Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 13.05.2024
Share:

By Village Missionary Movement

Monday, 13-May-2024

ಧೈನಂದಿನ ಧ್ಯಾನ(Kannada) – 13.05.2024

 

ನಂಬಿಕೆಯ ಫಲ

 

"ಇದಲ್ಲದೆ ನಂಬುವವರಿಂದ ಈ ಸೂಚಕಕಾರ್ಯಗಳು ಉಂಟಾಗುವವು; ನನ್ನ ಹೆಸರನ್ನು ಹೇಳಿ ದೆವ್ವಗಳನ್ನು ಬಿಡಿಸುವರು;…" - ಮಾರ್ಕನು 16:17

 

ಸ್ಮಿತ್ ವಿಗ್ಲೆಸ್‌ವರ್ತ್‌ ಎಂಬ ನಂಬಿಕೆಯ ವೀರನಿಗೆ ಒಂದು ಟೆಲಿಗ್ರಾಮ್ ಬಂತು. ಅದೇನೆಂದರೆ 200 ಮೈಲಿ ದೂರದಲ್ಲಿರುವ ಒಂದು ಮನೆಗೆ ತಕ್ಷಣ ಬರುವಂತೆ ಕರೆ ಬಂತು. ಅವರು ಅವಸರವಾಗಿ ಹೋಗಿ ನೋಡಿದರೆ 5 ಜನರು ಒಂದು ಮಹಿಳೆಯನ್ನು ಬಿಗಿಯಾಗಿ ಹಿಡಿದಿದ್ದರು. ಏಕೆಂದರೆ ಆ ಮಹಿಳೆಗೆ ದೆವ್ವ ಹಿಡಿದಿತ್ತು. ಸ್ಮಿತ್ ಹೋಗಿ ಪ್ರಾರ್ಥಿಸಿದ ಕೂಡಲೇ ಆ ದೆವ್ವವು ಹೇಳಿತು, "ನಾವು 37 ಜನ, ನಮ್ಮನ್ನು ಓಡಿಸಲು ನಿನ್ನಿಂದ ಸಾಧ್ಯವಿಲ್ಲ ಹೊರಟು ಹೋಗು" ಎಂದು. ಆದರೆ ಅವರು “ಲೋಕದಲ್ಲಿರುವವನಿಗಿಂತ ನನ್ನಲ್ಲಿರುವವರು ದೊಡ್ಡವರು” ಎಂದು ಹೇಳಿ ಅಧಿಕಾರದೊಂದಿಗೆ ಪ್ರಾರ್ಥಿಸಿದರು. ಆ ದೆವ್ವಗಳು ಹೊರಗೆ ಹೋದವು. ಆ ಮಹಿಳೆಯ ಇಡೀ ಕುಟುಂಬವು ದೇವರನ್ನು ಅಂಗೀಕರಿಸಿದರು.

 

ಯೇಸುಕ್ರಿಸ್ತನು ಈ ಭೂಮಿಯಲ್ಲಿ ಸಂಚರಿಸಿದ ದಿನಗಳಲ್ಲಿ ಮೂರ್ಛಾರೋಗದಿಂದ ಭೀಕರವಾದ ವೇದನೆಯಲ್ಲಿದ್ದ ತನ್ನ ಮಗನನ್ನು ಆ ತಂದೆ ಶಿಷ್ಯರ ಬಳಿಗೆ ಕರೆತಂದರು. ಅವರಿಂದ ಆ ಮಗನನ್ನು ಗುಣಪಡಿಸಲು ಸಾಧ್ಯವಾಗಲಿಲ್ಲ. ಆಗ ಇದನ್ನು ಯೇಸುವಿಗೆ ತಿಳಿಯಪಡಿಸಿದಾಗ, "ನಂಬಿಕೆಯಿಲ್ಲದಂಥ ಮೂರ್ಖ ಸಂತಾನವೇ" ಎಂದು ಶಿಷ್ಯರನ್ನು ಗದರಿಸಿದರು. ಸಾಸಿವೇಕಾಳಷ್ಟು ನಂಬಿಕೆ ನಿಮಗೆ ಇರುವದಾದರೆ ನೀವು ಈ ಬೆಟ್ಟಕ್ಕೆ ಇಲ್ಲಿಂದ ಅಲ್ಲಿಗೆ ಹೋಗು ಎಂದು ಹೇಳಿದರೂ ಅದು ಹೋಗುವದು ಎಂದರು. ಅದರಂತೆ ನೀವು ನಂಬಿಕೆಯುಳ್ಳವರಾಗಿ ಪ್ರಾರ್ಥನೆಯಲ್ಲಿ ಏನು ಬೇಡಿಕೊಂಡರೂ ಅದು ನೆರವೇರುತ್ತದೆ ಎಂದು ಹೇಳಿದರು. ಹೌದು, ನಂಬಿಕೆಯು ದೊಡ್ಡ ಫಲವನ್ನು ಕೊಡಬಲ್ಲದು. ನಿಮ್ಮ ಹೋರಾಟಗಳು, ಚಿಂತೆಗಳು ಸೈತಾನನ ಹೋರಾಟಗಳಲ್ಲಿ ಬಲವಂತರಾದ ಸೇವಕರನ್ನು ಹುಡುಕಿ ಹೋಗಬೇಕಿಲ್ಲ. ಅವರೊಳಗಿದ್ದು ಕ್ರಿಯೆ ಮಾಡುವ ದೇವರು ನಿಮ್ಮೊಳಗೂ ಇದ್ದಾರೆ. ನಂಬಿಕೆಯ ಪರಿಮಾಣವು ಬದಲಾಗುವುದರಿಂದಲೇ ಅವರಿಂದ ಅದ್ಭುತವು ನಡೆಯುತ್ತದೆ. ನಂಬಿಕೆಯು ಸಾಸಿವೆ ಕಾಳಿನಷ್ಟು ಚಿಕ್ಕದಾದರೂ ಬೆಟ್ಟದಷ್ಟು ದೊಡ್ಡ ಕಾರ್ಯಗಳೂ ನಡೆಯುತ್ತವೆ. 

 

ಪ್ರಿಯರೇ! ಉಪ್ಪಿನಕಾಯಿ ಹೆಚ್ಚು ಕಾಲ ಉಳಿಯಲು ಸ್ವಲ್ಪ ಹೆಚ್ಚುವರಿ ಉಪ್ಪು ಬೇಕಾಗುತ್ತದೆ. ಅಂತೆಯೇ ನೀವು ದೇವರಿಂದ ನಿರಂತರ ಸ್ವಸ್ಥತೆಯನ್ನು ಮತ್ತು ಆಶೀರ್ವಾದವನ್ನು ಪಡೆಯಲು ನಿಮಗೆ ನಂಬಿಕೆ ಬೇಕು. ಹೆಚ್ಚು ಅಲ್ಲ, ಸಾಸಿವೆ ಕಾಳಿನಂತೆ. ನಮಗೆ ಅಷ್ಟು ನಿಷ್ಠೆ ಇಲ್ಲದ ಕಾರಣ ನಾವು ಸೇವಕರ ಮೇಲೆ ಅವಲಂಬಿತರಾಗಿದ್ದೇವೆ. ಸೇವಕರನ್ನು ಕರೆದು ಪ್ರಾರ್ಥಿಸುವುದು ತಪ್ಪಲ್ಲ, ಆದರೆ ಸೇವಕರನ್ನು ಮಾತ್ರ ಅವಲಂಬಿಸುವುದು ಸರಿಯಲ್ಲ. ನಮ್ಮೊಳಗಿನ ದೇವರ ಶಕ್ತಿಯನ್ನು ನಾವು ತಿಳಿದುಕೊಂಡಾಗ ಮತ್ತು ಆತನ ಮೇಲೆ ಅವಲಂಬಿತರಾದಾಗ, ದೇವರು ನಮ್ಮ ಮೂಲಕ ಮಹತ್ತರವಾದ ಕಾರ್ಯಗಳನ್ನು ಮಾಡಲು ಸಾಧ್ಯ.

- Mrs. ಜಾಸ್ಮಿನ್ ಪಾಲ್ 

 

ಪ್ರಾರ್ಥನಾ ಅಂಶ:

ಇಂದು ನಡೆಯುವ ನಮ್ಮ ಮಿಷಿನರಿಗಳು ಗೋಪಿ-ಮರಿಯಾ ವಿವಾಹದಲ್ಲಿ ದೇವರ ಹಸ್ತವು ಜೊತೆಯಿರುವಂತೆ, ಅಗತ್ಯಗಳು ಪೂರೈಸಲ್ಪಡುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al