು ನಮ್ಮ ಜೀವನದಲ್ಲಿರುವ ಭಾರಗಳನ್ನು ನಾವೇ ಹೊರುತ್ತೇವಾ ಅಥವಾ ಅವುಗಳನ್ನು ದೇವರ ಪಾದದಲ್ಲಿ ಇಳಿಸುತ್ತೇವಾ? ಹೌದು, ಕೀರ್ತನೆ 55:22 ರಲ್ಲಿ "ನಿನ್ನ ಚಿಂತಾಭಾರವನ್ನು ಯೆಹೋವನ ಮೇಲೆ ಹಾಕು; ಆತನು ನಿನ್ನನ್ನು ಉದ್ಧಾರಮಾಡುವನು. ನೀತಿವಂತನನ್ನು ಎಂದಿಗೂ ಕದಲಗೊಡಿಸನು" ಎಂದು ಈ ವಾಕ್ಯವು ಹೇಳುತ್ತಿದೆ. ಹೌದು, ನಮ್ಮ ಜೀವನದಲ್ಲಿ ಕಾಣಲ್ಪಡುವ ಸಾಲದ ಸಮಸ್ಯೆಗಳು, ರೋಗಗಳು, ಬಡತನ ಇನ್ನೂ ಹೇಳಲಾಗದಂತಹ ಎಷ್ಟೋ ಸಮಸ್ಯೆಗಳಿರಬಹುದು. ಆದರೂ ಎಂದಿಗೂ ಸೋತುಹೋಗಬೇಡಿ. ನಿಮ್ಮನ್ನು ಅಂಗೈಯಲ್ಲಿ ಚಿತ್ರಿಸಿ ಇಟ್ಟುಕೊಂಡಿರುವ ಒಬ್ಬರು ಇದ್ದಾರೆ. ಅವರೇ ಕರ್ತನಾದ ಯೇಸು ಕ್ರಿಸ್ತನು. ಆದ್ದರಿಂದ ನಿಮ್ಮ ಎಲ್ಲಾ ಚಿಂತೆಗಳನ್ನು ಆತನ ಮೇಲೆ ಹಾಕಿರಿ. ನಿಮ್ಮ ಭಾರಗಳನ್ನು ಆತನ ಮೇಲೆ ಹಾಕಿರಿ. ಅದರ ನಂತರ ದುಃಖಿಸಬೇಡಿ. ಅವರು ಯೆಹೋವ ಯೀರೆ ಆಗಿದ್ದು ಎಲ್ಲವನ್ನೂ ನೋಡಿಕೊಳ್ಳುತ್ತಾರೆ.
- Mrs. ನಿರೋಶಾ ಆಲ್ವಿನ್
ಪ್ರಾರ್ಥನಾ ಅಂಶ:
ಕಣ್ಮಣಿಯೇ ಕೇಳು, ಯೆಹೋಶುವನೇ ಎದ್ದೇಳು ಎಂಬ ಪತ್ರಿಕೆಗಳ ಮೂಲಕ ಅನೇಕ ಯುವಜನರು ಪ್ರಯೋಜನ ಪಡೆಯುವಂತೆ ಪ್ರಾರ್ಥಿಸಿರಿ.
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- info@vmm.org.in
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482