By Village Missionary Movement
Monday, 06-May-2024ಧೈನಂದಿನ ಧ್ಯಾನ(Kannada) – 06.05.2024
ಸುವಾರ್ತೆಯ ತುಂಡು ಪ್ರತಿ
"ನೀವು ಹೊರಟುಹೋಗಿ ಎಲ್ಲಾ ದೇಶಗಳ ಜನರನ್ನು ಶಿಷ್ಯರನ್ನಾಗಿ ಮಾಡಿರಿ;…" - ಮತ್ತಾಯ 28:19
ಒಂದು ಸುವಾರ್ತೆಯ ತುಂಡು ಪ್ರತಿ ಬಹು ದೊಡ್ಡ ಉಜ್ಜೀವನವನ್ನು ಉಂಟುಮಾಡಿತು. ಅದು ಮಾತ್ರವಲ್ಲ ಒಂಭತ್ತು ಮಿಷನರಿಗಳನ್ನು ಜಗತ್ತಿಗೆ ನೀಡಲು ಕಾರಣವಾಗಿತ್ತು. ತಮಿಳುನಾಡಿನಲ್ಲಿಯೂ ಅತ್ಯುತ್ತಮವಾದ ವೈದ್ಯಕೀಯ ಸೇವೆಯ ಮೂಲಕ ಅವರಿಗೆ ಶಾರೀರಿಕ ಸ್ವಸ್ಥತೆ ಮಾತ್ರವಲ್ಲ, ಆಧ್ಯಾತ್ಮಿಕ ಸ್ವಸ್ಥತೆಯೂ ದೊರಕುವಂತೆ ಮಾಡಿತು. ಅದೇನದು ತುಂಡು ಪ್ರತಿ, ಅದನ್ನು ಓದಿದವರು ಯಾರು? ಅದರ ಮೂಲಕ ತಮಿಳುನಾಡಿನಲ್ಲಿ ವೈದ್ಯಕೀಯ ಸೇವೆಯಾ?
ಹೌದು, ಒಂದು ದಿನ ಜಾನ್ ಸ್ಕಡರ್ ಎಂಬವರು ತನ್ನ ಸ್ನೇಹಿತನನ್ನು ನೋಡಲು ಒಂದು ಸ್ಥಳದಲ್ಲಿ ಕಾಯುತ್ತಿದ್ದರು. ಆಗಲೇ ಆ ತುಂಡು ಪ್ರತಿ ಅವರ ಕಣ್ಣುಗಳಿಗೆ ಕಂಡಿದ್ದು! ಅದರ ಶೀರ್ಷಿಕೆ "ಲೋಕದ ಮಾನಸಾಂತರ". ಅದನ್ನು ಕಂಡ ಕೂಡಲೇ ಕೈಗೆ ತೆಗೆದುಕೊಂಡು ಓದಲು ಪ್ರಾರಂಭಿಸಿದರು. ಅವರು ತನ್ನ ಜೀವನವನ್ನು ಯೇಸುವಿಗೆ ಸಮರ್ಪಿಸಿಕೊಂಡರು. ನಂತರದ ದಿನಗಳಲ್ಲಿ ಅವರು ಸೇವೆಗೆ ತಮ್ಮನ್ನು ಅರ್ಪಿಸಿಕೊಂಡರು. ಅವರು ತಮ್ಮ ಏಳು ಪುತ್ರರು ಮತ್ತು ಇಬ್ಬರು ಪುತ್ರಿಯರನ್ನು ಮಿಷನರಿ ಕೆಲಸಕ್ಕೆ ಸಮರ್ಪಿಸಿದರು. ಅವರ ಕುಟುಂಬದ ಎಲ್ಲಾ 43 ಸದಸ್ಯರು ಕ್ರಿಸ್ತನ ಸೇವೆಗಾಗಿ ತಮ್ಮನ್ನು ಸಮರ್ಪಿಸಿಕೊಂಡವರೇ! ಜಾನ್ ಸ್ಕಡರ್ ರವರ ಮೊಮ್ಮಗಳೇ ನಮ್ಮ ವೆಲ್ಲೂರಿನಲ್ಲಿ C.M.C ಆಸ್ಪತ್ರೆಯನ್ನು ಸ್ಥಾಪಿಸಿ ವೈದ್ಯಕೀಯ ಸೇವೆಯೊಂದಿಗೆ, ಸುವಾರ್ತಾ ಸೇವೆಯನ್ನೂ ಮಾಡಿದ ಐಡಾ ಸ್ಕಡರ್ ಅಮ್ಮನವರು. ಒಂದು ಕುಟುಂಬವು ತಲೆ ತಲೆಮಾರುಗಳಿಂದ ಕ್ರಿಸ್ತನ ಸೇವೆಯನ್ನು ಮಾಡುತ್ತಾ ಬರುತ್ತಿದೆ ಎಂದರೆ ಅದು ಇತಿಹಾಸದಲ್ಲೇ ಅತ್ಯುತ್ತಮ ಉದಾಹರಣೆಯಲ್ಲವೇ!
ಕರ್ತನಾದ ಯೇಸು ಕ್ರಿಸ್ತನು ಪ್ರೀತಿಯ ಆಜ್ಞೆಯಾಗಿ ಹೇಳಿದ್ದೇ ನೀವು ಹೊರಟುಹೋಗಿ ಎಲ್ಲಾ ದೇಶಗಳ ಜನರನ್ನು ಶಿಷ್ಯರನ್ನಾಗಿ . . . ಎಂದು. ಯೇಸುಕ್ರಿಸ್ತನು ತಾನು ಮಾಡದೇ ಇರುವ ಒಂದನ್ನು ನಮ್ಮಿಂದ ನಿರೀಕ್ಷಿಸುವವರಲ್ಲವಲ್ಲಾ. ಯೇಸುಕ್ರಿಸ್ತನು ಸುವಾರ್ತೆಯನ್ನು ಸಾರುವವರಾಗಿ, ರೋಗಗಳನ್ನು ಸ್ವಸ್ಥ ಮಾಡುವವರಾಗಿ, ಬದುಕಿಯೂ ಮಾಡಿಯೂ ತೋರಿಸಿದ್ದಾರೆ.
ಪ್ರಿಯರೇ! ಸುವಾರ್ತೆ ಪ್ರಕಟಿಸುವುದು ಎಂದರೆ ಸಂಪೂರ್ಣ ಸಮಯದ ಸೇವಕರು ಮಾತ್ರವಲ್ಲ, ಪ್ರತಿಯೊಬ್ಬ ವಿಶ್ವಾಸಿಗೂ ಸುವಾರ್ತೆ ಪ್ರಕಟಿಸುವ ಜವಾಬ್ದಾರಿ ಇದೆ, ಒಂದು ಹಸ್ತಪ್ರತಿ ಒಬ್ಬರನ್ನು ಬದಲಾಯಿಸಿದ್ದರ ಮೂಲಕ ಹಲವು ಸಾವಿರ ಜನರು ರಕ್ಷಣೆಯ ಹಾದಿಯನ್ನು ದಾಟಿ ಬಂದಿದ್ದಾರೆ. ನಾವು ನೀಡುವ ಒಂದು ತುಂಡು ಸುವಾರ್ತೆಯ ಪ್ರತಿಯು ಯಾರೋ ಒಬ್ಬರ ರಕ್ಷಣೆಗೆ ಕಾರಣವಾಗಿದೆ. ಆದ್ದರಿಂದ ನಾವು ಮಾಡುವ ಹಸ್ತಪ್ರತಿಯ ಸೇವೆಯನ್ನು ದೊಡ್ಡದಾಗಿ ಭಾವಿಸೋಣ. ಕೊಡಬೇಕಾದ ವ್ಯಕ್ತಿಗೆ ಪ್ರಾರ್ಥನೆಯೊಂದಿಗೆ ನೀಡೋಣ! ದೇವರು ಖಂಡಿತವಾಗಿಯೂ ಕಾರ್ಯ ಮಾಡುತ್ತಾರೆ. ಹಸ್ತಪ್ರತಿಗಳನ್ನು ತೆಗೆದುಕೊಳ್ಳುವ ಪ್ರತಿಯೊಬ್ಬರೂ ಪರಲೋಕದ ಪ್ರತಿನಿಧಿಗಳಾಗಿ ದೇವರು ಪರಿವರ್ತಿಸುತ್ತಾರೆ.
- Mrs. ಶಕ್ತಿ ಶಂಕರ್ ರಾಜ್
ಪ್ರಾರ್ಥನಾ ಅಂಶ:
ಅಂಡಮಾನ್-ನಿಕೋಬಾರ್‌ನಲ್ಲಿ ಪ್ರಾರಂಭವಾಗಿರುವ ನಮ್ಮ ಸೇವೆಗಳಿಗಾಗಿ ಪ್ರಾರ್ಥಿಸಿರಿ.
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- info@vmm.org.in
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482