By Village Missionary Movement
Saturday, 01-Jun-2024ಧೈನಂದಿನ ಧ್ಯಾನ(Kannada) – 01.06.2024
ಮಧ್ಯಸ್ಥಿಕೆ ವಹಿಸಿ
"…ನೀನು ಕರುಣವಿಟ್ಟು ಅವರ ಪಾಪವನ್ನು ಕ್ಷವಿುಸಬೇಕು. ಇಲ್ಲವಾದರೆ ನೀನು ಬರೆದಿರುವ [ಜೀವಿತರ] ಪಟ್ಟಿಯಿಂದ ನನ್ನ ಹೆಸರನ್ನೂ ಅಳಿಸಿಬಿಡಬೇಕೆಂದು ಕೇಳಿಕೊಳ್ಳುತ್ತೇನೆ ಎಂದು ಪ್ರಾರ್ಥಿಸಿದನು" - ವಿಮೋಚನಕಾಂಡ 32:31,32
ಭೂಮಿಯನ್ನು ಚೆನ್ನಾಗಿ ಸ್ವಚ್ಚಗೊಳಿಸಿ ನೆಟ್ಟು, ನೀರು ಹಾಯಿಸಿ, ಪಕ್ವವಾಗಿ ಮರಗಳನ್ನು ಬೆಳೆಸಿದರು ಒಬ್ಬ ಯಜಮಾನನು. ಅದನ್ನು ನೋಡಿಕೊಳ್ಳುವುದಕ್ಕಾಗಿ ಒಬ್ಬ ಸೇವಕನನ್ನು ನೇಮಿಸಿದರು. ಒಂದು ನಿರ್ದಿಷ್ಟ ಮರದಲ್ಲಿ ಹಣ್ಣುಗಳಿಗಾಗಿ ಕಾಯುತ್ತಿದ್ದರು. ಆದರೆ ಫಲವಿಲ್ಲ. ಫಲವನ್ನು ನಿರೀಕ್ಷಿಸಿದ ಯಜಮಾನನು ಎದೆಗುಂದಿದರು. ಕಾದು ಕಾದು ಫಲಕೊಡದ ಕಾರಣ ಕೋಪಗೊಂಡು ಮರವನ್ನು ಕಡಿದು ಹಾಕುವಂತೆ ಹೇಳಿಬಿಟ್ಟರು. ಆಗ ವಿನಮ್ರ ಕಂಠದಿಂದ ಈ ವರ್ಷ ಇರಲಿ. ಸುತ್ತಲೂ ಅಗೆದು ಗೊಬ್ಬರ ಹಾಕುತ್ತೇನೆ ಎಂದು ಕೆಲಸಗಾರನು ಹೇಳಿದನು.
ಯಜಮಾನನು ಕತ್ತರಿಸಲು ಹೇಳಿದ ಕೂಡಲೇ, ಸೇವಕನು ಮಧ್ಯಸ್ಥಿಕೆ ವಹಿಸಿ ಮಾತಾಡುತ್ತಾನೆ. ಈ ಭಾಗವು ನನ್ನ ಹೃದಯವನ್ನು ಮುರಿಯಿತು. ಇಂದಿಗೂ ಜನರು ವಿನಾಶದತ್ತ ಸಾಗುತ್ತಿದ್ದಾರೆ. ಅವರಿಗಾಗಿ ಮಧ್ಯಸ್ಥಿಕೆ ವಹಿಸುವವರು ಯಾರು? ಇಂದು ಅನೇಕರು ತಮಗಾಗಿ ಮತ್ತು ತಮ್ಮ ಕುಟುಂಬಕ್ಕಾಗಿ ಪ್ರಾರ್ಥಿಸುತ್ತಿದ್ದಾರೆ. ತಮ್ಮ ಜನರಿಗಾಗಿ, ದೇಶದ ಜನರಿಗಾಗಿ ಪ್ರಾರ್ಥಿಸುವವರು ಕಡಿಮೆಯಾಗಿದ್ದಾರೆ. ನೆಹೆಮಿಯಾ ತನ್ನ ಜನರ ಪರಿಸ್ಥಿತಿಯನ್ನು ಅರಿತು ಪ್ರಾರ್ಥಿಸಿದರು. ಅವರ ಮೂಲಕವಾಗಿಯೇ ಆಲಯವನ್ನು ನಿರ್ಮಿಸುವಂತೆ ದೇವರು ಮಾಡಿದರು. ಎಸ್ತೇರ್ ತನ್ನ ಜನರ ಬಿಡುಗಡೆಗಾಗಿ ಪ್ರಾರ್ಥಿಸಿದಳು. ದೇವರು ಎಸ್ತೇರಳ ಮೂಲಕವೇ ದೇಶವನ್ನು ಬಿಡಿಸಿ ಮೇಲೆತ್ತಿದರು. ಸಭೆಯವರು ಒಟ್ಟುಗೂಡಿ ಪೇತ್ರನ ಸೆರೆವಾಸ ಬದಲಾಗಲು ಪ್ರಾರ್ಥಿಸಿದರು. ಆಗಲೇ ಅವರು ಪೇತ್ರನ ಬಿಡುಗಡೆಯನ್ನು ನೋಡುವಂತೆ ಮಾಡಿದರು. ನಂಬಿಕೆಯುಳ್ಳವರಾಗಿ ನೀವು ಪ್ರಾರ್ಥನೆಯಲ್ಲಿ ಏನೇನು ಬೇಡಿಕೊಳ್ಳುತ್ತೀರೋ, ಅವುಗಳನ್ನೆಲ್ಲಾ ಹೊಂದಿಕೊಳ್ಳುತ್ತೀರಿ. ಇದು ನಮಗಾಗಿ ಪ್ರಾರ್ಥಿಸುವುದಕ್ಕೆ ಮಾತ್ರವಲ್ಲ, ಇತರರಿಗಾಗಿ ಪ್ರಾರ್ಥಿಸುವುದಕ್ಕೂ ಆಗಿದೆ. ತನ್ನ ಸೇವಕನಿಗಾಗಿ ನಂಬಿಕೆಯಿಂದ ಬಂದ ಶತಾಧಿಪತಿಯ ನಂಬಿಕೆಯನ್ನು ಹೊಗಳಿದರು. ಪಾರ್ಶ್ವವಾಯು ರೋಗಿಯನ್ನು ಕರೆತಂದ ನಾಲ್ವರ ನಂಬಿಕೆಯನ್ನು ಕಂಡು ಪಾರ್ಶ್ವವಾಯು ರೋಗಿಯನ್ನು ವಾಸಿಮಾಡಿದರು. ಹೀಗೆ ಪಾಪ ಮತ್ತು ಶಾಪದಿಂದ ಬಂಧಿತರಾದವರನ್ನು ಕರೆತರುವ ವಿಶ್ವಾಸಿಗಳ ಅಗತ್ಯವಿದೆ. ಈ ದಿನಗಳಲ್ಲಿ, ಸ್ವಾರ್ಥದಿಂದ ಪ್ರಾರ್ಥಿಸುವ ಜನರು ಹೆಚ್ಚಾಗಿಬಿಟ್ಟಿದ್ದಾರೆ.
ನೀನು ಕೇಳಿಕೊಂಡರೆ ನಾನು ಅನ್ಯಜನಗಳನ್ನೆಲ್ಲಾ ನಿನಗೆ ಅಧೀನ ಮಾಡುವೆನು; ಭೂವಿುಯ ಕಟ್ಟಕಡೆಯವರೆಗೂ ಇರುವ ಎಲ್ಲಾ ದೇಶಗಳನ್ನೂ ನಿನಗೆ ಸ್ವಾಸ್ತ್ಯವಾಗಿ ಕೊಡುವೆನು. (ಕೀರ್ತನೆ 2:8) ಎಂದು ದೇವರು ಹೇಳುತ್ತಾರೆ. ಆತನ ಮಾತನ್ನು ಕೇಳುವ ಜನರು ನಮಗೆ ಬೇಕು, ನಮ್ಮ ನಂಬಿಕೆಯೇ ಲೋಕವನ್ನು ಜಯಿಸುವಂಥಹ ಜಯ ಎಂದು ಸತ್ಯವೇದವು ಹೇಳುತ್ತಿದೆ. ವಿಶ್ವಾಸಿಗಳು ಎನ್ನುವುದಾದರೆ ಲೋಕದಲ್ಲಿರುವವರಿಗಾಗಿ ಪ್ರಾರ್ಥಿಸಲು ಮರೆಯಬೇಡಿರಿ. ದೇಶದ ಜನರನ್ನು ವಿನಾಶದಿಂದ ಬಿಡಿಸಿಕೊಂಡು ಬರುವಂತಹ, ಮಧ್ಯಸ್ಥಿಕೆ ವಹಿಸಿ ಯಜಮಾನನ ಬಳಿ ಬೇಡಿಕೊಳ್ಳುವವರು ಅವಶ್ಯ. ಆ ರೀತಿಯಾಗಿ ಪ್ರಾರ್ಥಿಸಲು ಇಂದು ನಿಮ್ಮನ್ನು ಒಪ್ಪಿಸಿಕೊಡಿ. ಹಾಗೆ ಪ್ರಾರ್ಥನಾ ಮನವಿಗಳನ್ನು ಹೇಳಿ ಪ್ರಾರ್ಥಿಸಲು ಗೊತ್ತಿಲ್ಲ ಎಂಬುದಾದರೆ ನೀವು ನಮ್ಮನ್ನು ಸಂಪರ್ಕಿಸಿ ನಾವು ಮಧ್ಯಸ್ಥಿಕೆ ವಹಿಸಿ ಪ್ರಾರ್ಥಿಸುವ ಮಿಷನರಿಗಳಿಗಾದ ಪ್ರಾರ್ಥನಾ ಮನವಿಗಳನ್ನು ದಿನವೂ ಕಳುಹಿಸಿಕೊಡುತ್ತೇವೆ. ಒಟ್ಟಿಗೆ ಸೇರಿ ಪ್ರಾರ್ಥಿಸೋಣ! ಗೆಲ್ಲೋಣ!!
- K. ಡೇವಿಡ್ ಗಣೇಶನ್
ಪ್ರಾರ್ಥನಾ ಅಂಶ:
ಈ ತಿಂಗಳು ಪೂರ್ತಿಯಾಗಿ ನಡೆಯುವಂತಹ ನಮ್ಮ ಸೇವೆಗಳಿಗಾಗಿ ಪ್ರಾರ್ಥಿಸಿರಿ.
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- info@vmm.org.in
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482