Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 31.05.2024
Share:

By Village Missionary Movement

Friday, 31-May-2024

ಧೈನಂದಿನ ಧ್ಯಾನ(Kannada) – 31.05.2024

 

ವಿರುದ್ಧ ಲಿಂಗದವರೊಂದಿಗೆ ಜಾಗರೂಕರಾಗಿರಿ

 

"ಮೋಸ ಹೋಗಬೇಡಿರಿ; ದುಸ್ಸಹವಾಸವು ಸದಾಚಾರವನ್ನು ಕೆಡಿಸುತ್ತದೆ" - 1 ಕೊರಿಂಥ 15:33

  

ರೆವರೆಂಡ್ ಬಿಲ್ಲಿ ಗ್ರಹಾಂ ರವರು, ಸೇವೆಯ ಆರಂಭದಲ್ಲಿ ಯಾವುದೇ ಕಾರಣಕ್ಕೂ ಪುರುಷರು ಮಹಿಳೆಯೊಂದಿಗೆ ಏಕಾಂತವಾಗಿ ಮಾತನಾಡಬಾರದು ಎಂಬ ನಿಯಮವನ್ನು ಹಾಕಿದ್ದರು. ಕಾರಣ ಈ ವಿಷಯದಲ್ಲಿ ಹಲವರು ತಪ್ಪಿ ಹೋಗುತ್ತಾರೆ ಎಂಬುದಕ್ಕಾಗಿಯೇ. ಆದ್ದರಿಂದ ಅವರು ಇದನ್ನು ಮುಖ್ಯ ವಿಷಯವಾಗಿ ಅನುಸರಿಸಬೇಕೆಂದು ಸೇವಕರಿಗೆ ಕಲಿಸಿದ್ದರು. ಒಂದು ದಿನ ಬಿಲ್ಲಿ ಗ್ರಹಾಂ ರವರಿಗೆ ರಾಣಿ ಎಲಿಜಬೆತ್‌ನಿಂದ ನೇರ ಫೋನ್ ಕರೆಯನ್ನು ಸ್ವೀಕರಿಸಿದರು. ಅವರು ನಿಮ್ಮೊಂದಿಗೆ ಕೆಲವು ಗಂಟೆಗಳ ಕಾಲ ಏಕಾಂತವಾಗಿ ಮಾತನಾಡಬೇಕೆಂದು ಹೇಳಿದರು. ನಿಜ ಹೇಳಬೇಕೆಂದರೆ ಆ ಮಹಾರಾಣಿಯನ್ನು ನೋಡಲು, ಮಾತನಾಡಿಸಲು ಅನೇಕರು ಕಾಯುತ್ತಿರುತ್ತಾರೆ. ಮಹಾರಾಣಿಯ ದರ್ಶನವಾಗಬೇಕಾದರೆ ಹಲವಾರು ಅರ್ಹತೆಗಳು ಕಾಣಲ್ಪಡಬೇಕು. ಆದರೆ ಅಂತಹ ಮಹಿಳೆಯಿಂದಲೇ ಕರೆ ಬರುತ್ತದೆ. ಬಿಲ್ಲಿ ಗ್ರಹಾಂ ಏನು ಹೇಳಲಿದ್ದಾರೆ ಎಂದು ಹಲವರು ನಿರೀಕ್ಷಿಸುತ್ತಿದ್ದರು. ಆದರೆ ಅವರು ಒಂದೇ ಮಾತಿನಲ್ಲಿ "No" ಎಂದು ಹೇಳಿಬಿಟ್ಟರು.  

  

ಕ್ರಿಸ್ತನಲ್ಲಿ ಪ್ರಿಯರೇ, ಅವರು "No" ಎಂದು ಏಕೆ ಹೇಳಿದರು ಎಂದು ನಾವು ಅನೇಕ ಪ್ರಶ್ನೆಗಳನ್ನು ಕೇಳಬಹುದು. ಅವರಿಗೆ ಪವಿತ್ರತೆ ಮತ್ತು ಸ್ವಯಂ ನಿಯಂತ್ರಣ ಇಲ್ಲವೇ ಎಂದು ಸಹ ಕೇಳಬಹುದು. ಆದರೆ ಅವರು ತನ್ನ ನಿರ್ಧಾರದಲ್ಲಿ ದೃಢವಾಗಿದ್ದರು. ಕಾರಣ ಎಲ್ಲಿ, ಯಾವಾಗ ಯಾರು ಯಾರ ಬಳಿ ಬಿದ್ದುಹೋಗುತ್ತಾರೆ ಎಂಬುದು ಗೊತ್ತಿಲ್ಲ. ಸೇವೆಗಿಂತ ಸೇವಕನೇ ಮುಖ್ಯ ಎಂಬುದನ್ನು ಮರೆತು ಹೋಗಬಾರದು. ಸತ್ಯವೇದದಲ್ಲಿ ನೋಡುವಾಗ, ಬಲದಲ್ಲಿ ಉತ್ತಮನಾಗಿದ್ದ ಸಂಸೋನನು, ಆತ್ಮೀಕ ಜೀವನದಲ್ಲಿ ಉತ್ತಮನಾಗಿದ್ದ ದಾವೀದನು ಮತ್ತು ಬುದ್ಧಿವಂತಿಕೆಯಲ್ಲಿ ಉತ್ತಮನಾಗಿದ್ದ ಸೊಲೊಮೋನನು ಇವರಂಥಹ ದೇವರಿಂದ ಆರಿಸಲ್ಪಟ್ಟ ಪಾತ್ರಗಳು ಸಹ ಈ ವಿಷಯದಲ್ಲಿ ತಪ್ಪಿಹೋಗಿದ್ದಾರೆ. ಯಾಕೋಬನ ಮಗಳು ದೀನಳು ಊರನ್ನು ಸುತ್ತಿ ನೋಡಿಬಿಟ್ಟು ಪಾಪದಿಂದ ಅಪವಿತ್ರಳಾದಳು. ಸಾಮಾನ್ಯವಾಗಿ, ಪುರುಷರು ಅಥವಾ ಮಹಿಳೆಯರು ವಿರುದ್ಧ ಲಿಂಗದೊಂದಿಗೆ ಇರುವ ಸಂಭಾಷಣೆ ಜ್ಞಾನವಾಗಿರಬೇಕು. ದುಸ್ಸಹವಾಸವು ಸದಾಚಾರವನ್ನು ಕೆಡಿಸುತ್ತದೆ. ಸಾಧಾರಣ ಮಾತಿನಿಂದ ಆರಂಭವಾಗುವುದೇ ಕಣ್ಣುಗಳ ಇಚ್ಚೆಯಾಗಿ, ಶರೀರದ ಇಚ್ಚೆಯಾಗಿ, ದುಷ್ಟ ಇಚ್ಚೆಯಾಗಿ ಮಾರ್ಪಡುವ ಅವಕಾಶವಿದೆ. ಜಾಗರೂಕರಾಗಿ ಇರಬೇಕಾದದ್ದು ತುಂಬಾ ತುಂಬಾ ಮುಖ್ಯ. ಹೌದು, ನಮ್ಮ ಕ್ರೈಸ್ತ ಜೀವನದಲ್ಲಿ ಯಾವುದೇ ಕಳಂಕ ಏರ್ಪಟ್ಟು, ಕ್ರಿಸ್ತನಿಗೆ ಅಪಕೀರ್ತಿ ಉಂಟು ಮಾಡದಂತೆ ಎಚ್ಚರಿಕೆಯಿಂದ ಜೀವಿಸೋಣ. ಕರ್ತನಿಗೆ ಭಯಪಡುವ ಭಯ, ದೇವರೊಂದಿಗಿನ ಸಂಬಂಧವು ಸರಿಯಾಗಿರುವುದಾದರೆ, ಲೋಕದಲ್ಲಿ ಉಂಟಾಗುವ ಇಚ್ಚೆಗಳಿಂದ ಪಾರಾಗಬಹುದು.

- Bro. ಇಸಕಿ

 

ಪ್ರಾರ್ಥನಾ ಅಂಶ:

ಒಂದು ಗಂಟೆಯ ಮಿಷನರಿಗಳು ಮತ್ತು ಅರೆಕಾಲಿಕ ಸೇವಕರು ಅನೇಕರನ್ನು ನಮ್ಮ ಸೇವಾಕ್ಷೇತ್ರಗಳಲ್ಲಿ ಎಬ್ಬಿಸಿ ಕೊಡುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al