Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 06.06.2024
Share:

By Village Missionary Movement

Thursday, 06-Jun-2024

ಧೈನಂದಿನ ಧ್ಯಾನ(Kannada) – 06.06.2024

 

ಧೂಳಿನಿಂದ ಉನ್ನತಿಗೆ!!

 

"ಆತನು ದೀನನನ್ನು ಧೂಳಿಯಿಂದ ಎತ್ತಿ ದರಿದ್ರನನ್ನು ತಿಪ್ಪೆಯಿಂದ ಎಬ್ಬಿಸಿ ಪ್ರಭುಗಳೊಂದಿಗೆ ಕುಳ್ಳಿರಿಸಿ ಅವನಿಗೆ ಮಹಿಮಾಸನವನ್ನು ಬಾಧ್ಯತೆಯಾಗಿ ಅನುಗ್ರಹಿಸುವವನಾಗಿದ್ದಾನೆ . . ." - 1 ಸಮುವೇಲ 2:8

  

ಸಚಿನ್ ತನ್ವಾರ್ ರಾಜಸ್ಥಾನ ರಾಜ್ಯದ ಒಂದು ಸಣ್ಣ ಹಳ್ಳಿಯಲ್ಲಿ ಬಡ ಕೃಷಿ ಕುಟುಂಬದ ಕೊನೆಯ ಮಗನಾಗಿ ಜನಿಸಿದರು. ಬಾಲ್ಯದಲ್ಲಿ ಇವರಿಗೆ ಕಬಡ್ಡಿ ಕ್ರೀಡೆಯೊಂದಿಗೆ ಯಾವುದೇ ಸಂಬಂಧವಿರಲಿಲ್ಲ. ಆದರೆ ಅವರು ಚೆನ್ನಾಗಿ ಪಲ್ಟಿ ಹೊಡೆಯುತ್ತಾರೆ ಮತ್ತು ಚುರು-ಚುರುಕಾಗಿ ಇರುತ್ತಾರೆ. ಹೀಗಿರುವಾಗ ಒಮ್ಮೆ ಅವರ ಅಣ್ಣ ಗಾಯಗೊಂಡದ್ದರಿಂದ ಕಬಡ್ಡಿ ಪಂದ್ಯದಲ್ಲಿ ಆಡಲು ಇವರನ್ನು ಆಹ್ವಾನಿಸಿದರು. ಇವರೂ ಸಹ ಆಡತೊಡಗಿ ಗೆದ್ದರು. ಆ ದಿನದಲ್ಲಿನ ಅವರ ಗೆಲುವು ಅವರನ್ನು ಮುಂದಿನ ಪಂದ್ಯಾವಳಿಗೆ ಕರೆದೊಯ್ಯಿತು. ನಂತರದ ದಿನಗಳಲ್ಲಿ ಭಾರತ ತಂಡದಲ್ಲಿಯೂ ಆಡಲು ಆರಂಭಿಸಿ ಪ್ರಸ್ತುತ ಅತಿ ಹೆಚ್ಚು ಅಂಕ ಗಳಿಸಿದ ಕಬಡ್ಡಿ ಆಟಗಾರರ ಪಟ್ಟಿಯಲ್ಲಿದ್ದಾರೆ. ಎಂತಹ ಒಂದು ಗೌರವ!

  

ಸತ್ಯವೇದದಲ್ಲಿ 1 ಸಮುವೇಲ 17 ನೇ ಅಧ್ಯಾಯದಲ್ಲಿ, ಗೊಲ್ಯಾತನೆಂಬ ಒಬ್ಬ ಯೋಧನು ಇಸ್ರಾಯೇಲ್ ನ ಎಲ್ಲಾ ಸೈನ್ಯದವರನ್ನು, ದೇವರನ್ನು ಅವಮಾನಿಸುತ್ತಾನೆ. ಕುರಿ ಮೇಯಿಸುತ್ತಿದ್ದ ದಾವೀದನು ತನ್ನ ಸಹೋದರರಿಗೆ ಆಹಾರ ಕೊಡಲು ಯುದ್ಧಭೂಮಿಗೆ ಹೋಗಿದ್ದನು. ಆಗ ಅಲ್ಲಿ ನಡೆಯುವುದನ್ನೆಲ್ಲ ನೋಡಿದನು. ಆ ಗೊಲ್ಯಾತನ ಜೊತೆ ಹೋರಾಡಿ ಗೆದ್ದನು. ಅಂದಿನ ದಾವೀದನ ವಿಜಯವು ಇಂದಿಗೂ ಮಾತನಾಡಲ್ಪಡುತ್ತಿದೆ. ನಂತರದ ದಿನಗಳಲ್ಲಿ, ದಾವೀದನು ಅರಸನಾಗಿ ಅನೇಕ ಯುದ್ಧಗಳನ್ನು ಮಾಡಿ ತನ್ನ ಜನರನ್ನು ಮುನ್ನಡೆಸಿದನು.

  

ಪ್ರಿಯರೇ, ದಾವೀದನು ಒಬ್ಬ ಕುರಿ ಕಾಯುವ ಯುವಕ. ಆತನಿಗೂ ರಾಜತ್ವಕ್ಕೂ ಯಾವ ಸಂಬಂಧವೂ ಇರಲಿಲ್ಲ. ಆದರೆ ದೇವರ ಕಾರ್ಯವನ್ನು ನೋಡಿ. ದಾವೀದನನ್ನು ಧೂಳಿನಿಂದ ಎತ್ತಿ ಶ್ರೇಷ್ಟವಾದ ಸ್ಥಳದಲ್ಲಿ ಕುಳ್ಳಿರಿಸಿ ಹರ್ಷಿಸಿದರು. ಇಂದು ನಿಮ್ಮ ಜೀವನದ ಪರಿಸ್ಥಿತಿ ಧೂಳಿನಂತಾಗಿದೆಯೇ? ಮುಂದುವರೆಯಲು ಸಾಧ್ಯವಾಗುತ್ತಿಲ್ಲವೇ ಎಂದು ನೀವು ತವಕಿಸುತ್ತಿದ್ದೀರಾ? ಚಿಂತಿಸಬೇಡಿ. ಒಂದು ದಿನ ಬರುತ್ತದೆ ಯಾವ ಉನ್ನತಿಗೂ ನಿಮಗೂ ಸಂಬಂಧವೇ ಇಲ್ಲ ಎಂದು ನೀವು ಭಾವಿಸಿದಿರೋ ಅದಕ್ಕಿಂತಲೂ ಹೆಚ್ಚಾಗಿ ದೇವರು ನಿಮ್ಮನ್ನು ಮೇಲಕ್ಕೆತ್ತಲು ಸಾಧ್ಯ. ನಿಮ್ಮನ್ನು ದೇವರ ಕೈಯಲ್ಲಿ ಸಮರ್ಪಿಸಿ ಕಾದಿರಿ. ಧೂಳಿನಲ್ಲಿದ್ದ ನಿಮ್ಮನ್ನು ಹೆಚ್ಚಿಸಿ ಶ್ರೇಷ್ಟವಾಗಿಟ್ಟು ಆನಂದಿಸುವುದು ಖಚಿತ! ಹಲ್ಲೇಲೂಯಾ!!

 

ಕೆಸರಿನಿಂದ ಬಂಡೆಗೆ. . .  

ಧೂಳಿನಿಂದ ವೈಭವಕ್ಕೆ. . . 

ಧೂಳಿನಿಂದ ಉನ್ನತಿಗೆ. . . ಕಸದಿಂದ

ಗೋಪುರಕ್ಕೆ ‌. . .

ನಿಮ್ಮನ್ನು ಮೇಲೆತ್ತಲು ಅವರೊಬ್ಬರಿಂದಲೇ ಸಾಧ್ಯ.

- T. ಶಂಕರ್ ರಾಜ್ 

 

ಪ್ರಾರ್ಥನಾ ಅಂಶ:

ದೆಬೋರಾಳ್ ಪ್ರಾರ್ಥನಾ ಗುಂಪುಗಳಿಲ್ಲದ ತಾಲೂಕುಗಳಲ್ಲಿ ದೆಬೋರಾಳ್ ಪ್ರಾರ್ಥನಾ ಗುಂಪುಗಳನ್ನು ಪ್ರಾರಂಭಿಸಲು ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al meritking meritking giriş meritking güncel giriş meritking meritking giriş meritking güncel giriş betcio betcio giriş Enbet enbet giriş enbet güncel giriş perabet perabet perabet giriş deneme bonusu deneme bonusu veren siteler kingroyal kingroyal giriş kingroyal güncel giriş bahissenin bahissenin güncel giriş bahissenin giriş superbetin giriş superbetin giriş süperbetin betsat betsat betsat giriş betsat güncel giriş alobet alobet giriş meritking güncel giriş Vdcasino vaycasino vaycasino giriş vaycasino güncel giriş matbet matbet giriş matbet güncel giriş yakabet yakabet giriş yakabet güncel giriş betsmove betsmove giriş betsmove güncel giriş betsat betsat giriş betsat güncel giriş safirbet safirbet giriş safirbet güncel giriş dumanbet giriş dumanbet dumanbet güncel giriş vaycasino vaycasino giriş vaycasino güncel giriş marsbahis marsbahis giriş marsbahis güncel giriş kingroyal kingroyal giriş kingroyal güncel giriş meritking meritking giriş meritking güncel giriş meritbet meritbet giriş meritbet güncel giriş nakitbahis nakitbahis giriş nakitbahis güncel giriş dumanbet dumanbet giriş dumanbet güncel giriş Holiganbet holiganbet giriş holiganbet güncel giriş bahissenin bahissenin giriş bahissenin güncel giriş bayconticasino bayconticasino giriş bayconticasino güncel giriş imajbet imajbet giriş imajbet güncel giriş prizmabet prizmabet giriş pashagaming pashagaming giriş pashagaming güncel giriş interbahis interbahis giriş interbahis güncel giriş jojobet superbetin matbet jojobet marsbahis marsbahis güncel marsbahis güncel giriş deneme bonusu deneme bonusu veren siteler bahsegel vaycasino vaycasino giriş perabet perabet giriş holiganbet holiganbet giriş holiganbet holiganbet giriş holiganbet holiganbet giriş jojobet jojobet giriş