Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 22.05.2024
Share:

By Village Missionary Movement

Wednesday, 22-May-2024

ಧೈನಂದಿನ ಧ್ಯಾನ(Kannada) – 22.05.2024

 

ಎಚ್ಚರವಾಗಿರಿ

 

"…ನೀನು ಕರ್ತನಿಂದ ಹೊಂದಿರುವ ಸೇವೆಯನ್ನು ನೆರವೇರಿಸುವದಕ್ಕೆ ಎಚ್ಚರವಾಗಿರಬೇಕೆಂದು ಹೇಳಿರಿ." - ಕೊಲೊಸ್ಸೆ 4:17

 

ದೇವರು ತನ್ನ ಪ್ರತಿಯೊಂದು ಮಕ್ಕಳಿಗೆ ಸೇವೆಯನ್ನು ಇಟ್ಟಿದ್ದಾರೆ. ಈ ಧ್ಯಾನವನ್ನು ಓದುವವರಲ್ಲಿ ಕೆಲವರು ಯಾವ ಸೇವೆ ಮಾಡೋಣ ಎಂಬ ಪ್ರಶ್ನೆಯೊಂದಿಗೆ ಇರಬಹುದು. ಕರ್ತನ ಬಳಿ ಕೇಳಿ, ದೇವರು ನಿಮಗೆ ಮಾರ್ಗದರ್ಶನ ನೀಡುತ್ತಾರೆ. ಸಂದರ್ಭಗಳು, ಆಂತರಿಕ ಭಾವನೆಗಳು, ದೇವರವಾಕ್ಯಗಳು ಮತ್ತು ಸೇವಕರ ಮೂಲಕ ಮಾತನಾಡುತ್ತಾರೆ. ಯಾವುದಾದರೊಂದು ಸೇವೆ ನಿಮ್ಮನ್ನು ಹುಡುಕಿಕೊಂಡು ಬರುವಂತೆ ಮಾಡುತ್ತಾರೆ. ಪ್ರಾರ್ಥನಾ ಸೇವೆಯನ್ನು ಎಲ್ಲರೂ ಎಲ್ಲಿಯಾದರೂ ಯಾವ ದಿನದಲ್ಲಾದರೂ ಮಾಡಬಹುದು. ಈ ದೈನಂದಿನ ಧ್ಯಾನದಲ್ಲಿ ಪ್ರತಿದಿನವೂ ಕೊಡಲ್ಪಡುವ ಪ್ರಾರ್ಥನಾ ಅಂಶಗಳಿಗಾಗಿ ತಪ್ಪದೇ ಪ್ರಾರ್ಥಿಸಲು ನಿಮ್ಮನ್ನು ಒಪ್ಪಿಸಿಕೊಡುತ್ತೀರಾ? ಕರ್ತನು ನಮಗೆ ಕೊಟ್ಟಿರುವ ಸೇವೆಯನ್ನು ತ್ಯಾಗದೊಂದಿಗೆ ನಿಷ್ಠೆಯಿಂದ ಪೂರೈಸಲು ನಾವು ಎಚ್ಚರಿಕೆ ವಹಿಸಬೇಕು.

 

ದಮಸ್ಕದ ಬೀದಿಯಲ್ಲಿ ತನ್ನನ್ನು ಸಂಧಿಸಿದ ಯೇಸುವಿನ ಬಳಿ "ನಾನು ಏನು ಮಾಡಬೇಕೆಂದು ನೀವು ಬಯಸುತ್ತೀರಿ?" ಎಂದು ಸೌಲನು ಕೇಳಿದಾಗ, ಅನ್ಯಜನರಿಗೆ, ಇಸ್ರಾಯೇಲ್ಯರಿಗೆ ಮತ್ತು ರಾಜರಿಗೆ ಸುವಾರ್ತೆಯನ್ನು ಸಾರುವ ಸೇವೆಯನ್ನು ಸ್ವೀಕರಿಸಿ ಅದನ್ನು ನೆರವೇರಿಸಲು ಪೌಲನು ಬಹಳ ಎಚ್ಚರವಾಗಿದ್ದರು. ಕೊರ್ನೇಲ್ಯನ ಮನೆಯಲ್ಲಿ ನೆರವೇರಿಸಲು ದೇವರು ನೀಡಿದ ಸೇವೆಯನ್ನು ಪೂರೈಸಲು ಪೇತ್ರನು ಜಾಗರೂಕನಾಗಿದ್ದದರಿಂದ, ಅನ್ಯಜನರಲ್ಲಿ ಉಜ್ಜೀವನ ಉಂಟಾಯಿತು. ಫಿಲಿಪ್ಪನು ಪಡೆದ ಸೇವೆಯನ್ನು ಪೂರೈಸಲು ಎಚ್ಚರಿಕೆಯಿಂದಿರುವಾಗ ಐಥಿಯೋಪ್ಯದ ಮಂತ್ರಿಯು ರಕ್ಷಣೆಹೊಂದಿದರು. ಅಪೊಸ್ತಲರು ತಮ್ಮ ಸೇವೆಯಲ್ಲಿ ಎಚ್ಚರದಿಂದಿರುವಾಗ, ಹೇರಳವಾದ ಆತ್ಮಗಳು ರಕ್ಷಣೆ ಹೊಂದಿ ಸಭೆ ಪ್ರತಿದಿನವೂ ಬೆಳೆಯಿತು.

 

ಹಳೆಯ ಒಡಂಬಡಿಕೆಯಲ್ಲಿ ಓಬದ್ಯನ ಮೂಲಕ ಅರಸನಾದ ಅಹಾಬನನ್ನು ಭೇಟಿಯಾಗುವ ಅವಕಾಶವನ್ನು ಪಡೆದ ಎಲೀಯ, ಕರ್ಮೆಲಿನ ಬೆಟ್ಟದಲ್ಲಿ ಉಜ್ಜೀವನ ಉಂಟಾಗಲು ಆ ಅವಕಾಶವನ್ನು ಉಪಯೋಗಿಸಿಕೊಂಡರು. ಕರ್ತನು ಕೊಟ್ಟ ಸೇವೆಯನ್ನು ಶ್ರದ್ಧೆಯಿಂದ ಪೂರೈಸುವವರನ್ನು ಕರ್ತನು ಸುಮ್ಮನೆ ಬಿಟ್ಟು ಬಿಡುವುದಿಲ್ಲ. ಎಲೀಯನನ್ನು ಪರಾಂಬರಿಸಲು ಅಪ್ಪಣೆ ಪಡೆದ ಚಾರೆಪ್ತಾ ವಿಧವೆ ಅದನ್ನು ನೆರವೇರಿಸಿದಾಗ ಬರಗಾಲದ ಉದ್ದಕ್ಕೂ ಕರ್ತನು ಆಕೆಯನ್ನು, ಆಕೆಯ ಮಗನನ್ನು ಪೋಷಿಸಿದರು. ಆಕೆಯ ಮಗನು ಸತ್ತಾಗ ಜೀವಂತವಾಗಿ ಎಬ್ಬಿಸಿ ಆಕೆಯನ್ನು ಸಂತೋಷಪಡಿಸಿದರು.

 

ಪ್ರಿಯರೇ! ಕರ್ತನು ನೀಡಿರುವ ಸೇವೆಯನ್ನು ಪೂರೈಸಲು ಜಾಗರೂಕರಾಗಿರಿ. ಉಜ್ಜೀವನದಲ್ಲಿ, ದೇವರು ನಿಮ್ಮನ್ನು ಬಲವಾಗಿ ಬಳಸಿಕೊಳ್ಳುತ್ತಾರೆ. ನಿಮ್ಮ ಅಗತ್ಯಗಳನ್ನು ಪೂರೈಸುತ್ತಾರೆ. ಪೂರ್ಣ ಸಮಯದ ಸೇವೆ ಅಥವಾ ಅರೆಕಾಲಿಕ ಸೇವೆ ಯಾವುದಾಗಿದ್ದರೂ ಎಲ್ಲರಿಗೂ ಒಂದೇ ಕೂಲಿ ಕೊಡುವಾತನು ನಮ್ಮ ದೇವರು. ಸೇವೆ ಮಾಡಲು ನೀವು ಸಿದ್ಧರಿದ್ದೀರಾ?

- Mrs. ಗೀತಾ ರಿಚರ್ಡ್

 

ಪ್ರಾರ್ಥನಾ ಅಂಶ:

ನಮ್ಮ ಸೇವೆಯಲ್ಲಿ ಕೆಟ್ಟು ನಿಂತಿರುವ ನಾಲ್ಕು ಚಕ್ರದ ವಾಹನಗಳ ದುರಸ್ತಿಗಾಗಿ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al meritking meritking giriş meritking güncel giriş perabet perabet perabet giriş deneme bonusu deneme bonusu veren siteler matbet matbet giriş matbet güncel giriş betsat betsat giriş betsat güncel giriş perabet perabet giriş perabet güncel giriş kingroyal kingroyal giriş kingroyal güncel giriş vaycasino vaycasino giriş vaycasino güncel giriş jojobet superbetin matbet jojobet deneme bonusu deneme bonusu veren siteler holiganbet holiganbet giriş Superbetin superbetin giriş superbetin güncel giriş süperbetin aresbet aresbet giriş perabet perabet giriş milanbahis milanbahis giriş milanbahis milanbahis giriş holiganbet holiganbet giriş holiganbet holiganbet giriş jojobet jojobet giriş alobet alobet giriş casibom casibom giriş