Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 28.05.2024
Share:

By Village Missionary Movement

Tuesday, 28-May-2024

ಧೈನಂದಿನ ಧ್ಯಾನ(Kannada) – 28.05.2024

 

ತೆರೆದ ಕಣ್ಣುಗಳು

 

"ನಾನು ಕಣ್ಣೆತ್ತಿ ಪರ್ವತಗಳ ಕಡೆಗೆ ನೋಡುತ್ತೇನೆ" - ಕೀರ್ತನೆ 121:1

  

ಕುರುಡನೊಬ್ಬ ಜೀವನೋಪಾಯಕ್ಕಾಗಿ ಹೊಸ ಪಟ್ಟಣಕ್ಕೆ ಆಗಮಿಸಿ ಅನೇಕ ಮನೆಗಳ ಮುಂದೆ ಕಿರುಚಿದರೂ ಭಿಕ್ಷೆ ಸಿಗಲಿಲ್ಲ. ಹಸಿವಿನಿಂದ ಕಿವಿಗಳು ಮುಚ್ಚಲ್ಪಟ್ಟವು. ತನ್ನ ಕೋಲಿನಿಂದ ತಟ್ಟೆ ಮುಗ್ಗರಿಸಿ ಒಂದು ದೊಡ್ಡ ಮನೆಯಲ್ಲಿ ಹತ್ತು ಮೆಟ್ಟಿಲುಗಳಲ್ಲಿ ಹತ್ತಿ ಒಂದು ದೊಡ್ಡ ಕಂಬವನ್ನು ಮುಟ್ಟಿ, "ಇವರು ಶ್ರೀಮಂತರು ಖಂಡಿತವಾಗಿಯೂ ಆಹಾರವನ್ನು ನೀಡುತ್ತಾರೆ" ಎಂದು "ಅಮ್ಮಾ, ತಾಯಿ ದಾನ ಮಾಡಿ" ಎಂದು ಕೂಗಿದನು. ನಿಜವಾಗಿ ಅದೊಂದು ಪಾಳುಬಿದ್ದ ಬಂಗಲೆಯಾಗಿತ್ತು. ಈ ಕುರುಡ ಹಸಿವಿನಿಂದ ಕಿರುಚುತ್ತಿದ್ದುದನ್ನು ಗಮನಿಸಿದ ಸಮೀಪದಲ್ಲಿ ವಾಸಿಸುತ್ತಿದ್ದ ಮುದುಕನೊಬ್ಬ, "ಅಯ್ಯೋ ದೇವರೇ, ಈ ಯುವಕ ನನ್ನ ಮಗನಂತೆ ಕಾಣುತ್ತಾನೆ" ಎಂದು ಹೇಳಿದರು. ಆ ದಿನದಿಂದ ಪ್ರತಿದಿನ ಮಧ್ಯಾಹ್ನ ಅದೇ ದೊಡ್ಡಮನೆಗೆ ಬಂದು ಕುಳಿತು ಭಿಕ್ಷೆ ಬೇಡುತ್ತಿದ್ದನು, ಆ ಹಿರಿಯರು ಊಟ ಹಾಕುವುದು ಅಭ್ಯಾಸವಾಗಿಬಿಟ್ಟಿತು.

  

ನಂತರ ಒಂದು ದಿನ ಹಿರಿಯರು ಹುಡುಗನನ್ನು ಪಕ್ಕದ ಊರಿನಲ್ಲಿರುವ ಉಚಿತ ನೇತ್ರ ಚಿಕಿತ್ಸಾ ಶಿಬಿರಕ್ಕೆ ಸೇರಿಸಿದರು. ಚಿಕಿತ್ಸೆಯ ನಂತರ, ಅವನು ಅದ್ಭುತವಾಗಿ ತನ್ನ ದೃಷ್ಟಿಯನ್ನು ಮರಳಿ ಪಡೆದನು. ಕಣ್ಣಿನ ಕಟ್ಟು ಬಿಚ್ಚುವ ದಿನ ತನಗೆ ದೃಷ್ಟಿ ಬರುವಂತೆ ಸಹಾಯ ಮಾಡಿದ ಹಿರಿಯರನ್ನು ನೋಡಬೇಕೆನಿಸಿತು. ಆದರೆ ಅವರು ಬರಲಿಲ್ಲ. ಅವರನ್ನು ಹುಡುಕಿಕೊಂಡು ಅವರ ಊರಿಗೆ ಹೋದ. ಮನೆ ಸಿಗಲಿಲ್ಲ. ಮೊದಲಿನಂತೆ ಕಣ್ಣು ಮುಚ್ಚಿಕೊಂಡು ತಟ್ಟೆ ಎತ್ತಿಕೊಂಡು ತಟ್ಟಿ ಹತ್ತು ಮೆಟ್ಟಿಲುಗಳಿರುವ ಮನೆಯನ್ನು ಕಂಡುಹಿಡಿದು ಕಣ್ಣು ತೆರೆದು ನೋಡಿದಾಗ ಅದು ಪಾಳುಬಿದ್ದ ಬಂಗಲೆ ಎಂದು ಬೆಚ್ಚಿಬಿದ್ದನು. ತನಗೆ ಊಟ ಹಾಕುತ್ತಿದ್ದವರು ಯಾರು ಮತ್ತು ದೃಷ್ಟಿ ಬರಲು ಸಹಾಯ ಮಾಡಿದವರು ಯಾರು ಎಂದು ಕಂಡುಹಿಡಿಯಲು ಮೊದಲಿನಂತೆ ಗಟ್ಟಿಯಾಗಿ ಭಿಕ್ಷೆ ಬೇಡಿಕೊಂಡನು. ಅವನ ಧ್ವನಿಯನ್ನು ಕೇಳಿದ ಮುದುಕ ಓಡಿಬಂದು ಅವನು ದೃಷ್ಟಿ ಪಡೆದವನಾಗಿ ಬಂದಿರುವುದನ್ನು ಕಂಡು ಅಪ್ಪಿಕೊಂಡರು. "ನೀನು ಇನ್ನು ಮುಂದೆ ಭಿಕ್ಷೆ ಬೇಡಬಾರದು, ನೀನು ನನ್ನ ಮಗನಾಗಿರು" ಎಂದು ತನ್ನ ಮನೆಯಲ್ಲಿ ಅಂಗೀಕರಿಸಿದರು.

 

ಈ ಕಥೆಯಲ್ಲಿ ಬರುವಂತೆ ಇಂದಿಗೂ ನಮ್ಮಲ್ಲಿ ಅನೇಕರು ಕುರುಡ ಭಿಕ್ಷುಕರಂತೆ ಅನೇಕರನ್ನು ನಂಬಿ ಹಲವೆಡೆ ಒಳಿತನ್ನು ಅರಸಿ ಅಲೆದಾಡುತ್ತಿದ್ದರೂ, ಕರುಣೆಯುಳ್ಳ ತಂದೆ ನಮ್ಮನ್ನು ನಿರ್ಲಕ್ಷಿಸದೆ ನಮಗೆ ಬೇಕಾದ ಅನುಕೂಲಗಳನ್ನು ಕೊಡುತ್ತಿದ್ದಾರೆ. ಸತ್ಯವೇದದ ಮೂಲಕ ನಮ್ಮ ಕಣ್ಣುಗಳು ತೆರೆಯಲ್ಪಡುವಾಗ ನಾವು ನಂಬುವ ಸ್ಥಳದಿಂದ ಪ್ರಯೋಜನಗಳು ಬರುವುದಿಲ್ಲ. ದೇವರೇ ನಮ್ಮನ್ನು ಇಲ್ಲಿಯವರೆಗೆ ಪೋಷಿಸಿದ್ದಾರೆ. ಅವರೇ ನಮ್ಮ ನಿಜವಾದ ತಂದೆ ನಾವು ಇನ್ನು ಮುಂದೆ ಎಲ್ಲಿಯೂ ಅಲೆದಾಡುವ ಅಗತ್ಯವಿಲ್ಲ ಎಂಬ ತೀರ್ಮಾನವನ್ನು ನಾವು ಅರ್ಥಮಾಡಿಕೊಳ್ಳುತ್ತೇವೆ. ದೇವರೇ ಎಲ್ಲಾ ಒಳಿತುಗಳಿಗೂ ಮೂಲಕಾರಣ! ಭಿಕ್ಷುಕರಂತೆ ಅಲೆದಾಡಿದ ನಮ್ಮನ್ನು ಹಕ್ಕುದಾರರಾದ ದೇವರ ಮಕ್ಕಳನ್ನಾಗಿ ಮಾಡುತ್ತಾರೆ.

  

ಹೌದು, ನಾವು ಪ್ರತಿದಿನ ಸತ್ಯವೇದವನ್ನು ಓದಿ, ಎಲ್ಲಾ ಒಳ್ಳೆಯ ವಿಷಯಗಳ ಮೂಲವಾಗಿರುವ ಯೇಸು ಕ್ರಿಸ್ತನ ಮಕ್ಕಳಂತೆ ಬದುಕಲು ಶ್ರಮಿಸೋಣ. ಆಮೆನ್!

- Sis. ಎಲ್ಸಿ

 

ಪ್ರಾರ್ಥನಾ ಅಂಶ:

ನಮ್ಮ ಮಾಧ್ಯಮ ಸೇವೆಗಳಿಗೆ ಅಗತ್ಯವಿರುವ ಉಪಕರಣಗಳು ತೆಗೆದುಕೊಳ್ಳಲು ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al grandpashabet grandpashabet grandpashabet grandpashabet giriş grandpashabet grandpashabet güncel giriş grandpashabet grandpashabet güncel grandpashabet grandpashabet giriş grandpashabet giriş grandpashabet grandpashabet grandpashabet grandpashabet holiganbet giriş holiganbet güncel giriş holiganbet güncel giriş holiganbet giriş sahabet onwin casibom giriş casibom casibom giriş casibom matbet matbet giriş casibom casibom giriş amgbahis amgbahis giriş casibom casibom giriş jojobet jojobet giriş perabet perabet giriş holiganbet holiganbet giriş matbet matbet giriş superbetin superbetin giriş supertotobet supertotobet giriş superbetin superbetin giriş supertotobet supertotobet giriş imajbet imajbet giriş perabet perabet giriş coinbar coinbar giriş klasbahis klasbahis giriş ngsbahis ngsbahis giriş matbet matbet giriş mavibet mavibet giriş nakitbahis nakitbahis giriş marsbahis marsbahis giriş interbahis interbahis giriş mariobet mariobet giriş betpas betpas giriş artemisbet artemisbet giriş betsmove betsmove giriş restbet restbet giriş egebet egebet giriş https://yourfilterconnection.com/ grandpashabet jojobet jojobet giriş