By Village Missionary Movement
Friday, 07-Jun-2024ಧೈನಂದಿನ ಧ್ಯಾನ(Kannada) – 07.06.2024
ಕೊನೆಯ ಕ್ಷಣ
"ನಾನು ಸುವಾರ್ತೆಯನ್ನು ಸಾರಿದರೂ ಹೊಗಳಿಕೊಳ್ಳುವದಕ್ಕೆ ನನಗೇನೂ ಆಸ್ಪದವಿಲ್ಲ; ಸಾರಲೇಬೇಕೆಂಬ ನಿರ್ಬಂಧ ನನಗುಂಟು…" - 1 ಕೊರಿಂಥ. 9:16
ಟೈಟಾನಿಕ್ ಕಥೆ ನಿಮಗೆಲ್ಲ ಚೆನ್ನಾಗಿ ಗೊತ್ತು. ಮನುಷ್ಯನು ತನಗಿಂತ ಮೀರಿದ ಶಕ್ತಿ ಒಂದು ಇದೆ ಎಂದು ಧೃಢವಾಗಿ ನಂಬಿದ ವರ್ಷ 1912. ಹೇಗಾದರೂ ಬದುಕುಳಿಯುವುದಿಲ್ಲವೋ ಎಂದು ಎಲ್ಲರೂ ಸಾಗರದ ಮಧ್ಯದಲ್ಲಿ ಒದ್ದಾಡುತ್ತಿರುವಾಗ, ಸಾವಿಗೆ ಹೆದರದ ಒಂದು ವ್ಯಕ್ತಿಯ ನಿಜವಾದ ಕಥೆಯನ್ನು ನೋಡೋಣ.
ಈ ದುರಂತ ಘಟನೆಯು ನಡೆದು ನಾಲ್ಕು ವರ್ಷಗಳ ನಂತರ, ಟೈಟಾನಿಕ್ ಬೋಟ್ ವಿಪತ್ತಿನಿಂದ ಬದುಕುಳಿದವರು, ಅದರ ಸ್ಮಾರಕ ಕೂಟಕ್ಕೆ ಆಹ್ವಾನಿಸಲ್ಪಟ್ಟಿದ್ದರು. ಅಲ್ಲಿಗೆ ಬಂದ ಯುವಕನೊಬ್ಬ ಹೇಳಿದ ಕಾರ್ಯ ಎಲ್ಲರ ಹೃದಯವನ್ನು ಕದಲಿಸಿತು. ಯುವಕ ಒಡೆದು ಹೋದ ಹಡಗಿನ ಮಧ್ಯದಲ್ಲಿ ಸಿಲುಕಿ ಜೀವಕ್ಕೆ ಹೋರಾಡುತ್ತಿದ್ದನು. ಆಗ ಇವರೊಂದಿಗೆ ಹಡಗಿನಲ್ಲಿ ಬಂದ ಜಾನ್ ಹಾರ್ಪರ್ ಎಂಬವರು ಇವರನ್ನು ಪ್ರಾಣ ಉಳಿಸುವ ಒಂದು ಸಣ್ಣ ಬೋಟ್‌ನಲ್ಲಿ ಹತ್ತಿಸಿದರು. ಅದಕ್ಕೂ ಮುನ್ನ ಅವರು ಕೇಳಿದ ಒಂದು ಪ್ರಶ್ನೆ ನೀವು ರಕ್ಷಣೆ ಹೊಂದಿಬಿಟ್ಟಿದ್ದೀರಾ? ಆ ಯುವಕ ಇಲ್ಲ ಎಂದನು. "ಇದಕ್ಕಿಂತ ಹೆಚ್ಚು ವಿಮೋಚನೆಯನ್ನೊಳಗೊಂಡ ಒಂದರ ಬಗ್ಗೆ ನೀನು ತಿಳಿಯಬೇಕಾಗಿದೆ" ಎಂದು ಹೇಳಿದ ಜಾನ್ ಅವರೊಂದಿಗೆ ಸುವಾರ್ತೆಯನ್ನು ಹಂಚಿಕೊಂಡರು. ನಂತರ ಜಾನ್ ಮತ್ತೆ ಇತರರನ್ನು ಕಾಪಾಡಲು ಹೊರಟು ಹೋದರು. ಆ ಚಿಕ್ಕ ಬೋಟ್ ನಲ್ಲಿ ಸುಮಾರು ಆರು ಮಂದಿಯನ್ನು ಕಾಪಾಡಿದರು. ವಿಪರೀತ ಚಳಿಯಿಂದಾಗಿ ತನ್ನ ಶಕ್ತಿ ಕಳೆದುಕೊಂಡು ನೀರಿನಲ್ಲಿ ಮುಳುಗುತ್ತಿದ್ದರೂ ಇವರು ಸುವಾರ್ತೆ ಸಾರುವುದನ್ನು ನಿಲ್ಲಿಸಲಿಲ್ಲ. ಯೇಸುವಿನ ಬಗ್ಗೆ ಮಾತನಾಡುತ್ತಲೇ ಅವರು ನಿಧನರಾದರು. ಇದನ್ನು ಈ ಯುವಕ ಕಣ್ಣೀರು ಹಾಕುತ್ತಾ ಹೇಳಿದಾಗ ಆ ಸಭಾಂಗಣವೇ ದುಃಖದಲ್ಲಿ ಮುಳುಗಿತು.
ಅಪೊ. ಪೌಲನು ಕರ್ತನಾದ ಯೇಸು ಕ್ರಿಸ್ತನನ್ನು ಅಂಗೀಕರಿಸಿದ ತಕ್ಷಣವೇ, ತಡಮಾಡದೆ ಆಲಯಗಳಲ್ಲಿ ಬೋಧಿಸಿದರು. ಮತ್ತು ಸುವಾರ್ತೆ ಸಾರುವುದನ್ನು ಶ್ರೇಷ್ಟವಾಗಿಯೂ, ದೊಡ್ಡ ಭಾಗ್ಯವಾಗಿಯೂ ಪರಿಗಣಿಸಿದರು. ಆದುದರಿಂದಲೇ ಪೌಲನು ಸುವಾರ್ತೆಯನ್ನು ಸಾರಲೇಬೇಕೆಂಬ ನಿರ್ಬಂಧ ನನಗುಂಟು. ಸಾರದಿದ್ದರೆ ನನ್ನ ಗತಿಯನ್ನು ಏನು ಹೇಳಲಿ ಎಂದು ಬರೆಯುತ್ತಾರೆ.
ಪ್ರಿಯರೇ, ಸುವಾರ್ತೆ ಸಾರುವುದು ಎಂಬುದು ಎಲ್ಲರ ಮೇಲೂ ಬಿದ್ದಿರುವ ಕರ್ತವ್ಯವಾಗಿದೆ. ದೇವರನ್ನು ಅನುಸರಿಸುವ ಪ್ರತಿಯೊಬ್ಬರೂ ಮಾಡಬೇಕಾದ ಮುಖ್ಯವಾದ ಕೆಲಸ. ಯಾವುದೇ ಸಮಯದಲ್ಲಿ ನಾವು ಬೋಧಿಸುವ ಸುವಾರ್ತೆ ಅವರ ಜೀವನವನ್ನು ನಿರ್ಮಿಸಬಹುದು. ದೇವರು ನಮಗೆ ನೀಡಿದ ಪ್ರತಿ ದಿನವನ್ನು ಕೊನೆಯ ಕ್ಷಣವೆಂದು ಎಣಿಸೋಣ ಮತ್ತು ನಮಗೆ ಅವಕಾಶ ಸಿಕ್ಕಾಗಲೆಲ್ಲಾ ಯೇಸುವನ್ನು ಪ್ರಕಟಿಸೋಣ. ನಮ್ಮ ಸುವಾರ್ತೆಯು ಜೀವನದ ಅಂಚಿನಲ್ಲಿರುವವರಿಗೆ ಮತ್ತು ಸಾವಿನ ಕಡೆಗೆ ಹೋಗುವ ಪ್ರತಿಯೊಬ್ಬರಿಗೂ ಹೊಸ ಆರಂಭವಾಗಿ ಮಾರ್ಪಡುತ್ತದೆ.
- Mrs. ಶಕ್ತಿ ಶಂಕರ್ ರಾಜ್
ಪ್ರಾರ್ಥನಾ ಅಂಶ:
CCC (ಚೈಲ್ಡ್ ಕೇರ್ ಚೈಲ್ಡ್) ಯೋಜನೆಯಲ್ಲಿ ಭಾಗಿಯಾಗಿರುವ ಮಕ್ಕಳ ಆಶೀರ್ವಾದಕ್ಕಾಗಿ ಪ್ರಾರ್ಥಿಸಿರಿ.
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- info@vmm.org.in
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482