Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 04.06.2024
Share:

By Village Missionary Movement

Tuesday, 04-Jun-2024

ಧೈನಂದಿನ ಧ್ಯಾನ(Kannada) – 04.06.2024

 

ಅಪನಂಬಿಕೆಯನ್ನು ತೊಲಗಿಸೋಣ

 

"ಅವರು ಸೇರಲಾರದೆ ಹೋದದ್ದು ಅಪನಂಬಿಕೆಯಿಂದಲೇ ಎಂದು ತಿಳಿದುಕೊಳ್ಳುತ್ತೇವೆ" - ಇಬ್ರಿಯ 3:19 

 

ಪ್ರಪಂಚದ ಇತಿಹಾಸದಲ್ಲಿ ಮತ್ತು ಸತ್ಯವೇದದಲ್ಲಿ ನಂಬಿಕೆ ಮತ್ತು ಭರವಸೆಯೊಂದಿಗೆ ತಮ್ಮ ಜೀವನವನ್ನು ಪ್ರಾರಂಭಿಸಿ ಯಶಸ್ಸನ್ನು ಕಂಡವರು, ಕಾಲಕಳೆದಂತೆ ಅಪನಂಬಿಕೆ, ಮತ್ತು ಅವಿಶ್ವಾಸ ಎಂಬ ಕೆಸರಿನಲ್ಲಿ ಬಿದ್ದು ವಿಫಲರಾದರು.

 

ಫ್ಲಾರೆನ್ಸ್ ಗ್ಯಾಟ್ವಿಕ್ ಅನೇಕ ವಿಶ್ವ ದಾಖಲೆಗಳನ್ನು ಹೊಂದಿದ್ದ ಈಜುಗಾರ್ತಿ. ಯಾರೂ ಮುರಿಯಲು ಸಾಧ್ಯವಾಗದ ಒಂದು ಸಾಧನೆಯನ್ನು ಸೃಷ್ಟಿಸಲು ಕಠಿಣ ತರಬೇತಿ‌ ತೆಗೆದುಕೊಂಡು ಒಂದು ಪ್ರಕಟಣೆಯನ್ನು ಹೊರಬಿಟ್ಟರು. ಅದರಲ್ಲಿ ಅವರು ಹೇಳಿದ್ದು "ನಾನು ಪೆಸಿಫಿಕ್ ಮಹಾಸಾಗರದ ಕ್ಯಾಟನಿನಾ ದ್ವೀಪದಿಂದ ದಕ್ಷಿಣ ಕ್ಯಾಲಿಫೋರ್ನಿಯಾದವರೆಗೆ 34 ಕಿಲೋಮೀಟರ್ ಈಜುತ್ತಾ ಹೋಗಲಿದ್ದೇನೆ" ಎಂದು! ಈ ಪ್ರದೇಶವು ತುಂಬಾ ಅಪಾಯಕಾರಿಯಾಗಿದೆ ಸಮುದ್ರದ ಅಲೆಗಳು ಮತ್ತು ಮೀನುಗಳ ದಾಳಿಯಿಂದ ಹಾನಿ ಸಂಭವಿಸುತ್ತದೆ ಎಂದು ಎಚ್ಚರಿಸಿದರು. ಇದನ್ನು ಎದುರಿಸಲು ಸಿದ್ಧವಾದ ಆಟಗಾರರನ್ನು, ಸುಮಾರು 30 ಕಿಲೋಮೀಟರ್ ದಾಟಿದ ನಂತರ, ದಡವನ್ನು ತಲುಪಲು ಇನ್ನೂ ತುಂಬಾ ಸಮಯ ತೆಗೆದುಕೊಳ್ಳುತ್ತದೋ ಎಂಬ ಭಯ ಮತ್ತು ಅಪನಂಬಿಕೆ ಉಂಟಾಗಿ, ತನ್ನಿಂದ ಸಾಧ್ಯವಿಲ್ಲ ಎಂದು ಸನ್ನೆ ಮಾಡಿದರು. ಅವರನ್ನು ಹೆಲಿಕಾಪ್ಟರ್ ಸಹಾಯದಿಂದ ಮೇಲಕ್ಕೆ ಎಳೆದುಕೊಂಡರು. ಮೇಲಕ್ಕೆ ಹೋದ ನಂತರ ದಡವನ್ನು ನೋಡಿದರು ಬೆಚ್ಚಿಬಿದ್ದರು. ಇನ್ನು ಸ್ವಲ್ಪ ಪ್ರಯತ್ನ ಮಾಡಿದ್ದರೆ ಗೆಲುವು ಎಂದು ಗೊತ್ತಾದ ಕೂಡಲೇ ಅವರು ಹಂಬಲದಿಂದ ಅಳಲು ಪ್ರಾರಂಭಿಸಿದರು. ಇಂದು ಅನೇಕರು ನಂಬಿಕೆಯ ಓಟವನ್ನು ಕೊನೆಯವರೆಗೂ ಓಡಲು ಸಾಧ್ಯವಿಲ್ಲದೆ ಅರ್ಧದಲ್ಲೇ ಸೋತುಹೋಗುತ್ತಿದ್ದಾರೆ. ಇದಕ್ಕೆ ಹಲವು ಕಾರಣಗಳನ್ನು ಹೇಳುತ್ತಿದ್ದಾರೆ.

 

ಎಲೀಯನಂತಹ ನಂಬಿಕೆಯ ವೀರರು ಹೊರಗಿನಿಂದ ಬರುವ ಬೆದರಿಕೆಗಳನ್ನು ಎದುರಿಸಲು ಸಾಧ್ಯವಾಗದೆ ಅವರ ಓಟವನ್ನು ಕೊನೆಗೊಳಿಸಲು ಬಯಸಿದ್ದರು. ಯೋನನಂತೆ ದೇವ ಸಮ್ಮುಖ ಅಭ್ಯಾಸವುಳ್ಳವರು ಸಹ, ದಾರಿತಪ್ಪಿ ಹೋಗಿ, ಲೌಕಿಕ ಜೀವನವನ್ನು ಕೊನೆಗೊಳಿಸಲು ಬಯಸಿದ್ದರು. ಆದರೆ ಪೌಲನಂತಹ ಜನರು ಅನೇಕ ಸವಾಲುಗಳನ್ನು ಎದುರಿಸಿದರು ಮತ್ತು ತಮ್ಮ ಓಟವನ್ನು ವಿಜಯಶಾಲಿಯಾಗಿ ಓಡಿ ಮುಗಿಸಿದರು. 

  

ನಮ್ಮ ಕಾಲದಲ್ಲಿ ಬದುಕಿದ ಮಿಷನರಿಗಳು ಸಹ ಪಾಡುಗಳನ್ನು ಮೆತ್ತನೆಯ ಹತ್ತಿಯ ಹಾಸಿಗೆಯ ಹಾಗೆ ಪರಿಗಣಿಸಿ ಹಲವರನ್ನು ಶಿಷ್ಯರನ್ನಾಗಿ ಮತ್ತು ಮಿಷನರಿಗಳನ್ನಾಗಿ ರೂಪಿಸುತ್ತಿದ್ದಾರೆ. ಅವರ ಜೀವನ ಚರಿತ್ರೆಯ ಮೂಲಕ ನಾವು ಯಾತನೆಗಳನ್ನು ಸಹಿಸಿಕೊಂಡು ಅವಿಶ್ವಾಸದಿಂದ ಗೆಲುವು ಕಳೆದುಕೊಳ್ಳದಂತೆ ಇತಿಹಾಸ ನಿರ್ಮಿಸಲು ಸಾಕ್ಷಿಯಾಗಿ ಬದುಕೋಣ.  

- T. ಸೆಲ್ವರಾಜ್

 

ಪ್ರಾರ್ಥನಾ ಅಂಶ:

ಇಂದು ನಮ್ಮ ಕ್ಯಾಂಪಸ್‌ನಲ್ಲಿ ನಡೆಯುವಂತಹ ರಾತ್ರಿ ಪ್ರಾರ್ಥನೆಯಲ್ಲಿ ದೇವರು ಮಹತ್ತರವಾದ ಕಾರ್ಯಗಳನ್ನು ಮಾಡುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al meritking meritking giriş meritking güncel giriş perabet perabet perabet giriş deneme bonusu deneme bonusu veren siteler matbet matbet giriş matbet güncel giriş betsat betsat giriş betsat güncel giriş perabet perabet giriş perabet güncel giriş kingroyal kingroyal giriş kingroyal güncel giriş vaycasino vaycasino giriş vaycasino güncel giriş jojobet superbetin matbet jojobet deneme bonusu deneme bonusu veren siteler holiganbet holiganbet giriş Superbetin superbetin giriş superbetin güncel giriş süperbetin aresbet aresbet giriş perabet perabet giriş milanbahis milanbahis giriş milanbahis milanbahis giriş holiganbet holiganbet giriş holiganbet holiganbet giriş jojobet jojobet giriş alobet alobet giriş casibom casibom giriş