Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 25.05.2024
Share:

By Village Missionary Movement

Saturday, 25-May-2024

ಧೈನಂದಿನ ಧ್ಯಾನ(Kannada) – 25.05.2024

 

ಒಂದು ದೈವಿಕ ಪದವಿ

 

"ನೀನು ಸದಾಕಾಲವೂ ಮೆಲ್ಕಿಜೆದೇಕನ ತರಹದ ಯಾಜಕನು..." - ಕೀರ್ತನೆ 110:4

 

ಅಮೆರಿಕಾದ 36 ನೇ ಅಧ್ಯಕ್ಷರಾಗಿ ಲಿಂಡನ್ ಬಿ. ಜಾನ್ಸನ್ ಅವರ ಪದವಿ ಸ್ವೀಕಾರದ ಛಾಯಾಚಿತ್ರ ಬಹಳ ಪ್ರಸಿದ್ಧವಾಯಿತು. ಆ ದಿನ ಜಾನ್ ಎಫ್ ಕೆನಡಿಯನ್ನು ಒಬ್ಬರು ಗುಂಡು ಹಾರಿಸಿ ಕೊಂದುಹಾಕಿದ್ದರು. ನಂತರ ಆ ದಿನದಲ್ಲಿ ನಡೆದ ಪದವಿ ಸ್ವೀಕಾರದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಲು ಲಿಂಡನ್ ಜಾನ್ಸನ್ ಏರ್ ಫೋರ್ಸ್ ವಿಮಾನದಲ್ಲಿ ಒಂದು ಸಣ್ಣ ಕ್ಯಾಬಿನ್‌ನಲ್ಲಿ ನಿಂತಿದ್ದರು. ಅವರೊಂದಿಗೆ ಪತ್ನಿ ಲೇಡಿಬರ್ಡ್ ಮತ್ತು ಜಾಕ್ವೆಲಿನ್ ಕೆನಡಿಯೂ ನಿಂತಿದ್ದರು. ಯುಎಸ್ ಅಧ್ಯಕ್ಷರು ವಿಮಾನದಲ್ಲಿ ಮೊದಲ ಬಾರಿಗೆ ಪ್ರಮಾಣವಚನ ಸ್ವೀಕರಿಸಿದರು, ಮಹಿಳಾ ಜಿಲ್ಲಾ ನ್ಯಾಯಾಧೀಶರು ಸಮಾರಂಭವನ್ನು ನಡೆಸಿಕೊಟ್ಟದ್ದು ಮತ್ತು ಪ್ರಮಾಣ ವಚನ ಸ್ವೀಕರಿಸಲು ಕ್ಯಾಥೋಲಿಕ್ ಪ್ರಾರ್ಥನಾ ಪುಸ್ತಕವನ್ನು ಉಪಯೋಗಿಸಿದ್ದೂ ಅದೇ ಮೊದಲು ಬಾರಿ!

  

ಇಂದಿನ ಸತ್ಯವೇದ ಭಾಗದಲ್ಲಿ ಸೂಚಿಸುವಂತೆ, ಇತಿಹಾಸದಲ್ಲಿ ಇದುವರೆಗೂ ಮಾಡಿದ ಪ್ರಮಾಣ ವಚನಗಳಲ್ಲೇ ಅತ್ಯಂತ ಭಕ್ತಿಪೂರ್ವಕವಾದದ್ದು ಮತ್ತು ಒಡಂಬಡಿಕೆಯಲ್ಲಿ ಉನ್ನತವಾದದ್ದೂ ಆಗಿತ್ತು. ಕ್ರಿಸ್ತನ ಯಾಜಕತ್ವವನ್ನು ಸ್ಥಾಪಿಸುವಾಗ ಆ ಪ್ರಮಾಣವಚನ ಸ್ವೀಕರಿಸುವುದು ಎಂಬುದು ಭಕ್ತಿಯಿಂದ ಹರಕೆ ಮಾಡುವುದಾಗಿದೆ . ಕ್ರಿಸ್ತನ ಯಾಜಕತ್ವವು ಆರೋನನ ಸಂತತಿಯನ್ನು ಆಧರಿಸಿಲ್ಲ. ಮೆಲ್ಕಿಜೆದೇಕನು ದೇವರಿಂದ ನೇಮಿಸಲ್ಪಟ್ಟ ಯಾಜಕನಾಗಿಯೂ ಮತ್ತು ಅರಸನಾಗಿಯೂ ಇದ್ದಂತೆ, ಯೇಸು ಕ್ರಿಸ್ತನು ನಮ್ಮ ನಿತ್ಯ ರಾಜನಾಗಿಯೂ ಮತ್ತು ಯಾಜಕನಾಗಿಯೂ ಇದ್ದಾರೆ. 

  

ಪ್ರಿಯರೇ, ಮೃಗಗಳ ರಕ್ತವನ್ನು ಐಹಿಕ ಯಾಜಕತ್ವಕ್ಕಾಗಿ ಅರ್ಪಿಸಲಾಯಿತು. ಆದರೆ ಕ್ರಿಸ್ತನು ತನ್ನನ್ನೇ ನಮ್ಮ ಪಾಪಗಳಿಗಾಗಿ ಒಪ್ಪಿಸಿ ಕೊಟ್ಟರು. ಕುರಿಮರಿಯು ಯೇಸುವಿನ ಐಹಿಕ ಯಾಜಕತ್ವವನ್ನು ಪೂರೈಸಿತು. ಹಾಗೆಯೇ ಈ ಲೋಕದಲ್ಲಿ ಅನೇಕ ಜನರು ವಿವಿಧ ಭರವಸೆಗಳನ್ನು ನೀಡುತ್ತಾರೆ. ಆದರೆ ಎಲ್ಲಾ ವಾಗ್ದಾನಗಳು ಮತ್ತು ಭರವಸೆಗಳನ್ನು ಈಡೇರಿಸುವುದಿಲ್ಲ. ಆದರೆ ನಮ್ಮ ತಂದೆಯಾದ ದೇವರು ನಮಗೆಲ್ಲರಿಗೂ ಹೇಳಿದ್ದನ್ನು ನೆರವೇರಿಸಿದ್ದಾರೆ. ಹಾಗಾಗಿ ಆತನೇ ನಮ್ಮ ನಿತ್ಯ ರಾಜನೂ ಆಗಿದ್ದಾರೆ. ಮತ್ತೆ ಬರುತ್ತೇನೆ ಎಂದು ಹೇಳಿ ಹೋಗಿಬಿಟ್ಟ ಅವರ ಪ್ರಮಾಣ ವಚನದ ಮೇಲೆ ನಾವು ನಂಬಿಕೆಯಿಂದ ಇರೋಣ. ಬರುತ್ತೇನೆ ಎಂದು ಹೇಳಿದವರು ನಮ್ಮನ್ನು ಕರೆದುಕೊಂಡು ಹೋಗಲು ಖಂಡಿತವಾಗಿಯೂ ಬರುತ್ತಾರೆ. ಇಲ್ಲಿಯವರೆಗೆ ಅವರು ಹೇಳಿದ್ದೆಲ್ಲ ನಿಜವಾಗುತ್ತಿದೆ. ಅವರು ಬರುತ್ತಾರೆ ಭೂಮಿಯನ್ನು ನ್ಯಾಯ ತೀರಿಸಲು ನ್ಯಾಯಾಧೀಶನಾಗಿ ಬರುತ್ತಾರೆ ಎಂಬುದು ಖಂಡಿತವಾಗಿಯೂ ನೆರವೇರುತ್ತದೆ. ಅವರನ್ನು ಭೇಟಿಯಾಗಲು ನಾವು ಸಿದ್ಧರಾಗೋಣ.

- Mrs. ಕುಮಾರಿ ಸುಮಾ

 

ಪ್ರಾರ್ಥನಾ ಅಂಶ:

ನಮ್ಮ ಸೇವಕರ ಮೂಲಕ ಸೇವಾ ಕ್ಷೇತ್ರಗಳಲ್ಲಿ ನಡೆಯುವ ಸುವಾರ್ತಾ ಸೇವೆಗಳಲ್ಲಿ ದೇವರು ಉತ್ತಮವಾದ ಸುಗ್ಗಿಯನ್ನು ಆಜ್ಞಾಪಿಸುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al meritking meritking giriş meritking güncel giriş perabet perabet perabet giriş deneme bonusu deneme bonusu veren siteler matbet matbet giriş matbet güncel giriş betsat betsat giriş betsat güncel giriş perabet perabet giriş perabet güncel giriş kingroyal kingroyal giriş kingroyal güncel giriş vaycasino vaycasino giriş vaycasino güncel giriş jojobet superbetin matbet jojobet deneme bonusu deneme bonusu veren siteler holiganbet holiganbet giriş Superbetin superbetin giriş superbetin güncel giriş süperbetin aresbet aresbet giriş perabet perabet giriş milanbahis milanbahis giriş milanbahis milanbahis giriş holiganbet holiganbet giriş holiganbet holiganbet giriş jojobet jojobet giriş alobet alobet giriş casibom casibom giriş