Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 09.05.2024
Share:

By Village Missionary Movement

Thursday, 09-May-2024

ಧೈನಂದಿನ ಧ್ಯಾನ(Kannada) – 09.05.2024

 

ಜೀವಂತವಾಗಿರುವ ದೇವರು

 

"ಸತ್ತವನಾದೆನು, ಮತ್ತು ಇಗೋ ಯುಗಯುಗಾಂತರಗಳಲ್ಲಿಯೂ ಬದುಕುವವನಾಗಿದ್ದೇನೆ;…" - ಪ್ರಕಟನೆ 1:18

 

"ಯೂದ ರಾಜ ಸಿಂಹ ಜೀವಂತವಾಗಿ ಎದ್ದರು" ಎಂಬ ಹಾಡನ್ನು ಪರವಶದೊಂದಿಗೂ, ಸಂಭ್ರಮದೊಂದಿಗೂ ಹಾಡಿ ಪುನರುತ್ಥಾನದ ಹಬ್ಬವನ್ನು ಆಚರಿಸಿ ಮುಗಿಸಿದ್ದೇವೆ. ಈಗ ಪುನರುತ್ಥಾನಗೊಂಡ ಆ ಯೇಸು ಎಲ್ಲಿದ್ದಾರೆ? ಏನು ಮಾಡುತ್ತಿದ್ದಾರೆ ಎಂದು ನಾವು ಎಂದಾದರೂ ಯೋಚಿಸಿದ್ದೇವಾ?

 

ಅಂತ್ಯಕಾಲದಲ್ಲಿ ಸಂಭವಿಸುವ ವಿಷಯಗಳನ್ನು ಕುರಿತು, ಪ್ರೀತಿಯ ಶಿಷ್ಯನಾದ ಯೋಹಾನನು ಪತ್ಮೊಸ್ ದ್ವೀಪದಲ್ಲಿದ್ದಾಗ, ದೇವರು ಅವರಿಗೆ ಬಹಿರಂಗಪಡಿಸಿದರು. ಯೇಸುವಿನ ಎದೆಯ ಮೇಲೆ ಒರಗಿ ಅವರೊಂದಿಗೆ ಆತ್ಮೀಯ ಸಂಬಂಧ ಹೊಂದಿದ್ದ ಯೋಹಾನನಿಗೆ ಈಗ ಅವರನ್ನು ನೋಡಿದ ಕೂಡಲೇ ಎಂತಹಾ ಭಾವನೆ ಮೂಡಿರಬಹುದು? ತುತ್ತೂರಿಯ ಶಬ್ಧದಂತಹ ಶಬ್ದವನ್ನು ಕೇಳಿದರು, ಇರುವಾತನು, ಇದ್ದಾತನು ಜೀವಂತವಾಗಿರುವವನು ಆಗಿದ್ದೇನೆಂದು ಹೇಳಿದವರ ಶಬ್ಧವನ್ನು ಕೇಳಿ ಹಿಂದಿರುಗಿದಾಗ ಅವರು ಕಂಡ ದೃಶ್ಯವೇನು? ಏಳು ಚಿನ್ನದ ದೀಪಸ್ತಂಭಗಳ ನಡುವೆ, ನಿಲುವಂಗಿ ತೊಟ್ಟು, ಚಿನ್ನದ ಪಟ್ಟಿಯನ್ನು ಎದೆಗೆ ಕಟ್ಟಿಕೊಂಡಿದ್ದ ಮನುಷ್ಯ ಕುಮಾರನಿಗೆ ಸಮಾನನಾದವನನ್ನು ಕಂಡನು. ಆತನ ತಲೆಯ ಕೂದಲು ಬಿಳೀ ಉಣ್ಣೆಯಂತೆಯೂ, ಜಲಪ್ರವಾಹದ ಘೋಷದಂತೆಯೂ ಅವರು ತನ್ನ ಬಲಗೈಯಲ್ಲಿ ಏಳು ನಕ್ಷತ್ರಗಳನ್ನು ಹಿಡಿದವರಾಗಿ, ಆತನ ಬಾಯೊಳಗಿಂದ ಹದವಾದ ಇಬ್ಬಾಯಿ ಕತ್ತಿಯು, ಹೊರಡುತ್ತಿತ್ತು. ಆತನ ಮುಖವು ಮಧ್ಯಾಹ್ನದಲ್ಲಿ ಪ್ರಕಾಶಿಸುವ ಸೂರ್ಯನಂತಿತ್ತು. 

 

ಇಷ್ಟೊಂದು ಮಹತ್ವವು, ಶಕ್ತಿಯು ತುಂಬಿದ ದೇವರನ್ನು ಯೋಚಿಸಿದ್ದೇವಾ? ನೋಡಿದರೆ ನಮ್ಮಿಂದ ಸಹಿಸಲು ಸಾಧ್ಯವಿಲ್ಲ. ಅವರೊಂದಿಗೆ ಮುಖಾಮುಖಿಯಾಗಿ ಮಾತನಾಡಿದಂತಹ ಯೋಹಾನನಿಂದಲೇ ಸಹಿಸಲು ಸಾಧ್ಯವಾಗಲಿಲ್ಲ. ಸತ್ತವರಂತೆ ಅವರ ಪಾದದಲ್ಲಿ ಬಿದ್ದರು. ಅವರು ಮನುಷ್ಯ ಕುಮಾರನಾಗಿ ಜೀವಿಸಿದ ದಿನಗಳು 33 1/2 ವರ್ಷಗಳು ಮಾತ್ರವೇ. ಆದರೆ ಶಾಶ್ವತ ಜೀವಿಯಾಗಿ ದೀರ್ಘಾಯುಷ್ಯಳ್ಳವರಾಗಿ

ಮೊದಲೇ ಜಗದುತ್ಪತ್ತಿಗೆ ಮುಂಚೆಯೇ ತಂದೆಯೊಂದಿಗೆ ಇದ್ದವರು. ಇನ್ನೂ ಸದಾಕಾಲವೂ ಜೀವಂತವಾಗಿದ್ದೇನೆ ಎಂದಿದ್ದಾರೆ. 

 

ಹೌದು, ಇಂತಹ ಶಕ್ತಿಯೂ, ಮಹತ್ವವೂ ತುಂಬಿರುವ ಉನ್ನತವಾದ ದೇವರನ್ನು ನಾವು ಹೊಂದಿದ್ದೇವಲ್ಲಾ! ಅವರಿಗೆ ಭಯಪಡುತ್ತಿದ್ದೇವೆಯೇ? ಅಥವಾ ಪರಿತಾಪವಾಗಿ, ಶಿಲುಬೆಯ ಮೇಲೆ ಸತ್ತ ಮನುಷ್ಯನ ಹಾಗೆ ಭಾವಿಸಿ ನಿರ್ಲಕ್ಷಿಸುತ್ತಿದ್ದೇವೆಯೇ? ಅವರು ಸತ್ತ ಕ್ರಿಸ್ತನಾಗಿ ಇಲ್ಲ, ಜೀವಂತವಾಗಿ ಎದ್ದ ದೇವರಾಗಿದ್ದಾರೆ. ನಮಗಾಗಿ ಎಲ್ಲವನ್ನೂ ಮಾಡಿ ಮುಗಿಸುವವರೂ ಅವರೇ.‌ ಸತ್ತವರಾಗಿಲ್ಲ, ಎಂದೆಂದಿಗೂ ಜೀವಿಸುತ್ತಾ ಆಳ್ವಿಕೆ ಮಾಡುವ ರಾಜಾಧಿರಾಜನಾಗಿದ್ದಾರೆ. ಆತನಿಗೆ ಎಲ್ಲಾ ಮಹಿಮೆ, ಘನತೆಯನ್ನು ಸಲ್ಲಿಸೋಣ. ಆಮೆನ್!

- Mrs. ಭುವನಾ ಧನಪಾಲನ್

 

ಪ್ರಾರ್ಥನಾ ಅಂಶ:

ಮಕ್ಕಳ ಶಿಬಿರಗಳಲ್ಲಿ ಭೇಟಿಯಾಗುವ ಮಕ್ಕಳ ಮೂಲಕ ಅವರ ಹೆತ್ತವರು ಸಹ ದೇವರ ಪ್ರೀತಿಯನ್ನು ಸವಿಯುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al