Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 16.05.2024
Share:

By Village Missionary Movement

Thursday, 16-May-2024

ಧೈನಂದಿನ ಧ್ಯಾನ(Kannada) – 16.05.2024

 

ಹುಡುಕಿರಿ

 

 "…ಹುಡುಕಿರಿ, ನಿಮಗೆ ಸಿಕ್ಕುವದು;…" - ಮತ್ತಾಯ 7:7

 

ಈ ಜಗತ್ತಿನಲ್ಲಿ ಬದುಕುತ್ತಿರುವ ನಾವೆಲ್ಲರೂ ಒಂದಲ್ಲ ಒಂದು ರೀತಿಯಲ್ಲಿ ಏನೋ ಒಂದನ್ನು ಹುಡುಕುತ್ತಲೇ ಇದ್ದೇವೆ. ಚಿಕ್ಕಂದಿನಲ್ಲಿ ಪಾಲಕರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಸಂಸ್ಥೆಗಳನ್ನು ಹುಡುಕುತ್ತಾರೆ. ಪದವಿಯ ನಂತರ ಉದ್ಯೋಗಗಳಿಗಾಗಿ ಕಂಪನಿಗಳನ್ನು ಹುಡುಕುತ್ತೇವೆ. ಕೆಲವರು ಮುಂದಿನ ಭವಿಷ್ಯಕ್ಕಾಗಿ ಯಾವ ವೃತ್ತಿಯನ್ನು ಮಾಡಿದರೆ ಆಶೀರ್ವಾದವಾಗಿರಲು ಸಾಧ್ಯ ಎಂಬುದರ ಕುರಿತಾದ ಕಾರ್ಯಗಳನ್ನು ಹುಡುಕುತ್ತೇವೆ. ವಯಸ್ಸಾದಂತೆ ನಾವು ನಮ್ಮ ದೈಹಿಕ ಆರೋಗ್ಯಕ್ಕಾಗಿ ಅತ್ಯುತ್ತಮ ಆಸ್ಪತ್ರೆಗಳನ್ನು ಹುಡುಕುತ್ತೇವೆ. ನಾವು ಈ ಜಗತ್ತಿನಲ್ಲಿ ಬದುಕಿರುವವರೆಗೂ ನಮ್ಮ ಹುಡುಕಾಟ ಮುಂದುವರಿಯುತ್ತಲೇ ಇದೆ. ಪರ್ವತದ ಪ್ರಸಂಗದಲ್ಲಿ, ನಾವು ಏನನ್ನು ಹುಡುಕಬೇಕು? ಏನನ್ನು ಹುಡುಕುವಾಗ ಕಂಡುಕೊಳ್ಳುವಿರಿ ಎಂದು ಹೇಳುತ್ತಾರೆ ಎಂಬುದನ್ನು ಯೋಚಿಸೋಣ.

 

ದೇವರನ್ನು ಹುಡುಕಬೇಕು: (ಜ್ಞಾನೋಕ್ತಿ 8:17)

ಮೊದಲು ದೇವರನ್ನು ಹುಡುಕಬೇಕು. ಎರಡು ಮಾರ್ಗಗಳಲ್ಲಿ ನಾವು ದೇವರನ್ನು ಹುಡುಕಲು ಸಾಧ್ಯ. ಮೊದಲನೆಯದು ಪ್ರಾರ್ಥನೆ. ದಾನಿಯೇಲ 9:3 ರಲ್ಲಿ ದಾನಿಯೇಲನು ಪ್ರಾರ್ಥನೆಯಲ್ಲಿ ದೇವರನ್ನು ಹುಡುಕುತ್ತಾರೆ. ಎರಡನೆಯದು ಸತ್ಯವೇದ. ಯೆಶಾಯ 34:16 ರಲ್ಲಿ . ಯೆಹೋವನ ಶಾಸ್ತ್ರದಲ್ಲಿ ಹುಡುಕಿ ಓದಿರಿ. ನಮ್ಮ ದೇವರು ಎಂಥವರು, ಆತನ ಗುಣಗಳು ಮತ್ತು ಮಾರ್ಗಗಳನ್ನು ಕುರಿತು ಸತ್ಯವೇದದಲ್ಲಿ ಹುಡುಕುವವರಾಗಿ ನಾವು ಇರಬೇಕು.

 

ತಂದೆಯ ಚಿತ್ತವನ್ನು ಹುಡುಕಬೇಕು: (ಯೋಹಾನ 5:30)

ನಮ್ಮ ಇಷ್ಟವನ್ನು ಪೂರೈಸಿಕೊಳ್ಳಲು ನಾವು ಜೀವನದಲ್ಲಿ ಕೆಲಸಗಳನ್ನು ಮಾಡುತ್ತಿದ್ದೇವೆಯೇ? ಅಥವಾ ತಂದೆಯ ಚಿತ್ತವನ್ನು ತಿಳಿದು ಅದರಂತೆ ನಡೆದುಕೊಳ್ಳುತ್ತಿದ್ದೇವೆಯೇ ಎಂದು ಯೋಚಿಸಬೇಕು.

 

ಆತ್ಮಗಳನ್ನು ಹುಡುಕಬೇಕು: (ಲೂಕ 19:10)

ಪಾಪದ ಕಾರಣದಿಂದ ರಕ್ಷಣೆಯನ್ನು ಕಳೆದುಕೊಳ್ಳುತ್ತಿರುವ ಜನರನ್ನು ನಾವು ಹುಡುಕಿ ಹೋಗಿ ಅವರಿಗೆ ಯೇಸುವಿನ ಪ್ರೀತಿಯನ್ನು ಪ್ರಕಟಿಸಬೇಕು. ಅಂತಹ ಜನರು ನಿಮ್ಮ ಬೀದಿಗಳಲ್ಲಿ, ನೀವು ಕೆಲಸ ಮಾಡುವ ಸ್ಥಳದಲ್ಲಿ, ಓದುತ್ತಿರುವ ಕಾಲೇಜುಗಳಲ್ಲಿ ಇರಬಹುದು. ಇಂತಹ ಜನರನ್ನು ನಾವು ಹುಡುಕಿ ಹೋಗುತ್ತಿದ್ದೇವೆಯೇ?

 

ಮೇಲಿನ ವಿಷಯಗಳನ್ನು ಹುಡುಕಬೇಕು: (ಕೊಲೊಸ್ಸೆ 3:1,2) ಇತರರನ್ನು ಮೋಸಗೊಳಿಸುವುದರಿಂದಲೋ, ಸುಳ್ಳು ಹೇಳಿಯೋ ಅಥವಾ ಇತರರನ್ನು ಕೆಳಗೆಬೀಳಿಸುವುದರಿಂದಲೋ ಸಿಗುವ ಲಾಭಗಳನ್ನು ನಾವು ಹುಡುಕದೇ ಪರಲೋಕಕ್ಕೆ ನಮ್ಮನ್ನು ಕರೆದುಕೊಂಡು ಹೋಗಿ ಸೇರಿಸುವ ಉನ್ನತ ವಿಷಯಗಳನ್ನು ಹುಡುಕುವವರಾಗಿರಬೇಕು.

 

ಪ್ರಿಯರೇ! ನಾವು ಲೌಕಿಕ ಆಶೀರ್ವಾದಕ್ಕಾಗಿ ಅಥವಾ ಸ್ವಹಿತಾಸಕ್ತಿಗಳಿಗಾಗಿ ಕರ್ತನಾದ ಯೇಸು ಕ್ರಿಸ್ತನನ್ನು ಹುಡುಕುವವರಂತೆ ಬದುಕಿದರೆ, ನಮ್ಮ ಪರಿಸ್ಥಿತಿ ದಯನೀಯವಾಗಿದೆ! ನಾವು ಆತನ ಚಿತ್ತವನ್ನು ಹುಡುಕುವಾಗ ದೇವರು ನಮಗೆ ಆಶೀರ್ವಾದಗಳನ್ನು ನೀಡುತ್ತಾರೆ.

- Mrs. ಜೆಬಕಣಿ ಶೇಖರ್

 

ಪ್ರಾರ್ಥನಾ ಅಂಶ:

ನಮ್ಮ ಸೇವಕರ ಪ್ರಯಾಣಗಳಲ್ಲಿ ದೇವರ ಭದ್ರತೆ ಕಾಣಲ್ಪಡುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al meritking meritking giriş meritking güncel giriş perabet perabet perabet giriş deneme bonusu deneme bonusu veren siteler matbet matbet giriş matbet güncel giriş betsat betsat giriş betsat güncel giriş perabet perabet giriş perabet güncel giriş kingroyal kingroyal giriş kingroyal güncel giriş vaycasino vaycasino giriş vaycasino güncel giriş jojobet superbetin matbet jojobet deneme bonusu deneme bonusu veren siteler holiganbet holiganbet giriş Superbetin superbetin giriş superbetin güncel giriş süperbetin aresbet aresbet giriş perabet perabet giriş milanbahis milanbahis giriş milanbahis milanbahis giriş holiganbet holiganbet giriş holiganbet holiganbet giriş jojobet jojobet giriş alobet alobet giriş casibom casibom giriş