Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 24.05.2024
Share:

By Village Missionary Movement

Friday, 24-May-2024

ಧೈನಂದಿನ ಧ್ಯಾನ(Kannada) – 24.05.2024

 

ಮದಲಿಂಗನ ಪ್ರೀತಿ

 

"ದೇವರು ಲೋಕದ ಮೇಲೆ ಎಷ್ಟೋ ಪ್ರೀತಿಯನ್ನಿಟ್ಟು ತನ್ನ ಒಬ್ಬನೇ ಮಗನನ್ನು ಕೊಟ್ಟನು; ಆತನನ್ನು ನಂಬುವ ಒಬ್ಬನಾದರೂ ನಾಶವಾಗದೆ ಎಲ್ಲರೂ ನಿತ್ಯಜೀವವನ್ನು ಪಡೆಯಬೇಕೆಂದು ಆತನನ್ನು ಕೊಟ್ಟನು" - ಯೋಹಾನ 3:16

 

ಒಂದು ಊರಿನಲ್ಲಿ ರಾಣಿ ಎಂಬ ಯುವತಿಯು ತನ್ನ ಹೆತ್ತವರೊಂದಿಗೆ ವಾಸಿಸುತ್ತಿದ್ದಳು. ರಾಣಿ ಒಬ್ಬ ಯೌವನಸ್ಥನನ್ನು ಇಷ್ಟಪಟ್ಟಳು, ಮದುಮಕ್ಕಳು ಇಬ್ಬರು ಒಬ್ಬರನ್ನೊಬ್ಬರು ತುಂಬಾ ಪ್ರೀತಿಸುತ್ತಿದ್ದರು. ಆದರೆ ಎರಡೂ ಕುಟುಂಬಗಳಲ್ಲಿ ತೀವ್ರ ವಿರೋಧವಿತ್ತು. ರಾಣಿಗೆ ತನ್ನನ್ನು ಮದುವೆಯಾಗಲಿರುವ ವ್ಯಕ್ತಿ ತನಗಾಗಿ ಎಷ್ಟು ತ್ಯಾಗ ಮಾಡಲಿದ್ದಾನೆಂದು ತಿಳಿಯಲು ಬಯಸಿದ್ದಳು. ರಾಣಿ ಅವನಿಗೆ ಕರೆ ಮಾಡಿ ನೀವು ನನ್ನನ್ನು ನಿಜವಾಗಿಯೂ ಪ್ರೀತಿಸುತ್ತಿದ್ದರೆ ಒಂದು ಕೆಲಸ ಮಾಡಬೇಕು ಎಂದು ಹೇಳಿದಳು. ನಾಳೆ ಬೆಳಿಗ್ಗೆ ನಮ್ಮ ಊರಿನ ಗಡಿಯಲ್ಲಿರುವ ಬೆಟ್ಟದ ತುದಿಗೆ ಹೋಗಿ ಒಟ್ಟಿಗೆ ಕೆಳಗೆ ಜಿಗಿಯೋಣ ಎಂದಳು. ಅವನೂ ಕೂಡ ಸರಿ ಐ ಲವ್ ಯೂ ಅಂತ ಹೇಳಿ ನನ್ನನ್ನು ನಂಬು ಎಂದೆಲ್ಲಾ ಹೇಳಿ ನೋಡಿ ಕೊನೆಗೆ ಅವಳ ಮಾತಿಗೆ ಒಪ್ಪಿದನು. ಮರುದಿನ ಬೆಳಿಗ್ಗೆ ರಾಣಿ ನಿಗದಿತ ಸಮಯಕ್ಕೆ ಹೋದಳು. ಅವನು ಅಲ್ಲಿಗೆ ಬರಲಿಲ್ಲ. ಗಂಟೆಗಟ್ಟಲೆ ಕಾಯುತ್ತಿದ್ದಳು. ಆತನ ಫೋನ್ ಕೂಡ ಸ್ವಿಚ್ ಆಫ್ ಆಗಿತ್ತು. ರಾಣಿಗೆ ಸತ್ಯದ ಅರಿವಾಯಿತು. ಅವನೊಬ್ಬ ಮೋಸಗಾರ ಎಂದು. ನಾನು ಇಷ್ಟೊಂದು ಪ್ರೀತಿಸಿದವನು ನನಗೆ ಮೋಸ ಮಾಡಿಬಿಟ್ಟನಲ್ಲಾ ಎಂದು ಅವಳು ತುಂಬಾ ಅತ್ತಳು.

 

ಆ ದಾರಿಯಲ್ಲಿ ಒಬ್ಬ ವ್ಯಕ್ತಿ ಬಂದರು. ಅವರು ಅವಳಿಗೆ ಯಾಕೆ ಅಳುತ್ತಿದ್ದೀಯ ಮಗಳೇ ಅಂದರು. ನಡೆದದ್ದನ್ನೆಲ್ಲ ಹೇಳುತ್ತಾ ಅಳುತ್ತಿದ್ದಳು. ಅವರು ಸರಿ ಮಗಳೇ, ಅಳಬೇಡ! ನನಗೆ ಒಬ್ಬರು ಗೊತ್ತು. ಅವರು ನಿನಗೆ ನೆಮ್ಮದಿಯನ್ನು ಕೊಡುತ್ತಾರೆ ಎಂದು ಹೇಳಿದರು. ಅವರು ಯಾರು ಎಂದಳು ರಾಣಿ. ನೀನು ಪ್ರೀತಿಸುವ ವ್ಯಕ್ತಿ ನಿನಗೆ ಯಾವಾಗ ಬೇಕಾದರೂ ಮೋಸ ಮಾಡಬಹುದು. ಆದರೆ ಈ ಪರಮ ಮದಲಿಂಗನು ಯಾವಾಗಲೂ ನಿನ್ನನ್ನು ಕೈಬಿಡದೆ ಅಪ್ಪಿಕೊಳ್ಳುತ್ತಾರೆ. ಅವರು ನಿನಗಾಗಿ ಸಾವಿನ ಕೂಪಕ್ಕೆ ಹಾರಿ ದೊಡ್ಡ ತ್ಯಾಗ ಮಾಡಿಬಿಟ್ಟರು. ಅವರೇ ಯೇಸು, ಅವರ ಪ್ರೀತಿ ಮಾತ್ರವೇ ಎಂದಿಗೂ ಬದಲಾಗುವುದಿಲ್ಲ ಎಂದು ಹೇಳಿದರು. ತನಗಾಗಿ ತ್ಯಾಗ ಮಾಡಿದವರು ಯಾರೆಂಬುದನ್ನು ಅರಿತುಕೊಂಡಳು. ಬರಿದಾಗಿದ್ದ ಅವಳ ಹೃದಯವನ್ನು ಯೇಸುವಿನ ಪ್ರೀತಿಯು ತುಂಬಿತು.

 

ಇಂದಿಗೂ ಮನುಷ್ಯರ ಪ್ರೀತಿ ಬದಲಾಗುವಂಥದ್ದಾಗಿದೆ. ನಾವು ಕೆಲವರನ್ನು ಅತಿಯಾಗಿ ಪ್ರೀತಿಸಿದಾಗ ಮತ್ತು ನಂಬಿದಾಗ ಕೊನೆಗೆ ಅವರ ಪ್ರೀತಿ ಮೋಸ ಮಾಡುವಂಥದ್ದಾಗಿರುವಾಗ, ಅತ್ತು ಗೋಳಾಡುತ್ತೇವೆ. ಏಕಾಂಗಿಯಾಗುತ್ತೇವೆ. ಯೇಸುಕ್ರಿಸ್ತನ ಪ್ರೀತಿಯನ್ನು ಹೊರತುಪಡಿಸಿ ಎಲ್ಲಾ ಪ್ರೀತಿ ಸೀಮಿತವಾಗಿದೆ. ಇದನ್ನು ಓದುತ್ತಿರುವ ಪ್ರಿಯರೇ, ನನ್ನ ಬಡತನದಲ್ಲಿ, ನನ್ನ ಅನಾರೋಗ್ಯದಲ್ಲಿ, ನನ್ನ ಕಷ್ಟದಲ್ಲಿ, ನಿಂದೆಯಲ್ಲಿ, ಅವಮಾನದಲ್ಲಿ ನನ್ನೊಂದಿಗೆ ಯಾರೂ ಇಲ್ಲ ಮತ್ತು ನನಗಾಗಿ ಈ ಇವುಗಳನ್ನು ಸಹಿಸಿಕೊಳ್ಳುವವರು ಯಾರೂ ಇಲ್ಲ ಎಂದು ನೀವು ಚಿಂತೆ ಮಾಡುತ್ತಿದ್ದೀರಾ? ಇವೆಲ್ಲವುಗಳ ಮಧ್ಯದಲ್ಲೂ ನಿಮ್ಭನ್ನು ಪುನರುಜ್ಜೀವನಗೊಳಿಸಿ, ಅವುಗಳಿಂದ ನಿಮ್ಮನ್ನು ರಕ್ಷಿಸಲು ತನ್ನ ಬಲಗೈಯನ್ನು ಚಾಚಿ ಎಲ್ಲವನ್ನು ಮಾಡಿ ಮುಗಿಸಿದ ಕರ್ತನು ಇದ್ದಾರೆ. ಚಿಂತಿಸಬೇಡಿ!! ಅವರ ಪ್ರೀತಿಯನ್ನು ಸವಿಯೋಣ ಮತ್ತು ಜೀವನದ ಕೊನೆಯವರೆಗೂ ಮೋಸವಿಲ್ಲದೆ ಬದುಕೋಣ.

- Mrs. ನಿತ್ಯ ನಿತ್ಯಾನಂದ

 

ಪ್ರಾರ್ಥನಾ ಅಂಶ:

ನಮ್ಮ ಉತ್ತರ ಭಾರತದ ಮಿಷನರಿ ಸೇವೆಗಳಿಗಾಗಿ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al grandpashabet grandpashabet grandpashabet grandpashabet giriş grandpashabet grandpashabet güncel giriş grandpashabet grandpashabet güncel grandpashabet grandpashabet giriş grandpashabet giriş grandpashabet grandpashabet grandpashabet grandpashabet holiganbet giriş holiganbet güncel giriş holiganbet güncel giriş holiganbet giriş sahabet onwin casibom giriş casibom casibom giriş casibom matbet matbet giriş casibom casibom giriş amgbahis amgbahis giriş casibom casibom giriş jojobet jojobet giriş perabet perabet giriş holiganbet holiganbet giriş matbet matbet giriş superbetin superbetin giriş supertotobet supertotobet giriş superbetin superbetin giriş supertotobet supertotobet giriş imajbet imajbet giriş perabet perabet giriş coinbar coinbar giriş klasbahis klasbahis giriş ngsbahis ngsbahis giriş matbet matbet giriş mavibet mavibet giriş nakitbahis nakitbahis giriş marsbahis marsbahis giriş interbahis interbahis giriş mariobet mariobet giriş betpas betpas giriş artemisbet artemisbet giriş betsmove betsmove giriş restbet restbet giriş egebet egebet giriş https://yourfilterconnection.com/ grandpashabet jojobet jojobet giriş