Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 23.05.2024
Share:

By Village Missionary Movement

Thursday, 23-May-2024

ಧೈನಂದಿನ ಧ್ಯಾನ(Kannada) – 23.05.2024

 

ಪ್ರಯಾಸಕ್ಕೆ ತಕ್ಕ ಪ್ರತಿಫಲವಿದೆ

 

"…ನೀನು ಯಾವಾತನ ರೆಕ್ಕೆಗಳ ಮರೆಯನ್ನು ಆಶ್ರಯಿಸಿಕೊಳ್ಳ ಬಂದಿಯೋ ಆ ಇಸ್ರಾಯೇಲ್‍ದೇವರಾದ ಯೆಹೋವನು ನಿನಗೆ ಉತ್ತಮವಾದ ಪ್ರತಿಫಲವನ್ನು ಅನುಗ್ರಹಿಸಲಿ ಎಂದು ಉತ್ತರಕೊಟ್ಟನು" - ರೂತಳು 2:12

 

ಒಬ್ಬ ರಾಜನು ತನ್ನ ರಥದಲ್ಲಿ ಕಾಡಿನಲ್ಲಿ ಪ್ರಯಾಣಿಸುತ್ತಿದ್ದರು. ದಾರಿಯಲ್ಲಿ ಅವನಿಗೆ ಎರಡು ಕುದುರೆಗಳು ಕಂಡವು. ಕೆಲವೇ ದಿನಗಳಲ್ಲಿ ರಾಜನ ಸೇವಕರು ಕುದುರೆಗಳನ್ನು ಅರಮನೆಗೆ ಕರೆದೊಯ್ದು ತರಬೇತಿ ನೀಡಿದರು. ತರಬೇತಿಯು ಕಷ್ಟಕರವಾಗಿದ್ದದರಿಂದ ಸಹಿಸಲಾರದೆ ಕಾಡಿಗೆ ಓಡಿಹೋದವು. ಕಾಡು ಎಂದೂ ಇಲ್ಲದಷ್ಟು ಮಟ್ಟಿಗೆ ಒಣಗಿತು. ಮಳೆಯಿಲ್ಲದೆ ಕಾಡಿನಲ್ಲಿರುವ ಹುಲ್ಲುಗಳೆಲ್ಲ ಒಣಗಿ ಹೋಯಿತು. ಆಹಾರದ ಕೊರತೆಯಿಂದಾಗಿ ಕುದುರೆಗಳು ಸಣ್ಣಗಾದವು. ಅರಮನೆಯಲ್ಲಿ ಸ್ವಲ್ಪ ಹೆಚ್ಚು ತರಬೇತಿ ಪಡೆದಿದ್ದರೆ ಒಳ್ಳೆ ಊಟ ಸಿಗುತ್ತಿತ್ತು ಎಂದುಕೊಂಡು ಪಶ್ಚಾತ್ತಾಪಪಟ್ಟಿತು.

 

ಸತ್ಯವೇದದಲ್ಲಿ ಕ್ರಿಸ್ತನಿಗಾಗಿ ತಮ್ಮನ್ನು ಪಾಡುಪಡಲು ಒಪ್ಪಿಸಿಕೊಟ್ಟವರ ಅಂತ್ಯವು ಆಶೀರ್ವಾದವಾಗಿಯೂ ಮತ್ತು ಅದ್ಭುತವಾಗಿಯೂ ಇದ್ದದ್ದನ್ನು ನೋಡಬಹುದು. ಶದ್ರಕ್, ಮೇಶಕ್ ಮತ್ತು ಅಬೇದ್ನೆಗೋ ಜ್ಞಾನ, ಬುದ್ಧಿವಂತಿಕೆ ಮತ್ತು ಉತ್ತಮ ದೇಹರಚನೆಯ ಪುರುಷರು. ಅವರು ತಮ್ಮ ದೇವರನ್ನು ಮಾತ್ರ ಆರಾಧಿಸಿ ಬದುಕಲು ಉದ್ದೇಶಿಸಿದರು. ಇದಕ್ಕೆ ಬೆಂಕಿಯ ಕುಲುಮೆಯಂತಹ ಕಷ್ಟಗಳು ಬಂದವು. ಆದರೂ ಅವರು ದೇವರಿಗಾಗಿ ವೈರಾಗ್ಯವಾಗಿ ನಿಂತರು. ಬಿಡಿಸಲು ಶಕ್ತನು, ಬಿಡಿಸದೆ ಹೋದರೂ ಪರವಾಗಿಲ್ಲ ಎಂದು ಧೈರ್ಯವಾಗಿ ನಿಂತರು. ಅದರ ಪರಿಣಾಮವಾಗಿ, ರಾಜನಿಂದ ಹಿಡಿದು ಆ ರಾಜ್ಯದಲ್ಲಿದ್ದ ಜನರೆಲ್ಲರೂ ದೇವರನ್ನು ತಿಳಿದುಕೊಂಡರು.ಅವರು ಉರಿಯುವ ಕುಲುಮೆಗೆ ಹೆದರಿ ಹಿಂತಿರುಗಿದ್ದರೆ, ಆ ರಾಜ್ಯವು ದೇವರನ್ನು ತಿಳಿಯುತ್ತಿರಲಿಲ್ಲ. ಉಪದ್ರವ ಮತ್ತು ಶೋಧನೆಗಳಿಂದ ಹಿಂದೆ ಸರಿಯದ ಜನರು ಇಂದು ಅವಶ್ಯ. ಯೇಸುಕ್ರಿಸ್ತನು "ಲೋಕದಲ್ಲಿ ನಿಮಗೆ ಸಂಕಟವುಂಟು. ಆದರೂ ಧೈರ್ಯದಿಂದಿರಿ, ನಾನು ಲೋಕವನ್ನು ಜಯಿಸಿದ್ದೇನೆ." ಎನ್ನುತ್ತಾರೆ. ಲೋಕವನ್ನು ಜಯಿಸಿದ ಕ್ರಿಸ್ತನು ಜಯಿಸುವ ಶಕ್ತಿಯನ್ನು ತಮ್ಮ ಮಕ್ಕಳಾದ ನಮ್ಮೊಳಗೆ ಇಟ್ಟಿದ್ದಾರೆ. ಆದುದರಿಂದ ಅವುಗಳನ್ನು ಜಯಿಸಲು ನಮ್ಮಿಂದಲೂ ಸಾಧ್ಯ ಎಂದು ಧೈರ್ಯಪಡಿಸುತ್ತಿದ್ದಾರೆ .

  

ಇದನ್ನು ಓದುತ್ತಿರುವ ದೇವರ ಮಕ್ಕಳೇ, ಐಹಿಕ ಜೀವನದಲ್ಲಿ ಕ್ರಿಸ್ತನಿಗಾಗಿ ಎಲ್ಲವನ್ನೂ ಸಹಿಸಿಕೊಳ್ಳಲು ಮತ್ತು ಪಾಡುಪಡಲು ಸಿದ್ಧರಾಗಿರುವವರು ನಕ್ಷತ್ರಗಳಂತೆ ಹೊಳೆಯುತ್ತಿದ್ದಾರೆ. ಅನೇಕ ಮಿಷನರಿಗಳು ಕ್ರಿಸ್ತನಿಗಾಗಿ ಉಪದ್ರವದಲ್ಲಿಯೂ ಸಹ ದೃಢವಾಗಿ ನಿಂತದ್ದರಿಂದ ನಮಗೆ ಸುವಾರ್ತೆ ಸಾರಲ್ಪಟ್ಟಿತು. ಹೌದು, ಪ್ರಯಾಸಕ್ಕೆ ತಕ್ಕ ಪ್ರತಿಫಲ ಇಹಲೋಕ ಮತ್ತು ಪರಲೋಕದಲ್ಲಿಯೂ ಉಂಟು. ಆದ್ದರಿಂದ ನಾವು ಕ್ರಿಸ್ತನ ನಿಮಿತ್ತ ಎಲ್ಲವನ್ನೂ ಸಹಿಸಿಕೊಂಡು, ಆತನ ರಾಜ್ಯಕ್ಕಾಗಿ ಪ್ರಯಾಸಪಡೋಣ, ಪ್ರತಿಫಲವನ್ನು ಪಡೆಯೋಣ.

- Sis. ಎಸ್ತೇರ್ ಸೆಲ್ವಿ

 

ಪ್ರಾರ್ಥನಾ ಅಂಶ:

ನಮ್ಮ ಮೋಕ್ಷ ಪ್ರಯಾಣ ಮಾಸ ಪತ್ರಿಕೆಯನ್ನು ಓದುವ ಪ್ರತಿಯೊಬ್ಬರೂ ಆಧ್ಯಾತ್ಮಿಕ ಜೀವನದಲ್ಲಿ ಆಶೀರ್ವದಿಸಲ್ಪಡುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al meritking meritking giriş meritking güncel giriş perabet perabet perabet giriş deneme bonusu deneme bonusu veren siteler matbet matbet giriş matbet güncel giriş betsat betsat giriş betsat güncel giriş perabet perabet giriş perabet güncel giriş kingroyal kingroyal giriş kingroyal güncel giriş vaycasino vaycasino giriş vaycasino güncel giriş jojobet superbetin matbet jojobet deneme bonusu deneme bonusu veren siteler holiganbet holiganbet giriş Superbetin superbetin giriş superbetin güncel giriş süperbetin aresbet aresbet giriş perabet perabet giriş milanbahis milanbahis giriş milanbahis milanbahis giriş holiganbet holiganbet giriş holiganbet holiganbet giriş jojobet jojobet giriş alobet alobet giriş casibom casibom giriş