Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 05.05.2024 (Kids Special)
Share:

By Village Missionary Movement

Sunday, 05-May-2024

ಧೈನಂದಿನ ಧ್ಯಾನ(Kannada) – 05.05.2024 (Kids Special)

 

VBS ಬಂದುಬಿಡ್ತು 

 

"ನಾನು ಸಾತ್ವಿಕನೂ ದೀನಮನಸ್ಸುಳ್ಳವನೂ ಆಗಿರುವದರಿಂದ ನನ್ನ ನೊಗವನ್ನು ನಿಮ್ಮ ಮೇಲೆ ತೆಗೆದುಕೊಂಡು ನನ್ನಲ್ಲಿ ಕಲಿತುಕೊಳ್ಳಿರಿ;…" - ಮತ್ತಾಯ 11:29

 

Summer leave ಕೊಟ್ಟುಬಿಟ್ರೆ ತುಂಬಾ ಜಾಲಿಯಾಗಿ ಇರುತ್ತೆ ಅಲ್ವಾ ಪುಟಾಣಿಗಳೇ. Home work ಇಲ್ಲ, School ಇಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ಚೆನ್ನಾಗಿ ನಿದ್ದೆ ಮಾಡಿ late -ಆಗಿ ಎದ್ದೇಳಬಹುದು. ಖುಷಿ ಅಲ್ವಾ ಪುಟಾಣಿಗಳೇ ರಜೆಯ ದಿನಗಳಲ್ಲಿ ಊರಿಗೆ ಹೋಗ್ತೀರಾ? VBS ಅನ್ನು miss ಮಾಡಬಾರದು. Ok ನಾ ಪುಟಾಣಿಗಳೇ.

 

ಪರೀಕ್ಷೆಯೆಲ್ಲ ಮುಗಿದು ಹೋಯ್ತು ಹೇಯ್ jolly ಎಂದು ಖುಷಿಯಿಂದ ಮನೆಗೆ ಬಂದ ಸ್ಯಾಮ್ ನನ್ನು ನೋಡಿದನು ಅವನ ಅತ್ತೆಯ ಮಗ ವಸಂತ್. ಹಾಯ್ ಎಂದು ಅವನ ಕೈಕುಲುಕಿ ಇನ್ನು ಮುಂದೆ ಚೆನ್ನಾಗಿ ಕ್ರಿಕೆಟ್ ಆಡಬಹುದು ಎಂದು ಇಬ್ಬರೂ ಮಾತನಾಡುತ್ತಿದ್ದರು. ಹೌದು, ಈ ರಜೆಗೆ ನೀನು ಎಲ್ಲಿಗೂ ಹೋಗಿಲ್ವಾ? ಎಂದು ಕೇಳುತ್ತಲೇ ವಸಂತ್ ಹೇಳಿದನು, ಮೇ 6ರಿಂದ 10ರವರೆಗೆ ನಾವು ಜಾಲಿಯಾಗಿ ಟೂರ್ ಗೆ ಹೋಗುತ್ತಿದ್ದೇವೆ ನೀನು ಕೂಡ ಬರ್ತೀಯಾ?" ಎಂದು ಕೇಳಿದನು. ನಮ್ಮಪ್ಪನನ್ನು ಕೇಳಿ ಹೇಳ್ತೀನಿ ಕಣೋ ಎಂದು ಹೇಳಿದನು ಸ್ಯಾಮ್.

 

ಮರುದಿನ ಬೆಳಿಗ್ಗೆ ಸ್ಯಾಮ್ ಮನೆಯಲ್ಲಿ ಕುಟುಂಬ ಸಮೇತರಾಗಿ ಊಟ ಮಾಡುತ್ತಿದ್ದಾಗ, "ಅಪ್ಪಾ, ವಸಂತ್ ಮನೆಯಲ್ಲಿ ಎಲ್ಲರೂ ಪಿಕ್ನಿಕ್ ಹೋಗ್ತಿದ್ದಾರೆ. ನಾನೂ ಕೂಡ ಮಾಮನ ಜೊತೆ ಹೋಗಿಬರ್ಲಾ?" ಎಂದನು. ಅಪ್ಪ ಹೇಳುದ್ರು, ಸ್ಯಾಮ್, ಮೇ 1 ರಿಂದ 10 ರವರೆಗೆ VBS ಇದೆ. VBS ನಲ್ಲಿ ಕಲಿಯುವುದು ಬಹಳಷ್ಟಿದೆ. ವರ್ಷಕ್ಕೊಮ್ಮೆ ಮಾತ್ರವೇ VBS ನಡೆಸುತ್ತಾರೆ. ನೀನು ಕಡ್ಡಾಯವಾಗಿ ಹಾಜರಾದರೆ ತುಂಬಾ ಉಪಯೋಗವಾಗುತ್ತದೆ. ನೀನು Miss ಮಾಡಬಾರದು VBS ಮುಗಿದ ನಂತರ ನಾವು ಟೂರ್ ಗೆ ಹೋಗೋಣ ಎಂದು ಹೇಳಿದ ಅಪ್ಪನನ್ನು ನೋಡಿ ಡೀಲ್ ಓಕೆ ಅಪ್ಪಾ. "ನೀವು ಹೇಳಿದ ಮಾತು ನೆರವೇರಿಸಬೇಕು ಅಪ್ಪಾ ಎಂದು ಹೇಳಿದ ಸ್ಯಾಮ್ ಅನ್ನು ನೋಡಿ ನನಗೂ ಈ ಡೀಲ್ ಓಕೆ ಎಂದು ಹೇಳಿ ಊಟ ಮುಗಿಸಿದರು. ನಿಮ್ಮಿಬ್ಬರ ಡೀಲ್ ನಲ್ಲಿ ನನ್ನನ್ನು ಮರೆತುಬಿಡಬೇಡಿ ಎಂದ ತಾಯಿಯ ಮಾತಿಗೆ ಇಬ್ಬರೂ ನಕ್ಕರು. ಮೊದಲು ಯೇಸಪ್ಪನನ್ನು ಹುಡುಕುವಾಗ ಮಿಕ್ಕ ಎಲ್ಲವನ್ನು ಅವರು ನೋಡಿಕೊಳ್ಳುತ್ತಾರೆ ಎಂದು ತಾಯಿ ಹೇಳಿದಾಗ ok ok ಸರಿಯಾಗಿ ಹೇಳ್ದೆ ಎಂದು ಅಪ್ಪ ಹೇಳಲು, ಕುಟುಂಬವೇ ಸಂತೋಷದಲ್ಲಿ ತುಂಬಿತ್ತು.

 

ಏನು ಪುಟಾಣಿಗಳೇ, ಈ ಬೇಸಿಗೆಯ ರಜೆ ದಿನಗಳಲ್ಲಿ VBS ಅನ್ನು Miss ಮಾಡಿ ಬಿಡಬೇಡಿ. ನಿಮ್ಮ ಜೀವನವು ಬದಲಾಗುತ್ತದೆ ಮತ್ತು ನೀವು ಆಶೀರ್ವದಿಸಲ್ಪಡುತ್ತೀರಿ. ಸ್ಯಾಮ್‌ನಂತೆ ಯೇಸಪ್ಪನಿಗೆ ಮೊದಲ ಸ್ಥಾನ ಕೊಡಿ. ಯೇಸಪ್ಪ ನಿಮ್ಮ ಆಸೆಯನ್ನು ನೆರವೇರಿಸಲಿ. Ok ನಾ ಪುಟಾಣಿಗಳೇ.

- Mrs. ಗ್ರೇಸ್ ಜೀವಮಣಿ

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al