Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 15.04.2021
Share:

By Village Missionary Movement

Thursday, 15-Apr-2021

ಧೈನಂದಿನ ಧ್ಯಾನ(Kannada) – 15.04.2021

ಪ್ರಾಮಾಣಿಕತೆ ಉತ್ಸಾಹ

"ಹೀಗಿರುವದರಿಂದ ದೇವರ ತ್ರಾಣವುಳ್ಳ ಹಸ್ತದ ಕೆಳಗೆ ನಿಮ್ಮನ್ನು ತಗ್ಗಿಸಿಕೊಳ್ಳಿರಿ; ಆತನು ತಕ್ಕ ಕಾಲದಲ್ಲಿ ನಿಮ್ಮನ್ನು ಮೇಲಕ್ಕೆ ತರುವನು" - 1 ಪೇತ್ರ 5:6

ಬೈಬಲ್ ಕಲಾ ಶಾಲೆಯಲ್ಲಿ ಓದಿ ಬೈಬಲ್ ಜ್ಞಾನವನ್ನು ಹೆಚ್ಚಾಗಿ ಕಲಿತುಕೊಂಡಿದ್ದ ಒಬ್ಬರು ತನ್ನ ಕಲಾ ಶಾಲೆಯ ವಿದ್ಯಾಭ್ಯಾಸವನ್ನು ಮುಗಿಸಿಕೊಂಡು ಒಂದು ಸಭೆಯಲ್ಲಿ ಸೇವೆಗೆ ಹೋದರು. ಆತನು ವೇದಿಕೆಯ ಮೇಲೆ ಆರಾಧನೆಯನ್ನು ನಡೆಸುವುದಕ್ಕೆ ಮತ್ತು ಸಂದೇಶ ಕೊಡುವುದಕ್ಕೆ ಎದುರು ನೋಡುತ್ತಿದ್ದರು. ಆದರೆ ಆತನಿಗೆ ಕೊಡಲ್ಪಟ್ಟ ಸೇವೆ ಎಲ್ಲರೂ ಊಟ ಮಾಡಿದ ನಂತರ ಪಾತ್ರೆ ತೊಳೆಯುವ ಸೇವೆ. ಅದನ್ನು ಕೇಳಿ ದಿಗ್ಭ್ರಮೆಗೆ ಗುರಿಯಾದ ಆತನು ನಾನು ಬೈಬಲ್ ಕಾಲೇಜಿನಲ್ಲಿ ಓದಿ ನಾನು ಬೈಬಲ್ ಜ್ಞಾನವನ್ನು ಹೊಂದಿಕೊಂಡ ವ್ಯಕ್ತಿಯೇ ಹೊರತು ಹೀಗೆ ಪಾತ್ರೆಯನ್ನು ತೊಳೆಯುವ ಕೆಲಸವ ಎಂದು ಮನಸ್ಸಿನಲ್ಲಿ ಗೊಣಗಿಕೊಂಡರು. ಆದರೆ ಪರಿಶುದ್ಧಾತ್ಮನು ಇಂತಹ ಹೆಮ್ಮೆಯ ಕೆಲಸ ಒಳ್ಳೆಯದಲ್ಲ ಎಂದು ಆತನ ಹೃದಯದಲ್ಲಿ ಆಲೋಚನೆ ಹುಟ್ಟಿಸಿದ ಕೂಡಲೇ ಆತನು ಆ ದಿನ ಮೊದಲುಗೊಂಡು ಪಾತ್ರೆಗಳನ್ನು ತೊಳೆಯುವ ಕೆಲಸವನ್ನೂ ಉತ್ಸಾಹದಿಂದ ಮಾಡಿದರು. ಹೀಗೆ ಅನೇಕ ತಿಂಗಳುಗಳು ಕಳೆಯಿತು. ಆ ಸಭೆಯಲ್ಲಿ ಕೂಟಗಳು ಸಿದ್ಧ ಮಾಡಲಾಯಿತು. ವಾಕ್ಯ ಸೇವೆ ಮಾಡಲು ಕರೆಯಲ್ಪಟ್ಟ ಸೇವಕರು ಕೊನೆಯ ಘಳಿಗೆಯಲ್ಲಿ ಬರಲಾಗುವುದಿಲ್ಲ ಎಂಬ ಸುದ್ದಿ ಮುಟ್ಟಿಸಿದರು. ಆದ್ದರಿಂದ ಆ ಕೊನೆಯ ಘಳಿಗೆಯಲ್ಲಿ ಸಂದೇಶ ಕೊಡುವ ಅವಕಾಶವು ಈತನಿಗೆ ಕೊಡಲ್ಪಟ್ಟಿತು. ದೇವರು ಆತನನ್ನು ಬಲವಾಗಿ ಉಪಯೋಗಿಸಿದರು. ನಂತರ ಆ ಸಭೆಯ ಹಿರಿಯರು ಆತನನ್ನು ಅನೇಕ ಸ್ಥಳಗಳಿಗೆ ದೇವರ ಸಂದೇಶವನ್ನು ಕೊಡಲು  ಕಳುಹಿಸಿದರು.

ಅರಸನಾದ ದಾವೀದನ ದಿನಗಳಲ್ಲಿ ತನ್ನ ಮಗನಾದ ಅಬ್ಷಾಲೋಮನಿಗೆ ಭಯಪಟ್ಟು ದಾವೀದನು ಓಡಿ ಹೋಗುತ್ತಿದ್ದಾಗ ಇತ್ತಯಿ ಎಂಬ ಮನುಷ್ಯನು ಮತ್ತು ಆತನ ಜನಾಂಗವು ದಾವೀದನ ಜೊತೆಯಲ್ಲೇ ಇರುತ್ತಿದ್ದರು. ದಾವೀದನು ಅವನನ್ನು ನೋಡಿ ನೀನು ನೆನ್ನೆ ತಾನೇ ಬಂದೆ ನೀನು ಹೋಗಿ ಮತ್ತೆ ಅರಸ ನೊಂದಿಗೆ ಇರು ಎಂದು ಹೇಳಿದರು. ಆದರೆ ಇತ್ತಯಿ ಹಾಗಾದರೆ ನಾನು ಸತ್ತು ಹೋದರು, ಬದುಕಿದರು ನಿನ್ನೊಂದಿಗೆ ಇರುತ್ತೇನೆ ಎಂದು ಹೇಳಿ ಎಂತಹ ಕಷ್ಟವನ್ನಾದರೂ ಎದುರುಗೊಳ್ಳುವದಕ್ಕೆ ಸಿದ್ಧನಾದನು. ನಂತರ ಮೂರು ಗುಂಪುಗಳಲ್ಲಿ ಒಂದು ಗುಂಪಿನ ಸೈನ್ಯಕ್ಕೆ ಇತ್ತಯಿಯನ್ನು ನಾಯಕನಾಗಿ ಮಾಡಿದರು ದಾವೀದನು.

ಪ್ರಿಯರೇ! ನಾವು ಕೂಡ ಹೊಸದಾಗಿ ಒಂದು ಸ್ಥಳಕ್ಕೆ ಕೆಲಸಕ್ಕೆ ಹೋಗಿರಬಹುದು, ನಮಗೆ ಕೊಡಲ್ಪಟ್ಟ ಜವಾಬ್ದಾರಿಗಳು, ಪದವಿ ಹೊಸದಾಗಿರಬಹುದು. ಆ ಕೆಲಸವನ್ನು ಬಹಳ ಕಷ್ಟವಾಗಿಯು ಅಥವಾ ನಮ್ಮ ಅರ್ಹತೆಗೆ ತಕ್ಕದ್ದಲ್ಲದಾಗಿಯೂ ಇರಬಹುದು ಆದರೆ ಇತ್ತಯಿಯ ಹಾಗೆ, ದೇವರ ಸೇವಕನ ಹಾಗೆ ಪ್ರಾಮಾಣಿಕತೆಯಿಂದ, ಉತ್ಸಾಹದಿಂದ, ಕೊಡಲ್ಪಟ್ಟ ಕೆಲಸವನ್ನು ನೆರವೇರಿಸುವಾಗ ದೇವರು ನಮ್ಮನ್ನು ಹೆಚ್ಚಿಸುತ್ತಾರೆ. ಆಮೆನ್!
-    Bro. ಮನೋಜ್ ಕುಮಾರ್

ಪ್ರಾರ್ಥನಾ ಅಂಶ:-
12 ಮಿಷನರಿಗಳು ಪ್ರತಿ ರಾಜ್ಯದಿಂದ ಬರುವಂತೆ ಹಾಗೂ 500 ಜನ ಮಿಷನರಿಗಳನ್ನು ದೇವರು ಎಬ್ಬಿಸುವಂತೆ ಪ್ರಾರ್ಥಿಸೋಣ.

ಈ ದಿನದ ಧ್ಯಾನ ವಾಕ್ಯಕ್ಕಾಗಿ ಇಲ್ಲಿ ಕೆಳಗಿನ ನಂಬರ್ ಗಳನ್ನು ಸಂಪರ್ಕಿಸಿ.
ವಾಟ್ಸಾಪ್.  
ತಮಿಳಿಗಾಗಿ +919444011864  
ಇಂಗ್ಲಿಷ್ ಗಾಗಿ +919444011769
ಹಿಂದಿಗಾಗಿ +91 93858 10496
ತೆಲುಗುಗಾಗಿ +919442493250

www.vmm.org.in
ಈಮೈಲ್:- reachvmm@gmail.com
Android App: https://play.google.com/store/apps/details?id=com.infobells.vmmorgin
        
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +919345540482



hacklink satın al holiganbet giriş matbet holiganbet holiganbet giriş casibom giriş casibom casibom giriş casibom matbet matbet giriş imajbet imajbet giriş perabet perabet giriş coinbar coinbar giriş klasbahis klasbahis giriş supertotobet giriş supertotobet jojobet giriş jojobet casibom casibom giriş jojobet giriş jojobet interbahis interbahis giriş mariobet mariobet giriş betpas betpas giriş artemisbet artemisbet giriş marsbahis giriş marsbahis restbet restbet giriş egebet egebet giriş Hiltonbet Hiltonbet giriş jojobet alobet alobet giriş betcio betcio giriş grandpashabet grandpashabet giriş superbetin superbetin giriş perabet perabet giriş pashagaming tarafbet editörbet perabet perabet giriş grandbetting hitbet xslot betkom giriş betkanyon giriş perabet perabet giriş Hiltonbet Hiltonbet giriş grandpashabet grandpashabet giriş grandpashabet güncel giriş grandpashabet grandpashabet giriş grandpashabet giriş güncel jojobet jojobet giriş holiganbet holiganbet giriş casibom casibom giriş jojobet jojobet giriş alobet alobet giriş marsbahis marsbahis giriş milanobet jojobet jojobet jojobet jojobet jojobet holiganbet palacebet holiganbet romabet teosbet betgit cratosroyalbet cratosroyalbet gameofbet