Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 30.05.2024
Share:

By Village Missionary Movement

Thursday, 30-May-2024

ಧೈನಂದಿನ ಧ್ಯಾನ(Kannada) – 30.05.2024

 

ಪಾರಂಪರ್ಯವಾದ ಆಸ್ತಿಯನ್ನು ಬಿಟ್ಟುಹೋಗಿರಿ 

 

"…ಮನುಷ್ಯಕುಮಾರನು ಸೇವೆಮಾಡಿಸಿಕೊಳ್ಳುವದಕ್ಕೆ ಬರಲಿಲ್ಲ, ಸೇವೆಮಾಡುವದಕ್ಕೂ… ಬಂದನು ಎಂದು ಹೇಳಿದನು" - ಮತ್ತಾಯ 20:28

  

ಒಬ್ಬ ದೊಡ್ಡ ಅಧಿಕಾರಿ ಇದ್ದಕ್ಕಿದ್ದಂತೆ ನಿಧನರಾದರು. ಅವರ ಸಾವು ಅವರ ಕುಟುಂಬ ಮತ್ತು ಸಹಸೇವಕರಿಗೆ ಬಹಳ ನಷ್ಟವನ್ನುಂಟು ಮಾಡಿತು. ಅವರ ಅಂತ್ಯಕ್ರಿಯೆಯು ಸ್ನೇಹಿತರು ಮತ್ತು ಕುಟುಂಬದವರಿಂದ ತುಂಬಿತ್ತು. ಏಕೆಂದರೆ ಅವರು ತಮ್ಮ ವಿಶಿಷ್ಟ ವ್ಯಕ್ತಿತ್ವದಿಂದ ಅನೇಕ ಜನರ ಜೀವನವನ್ನು ಮುಟ್ಟಿದ್ದರು. ಜನಸಾಮಾನ್ಯರಲ್ಲಿ ಅವರ ಪ್ರೀತಿ, ಹಾಸ್ಯಕರವಾದ ಮಾತಿನ ವಿಧಾನ, ಬಡವರ ವಿಷಯದಲ್ಲಿ ತೋರಿಸುತ್ತಿದ್ದ ಆಸಕ್ತಿ ಇಂಥವುಗಳನ್ನು ಜನರಿಂದ ಮರೆಯಲು ಸಾಧ್ಯವಾಗಲಿಲ್ಲ. ಮುಲ್ಲರ್ ಎಂಬ ದೈವಿಕ ವ್ಯಕ್ತಿ ಈ ರೀತಿಯಾಗಿ ಹೇಳಿದರು, "ಒಬ್ಬ ಮನುಷ್ಯನನ್ನು ಸಮಾಧಿ ಮಾಡಬಹುದು, ಆದರೆ ಅವನ ಗುಣಲಕ್ಷಣಗಳನ್ನು ಸಮಾಧಿ ಮಾಡಲು ಸಾಧ್ಯವಿಲ್ಲ ಎಂದು. ಹೌದು, ಒಳ್ಳೆಯ ಗುಣಲಕ್ಷಣವನ್ನು ಪಾರಂಪರ್ಯವಾದ ಆಸ್ತಿಯಾಗಿ ಬಿಟ್ಟು ಹೋಗಲು ಸಾಧ್ಯ. 

  

ಸತ್ಯವೇದದಲ್ಲಿ 2 ಪೂರ್ವಕಾಲದಲ್ಲಿ 21 ನೇ ಅಧ್ಯಾಯದಲ್ಲಿ ಯೆಹೋರಾಮನೆಂಬ ಅರಸನ "ಕುಗ್ಗಿದ ಕಾಲ ಆಳ್ವಿಕೆ" ವಿವರಿಸಲಾಗಿದೆ. ತನ್ನ ಅಧಿಕಾರವನ್ನು ಉಳಿಸಿಕೊಳ್ಳಲು ತನ್ನ ಸಹೋದರರನ್ನೆಲ್ಲಾ ಕೊಂದುಹಾಕಿದರು. ಜನರನ್ನು ವಿಗ್ರಹಾರಾಧನೆಯಲ್ಲಿ ಕರೆದೊಯ್ದರು. ಪ್ರವಾದಿಯಾದ ಎಲೀಯನು ತನ್ನ ದುಷ್ಕೃತ್ಯಗಳ ಬಗ್ಗೆ ಬರೆದಿರುವ ಒಂದು ಕಾಗದ ಅವರ ಕೈಗೆ ಬಂತು. ಆದರೂ ಮಾನಸಾಂತರ ಹೊಂದದೆ, "ಅರಸನಾದ ಯೆಹೋರಾಮನು ಕಡುಬೇನೆಯಿಂದ ಸತ್ತನು" ಎಂದು ಸತ್ಯವೇದವು ಹೇಳುತ್ತಿದೆ. ತನ್ನ ಪದವಿ ಮತ್ತು ಅಧಿಕಾರವು ಪಾರಂಪರ್ಯವಾಗಿ ಮುಂದುವರೆಯುತ್ತದೆ ಎಂದು ಭಾವಿಸಿದರು. ಆದರೆ ಅರಸನಾದ ಯೆಹೋರಾಮನು ಒಬ್ಬ ದುಷ್ಟ ಮತ್ತು ಸ್ವಾರ್ಥಿ ಎಂದು ಸತ್ಯವೇದವು ಪಾರಂಪರ್ಯವಾಗಿ ನೆನಪಿಸಿಕೊಳ್ಳುತ್ತಿದೆ. 

 

ಕರ್ತನಲ್ಲಿ ಪ್ರಿಯರೇ! ಯೇಸು ಕ್ರಿಸ್ತನು ರಾಜನಾಗಿದ್ದರೂ, ಅವರು ಈ ಜಗತ್ತಿಗೆ ಬಂದದ್ದು ಸೇವೆ ಮಾಡಿಸಿಕೊಳ್ಳಲು ಅಲ್ಲ, ಸೇವೆ ಮಾಡಲು. ಅವರು ಒಳ್ಳೆಯದನ್ನು ಮಾಡುವವರಾಗಿ ತಿರುಗಾಡುತ್ತಿದ್ದಾಗ, ಅಧಿಕಾರ ಹಿಡಿದಿದ್ದವರ ದ್ವೇಷವನ್ನು ಸಂಧಿಸಿದರು. ಅವರಾದರೋ ಆಳಲು ಮತ್ತು ಅಧಿಕಾರ ಚಲಾಯಿಸಲು ಮತ್ತು ಅವರ ಹೆಸರನ್ನು ಜಗತ್ತಿಗೆ ತಿಳಿಸಲು ಬಂದಿಲ್ಲ, ಅವರು ನಮಗಾಗಿ ತಮ್ಮ ಪ್ರಾಣವನ್ನು ನೀಡಲು ಬಂದರು. ಹಾಗಾಗಿ ಇಂದಿಗೂ ಯೇಸು ಕ್ರಿಸ್ತನು ನಮಗೆ ದೊಡ್ಡ ಆಸ್ತಿ.  

 

ಪ್ರಿಯರೇ! "ನಮ್ಮ ಜೀವನ ನಮ್ಮದಲ್ಲ" ಎಂಬ ತಿಳುವಳಿಕೆಯೊಂದಿಗೆ ನಾವು ಬದುಕಿದಾಗ, ನಮ್ಮ ಬಳಿಗೆ ಬರುವ ಎಲ್ಲರನ್ನೂ ಯೇಸು ಕ್ರಿಸ್ತನಂತೆ ಅಪ್ಪಿಕೊಳ್ಳೋಣ. ಕ್ರಿಸ್ತನ ಗುಣಲಕ್ಷಣಗಳೊಂದಿಗೆ ಬದುಕೋಣ, ಹೀಗೆ ದೇವರಿಗಾಗಿ ಜೀವಿಸಿ ಪಾರಂಪರ್ಯವಾದ ಆಸ್ತಿಯನ್ನು ಬಿಟ್ಟುಹೋಗೋಣ! ಹಲ್ಲೇಲೂಯಾ!

- A. ಬ್ಯೂಲಾ

 

ಪ್ರಾರ್ಥನಾ ಅಂಶ:

ನಮ್ಮ ಕ್ಯಾಂಪಸ್ ನಲ್ಲಿ ನಡೆಯುವಂತಹ ಸ್ವಸ್ಥತಾ ಕೂಟದಲ್ಲಿ ಅನೇಕ ಅದ್ಭುತ ಸೂಚಕ ಕಾರ್ಯಗಳು ನಡೆಯುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al grandpashabet grandpashabet grandpashabet grandpashabet giriş grandpashabet grandpashabet güncel giriş grandpashabet grandpashabet güncel grandpashabet grandpashabet giriş grandpashabet giriş grandpashabet grandpashabet grandpashabet grandpashabet holiganbet giriş holiganbet güncel giriş holiganbet güncel giriş holiganbet giriş sahabet onwin casibom giriş casibom casibom giriş casibom matbet matbet giriş casibom casibom giriş amgbahis amgbahis giriş casibom casibom giriş jojobet jojobet giriş perabet perabet giriş holiganbet holiganbet giriş matbet matbet giriş superbetin superbetin giriş supertotobet supertotobet giriş superbetin superbetin giriş supertotobet supertotobet giriş imajbet imajbet giriş perabet perabet giriş coinbar coinbar giriş klasbahis klasbahis giriş ngsbahis ngsbahis giriş matbet matbet giriş mavibet mavibet giriş nakitbahis nakitbahis giriş marsbahis marsbahis giriş interbahis interbahis giriş mariobet mariobet giriş betpas betpas giriş artemisbet artemisbet giriş betsmove betsmove giriş restbet restbet giriş egebet egebet giriş https://yourfilterconnection.com/ grandpashabet jojobet jojobet giriş