By Village Missionary Movement
Wednesday, 15-May-2024ಧೈನಂದಿನ ಧ್ಯಾನ(Kannada) – 15.05.2024
ಯೆರಿಕೋಗೋಡೆಯು ಕುಸಿಯುತ್ತದೆ
"ನಿಮಗೆ ಪ್ರಿಯವಾದದ್ದನ್ನು ಹಸಿದವರಿಗೆ ಒದಗಿಸಿ ಕುಗ್ಗಿದವರ ಆಶೆಯನ್ನು ನೆರವೇರಿಸಿದರೆ ಆಗ ನಿಮಗೆ ಕತ್ತಲಲ್ಲಿ ಬೆಳಕು ಉದಯಿಸುವದು, ನಿಮ್ಮ ಅಂಧಕಾರವು ಪರಿಹಾರವಾಗಿ ಮಧ್ಯಾಹ್ನವಾಗುವದು" - ಯೆಶಾಯ 58:11
ಸಾಮಾಜಿಕ ಮಾಧ್ಯಮಗಳಲ್ಲಿ ಮತ್ತು ಪುಸ್ತಕಗಳಲ್ಲಿ ನಮ್ಮ ದೇಹಕ್ಕೆ ಅಗತ್ಯವಿರುವ ಅನೇಕ ಎಚ್ಚರಿಕೆಗಳನ್ನು ನಾವು ಓದಿದಾಗ ಮತ್ತು ನೋಡಿದಾಗ, ನಾವು ಆ ವಿಷಯಗಳನ್ನು ಕಾರ್ಯಗತಗೊಳಿಸಲು ಪ್ರಯತ್ನಿಸುತ್ತೇವೆ. ಏಕೆಂದರೆ ಇದು ನಮ್ಮ ದೈಹಿಕ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಎಂದು ನಾವು ಭಾವಿಸುತ್ತೇವೆ. ಅಂತೆಯೇ, ದೇವರು ನಮಗೆ ಸತ್ಯವೇದದಲ್ಲಿ ಕೆಲವು ಎಚ್ಚರಿಕೆಯ ವಾಕ್ಯಗಳು ಮತ್ತು ವಾಗ್ದಾನಗಳನ್ನು ನೀಡಿದ್ದಾರೆ. ನಾವು ಈ ಎಚ್ಚರಿಕೆಯ ಮಾತುಗಳನ್ನು ಪಾಲಿಸಿದರೆ ಈ ಆಶೀರ್ವಾದವನ್ನು ಪಡೆದುಕೊಳ್ಳಬಹುದು. ನಾವು ಅನೇಕ ಸಂದರ್ಭಗಳಲ್ಲಿ ಸತ್ಯವೇದದಲ್ಲಿ ವಾಗ್ದಾನಗಳನ್ನು ಹುಡುಕಿ ಓದುತ್ತೇವೆ ಮತ್ತು ವಾಗ್ದಾನಗಳನ್ನು ಬಯಸುತ್ತೇವೆ. ಆದರೆ ಎಚ್ಚರಿಕೆಯ ವಾಕ್ಯಗಳನ್ನು ಬಿಟ್ಟು ಬಿಡುತ್ತೇವೆ. ಅವುಗಳಿಗೆ ವಿಧೇಯರಾಗಲು ಮನಸ್ಸಿಲ್ಲ. ವಾಗ್ದಾನಗಳು ನೆರವೇರಬೇಕಾದರೆ ದೇವರ ವಾಕ್ಯಕ್ಕೆ ವಿಧೇಯರಾಗಬೇಕು. ಅದು ತುಂಬಾ ತುಂಬಾ ಮುಖ್ಯ.
ಅನೇಕ ಬಾರಿ ನಾವು ವಾಗ್ದಾನದ ಹಾಡುಗಳನ್ನು ಹಾಡುತ್ತೇವೆ. "ಸ್ತುತಿಸಿದರೆ ದೇವರು ಆಶೀರ್ವದಿಸುತ್ತಾರೆ" ಎಂದು ಕೇಳುವಾಗ ನಾವು ಸಹ ಚೆನ್ನಾಗಿ ಸ್ತುತಿಸುತ್ತೇವೆ. ಒಳ್ಳೆಯದೇ! ಆದರೆ ಸ್ತುತಿಸುವುದರಿಂದ ಮಾತ್ರ ನಮಗೆ ಆಶೀರ್ವಾದ ಬಂದು ಬಿಡುವುದಿಲ್ಲ. ನಾವು ಸತ್ಯವೇದದಲ್ಲಿ ನೋಡುವುದಾದರೆ, ಯೆಹೋಶುವನು ಯೆರಿಕೋ ಪಟ್ಟಣದ ವಿರುದ್ಧ ಹೋರಾಡಲು ಜನರನ್ನು ಮುನ್ನಡೆಸುತ್ತಾರೆ. ಆಗ ದೇವರು ಯೆಹೋಶುವನಿಗೆ ಒಂದು ವಾಗ್ದಾನವನ್ನು ಕೊಡುತ್ತಾರೆ. ಕರ್ತನು ಯೆಹೋಶುವನಿಗೆ--ಇಗೋ, ನಾನು ಯೆರಿಕೋವನ್ನೂ ಅದರ ಅರಸನನ್ನೂ ಅದರ ಸೈನಿಕರನ್ನೂ ನಿನ್ನ ಕೈಗೆ ಒಪ್ಪಿಸಿದ್ದೇನೆ. ಆದರೆ ಈ ವಾಗ್ದಾನವನ್ನು ಸ್ವತಂತ್ರಿಸಿಕೊಳ್ಳಬೇಕಾದರೆ ದೇವರು ಕೆಲವು ನಿಬಂಧನೆಗಳನ್ನು ಹೇಳುವುದನ್ನು ನಾವು ಸತ್ಯವೇದದಲ್ಲಿ ನೋಡಬಹುದು. ಏನು ನಿಬಂಧನೆಗಳು ಎಂದರೆ, ಆರು ದಿನಗಳು ಯೆರಿಕೋವನ್ನು ಸುತ್ತಿ ಬರಬೇಕು. ಏಳನೆಯ ದಿನದಲ್ಲಿ ಏಳು ಬಾರಿ ಸುತ್ತಿ ಬರುವಾಗ, ತುತ್ತೂರಿಯ ಶಬ್ದವನ್ನು ಕೇಳಿದಾಗ ಆರ್ಭಟಿಸಬೇಕು. ಇದೇ ದೇವರು ನೇಮಿಸಿದ ನಿಬಂಧನೆ. ಎಲ್ಲಾ ದಿನಗಳೂ ಅವರು ಆರ್ಭಟಿಸಲಿಲ್ಲ. ದೇವರು ಹೇಳಿದ ಆ ದಿನದಲ್ಲಿ ಆ ಕ್ಷಣದಲ್ಲಿ ಆರ್ಭಟಿಸಿದರು.
ನಾವು ಇದರಲ್ಲಿ ಗಮನಿಸುವುದಾದರೆ, ದೇವರು ಹೇಳಿದ ಮಾತಿಗೆ ವಿಧೇಯರಾಗಿ ಸ್ತುತಿಸಿದರು. ನಿಜವೇ ಆದರೆ ಸ್ತುತಿಸಿದ್ದರಿಂದ ಮಾತ್ರವಲ್ಲ ದೇವರು ಹೇಳಿದ ಮಾತಿಗೆ ವಿಧೇಯರಾದದ್ದರಿಂದ ಮಾತ್ರವೇ ಯೆರಿಕೋ ಗೋಡೆಯು ಕುಸಿಯಿತು. ನಾವು ಇದನ್ನು ಮನಸ್ಸಿನಲ್ಲಿಟ್ಟುಕೊಂಡು ದೇವರ ಮಾತಿಗೆ ವಿಧೇಯರಾಗುವುದನ್ನು ಆರಿಸಿಕೊಂಡರೆ ವಾಗ್ದಾನಗಳನ್ನು ಸ್ವತಂತ್ರಿಸಿಕೊಳ್ಳುವುದು ಕಠಿಣವಾದದ್ದೇನಲ್ಲಾ. ಕರ್ತನು ನಮಗೆ ನೀಡಿದ ವಾಗ್ದಾನಗಳನ್ನು ಖಂಡಿತವಾಗಿಯೂ ಪೂರೈಸುವರು. ಆದ್ದರಿಂದ ದೇವರ ಮಾತುಗಳಿಗೆ ವಿಧೇಯರಾಗಿ ವಾಗ್ದಾನಗಳನ್ನು ಸ್ವತಂತ್ರಿಸಿಕೊಳ್ಳೋಣ.
- Mrs. ಉಮಾ ವಿಲಿಯಮ್ಸ್
ಪ್ರಾರ್ಥನಾ ಅಂಶ:
ನಮ್ಮ ಕ್ಯಾಂಪಸ್ ಗೆ ರಸ್ತೆಗಳು ಮತ್ತು ಸೇತುವೆಗಳನ್ನು ಹಾಕಲು ದೇವರು ಕೃಪೆ ತೋರುವಂತೆ ಪ್ರಾರ್ಥಿಸಿರಿ.
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- info@vmm.org.in
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482