By Village Missionary Movement
Saturday, 08-Jun-2024ಧೈನಂದಿನ ಧ್ಯಾನ(Kannada) – 08.06.2024
ಸರ್ವಶಕ್ತನಾದ ದೇವರು
"ನೀನು ಸಕಲಕಾರ್ಯಗಳನ್ನು ನಡಿಸಬಲ್ಲಿಯೆಂತಲೂ ಯಾವ ಸಂಕಲ್ಪವೂ ನಿನಗೆ ಅಸಾಧ್ಯವಲ್ಲವೆಂತಲೂ ತಿಳಿದುಕೊಂಡೇ ಇದ್ದೇನೆ" - ಯೋಬ 42:2
ಅದೊಂದು ಪುಟ್ಟ ಹಳ್ಳಿ. ಆ ಊರಿನ ರಸ್ತೆಯ ಪಕ್ಕದಲ್ಲಿ ಒಂದು ಒಣಗಿದ ಮರವಿತ್ತು. ಹದಿಹರೆಯದ ಹುಡುಗಿಯೊಬ್ಬಳು ಪ್ರತಿದಿನ ಆ ದಾರಿಯಲ್ಲಿ ನಡೆದುಕೊಂಡು ಹೋಗುವುದು ಅಭ್ಯಾಸ. ಒಂದು ದಿನ ಆ ಹುಡುಗಿ ಆ ಒಣಗಿದ ಮರವನ್ನು ನೋಡಿ, "ನೀನು ಮತ್ತು ನಾನು ಗೆಳೆಯರು, ಏಕೆಂದರೆ ನಿನ್ನಿಂದಲೂ ಯಾರಿಗೂ ಉಪಯೋಗವಿಲ್ಲ, ಓದಿ ಮುಗಿಸಿ ನಿರುದ್ಯೋಗಿಯಾಗಿರುವ ನನ್ನಿಂದಲೂ ಯಾರಿಗೂ ಪ್ರಯೋಜನವಿಲ್ಲ, ಆದ್ದರಿಂದ ನಿನ್ನಿಂದಲೂ ಮತ್ತು ನನ್ನಿಂದಲೂ ಯಾರಿಗೂ ಯಾವ ರೀತಿಯ ಪ್ರಯೋಜನವೂ ಇಲ್ಲ, ಆದ್ದರಿಂದ ನೀನು ನಾನು ಒಂದೇ ಗುಂಪು." ತಿಂಗಳುಗಳು ಕಳೆದವು. ಆ ದಾರಿಯಲ್ಲಿ ಬಂದ ಹದಿಹರೆಯದ ಹುಡುಗಿಗೆ ಬಹಳ ಆಶ್ಚರ್ಯವಾಯಿತು. ಒಣಗಿದ ಮರವು ಸುಂದರವಾಗಿ ಚಿಗುರಲು ಪ್ರಾರಂಭಿಸಿತು! ಇದನ್ನು ನೋಡಿದ ಹುಡುಗಿಗೆ ಸಂತೋಷವಾಯಿತು. ಕೂಡಲೇ “ದೇವರೇ ಈ ಒಣಗಿದ ಮರವನ್ನು ಇಷ್ಟು ಸುಂದರವಾಗಿ ಚಿಗುರೊಡೆಯುವಂತೆ ಮಾಡಲು ನಿಮ್ಮಿಂದ ಸಾಧ್ಯವೆಂದರೆರೆ ನನ್ನ ಬದುಕನ್ನು ಸಹ ಚಿಗುರೊಡೆಯುವಂತೆ ಮಾಡಲು ನಿಮ್ಮಿಂದ ಸಾಧ್ಯವೆಂದು ನಂಬುತ್ತೇನೆ" ಎಂದು ತನ್ನ ಮನದಾಳದಿಂದ ಮನಃಪೂರ್ವಕವಾಗಿ ಪ್ರಾರ್ಥಿಸಿದಳು. ಯೇಸಪ್ಪ ಅವಳ ಪ್ರಾರ್ಥನೆಯನ್ನು ಕೇಳಿ ಒಂದು ಸೇವಕಿಯಾಗಿ ಮಾರ್ಪಡಿಸಿ ಅನೇಕರಿಗೆ ಪ್ರಯೋಜನಕಾರಿಯಾಗಿ ಉಪಯೋಗಿಸುತ್ತಿದ್ದಾರೆ.
ಸತ್ಯವೇದದಲ್ಲಿ ಮಾರ್ಥಾ ಮತ್ತು ಮರಿಯಳ ಸಹೋದರನು ಸತ್ತುಹೋದನು. ಮನೆಯವರು ಮತ್ತು ಸಂಬಂಧಿಕರು ಎಲ್ಲವೂ ಮುಗಿದುಹೋಯಿತು ಇನ್ನು ಅಷ್ಟೇ ಎಂದು ಭಾವಿಸಿದ್ದರು. ಯೇಸು ಅಳುತ್ತಿದ್ದ ಅವರ ಬಳಿಗೆ ಬಂದರು. ಸತ್ತ ಲಾಜರನಿಗೆ ಜೀವ ಕೊಟ್ಟರು. ಭರವಸೆ ಕಳೆದುಕೊಂಡು ಬರಿದಾಗಿ ಕಾಣಲ್ಪಟ್ಟ ಲಾಜರನ ಸಹೋದರಿಯರ ಜೀವನವೂ ಚಿಗುರಿತು.
ಕ್ರಿಸ್ತನಲ್ಲಿ ಪ್ರಿಯರೇ, ನಿಮ್ಮ ಜೀವನದಲ್ಲಿಯೂ ಸಹ ನೆನೆಸಿದ್ದು ನಡೆಯಲಿಲ್ಲವೇ, ನನ್ನ ಬಲಹೀನತೆಯು ಬದಲಾಗಲಿಲ್ಲವೇ, ನನ್ನ ಶ್ರಮಕ್ಕೆ ತಕ್ಕ ಪ್ರತಿಫಲವಿಲ್ಲವೇ, ನನ್ನ ವಿದ್ಯಾಭ್ಯಾಸಕ್ಕೆ ತಕ್ಕ ಕೆಲಸವಿಲ್ಲವೇ ಎಂದು "ಇಲ್ಲ, ಇಲ್ಲ" ಎಂದು ಕಳವಳಗೊಳ್ಳುತ್ತಿದ್ದೀರಾ? ಚಿಂತಿಸಬೇಡಿ. ಸತ್ತ ಮರವನ್ನು ಚಿಗುರೊಡೆಯುವಂತೆ ಮಾಡುವ ದೇವರು ನಿಮ್ಮ ಬದುಕನ್ನೂ ಚಿಗುರಿಸಬಲ್ಲನು. ನಿಮ್ಮ ಸುಖ ಜೀವನವು ಶೀಘ್ರದಲ್ಲೇ ಚಿಗುರುತ್ತದೆ. ಚಿಗುರುವುದು ಮಾತ್ರವಲ್ಲದೆ ಫಲವನ್ನೂ ಸಹ ನೀಡುವಿರಿ ಮತ್ತು ಇತರರಿಗೆ ಆಶೀರ್ವಾದಕರವಾಗಿ ಮಾರ್ಪಡುತ್ತೀರಿ. ನಮ್ಮ ಕರ್ತನು ತನ್ನನ್ನು ನಂಬುವ ಎಲ್ಲರ ಜೀವನದಲ್ಲಿ ಎಲ್ಲವನ್ನೂ ಮಾಡಲು ಶಕ್ತನಾಗಿದ್ದಾನೆ. ನಾವು ಆತನ ಕೈಯಲ್ಲಿದ್ದೇವೆ. ಚಿಂತಿಸಬೇಡಿ, ಸರ್ವಶಕ್ತನಾದ ದೇವರು ನಮ್ಮನ್ನು ನ್ಯಾಯಯುತವಾಗಿ ನಡೆಸುತ್ತಾರೆ. ನಂಬಿರಿ ಅದ್ಭುತಗಳನ್ನು ನೋಡುತ್ತೀರಿ.
- Mrs. ಅನಿತಾ ಅಲಗರಸ್ವಾಮಿ
ಪ್ರಾರ್ಥನಾ ಅಂಶ:
CCC (ಚೈಲ್ಡ್ ಕೇರ್ ಚೈಲ್ಡ್) ಯೋಜನೆಯಲ್ಲಿ ಭಾಗಿಯಾಗಿರುವ ಮಕ್ಕಳ ಶಿಕ್ಷಣ ಮತ್ತು ಸಂರಕ್ಷಣೆಗಾಗಿ ಪ್ರಾರ್ಥಿಸಿರಿ.
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- info@vmm.org.in
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482