Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 03.06.2024
Share:

By Village Missionary Movement

Monday, 03-Jun-2024

ಧೈನಂದಿನ ಧ್ಯಾನ(Kannada) – 03.06.2024

 

ಪ್ರಾಮಾಣಿಕತೆ

 

"ಯಾಕಂದರೆ ಕರ್ತನ ದೃಷ್ಟಿಯಲ್ಲಿ ಮಾತ್ರವಲ್ಲದೆ ಮನುಷ್ಯರ ದೃಷ್ಟಿಯಲ್ಲಿಯೂ ಗೌರವವಾದದ್ದನ್ನು ಯೋಚನೆಗೆ ತಂದುಕೊಳ್ಳುವವರಾಗಿದ್ದೇವೆ." - 2 ಕೊರಿಂಥ.8:21

  

ರೇವೊಯಿಟ್ ಎಂಬವರು ಗಾಲ್ಫ್ ಆಟದಲ್ಲಿ ಬಹು ಶ್ರೇಷ್ಟವಾದ ಆಟಗಾರನಾಗಿದ್ದಾರೆ. ಇವರು ಒಮ್ಮೆ ಗಾಲ್ಫ್ ಆಟದಲ್ಲಿ ಚೆಂಡನ್ನು ಹೊಡೆಯಲು ತಯಾರಿ ನಡೆಸುತ್ತಿದ್ದಾಗ ಚೆಂಡು ಸ್ವಲ್ಪ ಚಲಿಸುವುದನ್ನು ಗಮನಿಸಿದರು. ಪಂದ್ಯದ ನಿಯಮಗಳ ಪ್ರಕಾರ, ಚೆಂಡು ಚಲಿಸಿದರೆ, ಆಟಗಾರನು ಒಂದು ಹೊಡೆತವನ್ನು (Stroke) ಬಿಟ್ಟುಕೊಡಬೇಕು. ಸ್ಪರ್ಧೆಯಲ್ಲಿ ಭಾಗವಹಿಸಿದ ಪ್ರಮುಖ ಆಟಗಾರರಲ್ಲಿ ರೇವೊಯಿಟ್ ಒಬ್ಬರು. ಸ್ಪರ್ಧಿಯ ಬಹುಮಾನದ ಮೊತ್ತ 1,08,000 ಡಾಲರ್ ಗಳಾಗಿದೆ.

 

ಡೇವಿಡ್ ಕೊಲ್ಲಾಗನ್ ಎಂಬ ವಿಮರ್ಶಕರು ಗಾಲ್ಫ್ ಆಟಗಾರರು ಪ್ರಚೋದನೆಯಿಂದ ಪಾರಾಗಲು ಏನೆಲ್ಲಾ ಮಾಡುತ್ತಾರೆ ಎಂದು ಹೇಳುವಾಗ, "ಒಂದು ವಿಷಕಾರಿ ಕಡಜ ತನ್ನನ್ನು ಕಚ್ಚಲು ಬರುವಂತೆ ಆಟಗಾರರು ತಮ್ಮ ತಲೆಯನ್ನು ಬಾಗಿಸಿ ತಮ್ಮ ಕೈಗಳನ್ನು ಆಕಡೆ ಈಕಡೆಗೆ ಆಡಿಸುತ್ತಾರೆ. ಅಥವಾ ಚೆಂಡಿನಿಂದ ಸ್ವಲ್ಪ ದೂರ ಸರಿದು, ಕಣ್ಣಿನೊಳಗೆ ಧೂಳು ಬಿದ್ದ ಹಾಗೆ ಕಣ್ಣುಗಳನ್ನು ಉಜ್ಜಿಕೊಂಡು, ಅದೇ ಸಮಯದಲ್ಲಿ ಯಾರಾದರೂ ಚೆಂಡು ಚಲಿಸುತ್ತಿರುವುದನ್ನು ಗಮನಿಸಿದರಾ? ಎಂದು ಮೆಲ್ಲಗೆ ದೃಷ್ಟಿ ಹಾಯಿಸುತ್ತಾರೆ. ಒಬ್ಬರೂ ಗಮನಿಸಲಿಲ್ಲವೆಂದರೆ ಪುನಃ ಬಂದು ಚೆಂಡನ್ನು ಹೊಡೆಯುತ್ತಾರೆ." ಆದರೆ ರೇವೊಯಿಟ್ ಹಾಗೆ ಮಾಡಲಿಲ್ಲ. ಬದಲಾಗಿ ಅವರು ತನ್ನ ಒಂದು ಸ್ಟ್ರೋಕ್ ಅನ್ನು ಬಿಟ್ಟುಕೊಟ್ಟು ಮುಂದಿನ ಚಲನೆಗೆ ತೆರಳಿದರು. ಎಲ್ಲರ ಕಣ್ಣಿಗೂ ಮೋಸ ಮಾಡಿ ಸತ್ಯಕ್ಕೆ ವ್ಯತಿರಿಕ್ತವಾಗಿ ನಡೆದುಕೊಳ್ಳುವ ಸಾಧ್ಯತೆಗಳಿದ್ದವು. ಆದರೆ ಪ್ರಾಮಾಣಿಕತೆಯನ್ನು ಅನುಸರಿಸುವ ರೇವೊಯಿಟ್ ತಪ್ಪಿಗೆ ಅವಕಾಶ ಕೊಡಲಿಲ್ಲ. ಕೀರ್ತನೆಗಳಲ್ಲಿ ಅರಸನಾದ ದಾವೀದನು ಹೇಳುವ ಸುಂದರವಾದ ಮಾತುಗಳನ್ನು ಗಮನಿಸಿ. "ನಾನು ಆತನ ದೃಷ್ಟಿಯಲ್ಲಿ ನಿರ್ದೋಷಿಯು; ಪಾಪದಲ್ಲಿ ಬೀಳದಂತೆ ಜಾಗರೂಕತೆಯಿಂದ ನಡೆದುಕೊಂಡೆನು" (ಕೀರ್ತ. 18:23) ಎನ್ನುತ್ತಾರೆ. ದೇವರು ನನ್ನನ್ನು ನೋಡುತ್ತಾರೆ ಎಂಬ ಖಚಿತತೆ ಇರುವವರಲ್ಲಿ ಮಾತ್ರವೇ ಈ "ಆಧ್ಯಾತ್ಮಿಕತೆ" ಕಾಣುತ್ತದೆ. ಪ್ರಾಮಾಣಿಕತೆಯ ಗುಣವಿಲ್ಲದವರಿಂದ ಪ್ರಾಮಾಣಿಕತೆಯನ್ನು ನಿರೀಕ್ಷಿಸುವುದು ವ್ಯರ್ಥವಾಗಿದೆ.

 

ಇಂದಿನ ಸತ್ಯವೇದ ಭಾಗದಲ್ಲಿ ನಾವು ಯೋಬನು ತನ್ನ ನೀತಿಯ ಕುರಿತು ಹೇಳುವುದನ್ನು ಓದಬಹುದು. ಯೋಬನ ಕುರಿತು ಕರ್ತನು ಸಾಕ್ಷಿ ಹೇಳುವಾಗ, "ಅವನು ದೇವರಲ್ಲಿ ಭಯಭಕ್ತಿಯುಳ್ಳವನಾಗಿ ಕೆಟ್ಟದ್ದನ್ನು ನಿರಾಕರಿಸುತ್ತಾ ನಿರ್ದೋಷಿಯೂ ಯಥಾರ್ಥಚಿತ್ತನೂ ಆಗಿದ್ದಾನೆ" ಎಂದು ಹೇಳುತ್ತಾರೆ. ಇದನ್ನು ಓದುತ್ತಿರುವ ನಮ್ಮ ಬಗ್ಗೆ ದೇವರು ಏನು ಸಾಕ್ಷಿ ಕೊಡುತ್ತಾರೆ ಎಂಬುದನ್ನು ನಮ್ಮಲ್ಲಿ ಪ್ರತಿಯೊಬ್ಬರೂ ಯೋಚಿಸಿ ನೋಡಬೇಕು. ಸಮಗ್ರತೆ ಮತ್ತು ಪ್ರಾಮಾಣಿಕತೆಯು ನನ್ನನ್ನು ಕಾಪಾಡಲಿ ಎಂದು ದಾವೀದನು ಪ್ರಾರ್ಥಿಸುತ್ತಾರೆ. ನಮ್ಮಲ್ಲಿ ಎಷ್ಟು ಮಂದಿ ಹೀಗೆ ಪ್ರಾರ್ಥಿಸಲು ಸಿದ್ಧರಿದ್ದೇವೆ? ಪ್ರಾಮಾಣಿಕತೆಯನ್ನು ಪ್ರೀತಿಸೋಣ. ಇದಕ್ಕಾಗಿ ಶ್ರಮಿಸೋಣ. ಕರ್ತನು ನಮ್ಮನ್ನು ಮುನ್ನಡೆಸುತ್ತಾರೆ .  

- P. ಜೇಕಬ್ ಶಂಕರ್

 

ಪ್ರಾರ್ಥನಾ ಅಂಶ:

VBS ಸೇವೆಗಳ ಮೂಲಕ ಭೇಟಿಯಾದ ಮಕ್ಕಳು ಕರ್ತನಲ್ಲಿ ನೆಲೆಗೊಳ್ಳುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al meritking meritking giriş meritking güncel giriş perabet perabet perabet giriş deneme bonusu deneme bonusu veren siteler matbet matbet giriş matbet güncel giriş betsat betsat giriş betsat güncel giriş perabet perabet giriş perabet güncel giriş kingroyal kingroyal giriş kingroyal güncel giriş vaycasino vaycasino giriş vaycasino güncel giriş jojobet superbetin matbet jojobet deneme bonusu deneme bonusu veren siteler holiganbet holiganbet giriş Superbetin superbetin giriş superbetin güncel giriş süperbetin aresbet aresbet giriş perabet perabet giriş milanbahis milanbahis giriş milanbahis milanbahis giriş holiganbet holiganbet giriş holiganbet holiganbet giriş jojobet jojobet giriş alobet alobet giriş casibom casibom giriş