Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 08.05.2024
Share:

By Village Missionary Movement

Wednesday, 08-May-2024

ಧೈನಂದಿನ ಧ್ಯಾನ(Kannada) – 08.05.2024

 

ಉಜ್ಜೀವನಕ್ಕಿಂತ ಮೊದಲು ತಾಳ್ಮೆ

 

"…ತನ್ನನ್ನು ಹೆಚ್ಚಿಸಿಕೊಳ್ಳುವ ಪ್ರತಿಯೊಬ್ಬನು ತಗ್ಗಿಸಲ್ಪಡುವನು; ತನ್ನನ್ನು ತಗ್ಗಿಸಿಕೊಳ್ಳುವವನು ಹೆಚ್ಚಿಸಲ್ಪಡುವನು ಅಂದನು" - ಲೂಕ 18:14

 

ಪ್ರಪಂಚದ ಎಲ್ಲಾ ವರ್ಗದ ಜನರು ವಿವಿಧ ತತ್ವಗಳನ್ನು ಮಾತನಾಡುತ್ತಾರೆ. ವೇದಗಳಲ್ಲಿಯೂ ಕೆಲವು ವಿಶೇಷಣಗಳಿವೆ. "ಗರ್ವದಿಂದ ಭಂಗ; ಉಬ್ಬಿನಿಂದ ದೊಬ್ಬು" (ಜ್ಞಾನೋಕ್ತಿ 16:18) "ಬೀಳುವ ಮೊದಲು ಗರ್ವ" ಇದಕ್ಕೆ ಲೂಷಿಫರ್ ಒಂದು ಉದಾಹರಣೆಯಾಗಿದ್ದಾನೆ. ಅಹಂಕಾರದಿಂದ ಬಿದ್ದವನು, ನಮ್ಮನ್ನು ಸಹ ಅಹಂಕಾರದಿಂದ ಬೀಳಿಸಲು ಹಲವು ತಂತ್ರಗಳನ್ನು ಮಾಡುತ್ತಲೇ ಇದ್ದಾನೆ.

 

ಯೆಹೂದ, ಇಸ್ರಾಯೇಲನ್ನು ಆಳಲು ರಾಜರು ತಮ್ಮನ್ನು ತಗ್ಗಿಸಿಕೊಂಡಾಗ ಹೆಚ್ಚಿಸಲ್ಪಟ್ಟರು. ಗರ್ವದಿಂದ ಆಳ್ವಿಕೆ ನಡೆಸಿದಾಗ ತಗ್ಗಿಸಲ್ಪಟ್ಟು ನಾಶವಾದರು. ಈ ಎಲ್ಲಾ ವಿಷಯಗಳನ್ನು ನಮಗೆ ದೃಷ್ಟಾಂತಗಳಾಗಿ ಬರೆಯಲ್ಪಟ್ಟಿವೆ.

 

ನಾವು ಉಜ್ಜೀವನವನ್ನು ಕಾಣಬೇಕಾದರೆ ಕ್ರೈಸ್ತರಾದ ನಾವು ಶಿಷ್ಯರಾಗಿ ಮಾರ್ಪಡಬೇಕು. ಯೇಸುವಿಗಾಗಿ ಕಾರ್ಯ ನಿರ್ವಹಿಸಬೇಕು. ದೇವರ ರಾಜ್ಯ ನಿರ್ಮಾಣದಲ್ಲಿ ನಿರತರಾಗಿರುವ ನಾವು ಸ್ಥಾನಮಾನ, ಹೆಸರು, ಖ್ಯಾತಿಯನ್ನು ಲೆಕ್ಕಿಸದೆ ಯೇಸುವಿನ ನಾಮವನ್ನು ಉನ್ನತಕ್ಕೇರಿಸಬೇಕೆಂದು ದುಡಿಯಬೇಕು.

 

ಲೋಕದ ಜನರು ನನಗೆ ಒಂದು ಕಣ್ಣು ಹೋದರೂ ಪರವಾಗಿಲ್ಲ, ನನ್ನ ಶತ್ರುವಿಗೆ ಎರಡೂ ಕಣ್ಣುಗಳು ಹೋಗಬೇಕೆಂದು ಪೈಪೋಟಿ ಹೊಟ್ಟೆಕಿಚ್ಚಿನಿಂದ ವರ್ತಿಸುತ್ತಾರೆ. ಆದರೆ ನಾವು ಯೋಹಾನನಂತೆ ನಾನು ತಗ್ಗಿಸಲ್ಪಡಬೇಕು ಆತನು ಹೆಚ್ಚಿಸಲ್ಪಡಬೇಕು" ಎಂದು ಕೆಲಸ ಮಾಡಿದರೆ ಮಾತ್ರವೇ ನಾವು ಉಜ್ಜೀವನವನ್ನು ನೋಡಲು ಸಾಧ್ಯ. ಯೇಸುವಿನ ಮೊದಲ ಬರುವಿಕೆಗೆ ಮೊದಲು ಜನರ ಹೃದಯವನ್ನು ಪಕ್ವತೆಗೊಳಿಸಿದ ಯೋಹಾನನಂತೆ ಎರಡನೇ ಬರುವಿಕೆಗೆ ಲೋಕದ ಜನರನ್ನು ನಮ್ಮ ಶ್ರಮ ಮತ್ತು ಪ್ರಾರ್ಥನೆಯ ಏಕತೆಯಿಂದ ಆದಾಯಪಡಿಸಲು ಸ್ನಾನಿಕನಾದ ಯೋಹಾನನ ಹಾಗೆ ನಾವು ಮಾರ್ಪಡಲು ಸಾಧ್ಯ.

 

ಯುಎಸ್ ಅಧ್ಯಕ್ಷ ಜಾರ್ಜ್ ವಾಷಿಂಗ್ಟನ್ ಅವರನ್ನು ಮೊದಲ ಅಧ್ಯಕ್ಷ ಮತ್ತು ಪ್ರಥಮ ದರ್ಜೆ ಅಧ್ಯಕ್ಷರನ್ನಾಗಿ ಮಾಡಿದ್ದು ಏನು? ಅವರು ಅಧ್ಯಕ್ಷರಾಗುವ ಮೊದಲು ಅಮೆರಿಕಾದ ಯುನೈಟೆಡ್ ಸ್ಟೇಟ್ಸ್ನ ಕಮಾಂಡರ್-ಇನ್-ಚೀಫ್ ಆಗಿದ್ದರು. ಒಂದು ದಿನ ಅವರು ಸೈನಿಕರ ತರಬೇತಿ ಮತ್ತು ಅವರು ಮಾಡುತ್ತಿರುವ ಕೆಲಸವನ್ನು ನೋಡಲು ಕುದುರೆಯ ಮೇಲೆ ಮಾರುವೇಷದಲ್ಲಿ ಹೋದರು. ಆಗ ಒಬ್ಬ ಯೋಧ ತನ್ನ ಕೆಳಗಿರುವ ಅಧಿಕಾರಿಗಳಿಂದ ಕಠಿಣವಾಗಿ ಕೆಲಸ ಮಾಡಿಸಿಕೊಳ್ಳುತ್ತಿದ್ದರು. ಒಂದು ದೊಡ್ಡ ರೋಲರ್ ಅನ್ನು ಉರುಳಿಸಲು ಹೆಣಗಾಡುತ್ತಿದ್ದ ಒಬ್ಬ ಯೋಧನಿಗೆ ಸಹಾಯ ಮಾಡಲು ವಾಷಿಂಗ್ಟನ್ ಇಳಿದರು. ಕೆಲಸ ಮಾಡಿಸಿಕೊಳ್ಳುತ್ತಿದ್ದ ಯೋಧನನ್ನು ಸಹ ಸಹಾಯ ಮಾಡೋಣ ಬನ್ನಿ ಎಂದರು. ಅದಕ್ಕೆ ಕೆಲಸ ಮಾಡಿಸಿಕೊಳ್ಳುತ್ತಿದ್ದ ಯೋಧ, ನಾನು ಕೆಲಸ ಮಾಡಿಸುವವನು, ಕೆಲಸ ಮಾಡುವವನಲ್ಲ ಎಂದನು. ತಕ್ಷಣ ಜಾರ್ಜ್ ವಾಷಿಂಗ್ಟನ್ ರೋಲಿಂಗ್ ಲಾಗ್ ಅನ್ನು ಉರುಳಿಸಿ ಹೊರಡುವಾಗ ನಿಮಗೆ ಈರೀತಿಯ ಸಹಾಯ ಬೇಕಾದರೆ ನನ್ನನ್ನು ಕರೆಯಿರಿ ಎಂದರು. ಅದಕ್ಕಾತನು ನೀನು ಎಲ್ಲಿದ್ದೀಯ? ನೀನು ಯಾರು? ಎಂದು ಕೇಳಿದನು. ಅದಕ್ಕೆ ಅವರು ನಾನು ಜಾರ್ಜ್ ವಾಷಿಂಗ್ಟನ್ ಕಮಾಂಡರ್-ಇನ್-ಚೀಫ್ ಎಂದು ಹೇಳಿದರು. ಕೆಲಸ ಮಾಡಿಸಿಕೊಳ್ಳುತ್ತಿದ್ದ ಯೋಧ ಸಾಷ್ಟಾಂಗ ನಮಸ್ಕಾರ ಮಾಡಿ ಕ್ಷಮೆ ಕೇಳಿದನು. ಯೇಸು ಕೂಡ ನಮ್ಮನ್ನು ನೋಡುತ್ತಾರೆ. ಉಜ್ಜೀವನಕ್ಕೆ ತಡೆಯಾಗಿರುವ ನಮ್ಮನ್ನು ಗರ್ವವನ್ನು ತೊಲಗಿಸಿ ತಾಳ್ಮೆಯಿಂದಿರಲು, ಕೆಲಸ ಮಾಡಲು, ಪ್ರಾರ್ಥಿಸಲು, ತ್ಯಾಗವಾಗಿ ಕೊಡಲು ಕರೆಯುತ್ತಿದ್ದಾರೆ. ನೀವು ಸಿದ್ಧರಿದ್ದೀರಾ?

- D. ಸೆಲ್ವರಾಜ್

 

ಪ್ರಾರ್ಥನಾ ಅಂಶ:

ಈ ತಿಂಗಳು ನಮ್ಮ ಸೇವಕರ ಸೇವಾಕಾರ್ಯಗಳಲ್ಲಿ ದೇವರ ಹಸ್ತವು ಜೊತೆಯಿದ್ದು ನಡೆಸುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al