Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 27.05.2024
Share:

By Village Missionary Movement

Monday, 27-May-2024

ಧೈನಂದಿನ ಧ್ಯಾನ(Kannada) – 27.05.2024

 

ಉತ್ತರಿಸುವಾಗ ಜಾಗರೂಕರಾಗಿರಿ

 

"ಕೇಳುವ ಕಿವಿಗೆ ಮುಟ್ಟುವ ಬುದ್ಧಿವಾದವು ಹೊನ್ನಿನ ಮುರುವಿಗೂ ಅಪರಂಜಿಯ ಆಭರಣಕ್ಕೂ ಸಮಾನ" - ಜ್ಞಾನೋಕ್ತಿ 25:12

 

ರಾಮು 25 ವರ್ಷಗಳಿಂದ ಕಚೇರಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ. ಆದ್ದರಿಂದ ಅವರು ಮತ್ತು ಅವರ ಮೇಲಧಿಕಾರಿ ಯಾವಾಗಲೂ ಒಟ್ಟಿಗೆ ಇರುತ್ತಿದ್ದರು. ಮೇಲಧಿಕಾರಿಗೆ ಹೇಗಾದರೂ ರಾಮುವನ್ನು ಉನ್ನತ ಸ್ಥಾನದಲ್ಲಿ ಕೂರಿಸುವ ಆಸೆ ಇತ್ತು. ಒಂದು ದಿನ ಮೇಲಧಿಕಾರಿ ರಾಮುಗೆ ನಾಳೆ ಬೆಳಗ್ಗೆ ನಾಲ್ಕು ಗಂಟೆಗೆ ಆಫೀಸಿಗೆ ಬರುವಂತೆ ಹೇಳಿದರು. ಸರಿ ಎಂದು ಹೇಳಿ ರಾಮು ಮನೆಗೆ ಹೋಗಿ ನಿದ್ದೆಗೆ ಜಾರಿದ. ಮರುದಿನ ಬೆಳಿಗ್ಗೆ ನಾಲ್ಕು ಗಂಟೆಯಾದರೂ ರಾಮು ಏಳಲಿಲ್ಲ. ಎಂದಿನಂತೆ ಆಫೀಸಿಗೆ ಹೋದ. ಏಕೆ ಬರಲಿಲ್ಲ ಎಂದು ಅವರ ಮೇಲಧಿಕಾರಿ ಕೇಳಿದರು. ರಾಮು ಸ್ವಲ್ಪವೂ ಯೋಚಿಸದೆ "ಮರೆತು ನಿದ್ದೆ ಮಾಡಿಬಿಟ್ಟೆ" ಎಂದರು. ಈ ಉತ್ತರ ಮೇಲಧಿಕಾರಿಗೆ ಕೋಪವನ್ನು ಕೆರಳಿಸಿತು. ಇದರಿಂದಾಗಿ ಅವರಿಗೆ ಸಲ್ಲಬೇಕಾದ ಉನ್ನತ ಹುದ್ದೆ ಸಿಗಲಿಲ್ಲ.

  

ನನಗೆ ಪ್ರಿಯವಾದವರೇ, ಒಂದೇ ಒಂದು ಉತ್ತರ ಒಬ್ಬರ ಜೀವನವನ್ನು ಬದಲಾಯಿಸಿತು. ನಾವು ಸಹ ನಮ್ಮ ಜೀವನದಲ್ಲಿ ನೀಡುವ ಪ್ರತಿಯೊಂದು ಉತ್ತರದ ಬಗ್ಗೆಯೂ ಯೋಚಿಸಿ ಸಮಯಕ್ಕೆ ತಕ್ಕ ಹಾಗೆ, ಜ್ಞಾನವಾಗಿ ಮಾತನಾಡಬೇಕು. ಸತ್ಯವೇದದಲ್ಲಿಯೂ ಸಹ, ನೆಹೆಮಿಯಾ 2:4,5 ರಲ್ಲಿ ನೆಹೆಮಿಯಾ, ರಾಜನು ಕೇಳುವ ಪ್ರಶ್ನೆಗೆ ಪ್ರಾರ್ಥಿಸಿ ಉತ್ತರಿಸುವುದನ್ನು ನೋಡುತ್ತೇವೆ. ಇದರ ನಿಮಿತ್ತವಾಗಿ ನೆಹೆಮಿಯನಿಗೆ ರಾಜನ ದೃಷ್ಟಿಯಲ್ಲಿ ದಯೆ ದೊರಕಿದ್ದನ್ನು ನೋಡುತ್ತೇವೆ. ನಾಬಾಲನು ದುಡುಕಿ ಉತ್ತರಿಸಿದ್ದರಿಂದ ತನ್ನ ಜೀವನವನ್ನೇ ಕಳೆದುಕೊಂಡನು. ಯೋಸೇಫನು ಕೂಡ ನಾನಲ್ಲ ದೇವರೇ ಶುಭಕರವಾದ ಉತ್ತರವನ್ನು ನೀಡುತ್ತಾರೆ ಎಂದು ಜ್ಞಾನವಾಗಿ ಹೇಳುತ್ತಾರೆ. ಯೇಸುಕ್ರಿಸ್ತನ ಬಳಿ ತಪ್ಪು ಹುಡುಕಲು ಎರಡು ಗುಂಪುಗಳು ಯಾವಾಗಲೂ ಸುತ್ತಿಕೊಂಡಿದ್ದವು. ಅವರ ಎಲ್ಲಾ ಗೊಂದಲಮಯ ಪ್ರಶ್ನೆಗಳಿಗೆ ಅವರು ತುಂಬಾ ಜ್ಞಾನವಾಗಿ ಮತ್ತು ಅದೇ ಸಮಯದಲ್ಲಿ ನಿಧಾನವಾಗಿ ಉತ್ತರಿಸಿದರು.

 

ಅಂತೆಯೇ, ನಮ್ಮ ಉತ್ತರವು ಸಹ ಜ್ಞಾನವಾಗಿಯೂ ಮತ್ತು ತಾಳ್ಮೆಯಾಗಿಯೂ ಇರಬೇಕು. ನಮ್ಮ ಉತ್ತರದಲ್ಲಿ ದೇವರು ಕೊಡುವ ಮಾತು ಇರಬೇಕು. ಜ್ಞಾನೋಕ್ತಿ 15:1 ರಲ್ಲಿ "ಮೃದುವಾದ ಪ್ರತ್ಯುತ್ತರವು ಸಿಟ್ಟನ್ನಾರಿಸುವದು; ಬಿರುನುಡಿಯು ಸಿಟ್ಟನ್ನೇರಿಸುವದು. ನಮ್ಮ ಉತ್ತರವು ಇತರರಿಗೆ ನೋವುಂಟು ಮಾಡುವಂಥದ್ದಾಗಿಯೂ ಅಥವಾ ಅಗೌರವ ತೋರವಂಥದ್ದಾಗಿಯೂ ಇರಬಾರದು. ಜೀವ ಮರಣಗಳು ನಾಲಿಗೆಯ ವಶದಲ್ಲಿದೆ. ಇದರ ಅರ್ಥ ಏನು? ಒಂದು ಸಮಸ್ಯೆಯಲ್ಲಿ ನಾನು ಜ್ಞಾನವಾಗಿ ಮಾತನಾಡಿದರೆ, ನನ್ನ ಪ್ರಾಣ ಉಳಿಯುತ್ತದೆ ಮತ್ತು ನಾನು ಧನ್ಯನಾಗುತ್ತೇನೆ, ಇಲ್ಲದಿದ್ದರೆ ನನ್ನ ಗುಣಕ್ಕೆ ಶಿಕ್ಷೆಯಾಗುತ್ತದೆ. ಸಿಗಬೇಕಾದ ಒಳಿತು ಸಹ ನಮ್ಮ ಕೈಬಿಟ್ಟು ಹೋಗುತ್ತದೆ. ಆದ್ದರಿಂದ ನಾವು ಯಾವಾಗಲೂ ದೇವರನ್ನು ಅವಲಂಬಿಸಿ ಯೋಚಿಸೋಣ ಮತ್ತು ಉತ್ತರಿಸೋಣ. ಆಮೆನ್.

- Mrs. ದಿವ್ಯಾ ಅಲೆಕ್ಸ್

 

ಪ್ರಾರ್ಥನಾ ಅಂಶ:

ನಮ್ಮ ಕ್ಯಾಂಪಸ್ ನಲ್ಲಿ ನಡೆಯುವ ಆಸ್ಪತ್ರೆ ಸೇವೆಗಳ ಮೂಲಕ ನಾವು ಭೇಟಿಯಾಗುವ ಪ್ರತಿಯೊಬ್ಬ ವ್ಯಕ್ತಿಯ ರಕ್ಷಣೆಗಾಗಿ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al grandpashabet grandpashabet grandpashabet grandpashabet giriş grandpashabet grandpashabet güncel giriş grandpashabet grandpashabet güncel grandpashabet grandpashabet giriş grandpashabet giriş grandpashabet grandpashabet grandpashabet grandpashabet holiganbet giriş holiganbet güncel giriş holiganbet güncel giriş holiganbet giriş sahabet onwin casibom giriş casibom casibom giriş casibom matbet matbet giriş casibom casibom giriş amgbahis amgbahis giriş casibom casibom giriş jojobet jojobet giriş perabet perabet giriş holiganbet holiganbet giriş matbet matbet giriş superbetin superbetin giriş supertotobet supertotobet giriş superbetin superbetin giriş supertotobet supertotobet giriş imajbet imajbet giriş perabet perabet giriş coinbar coinbar giriş klasbahis klasbahis giriş ngsbahis ngsbahis giriş matbet matbet giriş mavibet mavibet giriş nakitbahis nakitbahis giriş marsbahis marsbahis giriş interbahis interbahis giriş mariobet mariobet giriş betpas betpas giriş artemisbet artemisbet giriş betsmove betsmove giriş restbet restbet giriş egebet egebet giriş https://yourfilterconnection.com/ grandpashabet jojobet jojobet giriş